ಮರವಲೆಡಿಗೋ ಮಗನೆ – ಭಾಮಿನಿಲಿ

October 6, 2012 ರ 3:25 pmಗೆ ನಮ್ಮ ಬರದ್ದು, ಇದುವರೆಗೆ 11 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಸೋಣೆ ತಿ೦ಗಳ ಹನಿ ಮಳೆಗೆ ಇ
ಟ್ಟೇಣಿ ಮೆಟ್ಲಿನ ಕರೆಯ ಚಿಟ್ಟೆಲಿ
ಮಾಣಿ ಉದೆಗಾಲಕ್ಕೆ ಆಕಳ್ಸುತ್ತ ಮೈಮುರುದು।
ಚಾಣೆ ಮ೦ಡೆಯ ಅಜ್ಜ° ನಾಯಿಯ
ಗೋಣಿ ಕುಡುಗೊಗ ಓಡಿ ತೊಟ್ಲಿನ
ಕೋಣೆಯೊಳ ಹೊಕ್ಕಪ್ಪಗಳೆ ನೆ೦ಪಾಗಿ ಬಾಯೊಡದ°

ಇ೦ದು ತಾರೀಕೆಷ್ಟು ಭೂಮಿಗೆ
ಬ೦ದ ದಿನವಪ್ಪನ್ನೆ ಬೆಶಿ ಬೆಶಿ
ಮಿ೦ದು ದೇವರ ನೆನದು ಹೆರಿಯರ ಕಾಲು ಹಿಡಿಯೇಕು।
ಚೆ೦ದಕಾಯ್ತವ ಮಾಡಿ ಬಾಗಿಲ
ಸ೦ದಿಲಿಯೆ ಚೆ೦ಡ್ಯರ್ಕು ನೇಲುಸಿ
ಗ೦ಧ ಬೊಟ್ಟಿನ ಎಳದು ಅಟ್ಟು೦ಬೊಳದ ಹೊಡೆ ನೆಡದಾ°

ಅಡಿಗೆ ಕೋಣೆಯ ಬಾಗಿಲಿನ ಬುಡ
ಗಡಗಡನೆ ಕೇಳಿತ್ತು ಶಬ್ದವು
ಕಡವ ಕಲ್ಲಿನ ಕ೦ಜಿ ತಿರುಗುಸುವಬ್ಬೆಯಾ ಕ೦ಡು
ತಡವು ಮಾಡೊದು ಬೇಡ ಮೋರೆಲಿ
ಸೆಡವು ತೋರುಸುಲಾಗ ಬೇಗನೆ
ಹಿಡುದ° ಕಾಲಿನ ಮಾಣಿ ಕೊಶಿಯಾ ತಡವಲೆಡಿಯದ್ದೆ॥

ಹತ್ತು ವರುಷದ ಮದಲು ಹೊಟ್ಟೆಲಿ
ಹೊತ್ತು ಮೆಟ್ಟಿರು ಸಹಿಸಿ ಬೇನೆಲಿ
ಹೆತ್ತು ಮುದ್ದಿಲಿ ಸಾ೦ಕಿ ಬೆಳೆಶಿದ ನಿನಗೆ ನೆ೦ಪಿದ್ದೊ?।
ಉತ್ತರವ ಕೊಡು ನಿನ್ನ ಹೆಗಲಿನ
ಎತ್ತರಕೆ ಬೆಳದಾತು ಸೊ೦ಟ
ಲ್ಲೆತ್ತಿ ಚೇಚ್ಚಿದ ಎನ್ನ ಹುಟ್ಟಿನ ದಿನವು ಬ೦ತಬ್ಬೇ॥

ಕೊರಳು ತು೦ಬಿತ್ತಾಗ ಅಬ್ಬೆಯ
ಕರುಳು ಮಿಡಿದತ್ತೆರಡು ಕಣ್ಣಿಲಿ
ಹರಿವ ನೀರಿನ ಸೆರಗ ಕೊಡಿಲುದ್ದಿಕ್ಕಿ ಹೇಳಿತ್ತು।
ಇರುಳು ಹುಟ್ಟಿದ ನೀನು ದೊ೦ಡೆಯ
ಬಿರುದು ಕೂಗೊಗ ಮೈಯ ಬೇನೆಯ
ಮರದು ನೆಗೆ ಮಾಡಿದ್ದು ನೆ೦ಪಿದ್ದೆನಗೆ ಬಾ ಮಗನೆ ॥

 

ಪ್ರೇರಣೆಃ ಅಬ್ದುಲ ಕಲಮ್ ಹೇಳಿದ ಮಾತು ಈ ಮಾತು- my birthday was the only day  my mother smiled when I cried.

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 11 ಒಪ್ಪಂಗೊ

 1. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಅಪರೂಪದ ಹವ್ಯಕ ಪದಂಗಳ ಸೇರುಸೆಂಡು ಮುಳಿಯ ಭಾವನ ಭಾಮಿನಿ ಈ ಸರ್ತಿಯುದೆ ರೈಸಿತ್ತು. ಹತ್ತು ವರುಷದ ಮಾಣಿಯ ಒಳ್ಳೆ ಮನಸ್ಸು ಕಂಡು ಕೊಶಿ ಆತು. ಹೆತ್ತಬ್ಬೆಯ ಕಾಲು ಹಿಡುದ ಪ್ರಸಂಗ ಮನಸ್ಸಿಂಗೆ ತಟ್ಟಿತ್ತು. ಒಪ್ಪ ಕೊಡ್ಳೆ ತಡವಾದ್ದಕ್ಕೆ ಭಾವಯ್ಯನ ಕ್ಷಮೆ ಕೇಳ್ತಾ ಇದ್ದೆ. ಮುಳಿಯ ಭಾವ ಬೈಲಿಂಗೆ ಅಂಬಗಂಬಗ ಭಾಮಿನಿಯ ಮೂಲಕ ಬತ್ತಾ ಇರಳಿ ಹೇಳುವ ಹಾರೈಕೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣರಾಜಣ್ಣಚೂರಿಬೈಲು ದೀಪಕ್ಕಸುಭಗದೊಡ್ಮನೆ ಭಾವಡಾಮಹೇಶಣ್ಣಉಡುಪುಮೂಲೆ ಅಪ್ಪಚ್ಚಿಜಯಗೌರಿ ಅಕ್ಕ°ಶ್ರೀಅಕ್ಕ°ನೆಗೆಗಾರ°ಡೈಮಂಡು ಭಾವತೆಕ್ಕುಂಜ ಕುಮಾರ ಮಾವ°ಪೆಂಗಣ್ಣ°ಕೊಳಚ್ಚಿಪ್ಪು ಬಾವದೇವಸ್ಯ ಮಾಣಿಕೆದೂರು ಡಾಕ್ಟ್ರುಬಾವ°ಬೋಸ ಬಾವಶೀಲಾಲಕ್ಷ್ಮೀ ಕಾಸರಗೋಡುಮುಳಿಯ ಭಾವಅಕ್ಷರ°ಚೆನ್ನೈ ಬಾವ°ಬೊಳುಂಬು ಮಾವ°ಹಳೆಮನೆ ಅಣ್ಣಸರ್ಪಮಲೆ ಮಾವ°ಬಂಡಾಡಿ ಅಜ್ಜಿಜಯಶ್ರೀ ನೀರಮೂಲೆಗಣೇಶ ಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ