ಪೆರ್ಲಲ್ಲೊ೦ದು ಪಿಕ್ಲಾಟ – ಭಾಮಿನಿಲಿ

ಆಟ ಇದ್ದದು ಇಲ್ಲಿಯೇ

ಮಕ್ಕಳಾಟವ ಕ೦ಡು ಕೊಣಿವಲೆ
ಹೊಕ್ಕೆ ಪೆರ್ಲದ ಮ೦ದಿರದ ಒಳ
ಪಕ್ಕ ನೆ೦ಪಾತೆನಗೆ ಬಾಲ್ಯದ ದಿನದ ಅನುಭವವು
ಎಕ್ಕಳಿಸಿ ನೋಡಿದರೆ ಹಿ೦ದೆ ಅ
ಸಕ್ಕ ಓಡುಗು ದೂರ ನೊರೆ ಹಾ
ಲುಕ್ಕಿದಾ೦ಗೆಯೆ ನೆಗೆಯ ತೆರೆ ಏಳುಗದ ಒ೦ದರಿಯೇ

ಸರ್ಪಮೂಲೆಗೆ ಹೋಪ ದಾರಿಲಿ
ಇರ್ಪುದೆನ್ನಯ ಅಜ್ಜನಾಮನೆ
ಚೆರ್ಪು ತಳದರು ಓಡುವಾಸೆಯು ಸರವಿನಾ ವರೆಗೆ
ದರ್ಪವಿಲ್ಲದ್ದೆನ್ನ ಮಾವನು
ಅರ್ಪುಸುಗು ಕಡಲೆಯ ಮಿಟಾಯಿಯ
ಹುರ್ಪಿಲಿಯೆ ಗ೦ಸಿದ್ದು ನೆನಪಾವುತ್ತು ಈಗೆನಗೆ

ಬೇಸಗೆಯ ರಜೆ ಸಮಯ ಅಲ್ಲಿಯ
ವಾಸ ಮರವಲೆ ಎಡಿಯ ಕೋಣೆಲಿ
ಬೀಸಣಿಗೆ ಎಡಗೈಲಿ ನಿಶ್ಚಯ ಚಿಮಿಣಿ ದೀಪವುದೆ
ಆಸರೆ೦ಗೊಗೆ ಮರಗು ಆಡೊಗ
ದಾಸು ನಾಯಿಯ ಕು೦ಞ ಇರುಳಿಲಿ
ಹಾಸಿಗೆಲಿ ಉಚ್ಚೊಯಿದು ಓಡಿದ ನೆನಪು ಶಾಶ್ವತವು

ನೆತ್ತಿ ಮೇಲೆಯೆ ಸೂರ್ಯ ಬಪ್ಪಗ
ಹೊತ್ತು ಗೊ೦ತಿಲ್ಲದ್ದೆ ಎಲ್ಲರು
ಹತ್ತಿ ಬೀಜದ ಮರದ ಗೆಲ್ಲಿಲಿ ಕುತ್ತ ಕೂರುವೆಯ°
ಕುತ್ತಿ ಕ೦ತಿದರೊ೦ದೆರಡು ದಿನ
ಸುತ್ತ ಬಪ್ಪಲೆ ಕಷ್ಟವಾದರು
ಗತ್ತಿಲಿಯೆ ಇಸ್ಪೇಟು ಪಿಡಿಗಳ ಕಲಸಿ ಆಡುವೆಯ°

ಕಾಟು ತಿ೦ಬಲೆ ಸಿಕ್ಕ ಹೊತ್ತಿ೦
ಗೂಟ ತಿ೦ಡಿಗೆ ನಾವು ಗಡಿಬಿಡಿ
ಲಾಟದೆಡೆಲಿಯೆ ಓಡಿ ಅಟ್ಟು೦ಬಳವ ಸೇರುವೆಯ°
ಪೀಟಿಕೆಯೆ ಉದ್ದಾತೊ ಇರುಳಿ೦
ಗಾಟ ನೋಡುಲೆ ಹೋಗಿ ಹೊಸ ಪಿಕ
ಲಾಟ ಮಾಡಿದ ಕತೆಯ ಬೈಲಿಲಿ ಹೇಳುಲಕ್ಕನ್ನೆ ?

——————————————–

ಆಟ ನೋಡುಲೆ ಹೋದ ಸ೦ಗತಿ ಮತ್ತೆ ಹೇಳುತ್ತೆ,ಆಗದೋ?

ಮುಳಿಯ ಭಾವ

   

You may also like...

19 Responses

 1. ಬೊಳುಂಬು ಮಾವ says:

  ವಾಹ್ ! ಅಜ್ಜನ ಮನೆಲಿ ಕಳಕ್ಕೊಂಡಿದ್ದಿದ್ದ ದೊಡ್ಡ ರಜೆಯ, ಅಲ್ಯಾಣ ಪಿಕ್ಲಾಟಂಗೊ ಭಾಮಿನಿಲಿ ಕಂಡು ಭರ್ಜರಿ ಆತದ. ಮುಳಿಯದ ಭಾವನ ಭಾಮಿನಿ ಕಾಣದ್ದೆ ಕಾಣದ್ದೆ ಅಸಕ್ಕ ಆಗೆಂಡಿತ್ತು. ದಾಸು ನಾಯಿಮರಿ ಹಾಸಿಗೆಲಿ ಹೊಯಿದ್ದದು, ಕಾಲಿಂಗೆ ಕುತ್ತಿ ಕಂತಿ ಸುತ್ತು ಬಪ್ಪಲೆಡಿಯದ್ದೆ ಗತ್ತಿಲ್ಲಿ ಇಸ್ಪೀಟು ಆಡಿದ್ದದು ಕೇಳಿ ನೆಗೆ ಬಂತು. ಸುಲಭ ಪ್ರಾಸ ಏವತ್ರಾಣ ಹಾಂಗೆ ಪದ್ಯವ ಓದುಸೆಂಡು ಹೋತು. ಆಟದ ಬಗೆಲಿ, ಬಯಲಾಟದ ಬಗೆಲಿ ಬಪ್ಪಲಿಪ್ಪ ಭಾಮಿನಿಗೆ ಕಾಯ್ತಾ ಇದ್ದೆ, ಭಾವಯ್ಯಾ.

 2. ಸೂರ್ಯ says:

  ರಘು ಭಾವ ಲಾಯ್ಕ ಆಯಿದು ಭಾಮಿನಿ…ಹಳೇ ನೆಂಪುಗ ಎಷ್ಟು ಮಧುರ ಅಲ್ಲದೋ..
  ಭಾಮಿನಿ ಬರಲಿ ಇನ್ನೂ ಹೀಂಗೆ…

 3. ರಘು ಅಣ್ಣ ಸೂಪರ್…… ಆಯಿದು. ಎನ್ನ ಬಾಲ್ಯ ನೆಂಪಾತು. ಬೇಸಗೆ ರಜೆಲಿ ಮಾವಿನಹಣ್ಣು ಹೆರ್ಕುಲೆ ಓಡುದು….,ಮರಕೋತಿ ಆಟ………ಆಟ ನೋಡ್ಲೆ ಹೋದ್ದು ಹೇಳುಗ ಮಗನ ಯಕ್ಷಗಾನದ ದಿನ ನಿಂಗಳೂ ,ತೆಕ್ಕುಂಜೆ ಮಾವನೂ ಸಂಸಾರ ಸಮೇತ ಬಂದದು ನೆಂಪಾತು…………

 4. ಉಂಡೆಮನೆ ಕುಮಾರ says:

  ಯೇವಗಾಣ ಹಾಂಗೆ ಸೂಪರ್..ಸುಮಾರು ಎಡೆ ಬಿಟ್ಟು ಬಂತು, ವಾಹ್..

 5. ವಿದ್ಯಕ್ಕ says:

  ಸೂಪ್ಪರ್…………………………………………………….

 6. ರಘು ಮುಳಿಯ says:

  ಓದಿ,ಒಪ್ಪ ಕೊಟ್ಟು,ಬರವಲೆ ಪ್ರೋತ್ಸಾಹ ಕೊಡುತ್ತಾ ಇಪ್ಪ ಎಲ್ಲೋರಿ೦ಗೂ ಧನ್ಯವಾದ. ಮು೦ದಾಣ ಕತೆ ನಾಳೆ ನೋಡುವ°,ಆಗದೋ?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *