ನೂತನ ಪುರೋಹಿತರು

ಪೇಟೆಗಳಲ್ಲಿ ಮದುವೆಯ ಮುನ್ನಾಣ ದಿನ ನೆಡೆತ್ತಾ ಇಪ್ಪ  ಆರತಕ್ಷತೆ ( ರಿಸೆಪ್ಶನ್) ಹೇಳ್ತ ಗೌಜಿಯಭಾಮಿನಿ’ಲಿ ಬರೆಯದ್ದೆ ಮನಸ್ಸು ಕೇಳ. ಇದು ಆರ ಮನಸ್ಸಿ೦ಗೂ ಬೇನೆ ಮಾಡುಲೆ ಅಲ್ಲ, ಬರೀ ಕುಶಾಲಿ೦ಗೆ , ಆತೋ..

~~~~~~~~~~~~~~~~~~~~~

 

ಮೂರು ವಾರದ ಹಿ೦ದೆನಗೆ ಬೈ
ಸಾರಿ ಹೇಳಿಕೆ ಬ೦ತು ಮದುವೆಗೆ
ಭಾರಿ ಕೊಶಿಲಿಯೆ ಹೆರಟೆ ಹೋಗದ್ದರಿದು ಕಳಿಯನ್ನೆ |
ನೂರು ಕೆಲಸದ ನೆಡುಕೆ ವಾಹನ
ವೇರಿ ಸಾಗಿದೆ ತಡವು ಮಾಡದೆ
ಧಾರೆ ಮುನ್ನಾಣ ದಿನ ರೈಸುವ ಆರತಕ್ಷತೆಗೆ ||

ನಟಬೆಶಿಲು ಕಳುದಿತ್ತು ಹೋಪಗ
ಕುಟುಕುಟುನೆ ಮೆಲ್ಲ೦ಗೆ ತೆರಕಿಲಿ
ಗಟಗಟನೆ ತ೦ಪಾದ ಹಾಲಿನ ಕುಡುದು ನೋಡಿದರೆ|
ಪುಟುಪುಟುನೆ ಓಡ್ಯೊ೦ಡು ಜೋರಿಲಿ
ಹಟ ಹಿಡುದು ಕೂಗುತ್ತ ಬಾಬೆಯ
ಪಟ ತೆಗವ ಮಹನೀಯರೇ ಈ ದಿನ ಪುರೋಹಿತರು ||ನೂತನ ಪುರೋಹಿತರು

ಇಬ್ಬರಿತ್ತಿದ್ದವವು ಹೊಸಬಗೆ
ಜುಬ್ಬ ಪೈಜಾಮಲ್ಲಿ ಮಿ೦ಚುತ
ಗೆಬ್ಬು ನೋಡಿದ ನೆನಪು ಬ೦ತಿಲ್ಲೆನಗೆ ಮರವದಿದಾ|
ಉಬ್ಬು ಹಲ್ಲಿನ ಬಿಟ್ಟು ನಿ೦ದವ
ರೊಬ್ಬರೊಬ್ಬರ ತಡದು ನಿಲ್ಸೊಗ
ಕೊಬ್ಬು ತು೦ಬಿದ್ದಿವರ ಬುದ್ಧಿಯ ಸರ್ತ ಮಾಡೆಕ್ಕು||

ಆರತಿಯು ಇತ್ತಿಲ್ಲೆಯಕ್ಷತೆ
ಸೇರು ಹುಡುಕಿದರಿಲ್ಲೆ ಜೆನ ನೂ
ರಾರು ಸೇರಿದ್ದವದ ಮ೦ಟಪ ಕಾ೦ಬಲೆಡಿಯದ್ರೂ|
ಮೋರೆಯಡ್ಡಕೆ ಸೆರಗು ಬೀಸಿದ
ನಾರಿಮಣಿ ಹೊಸ ರೇಶ್ಮೆ ಸೀರೆಯ
ತೋರುಸಿದ್ದದು ಹೇಳಿ ಗೊ೦ತಾತಿಲ್ಲೆ ಸೆಕೆ ಹೆಳೆಲಿ||

ಕೂಸು ಮಾಣಿಯ ಒತ್ತ ನಿಲ್ಲುಸಿ
ಬೋಸು ನೆಗೆ ಮಾಡ್ಸುತ್ತಲಿಬ್ರುದೆ
ಕೋಸು ಕಣ್ಣಿಲಿ ನೋಡಿ ಹೇಳುತ್ತೊಬ್ಬ ಭಾವಯ್ಯ°|
ವಾಸನೆಯೆ ಬಾರದ್ದ ಹೂಗಿನ
ಮೂಸಿ ನಿಲ್ಲುಸಿ ಪಟವ ತೆಗವಗ
ಮೋಸವಾತನ್ನೆಪ್ಪ ಸೆಮಿಲಿತ್ತಾಗ ಮದ್ಮಾಳು||

ವರನ ಕೊರಳಿನ ಹಿಡುದು ನಿಲ್ಲುವ
ವರವ ಕೊಟ್ಟಾತಯ್ಯ ಛೇ ಛೇ
ಹರವಸೆಯೆ ಕೆಟ್ಟತ್ತು ಹೀ೦ಗೊ೦ದಿದ್ದೊ ಸಭೆ ನೆಡುಕೆ |
ಮರದು ನಿ೦ದವು ನೆ೦ಟರಿಷ್ಟರು
ಸರುತ ಬೆನ್ನಿಲಿ ಸಾಲುಗಟ್ಟಿಯೆ
ಹರುಷ ತೋರುಸಿ ಹಲ್ಲು ಮಸದವು ಬೈದು ಮನಸಿನೊಳ ||

ಕಟ್ಟಕಡೆಗದ ಕೃಪೆಯ ತೋರುಸಿ
ಬಿಟ್ಟವವು ವೇದಿಕೆಗೆ ಹೋದರೆ
ಕೊಟ್ಟವಾಜ್ಞೆಯ ಹ೦ದೆಡಿನ್ನೊ೦ದಷ್ಟು ಕ್ಷಣ ನಿಲ್ಲಿ |
ಚಿಟ್ಟು ತಲೆ ಸಭೆಗಡ್ಡ ನಿ೦ದವ
ರಟ್ಟಹಾಸವ ಕ೦ಡು ಮನಸಿಲೆ
ಜುಟ್ಟು ಹಿಡಿಯೆಕ್ಕಿವರ ಹೇಳಿಯೆ ಒಸಗೆಯೊಪ್ಪುಸಿದೆ ||

~~~~~~~~~~~~~~~~~~~~~~~~~~~~~

ಮುಳಿಯ ಭಾವ

   

You may also like...

8 Responses

 1. ಕೆ. ವೆಂಕಟರಮಣ ಭಟ್ಟ says:

  ಹರೇ ರಾಮ.

 2. Venugopal Kambaru says:

  ಪ್ರಾಸ ಬದ್ದವಾಗಿದ್ದ್ದು. ಲಾಯಕ ಆಯಿದು

 3. ಕೆ.ನರಸಿಂಹ ಭಟ್ ಏತಡ್ಕ says:

  ಭಾಮಿನಿ ರೈಸಿದ್ದು ರಘು ಮುಳಿಯ..ಆನುದೆ ಹೀಂಗೆ ಒಂದು ಸರ್ತಿ ಬೆಂದಕಾಳೂರಿಲ್ಲಿ ಒಂದು ಸೋ ಕೋಲ್ಡ್ ಆರತಕ್ಷತೆಗೆ ಹೋಗಿತ್ತಿದ್ದೆ.
  ತೆರಕ್ಕಿಲಿ ವೇದಿಕೆಗೆ ಹೋಗಿ ಕೈಕುಲುಕಿ
  ಒಟ್ಟಿಂಗೆ ನಿಂದು ಕೆಮರದೊಳವೇ ಹಾಕಿ
  ಬಗೆಬಗೆಯ ತಂಪುಪಾನೀಯಂಗಳನುರ್ಪಿ
  ಬೇಕು ಬೇಕಾದ ತಿಂಡಿಯ ತಿಂದೆ ಗರ್ಪಿ

 4. ಲಕ್ಷ್ಮಿ ಜಿ.ಪ್ರಸಾದ್ says:

  ಲಾಯ್ಕ ಆಯಿದು ಪದ್ಯ

 5. ಬೊಳುಂಬು ಗೋಪಾಲ says:

  ಭಾಮಿನಿ ಒಳ್ಳೆ ರೈಸಿದ್ದು ಭಾವಯ್ಯ. ಪಟ ತೆಗೆತ್ತವರ ಕೆಪ್ಪಟಗೆ ಪಟ ಪಟನೆ ಬಡುದ ಹಾಂಗಿದ್ದರುದೆ, ಮದುವೆ ಆರತಕ್ಷತೆಯ ನೈಜ ಚಿತ್ರಣ ಇಲ್ಲಿದ್ದು. ಪಟ ತೆಗೆತ್ತವರ “ಕುಂ..” ನೋಡ್ಳೆ ಬಂದದೊ ಎಂಗೊ ಹೇಳಿ ಸಭಿಕರು ಸಭ್ಯತೆಯ ಮೀರಿ ಮಾತಾಡೆಂಡದು ಆನು ಕೇಳಿದ್ದೆ. ನಿಲ್ಲಿ, ಹೊರಡಿ ಹೇಳುವ ಆದೇಶಂಗಳ ಪಟದವು ಕೊಡ್ತದು ಎನಗೂ ಸರಿ ಕಾಣ್ತಿಲ್ಲೆ.
  ಕೆಲವೊಂದರಿ ಕರಿಮಣಿ ಕಟ್ಟುವಗಳುದೆ, “ನಿಲ್ಲುಸಿ, ಬೆಟ್ರಿ ಬದಲುಸುತ್ತೆ ” ಹೇಳುವ ಪರಿಸ್ಥಿತಿಗೊ ಮದುವೆಗಳಲ್ಲಿ ಕಂಡು ಬತ್ತು.
  ನೂತನ ಪುರೋಹಿತರು ಹೇಳುವ ಶಬ್ದ ಪ್ರಯೋಗ ಲಾಯಕಾಯಿದು.

 6. ಚೆನ್ನೈ ಭಾವ° says:

  ಆರತಿಯು ಇತ್ತಿಲ್ಲೆಯಕ್ಷತೆ ಸೇರು ಹುಡುಕಿದರಿಲ್ಲೆ 😀 😀

  ಸುರುವಿಂದ ಅಕೇರಿಯವರೆಂಗೆ ಪ್ರತಿಯೊಂದೂ ರೈಸಿದ್ದು ಭಾವ. ಪಷ್ಟ್ಳಾಸು

 7. ಭಾಗ್ಯಲಕ್ಷ್ಮಿ says:

  ಮುಳಿಯದಣ್ಣನ ಪದ್ಯ, ತಮಾಷೆಯೂ ಸೇರಿ ಲಾಯಿಕಾಯಿದು . ಎಲ್ಲೋರೂ ಕಾಲನ ಕೈಗೊಂಬೆಗೊ ಅಪ್ಪದಂತೂ ಸಹಜ .

 8. ಶರ್ಮಪ್ಪಚ್ಚಿ says:

  ಹೀಂಗಿಪ್ಪ ಅನುಭವ ತುಂಬಾ ಸರ್ತಿ ಆಯಿದು.
  ನೈಜ ಚಿತ್ರಣ ಭಾಮಿನಿಲಿ ರೈಸಿದ್ದು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *