“ಪೋಕು ಮುಟ್ಟಿದರೆ…!!??” – ಹುಂಡುಪದ್ಯ : ಶ್ರೀಮತಿ ಶಂಕರಿ ಶರ್ಮ

ಶ್ರೀಮತಿ  ಶಂಕರಿ ಶರ್ಮ– ಇವಕ್ಕೆ ಒಪ್ಪಣ್ಣ ಬೈಲಿಂಗೆ ಸ್ವಾಗತ.  ಶ್ರೀಮತಿ ಶಂಕರಿ ಶರ್ಮ, ಪುತ್ತೂರು

ವಿವೇಕಾನಂದ ಕಾಲೇಜು, ಪುತ್ತೂರು ಇಲ್ಲಿ ವಿಜ್ಞಾನ ಪದವಿ ಪಡದ ಇವರ ಹವ್ಯಾಸಂಗೊ ಓದು,ಹೊಲಿಗೆ,ಕವಿತೆ, ಲೇಖನಗಳ ರಚನೆ, ಪ್ರವಾಸ ಏರ್ಪಡಿಸುವುದು, ನಾಟಕಗಳಲ್ಲಿ ಭಾಗವಹಿಸುವುದು, ಸಮಾಜಸೇವೆ ಇತ್ಯಾದಿ

ದೂರವಾಣಿ ಇಲಾಖೆ, ಪುತ್ತೂರು ಇಲ್ಲಿ ಉಪಮಂಡಲ ಅಧಿಕಾರಿಯಾಗಿ ಸೇವಾನಿವೃತ್ತಿ ಪಡಕ್ಕೊಂಡ ಇವು  “ಶ್ರೀ ರಕ್ಷಾ”,ಬನಾರಿ ರಸ್ತೆ, ಅಂಚೆ ಪಡ್ನೂರು, ಪುತ್ತೂರು -574220 ಇಲ್ಲಿ ವಾಸ್ತವ್ಯಲ್ಲಿದ್ದವು.

ಸಂಪರ್ಕಕ್ಕೆ ಇವರ ದೂರವಾಣಿ: 08251-233333

ನಮ್ಮ ಭಾಷೆಲಿ ಸುರು ಬರದ ಕವನವ ಇಲ್ಲಿಗೆ ಕಳ್ಸಿಕೊಟ್ಟಿದವು. ಓದಿ ಪ್ರೋತ್ಸಾಹ ಕೊಡಿ

-ಶರ್ಮಪ್ಪಚ್ಚಿ

 

 

 

ಪೋಕು ಮುಟ್ಟಿದರೆ…!!?? 

ಆಚೆ ಮನೆ ರಾಮಜ್ಜನ ಮನೆಲಿ
ಪೂಜೆ ತಯಾರಿ ಜೋರಿತ್ತು!
ನೆರೆಕರೆ ಮಾವ ಭಾವ ಅಪ್ಪಚ್ಚಿ
ಎಲ್ಲಾ  ಸೇರಿ ಮಾತು ಜೋರಿತ್ತು!

ಶಂಭುಭಟ್ರ ಪೂಜೆಮಂತ್ರ
ಜೋರಾಗಿಯೇ ಕೇಳ್ತಿತ್ತು
ಅಡಿಗೆ ಗೆಣಪ್ಪಣ್ಣನ ಊಟ ತಯಾರಿ
ಜಬರ್ದಸ್ತಾಗಿಯೇ ನಡೆದಿತ್ತು !

ನಾಯಿ ಪೋಕು ರಾಮಜ್ಜನ ಮನೆದು
ಉದಿಯಪ್ಪಗಂದಲೇ ಹಶು ಹೊಟ್ಟೆ !
ತಿಂಬಲೆ ಹಾಕುಲೆ ಮನೆಯೋರು ಮರವದೆ?
ಹಾಂಗಪ್ಪಲಾಗಲ್ಲದ ಹೇಳ್ಮತ್ತೆ??

ಅಡಿಗೆ ಅಣ್ಣ ಎಲ್ಲಾ ಮುಗಿಸಿಕ್ಕಿ
ಪೂಜೆ ಅಪ್ಪಲೆ ಕಾಯ್ತಿದ್ದ
ಅಷ್ಟಪ್ಪಗ ಅಲ್ಲೇ ಕಣ್ಣು ತೂಗೆಕ್ಕ
ಅಲ್ಲೇ ಅವ ರಜ ಅಡ್ಡ ಬಿದ್ದ..!

ನಾಯಿ ಪೋಕು ಹಶು ತಡವಲೆ ಎಡಿಯದ್ದೆ
ಸಂಕೋಲೆ ಪೀಂಕಿಸಿ ಓಡಿತ್ತು!
ಎದುರಿಂಗೆ ಇದ್ದ ಅಶನದ ಪಾತ್ರೆಗೆ
ಗಬಕ್ಕನೆ ಬಾಯಿ ಹಾಕಿ ತಿಂದತ್ತು !

ಆಗಲೆ ನೋಡಿದ ನೆರೆಕರೆ ಭಾವ
ರಾಮಜ್ಜಂಗೆ ಸುದ್ದಿ ಮುಟ್ಸೆಕ್ಕ..!
ಮಾಡಿದ ಅಡಿಗೆ ಹಾಳಾವುತ್ತನ್ನೆ
ಎಂತ ಮಾಡುದೇಳಿ ಯೋಚ್ಸೆಕ್ಕ..?

ಪೂಜೆ ಮುಗ್ಸಿಕ್ಕಿ ಭಟ್ರು ಬಂದವು
ರಾಮಜ್ಜನ ಚಿಂತೆ ಗೊಂತಾಗಿ
ನಮ್ಮ ಪೋಕು ಮುಟ್ಟಿರೆ ತೊಂದರೆ ಇಲ್ಲೆ
ಉಂಬೊ ಎಲ್ಲೋರುದೆ ಸರಿಯಾಗಿ

ಶಾಸ್ತ್ರ ಆಚರಣಗೊ ಆನುಕೂಲಕ್ಕಾಗಿ
ಪೋಕು ಮುಟ್ಟಿದ ಗಾದೆ ನವಗಾಗಿ..!!

~~~***~~~

 

-ಶಂಕರಿ ಶರ್ಮ, ಪುತ್ತೂರು.

ಶರ್ಮಪ್ಪಚ್ಚಿ

   

You may also like...

8 Responses

 1. ಪಂಕಜ ರಾಮ ಭಟ್ says:

  ಕವನ ಲಾಯಿಕಿದ್ದು ಅಕ್ಕ

 2. ಪ್ರಸನ್ನಾ ವಿ ಚೆಕ್ಕೆಮನೆ says:

  ಪೋಕು ಮುಟ್ಟಿರೆ ಹೇಳುವ ಗಾದೆ ಹೀಂಗೆ ಸುರುವಾದ್ದೂಳಿ ಈಗಲೇ ಗೊಂತಾದ್ದು.. ಶಂಕರಿಯಕ್ಕನ ಕವನ ಲಾಯ್ಕ ಆಯಿದು

  • S.K.Gopalakrishna Bhat says:

   ಅದು ಹಾಂಗಲ್ಲ. ಇದು ತಮ್ಮಾಶೆಗೆ ಬರೆದ ಕವನ.ಪೋಕು ಹೇಳಿರೆ ಹೋಗುವಿಕೆ ,ಎಲ್ಲಾ ಹಾಳಾಗಿ ಹೋಪ ಕಾಲ .ಅಂತ ಪರಿಸ್ಥಿತಿ ಬಂದರೆ ಹೇಳುದರ ‘ಪೋಕು ಮುಟ್ಟಿರೆ’ ಹೇಳುದು.ಪೋಕು ಹೇಳುವ ನಾಯಿಯಾಗಲಿ ಬ್ಯಾರಿಯಾಗಲಿ ಮುಟ್ಟುದಲ್ಲ.

   ಕವನ ಕುಶಾಲಿದ್ದು,ಒಳ್ಳೆದಿದ್ದು,

 3. ಚೆನ್ನೈ ಬಾವ says:

  ಹ್ಹೋ…. ಅದು ಪೋಕು ಮುಟ್ಟಿದ್ದೋ!

  ಪೋಕು ಮುಟ್ಟಿರೆ ಸಾರ ಇಲ್ಲೆಡ. ಬಟ್ಟಮಾವಂದ ಹೇಳ್ತವು ಅಪ್ಪೋ!

  ಒಪ್ಪ ಆಯಿದು

 4. ಅನ್ನಪೂರ್ಣ says:

  ಲಾಯಿಕಾಯಿದು ಪದ್ಯ.ಹೀಂಗೇ ಇನ್ನುದೆ ಬರಲಿ ಪದ್ಯಂಗ ಅವರ ಕೈಃದ ..

 5. ಶಂಕರಿ ಶರ್ಮ says:

  ಒಪ್ಪ ಕೊಟ್ಟ ನಿಂಗೊಗೆಲ್ಲಾ ಧನ್ಯವಾದಂಗೊ

 6. ಬೊಳುಂಬು ಗೋಪಾಲ says:

  ಪೋಕು ಮುಟ್ಟಿರೆ ರಜಾ ಹೊಂದಾಣಿಕೆ ಮಾಡ್ಯೊಂಬಲಾವ್ತು. ಗಾದೆಗೆ ತಕ್ಕ ಕತೆ ಪದ್ಯ ಲಾಯಕಿತ್ತು.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *