ಓಟು ಬಂತದ ಓಟು!

ಓಟು  ಬಂತದ  ಓಟು!

 ಓಟು ಬಂದರೆ ಸಾಕು ಎಲ್ಲೊರಓಟು ಬಂತದ ಓಟು!
ನೋಟ ದಿಲ್ಲಿಯ  ಕಡೆಗೆ  ಮತ್ತಾ
ನೋಟು ತುಂಬುಗು ಕಿಸೆಗಳನೆ ಹಾರುಗದು ಬೀದಿಲೆಲ್ಲ |
ಸೀಟು ಹಿಡಿವಲೆ ಬೇಕು ತುಂಬಾ
ಸೂಟುಕೇಸಿನ ಒಳವೆ ತುಂಬುಸಿ
ಆಟ ಆಡುಗು ದೊಡ್ದ ಹೊಟ್ಟೆಯ ಮೇಗೆ ಕೈ ಮಡುಗಿ |೧|

 ಇಂದು ಆ ಕಡೆಲಿಪ್ಪದಾದರೆ
ಒಂದು ಕಾರಣ ಕೊಟ್ಟು  ಸುಮ್ಮನೆ
ನಿಂದೆ ಬೈಗಳು ಮಳೆಯೆ  ಸುರಿಗದ  ಧಾರೆ ಕಡಿಯದ್ದೆ|
ಬಿಂದು   ಬಿಂದಾಗಿಳಿಗು ಕಣ್ಣೀ-
ರೆಂದು ತಿಳಿಯೆಡಿ ಮೊಸಳೆ  ಜಾತಿಯ
ದೊಂದು ರೂಪವೊ !ನರಿಯು ಕೂಡಾ ಸೋಲುಗಿವರೆದುರು |೨|

 ಬಣ್ಣ ಬಣ್ಣದ ಮಾತು  ಆಡುಗು
ಸುಣ್ಣ ಗೋಡೆಲಿ  ಬಣ್ಣ ಬರಶುಗು
ನುಣ್ಣನೆಯ  ಮಾತಿಲಿಯೆ ಎಲ್ಲೊರ ಮರುಳು ಮಾಡುಸುಗು  |
” ಅಣ್ಣ , ಅಕ್ಕಾ “- ಹೇಳಿ  ಹೇಳುಗು
ಬಣ್ಣುಸುಗು ಹೊಗಳಿಕೆಯ ಹಾಕುಗು
ಸಣ್ಣ ವಿಷಯವ ಮೇರು ಪರ್ವತ  ಮಾಡಿ ತೋರುಸುಗು  |೩|

 ಅಡ್ದ ಬೀಳುಗು  ಮುಗಿಗು  ಕೈಗಳ
ದೊಡ್ದಕಗಲಿಸಿ  ಬಾಯಿಲಿಪ್ಪಾ
ಬಡ್ದು ಮೂವತ್ತೆರಡು ಹಲ್ಲುಗಳನ್ನು  ತೋರುಸುಗು|
ಮಡ್ಡಿ ಮಂಕರನೆಲ್ಲ  ಕೂರುಸಿ
ದುಡ್ಡು ಹಂಚುಗು  ಬೊಗಸೆ ತುಂಬಾ
ಹೆಡ್ದರಾಗೆಡಿ  ಓಟು ಕೊಡೆಕೆಲ್ಲರುದೆ  ಚೆಂದಕ್ಕೆ  |  ೪|

 ಒಪ್ಪ   ಕೆಲಸವ ಮಾಡೊ  ಮನಸಿನ
ಇಪ್ಪ  ಸಜ್ಜನ ರೊಬ್ಬರವರನೆ
ಒಪ್ಪ ಕೊಡಿ,ಓಟಾಕಿ ಅರುಸಿ  ಕಳುಸಿ ಕೇಂದ್ರಕ್ಕೆ |
ಬಪ್ಪ ತಿಂಗಳ ಒಂದು  ಶುಭ  ದಿನ
ಅಪ್ಪು,  ಅದೆ ಆ ಗುರುತು  ಮರೆಯೆಡಿ
ತಪ್ಪು ಬಾರದ್ದಿರಲಿ  ಎಲ್ಲೊರು ಮಾಡಿ ಮತದಾನ  |೫|

~~~~***~~~~~~

ವ್ಯಂಗ್ಯ ಚಿತ್ರ ಒದಗಿಸಿದ ಶ್ಯಾಮಣ್ಣಂಗೆ ಧನ್ಯವಾದಂಗೊ.

ಬಾಲಣ್ಣ (ಬಾಲಮಧುರಕಾನನ)

   

You may also like...

8 Responses

 1. ಬಾಲಣ್ಣ (ಬಾಲಮಧುರಕಾನನ) says:

  ಶಾಮಣ್ಣಾ ,ಚಿತ್ರ ಪಷ್ಟಾಯಿದು ಮಿನಿಯಾ….ರಾಜಕಾರಣಿಗಳ ಬಣ್ನ ಬಯಲಾತೋ?

 2. ದೊಡ್ದ ಹೊಟ್ಟೆಯ ಮೇಗೆ ಕೈ ಮಡುಗಿ – ಭೂಸುಧಾರಣೆ?!, ನರಿಯು ಕೂಡಾ ಸೋಲುಗಿವರೆದುರು – ನರವಂಚಕ?!, ಮೇರು ಪರ್ವತ ಮಾಡಿ ತೋರುಸುಗು – ಅಣು, ಪರಮಾಣು ಸ್ಫೋಟ?!, ಅಡ್ದ ಬೀಳುಗು ಮುಗಿಗು ಕೈಗಳ – ಜನತಾಸೇವೆ ಜನಾರ್ಧನ ಸೇವೆ?! 😀 😀

  ಚಿತ್ರ ಸಹಿತ ಕವನ ಲಾಯಕ ಆಯ್ದು

 3. ಬೊಳುಂಬು ಗೋಪಾಲ says:

  ಬಾಲಣ್ಣ ಶ್ಯಾಮಣ್ಣನ ಕಾಂಬಿನೇಶನಿಲ್ಲಿ ಬಂದ ವೋಟಿನ ವಿರಾಟ್ ರೂಪ ತುಂಬಾ ಚೆಂದಕೆ ಬಯಿಂದು.
  ಕಡೇಂಗೆ ಕೊಟ್ಟ ಉತ್ತಮ ಸಂದೇಶ ಎಲ್ಲೋರು ಅನುಸರಿಸೆಕಾದ್ದೆ.

 4. ತೆಕ್ಕುಂಜ ಕುಮಾರ ಮಾವ° says:

  ಅಪ್ಪು,ಓಟು ಹಾಕೆಕ್ಕೆ. ಆದರೆ ಆರಿಂಗೆ..?
  ಈ ಚಿತ್ರ ನೋಡಿ ಬೂತಿಂಗೆ ಹೋದರೆ ಬೂತ ಕಂಡ ಹಾಂಗೆಯೇ ಅಕ್ಕೋದು.
  ಪದ್ಯ ಪಷ್ಟಾಯಿದು ಬಾಲಣ್ಣ.

 5. ಭಾಗ್ಯಲಕ್ಶ್ಮಿ says:

  ಪದ್ಯವೂ ಚಿತ್ರವೂ ಲಾಯಿಕಾಯಿದು. ಶ್ಯಾಮಣ್ಣನ ಚಿತ್ರದ ಪೆನ್ಸಿಲು ಕಾಣೆ ಆಯಿದೋ ಹೇಳಿ ಜಾನ್ಸಿತ್ತಿದ್ದೆ !! ಇದ್ದನ್ನೆ …

 6. ಯಮ್.ಕೆ says:

  ಈ ಬಾರಿ ಒಪ್ಪಣ್ಣಾ ಕಾಣದ್ದರೆ, ಒ೦ದ್ ನೋಟ ನೋಡಿ ಬಪ್ಪದಾ ಹೇಳಿ.

 7. ರಘುಮುಳಿಯ says:

  ಪದ್ಯ-ಚಿತ್ರ ಎರಡೂ ರೈಸಿದ್ದು,ರುಚಿಯಾದ ಅವಿಲಿನ ಹಾ೦ಗೆ..
  ಬಾಲಣ್ಣ -ಶ್ಯಾಮಣ್ಣನ ಜತೆ ಬಲ ಇದ್ದನ್ನೆ.

 8. divya says:

  Shyam mavana chitra pashtaydu..rajakarani gala varnane layka aagi bayindu padyalli 🙂

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *