ನೆಂಪಿದ್ದಾ ಕೂಸೆ..

February 6, 2013 ರ 12:41 pmಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನೆಂಪಿದ್ದಾ ಕೂಸೆ

ಈ ಮೋರೆಯ ನೆಂಪಿದ್ದಾ ।ಕೂಸೆ।
ಮೋರೆಯ ನೆಂಪಿದ್ದಾ?।
ಗೆಡ್ಡವ ಮೀಸೆಯ ತುಂಬಿದ ಮೋರೆಲಿ
ನೆಗೆಗಳ ನೆಂಪಿದ್ದಾ!।।

ಶಾಲೆಗೆ ಹೋಪಗ ಹೂಗಿನ ಕೊಯ್ದದು
ನಿನಗೇ ಕೊಡುಲಲ್ದ।ಕೂಸೆ।
ನಿನಗೇ ಕೊಡುಲಲ್ದ।
ಬೇರೆಯ ಮಕ್ಕಳ ಬೈದೋಡ್ಸಿದ್ದುದೆ
ನಿನಗೇ ನೆರಳಲ್ದ।ಆನು।
ನಿನಗೇ ನೆರಳಲ್ದ?।।

ಹುಗ್ಗಿಸಿ ಮನೆಂದ ತಿಂಡಿಯ ತಂದದು
ನಿನಗೆ ಮರತೋತ।ಕೂಸೆ।
ನಿನಗೆ ಮರತೋತಾ?।
ಅಪ್ಪ ಬೈದಪ್ಪಗ ತಪ್ಪೆನ್ನದೇಳಿ
ಹೇಳಿದ್ದು ನೆನಪಿದ್ದ।ನಿನಗೆ।
ಹೇಳಿದ್ದು ನೆಂಪಿದ್ದಾ!

ಎಲ್ಲಿಗೊ ಹೋಪಗ ಒಟ್ಟಿಂಗೆ ಕೂದ್ದು
ಬಸ್ಸಿಲಿ ನೆನಪಿದ್ದಾ?।ನಿನಗೆ।
ಬಸ್ಸಿಲಿ ನೆನಪಿದ್ದಾ
ಬಿಟ್ಟಿಕ್ಕಿ ಹೋಗೆಡ ಹೇಳಿ ಕೂಗಿದ್ದು।
ನೀನೇ ನೆನಪಿದ್ದಾ। ಕೂಸೆ।
ನಿನಗೆ ನೆನಪಿದ್ದಾ।।

ಜಾತ್ರೆಲೆಲ್ಲರೂ ಜೋಡಿ ಬಂತೇಳಿ
ಹೇಳಿದ್ದು ನೆನಪಿದ್ದ।ಕೂಸೆ।
ಹೇಳಿದ್ದು ನೆನಪಿದ್ದಾ।
ಎರಡೇ ವರ್ಷಲ್ಲಿ ಮದುವೆದೆ ಆತು,
ಎನ್ನನೆ ಮರತೋತ।ನಿನಗೆ।
ಎನ್ನನೆ ಮರತೋತ?।।

ನಲಿವಿನ ದಿನಲ್ಲಿ ಮರದರು ಎನ್ನಾ
ಬೇನೆಗೆ ಮರವಿದ್ದಾ।ಕೂಸೆ।
ಬೇನೆಗೆ ಮರವಿದ್ದಾ।
ಈಗ ನಿನ್ನ ಕಾಡುಲೆ ಬೈಂದಿಲ್ಲೆ
ಸುಮ್ಮನೆ ಗೊಂತಾತಾ।ಮಾತು।
ಸುಮ್ಮನೆ ಗೊಂತಾತಾ।।
~~~***~~~

ಈ ಪದ್ಯವ ಶ್ರೀಶಣ್ಣನ ಸೊರಲ್ಲಿ ಇಲ್ಲಿ ಕೇಳ್ಳಕ್ಕು –
NEMPIDDA KOOSE By SHREESHANNA

 

ನೆಂಪಿದ್ದಾ ಕೂಸೆ.., 10.0 out of 10 based on 1 rating

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಪಷ್ಟಾಯಿದು.

  [Reply]

  VN:F [1.9.22_1171]
  Rating: 0 (from 0 votes)
 2. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಲಾಯ್ಕ ಪದ್ಯ..ಹಾಡಿದ್ದೂ ಲಾಯ್ಕ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 3. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಕೋಳ್ಯೂರು ಕಿರಣನ
  ಮನದ ವೇದನೆಗೆನ್ನ
  ಅನುತಾಪ ಆನಿಲ್ಲಿ ಬರವೆ /
  ಕವನ ಇನ್ನುದೆ ಬರಲಿ
  ಭಾವನೆಗೊ ತುಂಬಿರಲಿ
  ಮನದುಂಬಿ ಒಪ್ಪವ ಕೊಡುವೆ /

  ಶ್ರೀಶಣ್ಣ ಹಾಡಿದ್ದೂ ಲಾಯಕ ಆಯಿದು

  [Reply]

  VN:F [1.9.22_1171]
  Rating: +3 (from 3 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆಬೋಸ ಬಾವದೀಪಿಕಾಪ್ರಕಾಶಪ್ಪಚ್ಚಿಅಕ್ಷರದಣ್ಣಗೋಪಾಲಣ್ಣಸರ್ಪಮಲೆ ಮಾವ°ದೇವಸ್ಯ ಮಾಣಿಡಾಮಹೇಶಣ್ಣಡೈಮಂಡು ಭಾವವಾಣಿ ಚಿಕ್ಕಮ್ಮಗಣೇಶ ಮಾವ°ಚೆನ್ನೈ ಬಾವ°ದೊಡ್ಡಮಾವ°ವೇಣೂರಣ್ಣಶಾಂತತ್ತೆಪವನಜಮಾವದೊಡ್ಡಭಾವಶರ್ಮಪ್ಪಚ್ಚಿಪುಣಚ ಡಾಕ್ಟ್ರುಅನುಶ್ರೀ ಬಂಡಾಡಿವೇಣಿಯಕ್ಕ°ಶಾ...ರೀಜಯಗೌರಿ ಅಕ್ಕ°ಅಜ್ಜಕಾನ ಭಾವಅಡ್ಕತ್ತಿಮಾರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ