ನಾಗ ಸಂಪಗೆ ಘಮಲು

March 9, 2013 ರ 12:37 pmಗೆ ನಮ್ಮ ಬರದ್ದು, ಇದುವರೆಗೆ 13 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

nagasampage1nagasampage2nagasampage3nagasampage4

ಇತ್ತೀಚೆಗೆ ಈ ಚೆಂದ ಹೂಗು ಕಂಡತ್ತು. “ಇದು ಏವ ಹೂಗು ಭಾವ” ಹೇಳಿ ಕೇಳಿರೆ “ನಾಗ ಸಂಪಗೆ” ಹೇಳಿ ಉತ್ತರ ಸಿಕ್ಕಿತ್ತು.
ಎಷ್ಟು ಚೆಂದದ ಪರಿಮ್ಮಳ ಅದರದ್ದು…
ಆವಾಗ ಅನಿಸಿದ್ದಿದು…

ನಾಗ ಸಂಪಗೆ ಘಮಲು:

ನಾಗ ಸಂಪಗೆ ಘಮಲು
ಆಹಾ…. ಇದೆಂಥ ಅಮಲು॥

ಗಾಳಿಲಿಯೆ ತೇಲಿ
ತೇಲಿದ್ದು ಸುಗಂಧ
ನಾಸಿಕದ ಒಳ ಎಲ್ಲ ನವಿರು
ಸಿಂಚನವಾಗಿ ಎಳವಂಥ ಗಂಧ
ಅಂತಿಂಥ ಹೂಗಲ್ಲ, ಇಂತಿಷ್ಟೇ ಚಂದವಾ?।
ಎಂಥ ಸೌಂದರ್ಯ
ನೀನಿದರ ಕಂಡೆಯಾ।

ನಾಗ ಸಂಪಗೆ ಘಮಲು
ಆಹಾ…. ಇದೆಂಥ ಅಮಲು॥

ವೃತ್ತಲ್ಲೆ ಸುತ್ತಿದ್ದು
ಜೇನ ಹುಳು ಮಕರಂದ
ಇದ್ದೆಲ್ಲಿ ಹುಡುಕಿ
ಬಿದ್ದಲ್ಲಿ ತುಡುಕಿ
ಹೂಗು ಗರ್ಭದ ಒಳವೆ ತುಂಬಿದ್ದು ಗೊಂತಿದ್ದು।
ಒಂದಾದರೂ ಹನಿಯ
ಕುಡಿಯದ್ದೆ ಕಳಿಯ।

ನಾಗ ಸಂಪಗೆ ಘಮಲು
ಆಹಾ…. ಇದೆಂಥ ಅಮಲು॥

ಹಿತ್ತಿಲಿನ ಸುತ್ತೆಲ್ಲಾ
ನಾಲ್ಕಾರು ಮರನೆಟ್ಟು
ಕೂರೆಕ್ಕು ಮನವಿಟ್ಟು
ಹೂಗುರಾಶಿಯ ನಡುಗೆ
ನಾಗಸಂಪಗೆಯೇ ತುಂಬು ಎನ್ನ ತನು ಮನವೆಲ್ಲಾ।
ತುಂಬಲಿದ ಇಲ್ಲಿಯೇ
ಜೀವನದ ಕನಸೆಲ್ಲ।

ನಾಗ ಸಂಪಗೆ ಘಮಲು
ಆಹಾ…. ಇದೆಂಥ ಅಮಲು॥

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 13 ಒಪ್ಪಂಗೊ

 1. ಭಾಗ್ಯಲಕ್ಷ್ಮಿ

  ಶಾಮಣ್ಣ,ಮೊನ್ನೆ ಕೋಳ್ಯೂರು ಶಂಕರನಾರಾಯಣ ದೇವಸ್ಥಾನಲ್ಲಿ ಈ ಮರ ಅಡಿಂದ- ಮುಡಿವರೆಗೂ ಹೂಗು ಬಿಟ್ಟುಗೊ೦ಡಿತ್ತದರ ನೋಡಿದೆ .

  [Reply]

  VA:F [1.9.22_1171]
  Rating: 0 (from 0 votes)
 2. ಭಾಗ್ಯಲಕ್ಷ್ಮಿ

  ಎನಗೆ ಗೊಂತಿಪ್ಪ ಹಾಂಗೆ ಇದಕ್ಕೆ ನಾಗಲಿಂಗ ಹೇಳಿಯೂ , ಇನ್ನೊಂದು ಬೆಳಿದು – ಹೂಗು ಗೆಲ್ಲಿಲಿ ಅಪ್ಪದು ಅದಕ್ಕೆ ನಾಗ ಸಂಪಗೆ ಹೇಳಿ ಹೇಳ್ತವು . ಮಾಳಿಗೆ ಮಣ್ಣಿನ್ದು ಮಾಡ್ತರೆ ಅದರ ಎಲೆಯ — ಮಣ್ಣು ಮತ್ತು ಹಲಗೆಯ ಮಧ್ಯಲ್ಲಿ ಒರಳೆ ಬಾರದ್ದ ಹಾಂಗೆ ಹಾಕುತ್ತವು .ಪಟ ಇದಲ್ಲಿದ್ದು –
  http://en.wikipedia.org/wiki/Mesua_ferrea

  http://www.flowersofindia.net/catalog/slides/Nag%20Kesar.html

  [Reply]

  VA:F [1.9.22_1171]
  Rating: 0 (from 0 votes)
 3. ಭಾಗ್ಯಲಕ್ಷ್ಮಿ

  ಎನಗೆ ಗೊಂತಿಪ್ಪ ಹಾಂಗೆ ಇದಕ್ಕೆ ನಾಗ ಲಿಂಗ ಹೇಳಿಯೂ , ಇನ್ನೊಂದು ಬೆಳಿದು ( Mesua ferrea )ಹೂಗು ಗೆಲ್ಲಿಲಿ ಅಪ್ಪದು ಅದಕ್ಕೆ ನಾಗ ಸಂಪಗೆ ಹೇಳಿ ಹೇಳ್ತವು . ಮಾಳಿಗೆ ಮಣ್ಣಿನ್ದು ಮಾಡ್ತರೆ ಅದರ ಎಲೆಯ — ಮಣ್ಣು ಮತ್ತು ಹಲಗೆಯ ಮಧ್ಯಲ್ಲಿ ಒರಳೆ ಬಾರದ್ದ ಹಾಂಗೆ ಹಾಕುತ್ತವು .

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುವರ್ಣಿನೀ ಕೊಣಲೆದೇವಸ್ಯ ಮಾಣಿಕಾವಿನಮೂಲೆ ಮಾಣಿಬೊಳುಂಬು ಮಾವ°ವಿನಯ ಶಂಕರ, ಚೆಕ್ಕೆಮನೆವೇಣೂರಣ್ಣಮಾಲಕ್ಕ°ಪ್ರಕಾಶಪ್ಪಚ್ಚಿಮಂಗ್ಳೂರ ಮಾಣಿಗೋಪಾಲಣ್ಣಜಯಶ್ರೀ ನೀರಮೂಲೆಗಣೇಶ ಮಾವ°ಅನುಶ್ರೀ ಬಂಡಾಡಿಶೀಲಾಲಕ್ಷ್ಮೀ ಕಾಸರಗೋಡುಶೇಡಿಗುಮ್ಮೆ ಪುಳ್ಳಿಸುಭಗವಸಂತರಾಜ್ ಹಳೆಮನೆನೆಗೆಗಾರ°ಕೆದೂರು ಡಾಕ್ಟ್ರುಬಾವ°ವಿದ್ವಾನಣ್ಣಜಯಗೌರಿ ಅಕ್ಕ°ಕೊಳಚ್ಚಿಪ್ಪು ಬಾವಡೈಮಂಡು ಭಾವವೇಣಿಯಕ್ಕ°ಕಳಾಯಿ ಗೀತತ್ತೆವಾಣಿ ಚಿಕ್ಕಮ್ಮ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ