ಫಾಲ ನೇತ್ರನ ಮುನಿಸೊ

May 13, 2015 ರ 9:31 amಗೆ ನಮ್ಮ ಬರದ್ದು, ಇದುವರೆಗೆ 6 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಫಾಲ  ನೇತ್ರನ  ಮುನಿಸೊ

ಫಾಲ  ನೇತ್ರನ  ಮುನಿಸೊ ಇದು ನೇ
ಪಾಲಕೊದಗಿದ  ಕಠಿಣ ದುರಿತವೊ
ಕೋಲ ಕೊಣುದತ್ತನ್ನೆ ತಕಧಿಮಿ ಮಾರಿ ಭೂತಗಣ  /
ಜಾಲು ಮನೆ  ಒಂದಾತು ಭೂಮಿಯೆ
ನಾಲಗೆಲಿ ನಕ್ಕಿತ್ತು  ಊರಿನ
ಕಾಲಡಿಯೆ ಬಿರುದತ್ತು ಅಯ್ಯೋ  ಶಿವನೆ ನೀನೆ ಗತಿ  //೧//

 ನೀಲಕಂಠನೆ  ಜಿಡೆಯ ಬಿಡುಸಿರೆ
ಕಾಲ ರುದ್ರನೆ ನಾಟ್ಯ ವಾಡಿರೆ
ಹಾಲು ಕುಡುಶುವ  ಅಬ್ಬೆ ಮಕ್ಕೊಗೆ ವಿಷವ ಕುಡುಶಿದರೆ  /
ಬೇಲಿ ಎದ್ದೇ ಹೊಲವ ಮೇದರೆ
ಪಾಲಕನೆ ಬಾಲಕನ ಕೊಂದರೆ
ಲೀಲೆ ದೇವರದಾರು ಕಂಡವು ?ಮಾನುಷರು ನಾವು //೨//

ಜೀವನವ ನಾವೆಷ್ಟು ಕಂಡಿದು ?
ನೋವುಗಳ ನಾವೆಷ್ಟು  ಉಂಡಿದು
ಭಾವಗಳ ಊರಿಡಿಯೆ ಹಂಚಿಯೆ ಮನಸು ಸುಖ ಪಡುಗು/
ದೇವ  ದೇವರ ಪದಕೆ ಮಂಡೆಯ
ನಾವು ಮಡುಗಿಯೆ ಕೆಲಸ ಮಾಡುಗು
ಕಾವುದವನೇ ಕೈಯ  ಹಿಡಿವವ ಸಕಲ ಜೀವಿಗಳ //೩//

  ‘ಸೋಲು ಗೆಲವಿನ ಒಂದೆ ರೀತಿಲಿ
ಬಾಳುವೆಲಿ ತೆಕ್ಕೊಳೆಕು ” ಹೇಳುಗು
ಬಾಳಿ ಚೆಂದಕೆ ಬದುಕು ಕಟ್ಟಿದ ನಮ್ಮ ಹೆರಿಯೋರು /
ನಾಳೆ ದಿನ ಚೆಂದಾಗಿ ಬಕ್ಕು ಸ –
ಕಾಲವದೆ ಬಿಡಲಾಗ ಧೈರ್ಯವ
ಕಾಲಿನಡಿ ನೆಡುಗಿದರೆ ಪಶುಪತಿನಾಥ ಕೈ ಬಿಡುಗೋ //೪//

 

(ಸಮಸ್ಯಾ ಪೂರಣದ  ಸ್ಪೂರ್ತಿ ಲಿ ಬರದ ಕವನ )

~~~***~~~

ಈ ಶುದ್ದಿಗೆ ಇದುವರೆಗೆ 6 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಫಾಲನೇತ್ರನ ರುದ್ರ ನಾಟ್ಯ ಇನ್ನೂ ನಿಂದಿದಿಲ್ಲೆನ್ನೇ… ಅಬ್ಬಬ್ಬಾ.. !

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°

  ಶಿವನೆ ನೀನೆ ಗತಿ….. ಮಾನುಷರು ನಾವು – ತುಂಬ ಒಪ್ಪ ಆಯಿದು. ಹರೇ ರಾಮ.

  [Reply]

  VN:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ನಾಳೆ ದಿನ ಚೆಂದಾಗಿ ಬಕ್ಕು ಸಕಾಲವದೆ ಬಿಡಲಾಗ ಧೈರ್ಯವ- ಒಳ್ಳೆ ಆಶಾದಾಯಕ ಮುನ್ನೋಟ. ಇದುವೇ ಜೀವನಲ್ಲಿ ಬಪ್ಪ ಬಂಙಂಗಳ ಎದುರುಸಲೆ ಕೊಡುವ ಧೈರ್ಯ.

  [Reply]

  VA:F [1.9.22_1171]
  Rating: 0 (from 0 votes)
 4. ಒಪ್ಪಣ್ಣ

  ಬಾಲಮಾವಾ,
  ತುಂಬಾ ಚೆಂದದ ಭಾಮಿನಿ. ಶಬ್ದಜೋಡಣೆ ಸಲೀಸಾಗಿ ಬಯಿಂದು, ಭಾವನೆಯೂ ಚೆಂದ ಆಯಿದು.

  ’ಸೋಲು ಗೆಲವಿನ ಒಂದೆ ರೀತಿಲಿ
  ಬಾಳುವೆಲಿ ತೆಕ್ಕೊಳೆಕು ” ಹೇಳುಗು
  ಬಾಳಿ ಚೆಂದಕೆ ಬದುಕು ಕಟ್ಟಿದ ನಮ್ಮ ಹೆರಿಯೋರು – ಈ ಗೆರೆ ತುಂಬಾ ಹಿಡುಸಿತ್ತು.

  ಹರೇರಾಮ

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ಬಾಲಣ್ಣ ಮಾವಾ,
  ಪಶುಪತಿನಾಥನ ತಾ೦ಡವನೃತ್ಯವ ಕ೦ಡ ಅನುಭವ ಕೊಟ್ಟತ್ತು ಕವಿತೆ.ಬೈಲಿಲಿ ಬ೦ದ ಸಣ್ಣ ಸಮಸ್ಯೆಯ ಒ೦ದು ಪೂರ್ಣ ಕವಿತೆಯಾಗಿ ಇಷ್ಟು ಚೆ೦ದಕೆ ಬೆಳೆಶಿದ್ದು ನೋಡಿ ಕೊಶಿಯಾತು. ಎರಡನೆಯ ಚರಣಲ್ಲಿಪ್ಪ ಉಪಮೆ,ರೂಪಕ೦ಗೊ ಅದ್ಭುತ.

  [Reply]

  VA:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಬಾಲಣ್ಣನ ಭಾಮಿನಿ ಭಾರೀ ಲಾಯಕಾತು. ದೇವರ ದಯೆ ಇಲ್ಲದ್ರೆ ಮನುಷ್ಯಂಗೆ ಬದುಕ್ಕಲೇ ಎಡಿಯ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಮಾಷ್ಟ್ರುಮಾವ°ತೆಕ್ಕುಂಜ ಕುಮಾರ ಮಾವ°ಶಾಂತತ್ತೆದೀಪಿಕಾಅಕ್ಷರದಣ್ಣಮಾಲಕ್ಕ°ಡಾಗುಟ್ರಕ್ಕ°ವೇಣೂರಣ್ಣಚೆನ್ನೈ ಬಾವ°ಉಡುಪುಮೂಲೆ ಅಪ್ಪಚ್ಚಿಮಂಗ್ಳೂರ ಮಾಣಿದೊಡ್ಮನೆ ಭಾವಕೊಳಚ್ಚಿಪ್ಪು ಬಾವಪ್ರಕಾಶಪ್ಪಚ್ಚಿಪವನಜಮಾವಒಪ್ಪಕ್ಕಯೇನಂಕೂಡ್ಳು ಅಣ್ಣಅನು ಉಡುಪುಮೂಲೆಪೆಂಗಣ್ಣ°ಶ್ಯಾಮಣ್ಣಡೈಮಂಡು ಭಾವನೆಗೆಗಾರ°ಸಂಪಾದಕ°ಕಾವಿನಮೂಲೆ ಮಾಣಿವಾಣಿ ಚಿಕ್ಕಮ್ಮಕೆದೂರು ಡಾಕ್ಟ್ರುಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ