ಒಪ್ಪಕ್ಕನ ಒಪ್ಪ

November 10, 2012 ರ 12:30 pmಗೆ ನಮ್ಮ ಬರದ್ದು, ಇದುವರೆಗೆ 18 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

 

ಒಂದು ದಿನ ಮನೆ ಮಣ್ಣ ಚಿಟ್ಟೆಲಿ
ಕೂದು  ಹಾಳೆಯ ಪಡಿಗೆ ಕುತ್ತೊಗ
ಬಂದು ಮಲ್ಲಿಗೆ ಹೂಗ ಪರಿಮಳ ಘಮ್ಮನೆಡುಪಿತ್ತು|
ನಿಂದು ನೋಡಿರೆ ಎಂತ್ಸು  ಕಾಣದ
ಹೊಂದುಸಿದೆ ಕನ್ನಡ್ಕ, ಬಾಗಿಲ
ಸಂದಿಲಿಯೆ ಹುಣ್ಣಿಮೆಯ ಚಂದಿರನಾಂಗೆ  ಆಂಜಿತ್ತು |೧|

ಆರು ಬಂದದು ಹೇಳಿ ನೋಡಿರೆ
ಮೋರೆ  ಚೆಂದಕೆ ಕಂಡು ಎನಗದ
ಭಾರಿ ಕೊಶಿ  ಆತಂದು ಹೇಳುದು ಹೇಂಗೆ  ಆನದರ  |
ಊರ  ದೇವಿಯೆ  ಬಂದು ನಿಂದದೊ
ಜಾರಿ ಆಕಾಶಂದ ಬಿದ್ದದೊ
ಕಾರ ತಿಂಗಳ  ಬೆಳ್ಳಿ   ರೇಖೆಯೆ  ಹೊಳದ  ಹಾಂಗಾತು|೨|

ಜಿಡೆ  ಎರಡು ಮಾಡಿದ್ದು ಕೂಸದ
ಹೊಡೆಲಿ  ಬಗ್ತಲೆ  ಇದ್ದು ,ಬಣ್ಣದ
ಕೊಡೆಯು ಕೈಲಿಯೆ  ಇದ್ದು, ತಣ್ಣನೆ ಗಾಳಿ ಬೀಸಿತ್ತು|
ನೆಡವ ಚೆಂದವ  ಬಣ್ಣುಸಲೆ ಎನ
ಗೆಡಿಯ  ಹಿಂದಣ  ಕವಿಗೊ “ಹಂಸದ
ನಡಿಗೆಯೋ ”  ಹೇಳುತ್ತವಲ್ಲದ   ಹಾಂಗೆ ಕಂಡತ್ತು  |೩|

ಗೆಡುವ  ಬಗ್ಗುಸಿ ಕೊಯಿದೆ  “ಹೂಗಿನ
ಮಡುಗೆಕೋ ಆನಿದರ  ನಿನ್ನಯ
ಜಿಡೆ ಎಡೆಲಿ  ಏ  ಕೂಸೆ ”  ಕೇಳಿದೆ  ‘ಮುಗುಳು  ನೆಗೆ ‘ ಬಂತು |
ಬಡಿಗೊ  ಮೋರಗೆ  ಎನ್ನ ? ಹೆದರಿಕೆ
ಬಿಡದೊ ? ನೋಡಿದೆ ಸುತ್ತ ಇದ್ದವೊ
ಗಡಿಬಿಡಿಲೆ  ಸೂಡುಸಿದೆ  ಹೂಗಿನ ಕೂಸಿನಾ  ಜಿಡೆಲಿ |೪|

“ಒಪ್ಪ ಕೊಡು ಒಪ್ಪಕ್ಕ , ಎನಗಿದ ‘
“ಅಪ್ಪ  ಬೈಗೆನಗೆಡಿಯ  ಈಗದ
ಬಪ್ಪಲಾತೆನ್ನಬ್ಬೆ ಹೋಯಿದು ದನದ ಹಟ್ಟಿಯೊಳ|
“ತಪ್ಪಲಾಗದೊ ಮನಗೆ   ನಿಂಗೊಂ
ದೊಪ್ಪ ಕೂಸಿನ  ಅದು ಕೊಡುಗು,  ಆ
ನೊಪ್ಪೆ, ಕೊಡೆ ಒಂದುದೇ   ಒಪ್ಪವ ” ಕೂಸು  ಹೇಳಿತ್ತು |೫|

ಬೋಚ  ಮಾಣಿಯ  ಹಾಂಗೆ ಆನದ
ಆಚಿಗೀಚಿಗೆ ನೋಡುವಾಗಲೆ
ತೋಚಿ  ಹಿಡುದತ್ತೆನ್ನ  ಮೋರೆಗೆ ‘ ಒಪ್ಪ ‘  ಕೊಟ್ಟತ್ತು|
ನಾಚಿ ಕೆಂಪಾತದರ  ಕೆಪ್ಪಟೆ
ಬಾಚಿ ಹಿಡುದಾನದರ ನೆಗ್ಗಿದೆ
ಕೂಚು  ಐದರ   ಬಾಲೆ ತಬ್ಕನೆ  ಜಾರಿ ಓಡಿತ್ತು  |೬|

~~*~~

ಶ್ರೀಶಣ್ಣನ ಧ್ವನಿಲಿ ಇಲ್ಲಿ ಕೇಳ್ಲಕ್ಕುಃ

ಈ ಶುದ್ದಿಗೆ ಇದುವರೆಗೆ 18 ಒಪ್ಪಂಗೊ

 1. ಮುಳಿಯ ಭಾವ
  ರಘು ಮುಳಿಯ

  ಭಾರೀ ಚೆ೦ದದ ಕವಿತೆ.ಕಡೆಯಾಣ ಸಾಲುಗೊ ಇನ್ನೂ ಕೊಶಿ ಕೊಟ್ಟತ್ತು.

  ಬಾಲ ಮಾವನ ‘ಒಪ್ಪ’ಕವಿತೆಯ
  ಸಾಲುಗಳ ಓದುವಗ ಹೊಗಳುಲೆ
  ಸಾಲ ಶಬ್ದ೦ಗೊ೦ದೆರಡು ಪುಟ ಬರವ ಮನಸಾತು|
  ಸೋಲುಗೆಲ್ಲರ ಮನಸು ಸಕ್ಕರೆ
  ಹಾಲು ಕುಡುದಾ೦ಗಕ್ಕು ನಿಜ ಕೊಡೆ
  ಯಾಲ ಮಲ್ಲಿಗೆಯಾ೦ಗೆ ಘಮಘಮ ಬ೦ತು ಬೈಲಿ೦ಗೆ||

  [Reply]

  VA:F [1.9.22_1171]
  Rating: +1 (from 1 vote)
 2. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಮುಳಿಯದಣ್ಣನ ‘ಒಪ್ಪ ‘ ಬಂತದ !

  ತಳಿಯದ್ದೆ ಎನಗೆಡಿಗೊ ಕೂಬಲೆ

  ಅಳವಲೆಡಿಗೋ’ಒಪ್ಪ’ ದಳತೆಯ ಮಾತ ತಕ್ಕಡಿಲಿ ?/

  ಬೆಳೆದು ಹಬ್ಬಲಿ ನಮ್ಮ ಭಾಶೆಯು

  ಪಳ ಪಳನೆ ಹೊಳ ಹೊಳದು ಮಿಣ್ಕಲಿ

  ಇಳಿದಿಳಿದು ಬಂದೊಂಡಿರಲಿ ನಿತ್ಯವು ನಮ್ಮ ಬೈಲಿಂಗೆ /

  [Reply]

  VN:F [1.9.22_1171]
  Rating: +3 (from 3 votes)
 3. ಪ್ರಭಾಕರ ಭಟ್ ಕೆ.

  ಒಪ್ಪಣ್ಣನ ಬಯಲಿ೦ಗೆ ಒಪ್ಪಕ್ಕನ ಕರಕ್ಕೊ೦ಡು ಬ೦ದು ಒಪ್ಪ ಕೊಟ್ಟು ಕೆಪ್ಪಟೆ ಕೆ೦ಪಾಗಿಸಿ ಶ್ರೀಶಣ್ಣನ ಹತ್ತರೆ ಹಾಡಿಸಿ ಖೊಶಿಗೊಳಿಸಿದಕ್ಕೆ ಧನ್ಯವಾದ. ಲಾಯಕಿನ ಪದ್ಯ, ಅದೂ ನಮ್ಮ ಭಾಷೆಲಿ ಬರದ್ದಕ್ಕೆ ಅಭಿನ೦ದನೆ.

  [Reply]

  VA:F [1.9.22_1171]
  Rating: 0 (from 0 votes)
 4. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಅಣ್ಣೋ,ಒಪ್ಪ ಕೊಟ್ತದಕ್ಕೆ ಧನ್ಯವಾದಂಗೊ.ಇನ್ನುದೆ, ಬರತ್ತವಕ್ಕೆ ಇದೇ ರೀತಿಲಿ ಪ್ರೋತ್ಸಾಹ ಕೊಡಿ ಆತೊ.ಎನ್ನ ಇನ್ನೂ ಕೆಲವು ಪದ್ಯಂಗಳ ಶೀಶಣ್ನ ಹಾಡಿದ್ದವು ಕೇಳಿ ನೋಡಿ.

  [Reply]

  VN:F [1.9.22_1171]
  Rating: +1 (from 1 vote)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣರಾಜಣ್ಣಕಾವಿನಮೂಲೆ ಮಾಣಿಪೆಂಗಣ್ಣ°ವಸಂತರಾಜ್ ಹಳೆಮನೆಡಾಮಹೇಶಣ್ಣಮಾಲಕ್ಕ°ಒಪ್ಪಕ್ಕಶರ್ಮಪ್ಪಚ್ಚಿವೇಣಿಯಕ್ಕ°ಕಳಾಯಿ ಗೀತತ್ತೆಮಾಷ್ಟ್ರುಮಾವ°ಹಳೆಮನೆ ಅಣ್ಣಉಡುಪುಮೂಲೆ ಅಪ್ಪಚ್ಚಿಅನುಶ್ರೀ ಬಂಡಾಡಿದೇವಸ್ಯ ಮಾಣಿಯೇನಂಕೂಡ್ಳು ಅಣ್ಣಅನಿತಾ ನರೇಶ್, ಮಂಚಿಮಂಗ್ಳೂರ ಮಾಣಿಚುಬ್ಬಣ್ಣವಿನಯ ಶಂಕರ, ಚೆಕ್ಕೆಮನೆಜಯಗೌರಿ ಅಕ್ಕ°ಶಾ...ರೀನೀರ್ಕಜೆ ಮಹೇಶದೊಡ್ಮನೆ ಭಾವಪ್ರಕಾಶಪ್ಪಚ್ಚಿಸುಭಗ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ