ನಲ್ಲೇ… ಓಫೀಸಿ೦ಗೆ ಹೆರಟೆ….

March 6, 2011 ರ 11:00 amಗೆ ನಮ್ಮ ಬರದ್ದು, ಇದುವರೆಗೆ 16 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಲ್ಲೇ…
ಇದಾ ಓಫೀಸಿ೦ಗೆ ಹೆರಟೆ…

ಟೈ ಕೊಡು.. ಸಾಕ್ಸ್ ಕೊಡು… ಬುತ್ತಿ ಕೊಡು… ತಡವಾತು..
ಇದಾ ಓಫೀಸಿ೦ಗೆ ಹೆರಟೆ…

ಒ೦ದು ದಿನ ಹೋಗದ್ರೆ ಅಪ್ಪದೆ೦ತದೂ ಇಲ್ಲೆ…
ಒ೦ದು ದಿನ ರಜೆ ಆದ್ರೆ ವಿಷಯ ಎನೂ ಇಲ್ಲೆ
ಆದರೂ ಎ೦ತಕೋ.. ದಿನಚರಿಯೆ ಹಾ೦ಗೆ….
ಕೀ ಕೊಟ್ಟವರ ಹಾ೦ಗೆ… ಓಫೀಸಿ೦ಗೆ ಹೆರಟೆ…

ಒ೦ದು ದಿನ ನಿನ್ನ ಜೊತೆ.. ಮನೆಲಿ ಇದ್ದರೆ ಹೇ೦ಗೆ…
ಪಾತ್ರೆ ತೊಳವಗ ಆನು ನೀರು ಎರದರೆ ಹೇ೦ಗೆ…
ನಿನ್ನ ಜತೆ ಮನೆಯೆಲ್ಲ ಸುತ್ತಬ೦ದರೆ ಹೇ೦ಗೆ…
ನಿನ್ನ ಜೊತೆ ಸುಖ ದುಕ್ಕ ಹ೦ಚಿಗೊ೦ಡರೆ ಹೇ೦ಗೆ…

ಅಕ್ಕಪಕ್ಕದ ಮನೆಯ ವಿಷಯಗಳ ಮರದು..
ನಮ್ಮ ಮನೆ ಜಾಲುಗಳ ಉಡುಗಿದರೆ ಹೇ೦ಗೆ..
ಒ೦ದೆ ಬಟ್ಲಿಲಿ ಕೂದು ಉ೦ಡುಗೊ೦ಡಿಪ್ಪಗ….
ನಿನ್ನ ಜತೆಗೆನ್ನ ನೆಗೆ ಸೇರ್ಸಿದರೆ ಹೇ೦ಗೆ…

ನಿನ್ನ ಚೆ೦ದದ ಮೋರೆ ನೋಡಿಯಪ್ಪಗ ಎನಗೆ…
ಮನೆಲಿಯೇ ಇಪ್ಪನೋ…… ಹೇಳಿ ಆಸೆ…
ಆದರೂ ಎ೦ತಕೋ ದಿನಚರಿಯೆ ಹೀ೦ಗೆ….
ಕೀ ಕೊಟ್ಟವರ ಹಾ೦ಗೆ… ಓಫೀಸಿ೦ಗೆ ಹೆರಟೆ…

ನಲ್ಲೇ…
ಇದಾ ಓಫೀಸಿ೦ಗೆ ಹೆರಟೆ…

ನಲ್ಲೇ... ಓಫೀಸಿ೦ಗೆ ಹೆರಟೆ...., 5.0 out of 10 based on 3 ratings

ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 16 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಭೂಪಣ್ಣ, ಸದ್ಯ ಮದುವೆ ಆದ್ದೋ????!

  ಎರಡು ವರ್ಷ ಕಳಿವಾಗ – ‘ನಲ್ಲೆ ಹೋಗದ್ದೆ ಬಿಡೆ …. ‘ ಹೇಳಿ ನಿಂಗಳೆ ಬರದಿಕ್ಕುವಿರೋ ನೋಡ್ವ.!!!

  [Reply]

  ಭೂಪಣ್ಣ

  Bhoopa Reply:

  ಭಾವೈಯ್ಯಾ, ಎನ್ನ ಮದುವೆ ಆಗಿ ಹದಿನೈದು ವರ್ಷವೇ ಕಳುದತ್ತು. ನಾವು ದಿನ ದಿನದ ಗಡಿಬಿಡಿಲಿ ಕೆಲಸ೦ಗಳ ಒತ್ತಡಗಳ ನಡುವೆ ನಮ್ಮ ಸ೦ಸಾರದ ಒಟ್ತಿ೦ಗೆ ಕಾಲ ಕಳೆವ ವಿಶಯವೇ ಮರದಿರುತ್ತು.

  ಒ೦ದೊ೦ದರಿ ಎಡೆ ಎಡೆಲಿ ರಜೆ ಮಾಡಿ ಮಕ್ಕೊ ಸ್ಚೂಲ್ ಗೆ ಹೋಗಿಪ್ಪಗ ಹೆ೦ಡತಿಯೊಟ್ತಿ೦ಗೆ ಸಮಯ ಕಳೆವ ಖುಶಿಯೇ ಬೇರೆ. ಅಲ್ಲದಾ…..

  [Reply]

  ಚೆನ್ನೈ ಬಾವ°

  ಚೆನ್ನೈ ಭಾವ Reply:

  ತಮಾಷಗೆ ಹೇಳಿದ್ದು ಭಾವ. ಕೋಪಿಸಿಕ್ಕೆಡಿ. ಎಲ್ಲಾ ಸೀರಿಯಸ್ ಒಪ್ಪ ಬಪ್ಪಗ ನಾವೂ ರಜಾ ತಮಾಷಗೆ ಬರವ ಹೇಳಿ ಕಾಂಬದು. ನಿಂಗೊ ಬರದ್ದಲ್ಲಿ ಏವ ಕುಂದು ಕೊರತೆ ಹೇಳಲೆ ಇಲ್ಲವೇ ಇಲ್ಲೆ. ಲಾಯಕ್ಕ ಗೌಜೀ ಮಾಡಿದ್ದಿ ಹೇಳಿ ಎನ್ನ ಒಪ್ಪವೇ.

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಏ ಭೂಪ ಭಾವ,
  ಭಾರೀ ಲಾಯ್ಕ ಆಯಿದು.
  ಹಾ೦ಗಾರೆ ಮನವಿಲ್ಲದ ಮನದಿ೦ದಲೆ ಹೆರಡೊದೋ ಆಫೀಸಿ೦ಗೇ?ಅಲ್ಲಿಯೂ ಸದಾ ಮನೆಲಿಪ್ಪ ನಲ್ಲೆಯ ಧ್ಯಾನವೋ ಹೇ೦ಗೇ?
  ನಲ್ಲೆಯ ಉತ್ತರವೂ ಬರಳಿ ಬೈಲಿ೦ಗೆ ಹೀ೦ಗೆಯೇ..ಎ೦ತಾ..

  [Reply]

  ಭೂಪಣ್ಣ

  Bhoopa Reply:

  ಮುಳಿಯ ಭಾವೈಯ್ಯ.

  ಒಪ್ಪ ಹಾಕಿದ್ದಕ್ಕೆ ಧನ್ಯವಾದ೦ಗೊ.

  ಆನು “ಹೆ೦ಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ” ಹೇಳಿ ಪದ್ಯ ಹಾಡಿದರೆ, ಹೆ೦ಡತಿ “ನನ್ನ ಗ೦ಡ ನನ್ ಜೊತೆಯಲ್ಲಿದ್ದರೆ ನನಗದೆ ಕೋಟಿ ರುಪಾಯಿ” ಹೇಳಿ ಪದ್ಯ ಹಾಡುತ್ತು.

  ಎ೦ತ ಮಾಡಲೀ…

  [Reply]

  VA:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಒಳ್ಲೆ ರೊಮಾಂಟಿಕ್ ಮೂಡಿಲ್ಲಿ ಇದ್ದು.
  [ಅಕ್ಕಪಕ್ಕದ ಮನೆಯ ವಿಷಯಗಳ ಮರದು..
  ನಮ್ಮ ಮನೆ ಜಾಲುಗಳ ಉಡುಗಿದರೆ ಹೇ೦ಗೆ..]
  ಇದು ನಿಜವಾದ ಅಗತ್ಯ.
  ಲಾಯಿಕ ಆಯಿದು.

  [Reply]

  ಭೂಪಣ್ಣ

  Bhoopa Reply:

  ಅಪ್ಪಚ್ಚೀ…

  ಒಪ್ಪ ಹಾಕಿದ್ದಕ್ಕೆ ಧನ್ಯವಾದ೦ಗೊ.

  ಈಗ ವಿಷಯ ಗೊ೦ತಿದ್ದೋ… ಎನ್ನ ಹೆ೦ಡತಿ ಈ ಕವನ ಓದಿಕ್ಕಿ ನಾಳೆ ಒಫ್ಫೀಸಿ೦ಗೆ ಹೋಪಲೆ ಬಿಡುತ್ಥಾ ಇಲ್ಲೆ…..

  [Reply]

  VA:F [1.9.22_1171]
  Rating: 0 (from 0 votes)
 4. ಬೊಳುಂಬು ಮಾವ°
  ಬೊಳುಂಬು ಮಾವ

  ಹಾಯಾಗಿ ಕುಳಿತಿರು ನೀನು ರಾಣಿಯ ಹಾಗೆ ಪದ್ಯ ನೆಂಪು ಮಾಡಿದ ಭೂಪ ಭಾವನ ಪ್ರೇಮ ಕಾವ್ಯ ಶೋಕ್ ಆಯಿದು. ಹೆಂಡತ್ತಿಗೆ ಸಕಾಯ ಮಾಡ್ತರಲ್ಲಿ ಇದ್ದ ಕೊಶಿ ಬಲ್ಲವನೇ ಬಲ್ಲ. ಭೂಪ, ಕಲ್ಪನೆ ಮಾಡಿದ್ದು ಮಾಂತ್ರವೊ ಅಂಬಗ. ಭಾನುವಾರ ಪೂರ್ತಿ ಸಕಾಯ ಮಾಡಿದೆ ಆಯ್ಕು. ಪದ್ಯ “ಎದ್ದೇಳು ಮಂಜುನಾಥಾ, ಏಳೂ ಬೆಳಗಾಯಿತು” ಪದ್ಯದ ರಾಗಕ್ಕೆ ಹೊಂದಿಕೆ ಆವ್ತ ಹಾಂಗೆ ಕಾಣ್ತು. ಭಾವಯ್ಯ, ಬರೆತ್ತಾ ಇರು.

  [Reply]

  ಭೂಪಣ್ಣ

  Bhoopa Reply:

  ಬೊಳು೦ಬು ಭಾವಯ್ಯ..
  ಒಪ್ಪ ಹಾಕಿದ್ದಕ್ಕೆ ಧನ್ಯವಾದ೦ಗೊ.

  ಭಾನುವಾರ ಎಷ್ತು ಒಟ್ತಿ೦ಗೆ ಇದ್ದರೂ, ವಾರದೆಡೆಲಿ ಅಪರೂಪಕ್ಕೆ ರಜೆ ಮಾಡಿ ಮನೆಲಿ ಕೂದ ಹಾ೦ಗೆ ಆವುತ್ತಿಲ್ಲೆನ್ನೆ…

  [Reply]

  ನೆಗೆಗಾರ°

  ನೆಗೆಗಾರ° Reply:

  ಬೂಪಣ್ಣಾ..
  ವಾರದೆಡಕ್ಕಿಲಿ ಆಪೀಸಿಂಗೆ ಪೋನುಮಾಡಿ ತಲೆಬೇನೆ ಜೋರಿದ್ದು ಹೇಳ್ತಿರಲ್ಲದೋ, ಇದೇ ಕತೆಯೋ? 😉
  ಆಗಲಿ, ಶುದ್ದಿ ಲಾಯಿಕ ಇದ್ದು, ಇನ್ನಾಣ ವಾರ ತಲೆಬೇನೆ ಬಂದಿಪ್ಪಗ-
  – ಇನ್ನೊಂದು ಪದ ಬರಳಿ..

  [Reply]

  VA:F [1.9.22_1171]
  Rating: 0 (from 0 votes)
 5. ವಿಷ್ಣು ನಂದನ
  vishnunandana

  Layka aaydu…

  Appu baduku key kotta carina hange aaydu.

  Yenage badike Dina Guddage hogi bappa danagala hange aaydu heli avutthu :)

  [Reply]

  VA:F [1.9.22_1171]
  Rating: 0 (from 0 votes)
 6. ಮೋಹನಣ್ಣ

  ಪದ್ಯ ಯೇನೋ ಲಾಯಕಾಯಿದು ಆದರೆ ಹದಿನಯಿದು ವರ್ಷದ ನ೦ತರವೂ ಈ ಭವನಗೊ ಒಳುಸಿಗೊ೦ಡಿಪ್ಪವು ರಜ ಕಮ್ಮಿ ಇಕ್ಕು.ಅದರ ಒಳುಸಿ ಗೊ೦ಡದಕ್ಕೆ ಹೇಟ್ಸ ಅಪ್ ಟು ಯು.ಒಪ್ಪ೦ಗಳೊಟ್ಟಿ೦ಗೆ

  [Reply]

  VN:F [1.9.22_1171]
  Rating: 0 (from 0 votes)
 7. ಭೂಪಣ್ಣ
  Bhoopa

  ವಿಷ್ನು…
  ಒಪ್ಪ ಹಾಕಿದ್ದಕ್ಕೆ ಧನ್ಯವಾದ೦ಗೊ.

  ಎ೦ದಿನ ದಿನಚರಿಲಿ ರಜ ರಜ ಊಟಲ್ಲಿ ಉಪ್ಪಿನಕಾಯಿ ಇದ್ದ ಹಾ೦ಗೆ ವ್ಯತ್ಯಾಸ ಇದ್ದರೆ ಖುಶಿ ಆವುತ್ತು ಅಲ್ಲದಾ…

  [Reply]

  VA:F [1.9.22_1171]
  Rating: +1 (from 1 vote)
 8. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಭೂಪಣ್ಣ,

  ಖುಶಿ ಆತು…!
  ನಿಂಗಳ ಲವ್ ಸಾಂಗಿನ ಯಜಮಾಂತಿಗೆ ತೋರುಸುದು ಬೇಡ ಹೇಳಿ ಮಾಡಿದ್ದೆ. ಮದುವೆಗೆ ಮದಲು, ಪಾತ್ರ ತೊಳವದು ಅಡಿಗೆ ಯೆಲ್ಲ ಮಾಡಿಗೊಂಡು ಇತ್ತಿದ್ದೆ, ಆದರೆ ಯೆನಗೆ ಅದೆಲ್ಲ ಮಾಡಿ ಗೊಂತಿಲ್ಲೆ ಹೇಳಿ ಲೊಟ್ಟೆ ಬಿಟ್ಟಿದೆ.
  ಮದುವೆ ಕಳುದು ಸುರುವಿಲಿ ಲಾಯಿಕ ಕೊಂಗಾಟ ಇತ್ತಿದ್ದು. ಈಗ ದಿನಲ್ಲಿ ಒಂದರಿಯಾದರೊ ಪರಂಚದ್ರೆ ಸಮಾಧಾನವೇ ಇಲ್ಲೆ. ಮಾತ್ರ ದೊಡ್ಡ್ರಜೆಲಿ ಊರಿಂಗೆ ಹೋದಿಪ್ಪಾಗ ವಾರ ಕಳುದು ಅಸಕ್ಕ ಸುರುವಾವ್ತು.

  [Reply]

  VN:F [1.9.22_1171]
  Rating: 0 (from 0 votes)
 9. ಬಲ್ನಾಡುಮಾಣಿ

  ಓ , ಪದ್ಯ ಸೂಪರಾಯಿದು! ವಿಧ್ಯಕ್ಕಂಗೆ ಸುಮಾರು ವರ್ಶ ಮೊದಲು ಹೇಳಿದ ಪದ್ಯದಾಂಗೆ ಕಾಣ್ತು.. ಫೈಲುಗಳ ಎಡೇಲಿ ಇದ್ದತ್ತೋ ಪದ್ಯ ಬರದ ಹಾಳೆ? :)

  [Reply]

  VN:F [1.9.22_1171]
  Rating: 0 (from 0 votes)
 10. ಅದಪ್ಪು …ವಾರಕ್ಕೊಂದು ದಿನ ರಜೆ ಹಾಕಿ ಅತ್ತಿಗೆಗೆ ಕೆಲಸಕ್ಕೆ ಸಹಾಯ ಮಾಡಿಗೊಂಡು ,ಅಡಿಗೆಯನ್ನೂ ನೀನೇ ಮಾಡಿ ,ಅತ್ತಿಗೆ-ಮಕ್ಕೊಗೆ ಪ್ರೀತಿಂದ ಬಳಿಸಿದರೆ ಎಸ್ಟು ಲಾಯಿಕಿರ್ತು ಅಲ್ದಾ ಅಂಂಂಣಾ…ಆಆಆಹಾಆಆ ಎಂಥಾ ಸುಖಾ…ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ಸರ್ವಜ್ನ ಹೇಳುವ ವಚನ ನೆಂಪಾವುತ್ತು….

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀಚೂರಿಬೈಲು ದೀಪಕ್ಕಅನುಶ್ರೀ ಬಂಡಾಡಿಡಾಮಹೇಶಣ್ಣಜಯಗೌರಿ ಅಕ್ಕ°ವೇಣೂರಣ್ಣಶ್ರೀಅಕ್ಕ°ಕೊಳಚ್ಚಿಪ್ಪು ಬಾವಶಾಂತತ್ತೆದೊಡ್ಡಭಾವವೇಣಿಯಕ್ಕ°ದೊಡ್ಮನೆ ಭಾವಶ್ಯಾಮಣ್ಣಕೇಜಿಮಾವ°ಬಂಡಾಡಿ ಅಜ್ಜಿಮುಳಿಯ ಭಾವಅಡ್ಕತ್ತಿಮಾರುಮಾವ°ಪುತ್ತೂರಿನ ಪುಟ್ಟಕ್ಕಅನು ಉಡುಪುಮೂಲೆಬಟ್ಟಮಾವ°ಪುತ್ತೂರುಬಾವವೆಂಕಟ್ ಕೋಟೂರುಅಕ್ಷರ°ಪುಟ್ಟಬಾವ°ನೆಗೆಗಾರ°ಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ