ನಾಕು ನಾಕು ಸಾಲು

February 14, 2012 ರ 9:30 amಗೆ ನಮ್ಮ ಬರದ್ದು, ಇದುವರೆಗೆ 28 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದು ಮುಕ್ತ ಛಂದಸ್ಸು. ಮಾತ್ರೆ, ಗಣ, ಯತಿ, ಪ್ರಾಸ ಬಂಧನ ಇಲ್ಲದ್ಸು. ಪದ್ಯಗಂಧಿ ಹೇಳ್ತ ವರ್ಗಕ್ಕೆ ಸೇರ್ಸಲಕ್ಕು.
ಸಾಂಗತ್ಯ, ರಗಳೆ, ಮಹಾಛಂದಸ್ಸು – ಇದರ ದಾಯವಾದಿಗೊ.
ಬೇಕಾರೆ – ಎಲ್ಲದಕ್ಕೂ “ಬೋಚ ಭಾವಾ” ಹೇದು ಸೇರುಸಿಯೊಂಬಲಕ್ಕು.

ನಾಕು ನಾಕು ಸಾಲು

ಒಂದು ಪುಗ್ಗಗೆ ಸಣ್ಣ ಸೂಜಿ ಚುಚ್ಚಿರೆ ಸಾಕು
ನಿಮಿಷದೊಳ ಅದರ ಕತೆ ಮುಗಿದು ಹೋಕು
ಹೋಲಿಕೆ ಕೊಟ್ಟಂಡು ನೆಗೆಗಾರ° ಬರದ ನಾಕು ಸಾಲು
ಹೀಂಗೆ ಬರೆತ್ತವು ಇದ್ದಿರೋ ಆರಾರೂ ಹೇದು ಸವಾಲು || 1 ||

ಇದರ ಓದಿದ ತೆಕ್ಕುಂಜೆ ಪುಟ್ಟಣ್ಣ
ಕುಂಞಣ್ಣ ಕಿಂಞಣ್ಣ ಒಪ್ಪಕ್ಕ ಹೊನ್ನಕ್ಕ
ಎಲ್ಲೋರು ಬರದವು ರೆಜ ರೆಜಾ ಸಾಲು
ಆನುದೇ ಬರೆಯಲೋ ನಾಕು ಸಾಲು || 2 ||

ಕೋತಿ ಪಾಳ್ಯವ ಕಟ್ಟಿ ರಾಮ ಲಂಕೆಗೆ ಹೋದ°
ಯುದ್ಧಲ್ಲಿ ರಾಕ್ಷಸಂಗಳ ಗೆದ್ದು ಬಂದ°
ಮಂಗಂಗೊ ಕೇಟವು ಎಲ್ಲದಕು ಕಾರಣ ವೈದೇಹಿ ಅಲ್ಲದೋ
ಅಲ್ಲಿಗೆ ಒಂದಾರಿ ಕರಕ್ಕೊಂಡು ಹೋಗಿ || 3 ||

ಕೋತಿಗಳ ಮನವಿಯ ಸ್ವೀಕರಿಸಿದ ರಾಮ°
ಮುನ್ನೆಚ್ಚರಿಕೆ ಕೊಟ್ಟ° ಮಂಗ ಪಾಳ್ಯಕ್ಕೆ
ಅಲ್ಲಿ ನಿಂಗೊ ಬಹಳ ಸಭ್ಯ ರೀತಿಲಿ ಇರೆಕು
ಚೇಷ್ಟೆ ತೋರುಸಲಾಗ, ಗೊಂತಾತೋ || 4 ||

ಅಲ್ಲಿ ಮಾವಗಳಲ್ಲಿ ಒಳ್ಳೆ ವೈಭವ ಇದ್ದು
ಲಂಕೆಯ ವೈಭವಕ್ಕೆ ಸರಿಸಮವೆ ಅಕ್ಕು
ಊಟಕ್ಕೆ ಎಲೆ ಹಾಕಿ ಶಿಸ್ತಿಲ್ಲಿ ಬಡುಸಿದವು
ಹಲವಾರು ಖಾದ್ಯಂಗಳ ಎಲೆ ತುಂಬಾ || 5 ||

ಬಾಳೆಲೆಯ ಕೊಡಿಲಿ ಇದ್ದ ಚಳ್ಳಂಗಾಯಿ ಉಪ್ನೆಕಾಯಿ
ಕಂಡು ತಡೆಯದ್ದೆ ಮರಿಮಂಗ ಕೈ ಹಾಕಿತ್ತು
ನಕ್ಕಿ ನೋಡಿತ್ತದರ ಮತ್ತೆ ಒತ್ತಿ ಹಿಡುದತ್ತು
ಬಿತ್ತು ಅಷ್ಟೆತ್ತರಕ್ಕೆ ಹಾರಿ ರಟ್ಟಿತ್ತು || 6 ||

ಎನ್ನ ಮೀರುಸಲಾದೆಯೊ ನೋಡೆನ್ನ ಸಾಮರ್ಥ್ಯ
ಅದರಿಂದ ಎತ್ತರಕೆ ಹಾರಿ ಕೂದತ್ತು
ಅದರ ಕಂಡ ಮತ್ತೊಂದು ಮಂಗ ಮತ್ತಷ್ಟು ಎತ್ತರಕೆ
ಹಾರಿ ನೆಗೆದು ತೋರುಸಿ ಅದರ ಶಕ್ತಿ ತೋರ್ಸಿತ್ತು || 7 ||

ಒಂದರಿಂದೊಂದು ಆನೇನು ಸೋಲುವನೊ
ಹೇದಂಡು ಎತ್ತರೆತ್ತರ ಹಾರಿ ತೋರುಸಿದವು
ಸುಗ್ರೀವ° ಜಾಂಬವ° ಆರೊಬ್ಬನು ಬಾಕಿ ಇಲ್ಲೆ
ಹಾರಿ ಭೋಜನವ ಕೆಡುಸಿದವನ್ನೆ || 8 ||

ಕಪಿಗೆ ಚಪಲತೆ ಸಹಜ ಹೇದಂಡು ಶ್ರೀರಾಮ
ತನ್ನಲ್ಲೆ ಸಮಧಾನ ಮಾಡಿಯೊಂಡ
ಅನುದೇ ಜಾಂಬವನ ಹಾಂಗಿರ್ತ ಕಪಿ ಅಲ್ದೋ
ಹಾಂಗಾಗಿ ಬರದೆ ಈ ನಾಕು ಸಾಲು || 9 ||

~*~*~

ಸೂ: ನಾಕು ನಾಕು ಸಾಲುಗಳಲ್ಲಿ ಅಡಕವಾಗಿಪ್ಪ ರಾಮಾಯಣದ ಕತೆ ಬೈಲಿನೋರ ಗಮನಕ್ಕೆ ಬಂದಿಕ್ಕಲ್ಲದೋ!

ಶುದ್ದಿಶಬ್ದಂಗೊ (tags): , , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 28 ಒಪ್ಪಂಗೊ

 1. ಗಣೇಶ ಪೆರ್ವ
  ಗಣೇಶ ಪೆರ್ವ

  ಒಳ್ಳೇದಾಯಿದು, ಓದಿಸಿಗೊ೦ಡು ಹೋತು. ಹೀ೦ಗೊ೦ದು ಪದ್ಯಪ್ರಾಕಾರದ ಬಗ್ಗೆ ಗೊoತಿತ್ತಿದ್ದಿಲ್ಲೆ, ಅರಿವು ಕೊಟ್ಟದಕ್ಕೆ ಧನ್ಯವಾದ೦ಗೊ.

  [Reply]

  ಶೇಡಿಗುಮ್ಮೆ ಪುಳ್ಳಿ

  ಶೇಡಿಗುಮ್ಮೆ ಪುಳ್ಳಿ Reply:

  (ಓದಿಸಿಗೊ೦ಡು ಹೋತು )- ಅಣ್ಣೊ ಇದಾ ಹೋಪಗ ಅತ್ತಿತ್ತೆ ಹೋಗಿ ಆತೋ ಒಂದೇ ಹೊಡೆಂಗೆ ಹೋದರೆ ಮತ್ತೆ ವಾಪಾಸು ಬಪ್ಪಲೆ ಬಙ ಅಕ್ಕು…. ಹಾಂ ಹೇಳಿದ್ದಿಲ್ಲೇಳಿ ಬೇಡ.

  [Reply]

  VN:F [1.9.22_1171]
  Rating: +1 (from 1 vote)
 2. ಬೊಳುಂಬು ಮಾವ°
  ಬೊಳುಂಬು ಮಾವ

  ರಾಮಾಯಣಲ್ಲಿ ಬಪ್ಪ ಕಾ”ಮಿಡಿ” ಉಪ್ಪಿನಕಾಯಿಯ ಉಪಕಥೆಯ ಪದ್ಯಗಂಧಿ ರೂಪಲ್ಲಿ ದೊಡ್ಡಮಾವ (ಎನಗೆ ಭಾವ) ಚೆಂದಕೆ ಬರದ್ದವು. ಅವು ಹೇಳಿದ ಹಾಂಗೆ, ಸುಲಭಲ್ಲಿ ಓದುಸೆಂಡು ಹೋಪ ಪದ್ಯ ಲಾಯಕಿತ್ತು. ಗುರುಗೊ ಹೇಳುವ ಹಲವಾರು ಉಪಕಥೆಗೊ ಇದೇ ರೂಪಲ್ಲಿ, ದೊಡ್ಡ ಮಾವನ ಕೃಪೆಂದ ಬೈಲಿಂಗೆ ಬರಳಿ ಹೇಳಿ ಹಾರೈಸುತ್ತಾ ಒಂದು ಒಪ್ಪ.

  [Reply]

  ದೊಡ್ಡಮಾವ°

  ದೊಡ್ಡಮಾವ° Reply:

  ಕೊಶಿ ಆತು ಭಾವಾ…

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ವೇಣೂರಣ್ಣಕೇಜಿಮಾವ°ಪುಣಚ ಡಾಕ್ಟ್ರುಸಂಪಾದಕ°ಚೆನ್ನಬೆಟ್ಟಣ್ಣಡಾಗುಟ್ರಕ್ಕ°vreddhiಸುಭಗದೇವಸ್ಯ ಮಾಣಿಗೋಪಾಲಣ್ಣಚುಬ್ಬಣ್ಣಹಳೆಮನೆ ಅಣ್ಣಡೈಮಂಡು ಭಾವದೊಡ್ಡಮಾವ°ದೊಡ್ಡಭಾವಪವನಜಮಾವಬೋಸ ಬಾವಪೆರ್ಲದಣ್ಣಎರುಂಬು ಅಪ್ಪಚ್ಚಿಕೊಳಚ್ಚಿಪ್ಪು ಬಾವಶೀಲಾಲಕ್ಷ್ಮೀ ಕಾಸರಗೋಡುಕಾವಿನಮೂಲೆ ಮಾಣಿಶಾ...ರೀವಿದ್ವಾನಣ್ಣಕಜೆವಸಂತ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ