Oppanna.com

‘ಪುಣ್ಯಕೋಟಿ’ಗೆ ನಮನ

ಬರದೋರು :   ಉಂಡೆಮನೆ ಕುಮಾರ°    on   26/01/2012    6 ಒಪ್ಪಂಗೊ

ವಿಶ್ವ ಗೋ ಸಮ್ಮೇಳನಕ್ಕೆ  ಗಣೇಶ್ ಕುತ್ಯಾಡಿಯವು ಬರದ ಪದ್ಯ

~*~

ಪುಣ್ಯಕೋಟಿಗೆ ನಮನ

ಭಾರತಿಯ ಸಂಜಾತೆ ವಿಶ್ವ ಜನ ಸಂಪೂಜ್ಯೆ
ಕಪಿಲೆ ನಂದಿನಿ ಕಾಮಧೇನು ದೇವಿ |

ಮೂವತ್ತಮೂರ್ಕೋಟಿ ದೇವ ದೇವರ ನಿಲಯ
ಸಂಜೀವಿನೀ ಪುಣ್ಯಕೋಟಿಶಕ್ತಿ ||೧||

ನಿನ್ನಿಂದ ಜನಧನವು ನಿನ್ನಿಂದ ನೆಲಹಸಿರು
ನಿನ್ನಿಂದಲೇ ಜೀವರಾಶಿಯುಸಿರು |

ನೀನು ಅಡಿಯಿಟ್ಟೆದೆಯೆ ಬಂಗಾರದೊಡಲಿಹುದು
ಆರೋಗ್ಯ ಸಂಪದದ ಲಾಸ್ಯವಿಹುದು ||೨||

ಪಂಚಗವ್ಯವದೇನು? ಪಂಚಾಮೃತವದೇನು?
ಅರ್ಕಶಕ್ತಿಯ ತೇಜ ಬಲವದೇನು? |

ನಾಮಗಳು ಹಲವಿದ್ದು ಏಕಶಕ್ತಿಯ ಹಿರಿಮೆ
ಭುವನದೇಳ್ಗೆಗೆ ಮೂಲವಲ್ಲವೇನು? ||೩||

ಸೊದೆಯ ಸವಿ ತೊಟ್ಟಿಲಲಿ ಜಗದ ಕಂದರ ತೂಗಿ
ಲಾಲಿ ಹಾಡುವೆ ತಾಯೆ ಜಗತನ್ಮಯ! |

ನೀ ವಿಶ್ವದಾನಂದ ರಸಧಿಯಲಿ ತೇಲಿಸುವೆ
ಪುಣ್ಯಕೋಟಿಯೆ ನಿನಗೆ ಎನ್ನ ನಮನ ||೪||

~*~*~

6 thoughts on “‘ಪುಣ್ಯಕೋಟಿ’ಗೆ ನಮನ

  1. ಗೋವಿನ ಬಗ್ಗೆ ಕುತ್ಯಾಡಿ ಬರದ ಚೆಂದದ ಪದ್ಯವ ಒದಗುಸಿಕೊಟ್ಟ ಕುಮಾರಂಗೆ ಧನ್ಯವಾದ.

  2. ಕುಮಾರಣ್ಣ೦ಗೆ ಧನ್ಯವಾದಂಗ… ಗಣೇಶ್ ಕುತ್ಯಾಡಿ ಗೆ ಅಭಿನಂದನೆಗೋ…

    “ನಿನ್ನ ಕಣ್ಣೀರು ಒರಸಿ, ನೀ ಸಂತ್ರುಪ್ತಿಲಿ ಓಡಾಡುವ ಹಾಂಗೆ ಮಾಡುಲೆ ಎಂಗ ಹವ್ಯಕಬ್ಬೆಯ ಮಕ್ಕೋ ಸದಾ ನಿನ್ನ ಜೊತೆ ಇರುತ್ತೆಯ…” ಹೇಳಿ ಪುಣ್ಯ ಕೋಟಿಗೆ ಅನಂತ ಪ್ರಣಾಮಂಗ…

  3. ಕುತ್ಯಾಡಿ ಮಾವಂಗೆ ನಮೋನ್ನಮ.

  4. ಪದ್ಯ ಭಾರೀ ಲಾಯಕ ಆಯ್ದು. ಓದಿ ಖುಶೀ ಆತು. ಪಟವೂ ಪದ್ಯಕ್ಕೆ ಲಾಯಕ ಒಂಬುತ್ತು. ಮೆಚ್ಹುಗೆ ಕುತ್ಯಾಡಿ ಮಾವಂಗೆ ಧನ್ಯವಾದ ಕುಮಾರಣ್ಣಂಗೆ ಹೇಳಿತ್ತು – ‘ಚೆನ್ನೈವಾಣಿ’

  5. ನೀ ವಿಶ್ವದಾನಂದ ರಸಧಿಯಲಿ ತೇಲಿಸುವೆ
    ಪುಣ್ಯಕೋಟಿಯೆ ನಿನಗೆ ಎನ್ನ ನಮನ ———- ಗಣೇಶ ಕುತ್ಯಾಡಿಯವರ ಹಾಂಗೇ ನಮ್ಮದೂ ಒಂದು ನಮನ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×