ಊರ ಹಸುಗಳ ಒಳುಶೆಕ್ಕು

ಊರ ಹಸುಗಳ ಒಳುಶೆಕ್ಕು

ಊರ ಹಸುಗಳ ಭಾರೀ ಚೆಂದವ ನೋಡೆಕ್ಕೋ
ಸೀದ ಎಲ್ಲರೂ ಹೋಯೆಕ್ಕೇ, ಹೊಸನಗರಕ್ಕೆ |

ಊರ ಜಾತಿಯ ಹಶುಗಳ ಉಳಿಶೆಕ್ಕು ಬೆಳೆಶೆಕ್ಕು
ಗುರುಗಳ ಯೋಚನೆ, ಯೋಜನೆ ಆಯೆಕ್ಕು ಭಾರೀ ಲಾಯಕ್ಕು |

ವಂದೇ ಗೋಮಾತರಮ್

ಊರ ಹಶುಗಳ ನಾವು ಪೂಜಿಸೆಕ್ಕಾದ್ದು,ಸಾಂಕೆಕ್ಕಾದ್ದು
ಬೇರೆ ಹಶುಗಳ ಹಾಂಗಲ್ಲ ಇದು |

ಇದರ ಹಾಲಿಂಗೆ ಭಾರೀ ಸತ್ವ, ರುಚಿ ಇದ್ದು
ಇದರ ಸಗಣ ಮೂತ್ರಲ್ಲಿ ಮದ್ದಿನ ಗುಣ ಇದ್ದು |

ಗೋವು ಹೇಳಿರೆ ಅದು ಬರೀ ದನ ಅಲ್ಲ
ಅದು ಧನ ಸಾಧನ ಬದುಕು ಎಲ್ಲ

ಗೋವುಗೊ ಉಳುದರೆ ಒಳಿಗು ನಾವು,
ಇಲ್ಲದ್ದರೆ ನಾವಿಲ್ಲೆ ||

|| ವಂದೇ ಗೋ ಮಾತರಮ್ ||

ಚಂದ್ರಮಾವ°

   

You may also like...

15 Responses

 1. ಶೇಡಿಗುಮ್ಮೆ ಪುಳ್ಳಿ says:

  ಮಾವಾ ಲಾಯಿಕಾಯಿದು ಹೇಳಿ ಒಂದೊಪ್ಪ.
  ಊರ ಹಸುಗಳ ಒಳುಶೆಕ್ಕು,
  ಅದು ಶುದ್ದ ಊರ ತಳಿಯಾಗಿರೆಕ್ಕು
  ಅದು ದಿನಾಗಳೂ ಬಯಲಿಲೆಲ್ಲ ಸುತ್ತೆಕ್ಕು,
  ಮದ್ದಿನ, ಮೂಲಿಕೆ ಗೆಡುಗಳ ಮೇಯೆಕ್ಕು,
  ಅದರ ಹಾಲು ನಾವು ಕರದು ಕುಡಿಯೆಕ್ಕು,
  ನಾವು ಆರೋಗ್ಯವಂತರಾಗಿರೆಕ್ಕು, ಇದೆಲ್ಲಾ ಅಪ್ಪಾದ್ದದೇ ಆದರೆ……………………….

  • ಚಂದ್ರಮಾವ° says:

   ಊರ ಹಸುಗಳ ಉಳಿಶೆಕ್ಕು ಹೇಳುವ ಎನ್ನ ಹುಂಡು ಪದ್ಯವ ಲಾಯ್ಕ ಆಯ್ದು ಹೇಳಿದ ಶೇಡಿಗುಮ್ಮೆ
   ಪುಳ್ಳಿಗೆ ಧನ್ಯವದಂಗೊ. ಆನು ಬರೆದ ಹುಂಡು ಪದ್ಯಕ್ಕೆ ಪೂರಕವಾಗಿ ನೀನು ಬರದ ಆರು ಗೆರೆಯ ಪದ್ಯ
   ಭಾರೀ ಲಾಯ್ಕಾಯ್ದು. ಆದರೆ ಅದು ದಿನಾಗಳು ಬಯಲಿಲ್ಲಿ ಎಲ್ಲ ಸುತ್ತಿದರೆ ಇಂದ್ರಾಣ ಕಾಲಲ್ಲಿ ಪುನಹ ಹಟ್ಟಿಗೆ ಬಕ್ಕು ಹೇಳಿ ಹೇಳಲೆಡಿಯ. ಇಂದು ಕಾಡೆಲ್ಲ ಬೋಳಾಗಿ ಮದ್ದಿನ ಮೂಲಿಕೆ ಗೆಡು ಕಮ್ಮಿ ಆಯ್ದು ಅಲ್ಲದೊ?

 2. ಚೆನ್ನೈ ಭಾವ says:

  ‘ವಂದೇ ಗೋಮಾತರಂ’

  ಚಂದ್ರಮಾವನ ಪದ್ಯ ಲಾಯಕ ಆಯ್ದು. ಆದರೆ, ಅದೆಂತಕೆ ಇಷ್ಟು ಚುಟುಕಾಗಿ ಮುಗಿಶಿದ್ದು ಅನಿಸಿತ್ತೆನಗೆ. ಇನ್ನೊಂದು ಎಂಟು ಸಾಲು ಸೇರಿ ಬಪ್ಪಲಾವ್ತಿತ್ತೋದು. ತಪ್ಪಲ್ಲ, ಲೇಖಕನ ಸ್ವಾತಂತ್ರ್ಯ, ಇಚ್ಛೆ, ಕಲ್ಪನೆ., ನಾವು ಅಡ್ಡಿ ಹೇಳುವಾಂಗೆ ಇಲ್ಲೆ. ಅಂದರೂ ನಮ್ಮ ಅನಿಸಿಕೆ ಹೇಳಿದ್ದಷ್ಟೇ.

  ಶೇಡಿಗುಮ್ಮೆ ಪುಳ್ಳಿ ಭಾವನ ‘.. ಬಯಲಿಲೆಲ್ಲ ಸುತ್ತೆಕು, ಮೆಯೇಕು, ಕರದು ಕುಡಿಯೆಕ್ಕು’ ಓದಿಯಪ್ಪಗ ಮತ್ತೂ ಕುಶೀ ಆತು ಹೇಳಿತ್ತು – ‘ಚೆನ್ನೈವಾಣಿ’.

  • ಚಂದ್ರಮಾವ° says:

   ಹಸುವಿನ ಬಗ್ಗೆ ಆನು ಬರೆದ ಪದ್ಯವ ಮೆಚ್ಚಿದ ಚೆನ್ನೈ ಭಾವಂಗೆ ವಂದನೆಗೊ. ಈ ಹುಂಡು ಪದ್ಯವ ಇನ್ನೂ ವಿಸ್ತಾರವಾಗಿ ಬರೆವಲೆ ಆವ್ತಿತ್ತು ಹೇಳುವ ನಿಂಗಳ ಅಭಿಪ್ರಾಯ ಒಳ್ಳೆದು. ಪದ್ಯ ಬರೆದವರ ಸ್ವಾತನ್ತ್ರ್ಯದ ಬಗ್ಗೆ ನಿಂಗಳ ಅನಿಸಿಕೆ ಸ್ವಾಗತಾರ್ಹ. ಧನ್ಯವಾದಂಗೊ.

 3. jayashree.neeramoole says:

  ಆಹಾ… ತುಂಬಾ ಒಳ್ಳೆ ಪದ್ಯ… ಚಂದ್ರ ಮಾವ ಹೇಳಿದ ಹಾಂಗೆ ಹೊಸನಗರಕ್ಕೆ ಹೋಗಿ ಮನಸ್ಸಿಲ್ಲಿ ಊರ ದನಗಳ ತುಂಬಿಸಿಗೊಂಡು ಬಂದು ನಮ್ಮ ಮನೆಲಿ,ಊರಿಲ್ಲಿ ಎಲ್ಲ ಊರ ದನಗಳ ತುಂಬುಸುವ…

  • ಚಂದ್ರಮಾವ° says:

   ಎನ್ನ ಹುಂಡು ಪದ್ಯವ ಮೆಚ್ಚಿ ಊರ ಹಸುಗಳ ಸಾಂಕಲೆ ಉಮೇದು ತೋರಿದ ನಿಂಗಳ ಅಭಿಮಾನಕ್ಕೆ ಆನು ಆಭಾರಿ.
   ಧನ್ಯವಾದಂಗೊ.

 4. ತೆಕ್ಕುಂಜ ಕುಮಾರ ಮಾವ° says:

  ವಂದೆ ಗೋಮಾತರಂ.
  ಲಾಯಿಕ್ಕಾಯಿದು.

  • ಚಂದ್ರಮಾವ° says:

   ಧನ್ಯವಾದಂಗೊ ನಿಂಗಳ ಗುಣಗ್ರಹಿಕೆಗೆ, ಹೊಗಳಿಕೆಗೆ, ವಿಮರ್ಶೆಗೆ.

 5. ವ೦ದೇ ಗೋಮಾತರಮ್………
  ಭಾರೀ ಲಾಯ್ಕ್ಕ ಆಯ್ದು……
  ನಮಗೆಲ್ಲಾ ಗೊ೦ತಾಕಪ್ಪ೦ತಹ ವಿಶಯ೦ಗ—
  ೧. ಹಾಲು—“ಹೆತ್ತಬ್ಬೆ ಕೊಡ್ತು ಒ೦ದೆರಡು ವರುಶ, ಗೋಮಾತೆ ಕೊಡುವಳು ಹತ್ತಾರು ವರುಶ”
  ೨.ಟ್ರಾಕ್ಟರ್ ಸಗಣ ಹಾಕುತ್ತಿಲ್ಲೆ, ದನ೦ಗ ಹೊಗೆ ಉಗುಳುತ್ತಿಲ್ಲೆ!! ಇತ್ಯಾದಿಗೊ…
  ವ೦ದೇ ಗೋಮಾತರಮ್….

  • ಚಂದ್ರಮಾವ° says:

   ಗೋವಿನ ಬಗ್ಗೆ ಆನು ಬರೆದ ಹುಂಡು ಪದ್ಯಂಗಳ ಭಾರೀ ಲಾಯ್ಕ ಆಯ್ದು ಹೇಳಿದ ಪುಟ್ಟಕ್ಕನ ಹಸುವಿನ ಮೇಲಾಣ ಪ್ರೀತಿ, ಅಭಿಮಾನಕ್ಕೆ
   ಧನ್ಯವಾದಂಗೊ. ನೀನು ಬರೆದ “ಟ್ರ್ಯಾಕ್ಟರ್ ಸಗಣಿ ಹಾಕುತ್ತಿಲ್ಲೆ, ದನಂಗೊ ಹೊಗೆ ಉಗುಳುತ್ತಿಲ್ಲೆ” ಹೇಳುವ ಹುಂಡು ಪದ್ಯ ಭಾರಿ ಲಾಯ್ಕಿದ್ದು. ನೀನು ಹೀಂಗಿಪ್ಪ
   ಪದ್ಯವ ಇನ್ನೂ ಬರೆಯೆಕ್ಕು.

 6. ರಘು ಮುಳಿಯ says:

  ಗೋವ೦ಶ ಒಳಿಯಲಿ,ಬೆಳೆಯಲಿ.
  ತನ್ಮೂಲಕ ನಮ್ಮ ಬದುಕೂ ಸಾರ್ಥಕವಾಗಲಿ.ವ೦ದೇ ಗೋಮಾತರ೦.

  • ಚಂದ್ರಮಾವ° says:

   ಗೋ ವಂಶ ಉಳಿಯಲಿ, ಬೆಳೆಯಲಿ ಹೇಳುವ ನಿಂಗಳ ಅಭಿಪ್ರಾಯ ಸ್ವಾಗತಾರ್ಹ,ಸಕಾಲಿಕ.

 7. ಹೆಚ್ಚು ಹೆಚ್ಚು ಗೋ ಉತ್ಪನ್ನಂಗಳ ಉಪಯೋಗುಸುವೊ..
  ಆ ಮೂಲಕ ಗೋವಿನ ಸಾಂಕುವವಕ್ಕೆ ಪ್ರೋತ್ಸಾಹ ಕೊಡುವೊ…

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *