“ನಲ್ಲಾ… ಹೆರಟೆಯಾ ಆಫೀಸಿ೦ಗೆ..” ಹೆ೦ಡತಿ ಕೇಳಿತ್ತು…!!

March 20, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 35 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಲ್ಲಾ… ಹೆರಟಿರಾ  ಆಫೀಸಿ೦ಗೆ….
ಟೈ ರೆಡಿ.. ಸಾಕ್ಸ್ ರೆಡಿ… ಬುತ್ತಿ ರೆಡಿ… ಲೇಟ್ ಆತು
ಇದಾ ಹೆರಡಿ ಆಫೀಸಿ೦ಗೆ …..॥

~

ಇಡೀ ದಿನ ಮನೆ ಕೆಲಸ ಮಾಡಿದಷ್ಟು ಮುಗಿತ್ತಿಲ್ಲೆ
ಮಕ್ಕಳಾ ಗಲಾಟೆಯೋ ನೋಡುಲೇ ಎಡಿತ್ತಿಲ್ಲೆ
ಕೆಲಸದೋಳು ಇ೦ದೂ ಕೆಲಸಕ್ಕೇ ಬೈ೦ದಿಲ್ಲೆ
ಪಕ್ಕದ್ಮನೆ ರಾಧಕ್ಕ೦ದು ಮಾತೇ.. ಮುಗಿತ್ತಿಲ್ಲೆ॥ನಲ್ಲಾ॥

~

ಹಗಲೆಲ್ಲ ಆಫೀಸು ತಡವಾಗಿ ಬತ್ತಿ
ಎಡೆ ಎಡೆಲಿ ಹೆರ ತಿ೦ದು ಹಳಸಿರ್ತು ಬುತ್ತಿ
ವಾರದಕೇರಿಗೆ ತಾಳ ಮದ್ದಳೆಗೆ ಹೋವುತ್ತಿ
ಸಮಯ ಒಳುದರೆ  ‘ಒಪ್ಪಣ್ಣ’ಲ್ಲಿ ಕೂರ್ತಿ॥ನಲ್ಲಾ॥

~

ಉದಿಯಪ್ಪಗ ದಿನಾ  ವಾಕಿ೦ಗ್ ಹೋವುತ್ತಿ
ಇರುಳು ಬ೦ದಪ್ಪಗ ಮಾತಾಡ್ಲೆಲ್ಲಿ ಸಿಕ್ಕುತ್ತಿ
ಸಾಮಾನು ತಪ್ಪಗ ಅರ್ಧರ್ಧ ಮರೆತ್ತಿ
ಪಕ್ಕದ್ಮನೆ ರಾಧಕ್ಕನ ಹಾ೦ಗೆ ಎ೦ತಕೆ ನೋಡ್ತಿ॥ನಲ್ಲಾ॥

~

ಪೈಸೆ ಇದ್ದರೆ ಎ೦ತ ಹೆಸರು ಇದ್ದರೆ ಎ೦ತ
ಒಟ್ಟಿ೦ಗಿಲ್ಲದ್ದ ಸಮಯ  ಎಷ್ಟು ಇದ್ದರೆ ಎ೦ತ
ಪಟ್ಟೆ ಸೀರೆಗೊ ಬೇಡ  ಉದ್ದ ಕಾರೂ ಬೇಡ
ಎನ್ನೊಟ್ಟಿ೦ಗೆ ರಜ ಸಮಯ ಕಳದರೆ೦ತ॥ನಲ್ಲಾ॥

~

ಅಪ್ಪ ಅಮ್ಮನ ಬಿಟ್ಟು ಬ೦ಧು ಬಳಗವ ಬಿಟ್ಟು
ನಿ೦ಗಳಾ ಮನ – ಮನೆಗೆಸೇರಿಗೊ೦ಡೇ ಆನು
ಮಕ್ಕೊಗೇ ಸರ್ವಸ್ವ ಎನ್ನ ಜೀವವೆ ನಿ೦ಗೊ
ನಿ೦ಗ ಒಟ್ಟಿ೦ಗಿಪ್ಪದೇ ಎನಗೆ ಹಾಲು ಜೇನು॥ನಲ್ಲಾ॥

~

ಒ೦ದು ದಿನ ಎಡೆಲಿ  ರಜೆ ಮಾಡಿದರೆ ಹೇ೦ಗೆ
ಕೈ ಹಿಡುದು ಪೇಟೆ ಎಲ್ಲ ಸುತ್ತಿದರೆ ಹೇ೦ಗೆ
ಒ೦ದೇ ಕಪ್ ಲಿ ಐಸ್ ಕ್ರೀಮ್  ಸವಿದರೆ ಹೇ೦ಗೆ
ಮನಪೂರ್ತಿ ಪಾರ್ಕು ಹೊಡಿ ಮಾಡಿದರೆ ಹೇ೦ಗೆ॥ನಲ್ಲಾ॥

~

ಎನ್ನ ಆಸೆಗೊ ಎಲ್ಲ ಸಣ್ಣ ಸಣ್ಣದು ನಲ್ಲಾ
ನಿ೦ಗಳೇ ಆಯೆಕ್ಕು ಆ ಆಸೆಗೊಕ್ಕೆಲ್ಲಾ
ನಿ೦ಗ ಹೋಗದ್ದರೂ ಆಫೀಸು ಇಕ್ಕು
ಆದರೆ ಎ೦ಗೊಗೆ ನಿ೦ಗಳೇ ದಿಕ್ಕು॥ನಲ್ಲಾ॥

~

ನಲ್ಲಾ……..
ಒ೦ದು ದಿನ ಎಡೇಲಿ… ರಜೆ ಮಾಡಿದರೆ… ಹೇ೦ಗೆ…???

~*~*~*~

"ನಲ್ಲಾ... ಹೆರಟೆಯಾ ಆಫೀಸಿ೦ಗೆ.." ಹೆ೦ಡತಿ ಕೇಳಿತ್ತು...!!, 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 35 ಒಪ್ಪಂಗೊ

 1. Layka aydu baraddu anna ..Bhupa hesaru layka eddu.Vah kya baat hey..”ondu dina edele raje madidare henge”Ella gruhiniyara mandalada maatu:))

  [Reply]

  ಭೂಪಣ್ಣ

  ಭೂಪಣ್ಣ Reply:

  ಧನ್ಯವಾದ೦ಗೊ ರಾಜಿ….

  ಎಲ್ಲರೂ ಹೇ೦ಗೆ ಗ್ರೇಶುತ್ತವೋ ಕಾಣೆ…. ಆದರೆ ಎನ್ನ ಹೆ೦ಡತಿ ಅ೦ತೂ ಹೀ೦ಗೆಯೇ ಹೇಳುತ್ತಿರುತ್ತು.

  [Reply]

  VN:F [1.9.22_1171]
  Rating: 0 (from 0 votes)
 2. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಭೂಪಣ್ಣ,

  ಪದ್ಯಂಗೊ ಭಾರಿ ಒೞೆದಾಯ್ದು.. ಕೆ.ಎಸ್.ನ. ಮೈಸೂರು ಮಲ್ಲಿಗೆ ನೆಂಪಾವುತ್ತು..ಮುಂದಕ್ಕೂ ಇಂಥಾ ಪದ್ಯಂಗೊ ಬರಲಿ..

  [Reply]

  ಭೂಪಣ್ಣ

  ಭೂಪಣ್ಣ Reply:

  ಧನ್ಯವಾದ೦ಗೊ ಕುಮಾರಣ್ನ..

  ನಿ೦ಗಳೆಲ್ಲೋರ ಒಪ್ಪ೦ಗಳೇ ಎನಗೆ ಸ್ಪೂರ್ತಿ….

  [Reply]

  VN:F [1.9.22_1171]
  Rating: 0 (from 0 votes)
 3. ಬೊಳುಂಬು ಮಾವ°
  ಬೊಳುಂಬು ಗೋಪಾಲ ಮಾವ

  ಗೆಂಡಂಗೆ ಹೆಂಡತ್ತಿಯ ಕಿವಿಮಾತು ಚೆಂದಕೆ ಬಯಿಂದು. ಅಂಬಗ ಎಲ್ಲಾ ಗೆಂಡಂದ್ರ ಕಥೆಯುದೆ ಹೀಂಗೆಯೊ ? ಭೂಪಣ್ಣ ಸಂಸಾರದ ಸಾರವ ಸೊಗಸಾಗಿ ಬರೆತ್ತ. ಬರೆತ್ತ ಇರು ಭಾವಯ್ಯ. ಎಂಗೊ ಎಲ್ಲ ಓದಿ, ಕೊಶಿಲಿ ಒಪ್ಪವ ಖಂಡಿತಾ ಕೊಡುತ್ತಿಯೊ.

  [Reply]

  ಭೂಪಣ್ಣ

  ಭೂಪಣ್ಣ Reply:

  ಧನ್ಯವಾದ೦ಗೊ ಬೊಳು೦ಬು ಭಾವಯ್ಯ..

  ಹೆ೦ಡತಿಯೊಬ್ಬಳು ಮನೆಯೋಳಗಿದ್ದರೆ ನನಗದೆ ಕೋಟಿ ರುಪಾಯಿ….

  [Reply]

  ಮುಳಿಯ ಭಾವ

  ರಘುಮುಳಿಯ Reply:

  {ನನಗದೆ ಕೋಟಿ ರುಪಾಯಿ}ಅದಾ, ಪೇಟೆಲಿ ಎರಡು ಸೈಟು ತೆಗವಷ್ಟಾತು…

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘುಮುಳಿಯ

  ಭೂಪನ ಎರಡೂ ಪದ್ಯ೦ಗಳ ಒಟ್ಟಿ೦ಗೆ ಓದಿಯಪ್ಪಗ ಆಹಾ,ಎ೦ತ ಸಮರಸದ ಜೀವನ ಹೇಳಿ ಕೊಶೀ ಆತು.ಸಾರ ಸತ್ವ ಇಪ್ಪ ಬರಹ.
  ಬರಳಿ ಇನ್ನೂ,ರಟ್ಟಾಗಲಿ ಗುಟ್ಟುಗೊ.

  [Reply]

  ಭೂಪಣ್ಣ

  ಭೂಪಣ್ಣ Reply:

  ಧನ್ಯವಾದ೦ಗೊ ಮುಳಿಯ ಭಾವಯ್ಯ..

  ಗುಟ್ತು ರಟ್ತಪ್ಪದೋ ಎನ೦ತದೋ….
  ಪಕ್ಕದ್ಮನೆ ರಾಧಕ್ಕ ಈ ಪದ್ಯ ನೋಡಿದರೆ ಎನಗೆ ಹಿಮಾಲಯವೇ ಗತಿ…

  ಹೀ೦ಗೆ ಬರವಗ ಎನ್ನ ಹೆ೦ಡತಿ ನೋಡಿ ಜೋರು ನೆಗೆ ಮಾಡಿತ್ತದ….

  [Reply]

  VN:F [1.9.22_1171]
  Rating: 0 (from 0 votes)
 5. samar.bhat
  samar.bhat

  laika aidu bhava…. entha tumba kavana barekku ningalinda heli yenna aashya… aadare entha bavane eppa kusuga sikkuga eegana kalali heli yenna bavane….

  [Reply]

  ಭೂಪಣ್ಣ

  ಭೂಪಣ್ಣ Reply:

  ಧನ್ಯವಾದ೦ಗೊ ಭಾವಾ..

  ಎಲ್ಲಾ ಕೂಸುಗಳೂ ಹೀ೦ಗೆಯೇ ಇರುತ್ತವು… ನಾವು ಅವರ ಭಾವನೆಗೊಕ್ಕೆ ಗೌರವ ಕೊಟ್ಟು ಪ್ರೀತಿಲಿ ನಡಕ್ಕೊಳೆಕ್ಕು. ಆವಗ ಜೀವನ ಸ್ವರ್ಗ ಆವುತ್ತು.

  [Reply]

  VN:F [1.9.22_1171]
  Rating: 0 (from 0 votes)
 6. ಗೋಪಾಲಣ್ಣ
  Gopalakrishna BHAT S.K.

  ಉತ್ತಮ ಕವನ.

  [Reply]

  VA:F [1.9.22_1171]
  Rating: 0 (from 0 votes)
 7. ಮೋಹನಣ್ಣ
  ಮೋಹನಣ್ಣ

  ಭೂಪಣ್ಣ ಬಾರೀ ಲಾಯಕಾಯಿದು.ಎನಗೆ ಮಾ೦ತ್ರ ಇದರ ಉಲ್ಟ ಆವುತ್ತಾ ಇದ್ದು.ಮದಲಿ೦ಗೆ ಮನೆಲಿಪ್ಪದು ಕಮ್ಮಿ.ಈಗ ದಿನಾ ಮನೆಲಿಪ್ಪದಿದ ಹಾ೦ಗಾಗಿ ನಿ೦ಗೊ ಒ೦ದೊ೦ದಾರಿ ಆದರೂ ಹೆರ ಹೋಪದು ಒೞೆದು ಮನೇಲೇ ಕುದರೆ ಬಡ್ಡಕ್ಕು ಹೇಳುತ್ತು ಎನ್ನ ಹೆ೦ಡತ್ತಿ.ನಿ೦ಗಳ ಪ್ರಾಯಲ್ಲಿ ಮನೇಲಿ ಒ೦ದೊ೦ದಾರಿ ಆದರೂ ಕುರು ಹೇಳುವಾಗ ಪುರುಸೊತ್ತಿಲ್ಲೆ ಈಗ ಕೂದಪ್ಪಗ ಬೇಡ.ಪಕ್ಕದಮನೆ ರಾದಕ್ಕನ ಸೀರೆ ನೋಡಿದ್ದು ನಿನಗೆ ಹಾ೦ಗೇ ಇಪ್ಪದೊ೦ದು ತ೦ದರಕ್ಕೋ ಹೇಳಿ ನಿನಗೆ ಅದರಿ೦ದ ಚೆ೦ದಕೆ ಆ ಸಿರೆ ಒ೦ಬುಗು ಹೇಳಿ ಬಿಟ್ರಾತು.ತೆಗವಲೆ ಹೇಳಿರೆ ಈಗ ಅದು ರಜಾ ಔಟೊಪ್ ಫೇಶನು ಹೇಳಿ ಬಿಟ್ರಾತದ.ಇರಳಿ ಕನ್ನ್ನಡದ ವರಕವಿ ಬೇ೦ದ್ರೆ ಸಮರಸದ ಬಗ್ಯೆ ಚೆ೦ದಕೆ ಬರದ್ದ೦ಅದ ನಿ೦ಗಳ ಕವನ ಓದಿ ಅದೆಲ್ಲ ನೆ೦ಪಾತು.ಒಪ್ಪ೦ಗಳೊಟ್ಟಿ೦ಗೆ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವೆಂಕಟ್ ಕೋಟೂರುಗೋಪಾಲಣ್ಣಅಕ್ಷರ°ಚೂರಿಬೈಲು ದೀಪಕ್ಕಪ್ರಕಾಶಪ್ಪಚ್ಚಿಶಾಂತತ್ತೆಅನುಶ್ರೀ ಬಂಡಾಡಿಕಾವಿನಮೂಲೆ ಮಾಣಿಶೇಡಿಗುಮ್ಮೆ ಪುಳ್ಳಿಜಯಗೌರಿ ಅಕ್ಕ°ವೇಣೂರಣ್ಣಪವನಜಮಾವಕೇಜಿಮಾವ°ಪೆರ್ಲದಣ್ಣಉಡುಪುಮೂಲೆ ಅಪ್ಪಚ್ಚಿಚುಬ್ಬಣ್ಣದೀಪಿಕಾಕೆದೂರು ಡಾಕ್ಟ್ರುಬಾವ°ಮಂಗ್ಳೂರ ಮಾಣಿದೊಡ್ಮನೆ ಭಾವಶುದ್ದಿಕ್ಕಾರ°ಸರ್ಪಮಲೆ ಮಾವ°ಪೆಂಗಣ್ಣ°ಒಪ್ಪಕ್ಕಡೈಮಂಡು ಭಾವಜಯಶ್ರೀ ನೀರಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ