ಬರದೋರು :   ಸುಬ್ಬಣ್ಣ ಭಟ್ಟ, ಬಾಳಿಕೆ    on   14/11/2012    5 ಒಪ್ಪಂಗೊ

ಸುಬ್ಬಣ್ಣ ಭಟ್ಟ, ಬಾಳಿಕೆ
Latest posts by ಸುಬ್ಬಣ್ಣ ಭಟ್ಟ, ಬಾಳಿಕೆ (see all)

ಪೊಸಡಿ ಗುಂಪೆ

ಕಾಸರಗೋಡಿನ ಬಡಗು ದಿಕ್ಕಿಲಿ ಕಾಂಬ ದೊಡ್ಡ ಗುಡ್ಡೆ
ಬೇಸರ ಕಳವಲೆ ಹೋಯ್ಕೊಂಡಿದ್ದ ಗುಂಪೆ ಗುಡ್ಡೆ ||
ಹತ್ತಿರ ಇಪ್ಪ ಗುಡ್ಡಂಗೊಕ್ಕೆಲ್ಲ ರಾಜನೆ ಅಕ್ಕು ಈ ಗುಡ್ಡೆ
ಎತ್ತರ ತುಂಬ ಎದುರಾಣದ್ದು ಆಚಿಕೆ ಇಪ್ಪದು ಸಣ್ಣ ಗುಡ್ಡೆ ||

ಸುತ್ತಲ ಶಾಲೆಯ ಮಕ್ಕೊಗೆಲ್ಲ ಪೊಸಡಿ ಗುಂಪೆ
ಹತ್ತುತ ಸುತ್ತಲು ನೋಡಲು ಬಹಳ ಕಣ್ಣಿಗೆ ಸೊಂಪೆ
ಸುತ್ತಲು ಇಪ್ಪ ದನಗೊ ಎಲ್ಲ ಮೇವಲೆ ಬಕ್ಕು ಹತ್ಯೊಂಡು
ದನಗಳ ಹುಡುಕಿ ಬಕ್ಕು ಮಕ್ಕೊ ಗೊಂಚಲು ನೆಲ್ಲಿ ಕೊಯ್ಕೊಂಡು

ಶ್ರಾವಣ ಮಾಸ ಬಂದರೆ ಮತ್ತೆ ಹುಲ್ಲು ಪಚ್ಚೆ ಕಂಡುಗೊಂಡು
ಗುಡ್ಡೆಯ ಶೋಭೆ ಹೆಚ್ಚಿ ದನಗಳ ಹೊಟ್ಟೆ ತುಂಬ್ಸ್ಯೊಂಡು
ನಾಲ್ಕು ದಿಕ್ಕಿನ ಜನಂಗೊಕ್ಕೆಲ್ಲ ಎತ್ತರ ಗುಡ್ಡೆ ಎನಿಸ್ಯೊಂಡು
ಗುಡ್ಡೆಯ ಹತ್ತಿ ನೆತ್ತಿಲಿ ನಿಂದರೆ ಸುತ್ತಲು ದೂರಕೆ ನೋಡ್ಯೊಂಡು
ಹೋಪಲೆ ಬಕ್ಕು ಜನಗಳ ಗುಂಪು ಗುಡ್ಡೆಯ ಮೇಲೆ ಹತ್ಯೊಂಡು
ಬಡಗು ದಿಕ್ಕಿಲಿ ಕಾಂಬ ಹೊಂಡವೇ ಆವಳ ಬೈಲು
ಆವಳ ಮಠದ ಮೂಡಕ್ಕೆ ದಳಿಯುಕ್ಕು,ಚೇರಾಲು ಬಿಟ್ಟರೆ
ಪದ್ಯಕ್ಕಳದೇ ಮನೆ ಮಠಂಗೊ ತುಂಬಿದ್ದವಪ್ಪ ಬ್ಯಾರಿಗೋ
ಪಡುವಂತಾಗಿ ಪಾವಲಕೋಡಿ,ಮಾಣಿತ್ತೋಡಿ ಅಂಬಿಕಾನ
ಅಯ್ಯನ ಮನೆ ಬೀಡುಬೈಲು ಕೊಂದಲಕಾಡು ಬಾಯಾಡಿ
ಮೇಲೆ ಬಂದರೆ ಎಡೆಕ್ಕಾನ ಮುಂದೆ ಕಾಂಬದೆ ಅಮ್ಮಂಕಲ್ಲು ,
ಶನ್ನಿಕ್ಕೋಡಿ,ಪೂಕಳ ಎಲ್ಲ ಮನೆಗೊ ಹವ್ಯಕರದ್ದು
ಮೂಡು ದಿಕ್ಕೆ ಕಾಂಬದೇ ಧರ್ಮತಡ್ಕ,ಮೇಪೋಡಡ್ಕ
ಒಂದು ಹೊಡೆಲ್ಲಿ ಕಂಬಾರು ಇನ್ನೊಂದು ಕಡೆ ಆವಳ ಮಠ
ಬಡಗು ತೆಂಕ ದಿಕ್ಕಂಗೆ ನಂಬಿದ ಭಕ್ತರ ಕಾಯ್ಕೊಂಡಿದ್ದವು
ನೆತ್ತಿಗೆ ಹೋಗಿ ನಿಂದ ಜನಕ್ಕೆ ಕುಶಾಲು ಹೆಚ್ಚಿ ಕಲ್ಲನು ಹೆರ್ಕಿ
ಕೆಳಂಗೆ ಉರುಳಿಸಿ ಚೆಂದ ನೋಡುತ್ತವು ಹೆಚ್ಚುತ ಪಿರ್ಕಿ
ಈಗ ನೋಡಿದರೆ ಸಣ್ಣ ಕಲ್ಲುದೆ ಸಿಕ್ಕಲ್ಲಿ ಹುಡ್ಕಿ
ಮುಳಿ ಗುಡ್ಡೆ ಮಾಡಿದ ಜನ ಕಟ್ಟಿದ ಅಗಳೆಲ್ಲ ಹೋಗಿ,
ಕೆಳ ಉರುಳಿ ಬೀಳ್ತು ಕೋಟೆಯೆಲ್ಲ ಹೋಗಿ
ದರ್ಕಾಸ್ತು ಮಾಡಿದ ಜನಂಗೆಲ್ಲ ಸೇರಿ ಗುಡ್ಡೆಗೆ ಸುರಂಗ
ಕೊರ್ಕೊಂಡು ಹೋಗಿ ಅಲ್ಲೆಲ್ಲ ಜೇಡಿ ಮಣ್ಣು ತುಂಬಿ
ಹತ್ತುವಗ ನಿಧಾನಕ್ಕೆ ಹೋಗಿ ಕೆಳ ಇಳಿವಗ ಜೋರಾಗಿ ಓಡಿ
ಮಕ್ಕಳ ಎಂಗಳ ಕುಶಾಲು ಹಾಂಗಿತ್ತು ನೋಡಿ,
ಮೂಡಲ್ಲಿ ಕಾಂಗಪ್ಪ ಹತ್ತರೆ ಹತ್ತರೆ ಜೋಡು ಬಾವಿ
ಕಲ್ಲು ಹಾಕಿದರೆ ಶಬ್ದ ಕೇಳುವದು ಇನ್ನೊಂದು ಬಾವಿ
ಕೆಳದಿಕೆ ಒಂದು ಸುರಂಗ ಮೀವಲೆ ಬಕ್ಕಪ್ಪ ಜನಂಗೊ
ತೀರ್ಥ ಮೀವ ಈ ಜಾಗವೇ ತೀರ್ಥ ಗುಂಪೆ
ತೀರ್ಥಮಾಸೆ ದಿನ ಹೋವುತ್ತವು ಜನ ಮೀವಲೆ
ಮಿಂದಿಕ್ಕಿ ಬಪ್ಪಗ ತಕ್ಕಪ್ಪ ಪ್ರಸಾದ ಅಲ್ಲಿಂದ
ಮಿಂದಿಕ್ಕಿ ಬಪ್ಪಗ ಕೈಲಿ ತಂದದು ಬೂದಿಯೆ ಇರೆಕ್ಕು.
ಬರೆ ಮಸಿಯಾದರೆಅವಕ್ಕೆ ದೋಷ ಹೇಳುವ ನಂಬಿಕೆ
ಆದರು ಜನಂಗೊ ಹೋವ್ತವಪ್ಪ ಪುಣ್ಯ ಗಳಿಸುಲೆ
ತೆಂಕು ದಿಕ್ಕಂಗೆ ನೋಡಿದರೆ ನೋಡಿದರೆ ಕಾಂಗು
ವಿದ್ಯಾನಗದ ವರೆಗುದೆ ಮತ್ತೆ ಈಚಿಕೆ ಬದಿಯಡ್ಕ
ದಳದಲ್ಲಿ ಈಗ ಗುರುಗಳ ದೃಷ್ಟಿ ಬಂದಿತ್ತು ನೋಡಿ
ಧ್ಯಾನ ಕೇಂದ್ರ ಯೋಜನೆಯೊಂದ ತೊಡಗಿದವು ನೋಡಿ
ಸುಜ್ಞಾನದಿಂದ ಇದರ ಸಾಧಿಸೆಕ್ಕು ಹೇಳಿ ನಿಂಗಳ ಬೇಡಿ
ಗುರುವಾಜ್ಞೆ ಶಿರಸಾವಹಿಸೆಕ್ಕು ಹೇಳಿ ಮತ್ತೊಂದರಿ ಕೇಳಿ
ಶಿಷ್ಯ ಜನಂಗೆಲ್ಲ ಪ್ರೋತ್ಸಾಹ ಕೊಟ್ಟು ಜಯಿಸೆಕ್ಕು ಹೇಳಿ
ಇದ್ದಷ್ಟು ದಿನ ಸುಖಲ್ಲಿ ನೆಮ್ಮದಿಂದ ಬಾಳೆಕ್ಕು ಹೇಳಿ
ದೇವರ ಕೇಳಿ ಪ್ರಾರ್ಥಿಪ ನೋಡಿ ಚಿರಕಾಲ ಬಾಳಿ

 

5 thoughts on “ಪೊಸಡಿ ಗುಂಪೆ

  1. ಗುಂಪೆ ಗುಡ್ಡೆ ವರ್ಣನೆ ತುಂಬಾ ಒಪ್ಪ ಆಯಿದು. ಎನ್ನ ಅಜ್ಜನ ಮನೆ ಅಲ್ಲೇ ಗುಂಪೆ ಗುಡ್ಡೆ ಬುಡಲ್ಲಿ ಇಪ್ಪದು. ಎಡಕ್ಕಾನ ಹಳ್ಳಕೋಡ್ಲು ಮನೆ
    ಬೈಲಿನ ಎಲ್ಲರೂ ಸೇರಿ ಗುಂಪೆ ಗುಡ್ಡೆಗೆ ಒಂದು ಪಿಕ್ನಿಕು ಹೋದರೆ ಹೇಂಗೆ…?
    ಎಂತ ಹೇಳ್ತಿ???
    ಒಪ್ಪಂಗಳೊಟ್ಟಿಂಗೆ…

  2. ಒಂದರಿ ಗುಂಪೆ ಗುಡ್ಡೆ ಹತ್ತಿದ ಅನುಭವ ಆತು.

  3. ಕಾಸರಗೋಡಿಂದ ರಪಕ್ಕನೆ ಗುಂಪಗೆ ಹಾರಿ ಅಲ್ಲಿ ಸುತ್ತಲೂ ನೋಡಿ ಅಕೇರಿಗೆ ಪ್ರಾರ್ಥಿಪ ಮೋಡಿ ಬಹು ಸುಂದರ ಆತದು ನೋಡಿ. ಹರೇ ರಾಮ.

  4. ಗುಂಪೆಯ ಗುಡ್ಡೆಯ ವರ್ಣನೆ ಲಾಯ್ಕ ಆಯಿದು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×