ಪುಟ್ಟಕ್ಕನ ಪದ್ಯ

July 30, 2013 ರ 6:00 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಪ್ಪು ಪುಟ್ಟಕ್ಕಾ ಹೊತ್ತೇರೋ ಮದಲೇ
ಹೊದಕ್ಕೆ ಹಿಡುದೆಳೆದು ಏಳೆಕ್ಕು।
ಎದ್ದ ಕೂಡ್ಲೆಯೆ ರಭಸಲ್ಲಿ ಓಡೆಕ್ಕು
ಕೈಕಾಲು ಮೋರೆಯ ತೊಳೆಯೆಕ್ಕು।।

ಅಪ್ಪು ಪುಟ್ಟಕ್ಕಾ ಒಪ್ಪಲ್ಲಿ ಮಿಂದಿಕ್ಕಿ
ಚಾಮಿಗೆ ಕೈಯ್ಯಾ ಮುಗಿಯೆಕ್ಕು।
ಚಾಮಿಗೆ ಕೈಮುಗಿದು ಓದುಲೆ ಕೂದರೆ
ಉದಾಸೀನವೇ ಹೆದರಿ ಓಡೆಕ್ಕು।।

ಅಪ್ಪು ಪುಟ್ಟಕ್ಕಾ ವ್ಯಾಯಾಮ ಮಾಡುದು
ದೇಹದ ಶಕ್ತಿಗೆ ಒಳ್ಳೆದಡ।
ರೋಗ ಬಾರದ್ದಾಂಗೆ ಇಪ್ಪಲೂ ಯೋಗವೆ
ಬೇಕಾದ್ದು ಹೇಳುಗು ನಮ್ಮವಡ।।

ಅಪ್ಪು ಪುಟ್ಟಕ್ಕಾ ಸರಿಯಾದ ಹೊತ್ತಿಂಗೆ
ತಿಂಡಿದೆ ಕಾಫಿದೆ ಮಾಡೆಕ್ಕು।
ಹೊತ್ತಾಗದ್ದಾಂಗೆ ಶಾಲೆಗೆ ಹೋಯೆಕ್ಕು
ಗೊಂತಿಲ್ಲದ್ದಿಪ್ಪದರ ಕಲಿಯೆಕ್ಕು।।

ಅಪ್ಪು ಪುಟ್ಟಕ್ಕಾ ಗುರುಗಳು ಹೇಳಿದ್ದು
ಎಲ್ಲದೂ ಒಳ್ಳೆದೆ ತಿಳಿಯೆಕ್ಕು।
ವಿಮರ್ಶೆ ಮಾಡ್ಯಂಡು ಓದ್ಯೊಂಡು ಇದ್ದರೆ
ನಮ್ಮಾ ಬುದ್ಧಿಗುದೆ ಬಲಬಕ್ಕು।।

ಅಪ್ಪು ಪುಟ್ಟಕ್ಕಾ ಆಟದೆ ಪಾಠದೆ
ಓದುಲು ಬೆಳವಲು ಬೇಕಾವ್ತು।
ಸಂಗೀತ, ಚಿತ್ರಕಲೆ ಭಾಷಣ ಎಲ್ಲದುದೆ
ಇದ್ದರೆ ಬಾಳಿಂಗೆ ಸಾಕಾವ್ತು ।।

ಅಪ್ಪು ಪುಟ್ಟಕ್ಕಾ ಅಮ್ಮಂಗು ಅಪ್ಪಂಗು
ಬೇಕಾಗಿ ಬಾಳೆಕ್ಕು ಒಟ್ಟೊಟ್ಟಿಂಗೇ ।
ಎಲ್ಲರಿಗು ಬೇಕಾಗಿ ನಮ್ಮ ಸ್ವಂತಿಕೆ ಉಳುಶಿ
ಇರೆಕ್ಕು ನೆಮ್ಮದಿಯ ಖುಷಿಯ ಗಂಗೆ।।

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಪಷ್ಟು ಕ್ಲಾಸು ಆಯ್ದು ಭಾವ. ಈ ನಮೂನೆದು ನಿಂಗೊ ಬರದ್ದದು ಇದು ಸುರುವೆಯೋದು. ಒಪ್ಪ ಒಪ್ಪ

  [Reply]

  VA:F [1.9.22_1171]
  Rating: 0 (from 0 votes)
 2. ಮುಳಿಯ ಭಾವ
  ರಘುಮುಳಿಯ

  ಕೋಳ್ಯೂರು ಭಾವ ದಿನಚರಿ೦ದ ಸುರುಮಾಡಿ ಪುಟ್ಟಕ್ಕ೦ಗೆ ಹೇಳಿದ ಕೆಮಿಮಾತುಗೊ ಲಯಬದ್ಧವಾಗಿ ಕೊಶಿ ಕೊಟ್ಟತ್ತು.ಲಾಯ್ಕ ಆಯಿದು ಭಾವ,ಅಭಿನ೦ದನೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವಪೆಂಗಣ್ಣ°ಕಳಾಯಿ ಗೀತತ್ತೆಶುದ್ದಿಕ್ಕಾರ°ಅನಿತಾ ನರೇಶ್, ಮಂಚಿಶ್ರೀಅಕ್ಕ°ವಸಂತರಾಜ್ ಹಳೆಮನೆವಿನಯ ಶಂಕರ, ಚೆಕ್ಕೆಮನೆಸರ್ಪಮಲೆ ಮಾವ°ಯೇನಂಕೂಡ್ಳು ಅಣ್ಣಶೀಲಾಲಕ್ಷ್ಮೀ ಕಾಸರಗೋಡುಪುಣಚ ಡಾಕ್ಟ್ರುಪುತ್ತೂರಿನ ಪುಟ್ಟಕ್ಕಸುಭಗವಿಜಯತ್ತೆಹಳೆಮನೆ ಅಣ್ಣದೊಡ್ಡಭಾವರಾಜಣ್ಣಬೊಳುಂಬು ಮಾವ°ಶಾಂತತ್ತೆಒಪ್ಪಕ್ಕಶ್ಯಾಮಣ್ಣಅನು ಉಡುಪುಮೂಲೆವೇಣೂರಣ್ಣಎರುಂಬು ಅಪ್ಪಚ್ಚಿನೀರ್ಕಜೆ ಮಹೇಶ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ