Oppanna.com

ಪುಟ್ಟು ಚಾಮಿ

ಬರದೋರು :   ಬಾಲಣ್ಣ    on   03/08/2013    11 ಒಪ್ಪಂಗೊ

ಬಾಲಣ್ಣ
Latest posts by ಬಾಲಣ್ಣ (see all)

ಪುಟ್ಟು ಚಾಮಿ 

 “ಉಕ್ಕಾಚು  ಮಾಡುತ್ತೆ
ಬಾ ಚಾಮಿ  ದೇವರೆ
ಓ ಇಲ್ಲಿ ಕಾಲಿಲ್ಲಿ ಕೂಚ ಪುಟ್ಟು/
ಚಂದಪ್ಪ ಚಾಮಿಯ
ತೋಚುತ್ತೆ ಬಾನಲ್ಲಿ
ನೆಗ್ಗಿ ಹಿಡಿತ್ತೆ ನೀನು ಕೈಲಿ ಮುಟ್ಟು /೧/

 ‘ಚಪ್ಪ’ ಕಾಲಿಲಿ ಹಾಕಿ
ತಟುಪುಟು ನೆಡಕ್ಕಂಡು
ನವಗಿಂದು ಇದ! ಬೂವ ಹೋಪಲಿದ್ದು /
ಅಪ್ಪನಾ ಬೂಟಿನೊಳ
ಕಾಲು ಸಿಕ್ಕುಸಿ ನೆಡವ
ಚೆಂದವ ಎಲ್ಲೊರುದೆ ನೋಡಲಿದ್ದು/೨/

 ‘ಅಟ್ಟುಂಬೊಳ’ದ ಒಳವೆ
ಪುಟ್ಟು ಕಾರ್ಬಾರೆಲ್ಲ
ಠಂ ಠಂ ಟಣ ಟಣ  ಶಬ್ದ ಕೇಳುತ್ತು/
ಗೋಡೆ ಬಾಗಿಲಿಲೆಲ್ಲ
ಕುಂಞ್ಞಿ  ಕೈ ಬೆರಳುಗಳ
ಕಾಲ ಗುರ್ತವು ಕೂಡ ಎದ್ದು ಕಾಣುತ್ತು /೩/.

 ಬಣ್ಣ ಕಾಗದ ,ಪೆನ್ನು
ಸೊಪ್ಪು, ಕಾಜಿನ ಬಳೆಯೊ!
ಪೆನ್ಸಿಲ್ಲು ಪುಸ್ತಕ ಆಡೊ ಚೆಂಡೊ /
ಕಲ್ಲು ,ಮರದ ಕೋಲು
ಬಾಚಣಿಗೆ ,ರಬ್ಬರ್ರು
ಲಕ್ಕೋಟೆ ,ಗೋಳಿಕಾಯಿ, ಕಡ್ಡಿ ತುಂಡೊ/೪/

ಮಾರಾಪುನೋಡಿದರೆ
ಎಂತೆಂತೊ ಸಾಮಾನು
“ಇದು ಬೇಕೊ?ಎಂತಕಿದು?”ಹೇಳುಗಪ್ಪ /
ನಿಂಗೊ ಹೀಂಗೇ ಬೆಳದು
ದೊಡ್ಡಾದ್ದದಲ್ಲಾದೊ ?
ಹೇಳುಗು -ಕೇಳಿದರೆ’ ಗೊಂತಿಲ್ಲೆ ,ಉಮ್ಮಪ್ಪ’/೫/

 ಹೆಗಲ್ಲಿ ಕೂರುಸಿ ಇವನ
ತೋಂಪಟ ಮಾಡ್ಲಿದ್ದು
ಆರು ಈ’ ದೊಡ್ದ ಜೆನ ‘ಹೇಳಿ ಗೊಂತಿದ್ದೊ?/
ಮನೆ ಇಡಿಯೆ ಕೊಣಿ ಕೊಣಿವ
ಚಿಲಿಪಿಲಿ ಹಕ್ಕಿ ಮರಿ
ಮನೆ ಚಾಮಿ ದೇವರು ‘ಬೇರೆ ಇದ್ದೊ/೬/
~~~***~~~
 
 

11 thoughts on “ಪುಟ್ಟು ಚಾಮಿ

  1. ಇಶಾನ್ ಚಾಮಿಯ ನೆಂಪು ಆವುತಾ ಇದ್ದು……….ಹಾಡು ಓದುವಗ ……… ಲಾಯಿಕಾಯಿದು

  2. ಇಶಾನ್ ಚಾಮಿಯ ನೆಂಪು ಆವುತಾ ಇದ್ದು……….ಹಾಡು ಓದುವಗ ……… ಒಲ್ಲೆದಾಯ್ದು

  3. ಪುಟ್ಟುಚಾಮಿಯ ಬಾಲ ಲೀಲೆಗಳ ವರ್ಣನೆ-ವಿವರಣೆ ಒಪ್ಪ ಆಯಿದು ಬಾಲಣ್ಣ.

  4. ಪುಟ್ಟುಚಾಮಿಯ ತೋಂಪಟಮಾಡಿ ಹೊರುವ ಸಂಭ್ರಮಕ್ಕೆ ಬೇರೆ ಯಾವದು ಸಾಟಿಯಕ್ಕು? ಈ ಪದ್ಯದ ಸಾಲುಗಳ ಓದುವಾಗ ಎಲ್ಲೋರಿಂಗೂ ಅವು ಅನುಭವಿಸಿದ ಸಂಭ್ರಮದ ಆ ಕ್ಷಣ ಕಣ್ಣ ಮುಂದೆ ಬಪ್ಪದು ಖಂಡಿತಾ. ಆ ಸವಿನೆನಪಿನ ಚಪ್ಪರುಸುವ ಹಾಂಗೆ ಮಾಡಿದ್ದಕ್ಕೆ ಬಾಲಣ್ನ ನಿಂಗೊಗೆ ಚಾಮಿಚಾಮಿ.

  5. ಮುಗ್ಧ ಮನಸ್ಸಿನ ಎಳೆಯ ಮಕ್ಕೊ ಯಾವಗಲೂ ನವಗೆ “ಪುಟ್ಟು ಚಾಮಿ” ಯೇ.
    ಮನೆ ಇಡಿಯೆ ಕೊಣಿ ಕೊಣಿವ ಚಿಲಿಪಿಲಿ ಹಕ್ಕಿ ಮರಿ ಮನೆ ಚಾಮಿ ದೇವರು ‘ಬೇರೆ ಇದ್ದೊ- ಈ ಸಾಲು ತುಂಬಾ ಕೊಶೀ ಆತು.

  6. ಇದು ಎನ್ನ ಎರಡು ವರ್ಷದ ಪುಳ್ಲಿ “ಪುಟ್ಟು ಚಾಮಿ”” ಯದ್ದೇ ಕಥೆ. ನಿಂಗೊಗೆ ಹೇಂಗೆ ಗೊಂತಾತು?!!!!…ಆಹಾ…ಒಪ್ಪವೇ…

    1. ಓಹೋ!… ಹಾಂಗೋ ಕತೆ ? ಅಂಬಗ ಆ ‘ ಪುಟ್ಟು ಚಾಮಿ ‘ಗೆ ಒಂದೊಪ್ಪ ..

  7. ಆಹಾ… ಎಟ್ಟು ಒಪ್ಪೊಪ್ಪ ಆಯ್ದೂ…. 🙂

  8. ”ಪುಟ್ಟು ಚಾಮಿ” ಬೆಳವ ರೀತಿ ನೈಜವಾಗಿದ್ದು ಬಾಲಣ್ಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×