Oppanna.com

ರೈಸಿತ್ತೋ ರೈಸಿತ್ತು

ಬರದೋರು :   ಬಾಲಣ್ಣ    on   20/02/2014    8 ಒಪ್ಪಂಗೊ

ಬಾಲಣ್ಣ
Latest posts by ಬಾಲಣ್ಣ (see all)

ರೈಸಿತ್ತೋ  ರೈಸಿತ್ತು  

 ಅಂದು  ಒಂದೂರಿಲ್ಲಿ
ಯಕ್ಷಗಾನದ  ಆಟ
ಪ್ರಸಂಗ ದೇವಿಮಹಾತ್ಮೆ ಹೇಳಿ ಆಡೋ  |
ಅಪ್ಪಣ್ಣ ಭಾಗವತ  
ಚೆಂಡೆ ಕುದ್ರೆಕ್ಕೋಡ್ಲು
ಮದ್ದಳೆಗೆ ರೈಗಳೇ  ಇತ್ತದಡೋ    |೧|

 ಅಲ್ಲಿ  ಮಹಿಷಾಸುರನ 
ವೇಷ ನೋಡಲೆ ಬಂದು 
ನಿಂದವದ ಚೌಕಿಲಿ ಊರ ಮಕ್ಕೊ |
ಕೋಲುಲಿ ಸುಬ್ಬನದೆ
ಮುಖ್ಯ ಬಣ್ಣದ ವೇಷ 
‘ಮಹಿಷ ‘ರೈಸುಗೊ ಏನೊ ಎಕ್ಕಸೆಕ್ಕ  |೨|

 ವೇಷ ತಯಾರಾತು
ತುಂಬಾ  ಹೊತ್ತಿದ್ದನ್ನೇ
ರೆಜ ಹೊತ್ತು ಕಣ್ಣಡ್ಡ ಮಾಡಿರೆಂತ? |
ಚೌಕಿ ಹೆರ  ಇತ್ತಿದ್ದು
ಖಾಲಿ  ಎತ್ತಿನ ಗಾಡಿ
ಹೊಕ್ಕು ಮನುಗಿದ ಕೂಡ್ಲೆ  ಒರಕ್ಕು ಬಂತ? |೩|

 ಗಾಡಿ ಎಬ್ಬುವ  ದೂಮ
ಆರಿಂಗೋ  ಒಪ್ಪಿದ್ದು
ಮರುದಿನವೇ  ಬೆಳುಲಿನ ಇಳುಶಲಿದ್ದು  |
ಉದಿವರೆಗೆ  ಆಟಲ್ಲಿ
ಒರಕ್ಕು  ಕೆಟ್ಟರೆ  ನಾಳೆ 
ಮೂಲೆ ಮನೆ ಭಟ್ರೆನ್ನ ಬಯ್ಯಲಿದ್ದು  |೪|

 ಎತ್ತುಗಳ ಕಟ್ಟಿತ್ತು
ದೂಮ ನೊಗ ಏರಿತ್ತು 
ಆಟದಾ  ಬೈಲಿಂದ  ಗಾಡಿ  ಹೆರಟತ್ತು |
ಗಾಡಿ ಒಳ ಮನುಗಿದ್ದ
ಸುಬ್ಬಂಗೆ ಕನಸಾತು
‘ಮಗನೆ  ಮಹಿಷನೆ’ ಹೇಳಿ  ದನಿ ಕೇಳಿತ್ತು  |೫|

 ಅಟ್ಟಾಸು  ಕೇಳಿತ್ತು
ಗಾಡಿ  ಇಡಿ  ನಡುಗಿತ್ತು
ಗಾಬರಿಲಿ ಓಡಿತ್ತು ಗಾಡಿ ಎತ್ತು |
ಎಂತಾತೋ   ಏನಾತೋ 
ಗಾಡಿ  ಎಬ್ಬುವ ದೂಮ
ನೆಡುಗಿಂಡು  ಗಾಡಿಂದ  ಹಾರಿ ಓಡಿತ್ತು  |೬|

 ಇಲ್ಲಿ  ರಂಗ  ಸ್ಥಳಲ್ಲಿ 
ಮಗನೆ ಮಹಿಷ  ಹೇಳಿ 
ಮಾಲಿನಿ ಎಷ್ಟೆಷ್ಟೋ  ಕೂಗಿ  ದೆನಿಗೇತು |
ಮತ್ತಾಣ  ಕತೆ ಅಲ್ಲಿ 
ಎಂತಾತೊ ಹೇಂಗಾತೊ
ಕೇಳೆಡಿ  ಉಮ್ಮಪ್ಪ ಎನಗೆಂತ ಗೊಂತು! |೭|

~~~***~~~

 

8 thoughts on “ರೈಸಿತ್ತೋ ರೈಸಿತ್ತು

  1. ಪದ್ಯ ಲಾಯಕಾಯಿದು. ಮನ್ನೆ ನೆಡದ ಘಟನೆ ಕಾಲ್ಪನಿಕ ಹೇಳಿಯೇ ಕಾಣ್ತು.

  2. ಹ..ಹಾ
    ದಡಬಡಿಸಿ ಎದ್ದೊ೦ಡು
    ಗಡಿಬಿಡಿಲಿ ಓಡಿತ್ತು
    ತಿರುಗ ಚವ್ಕಿ ಹೊಡೆ ನಾಲ್ಕು ಮೈಲೂ
    ಜನರೆಡೆಲಿ ತೂರ್ಯೊ೦ಡು
    ಸೇ೦ಕಿಲ್ಲಿ ಹತ್ತಿಕ್ಕಿ ಸುಬ್ಬನಾ
    ರ್ಭಟೆಲಿ ತಲೆ ಕೊ೦ಬು ಮ೦ಗ ಮಾಯಾ ಃ) ಃ)

  3. ಪದ್ಯ ಬಾರದ್ದು ಒಳ್ಳೆದಾಯಿದು. ಆದರೆ ಮೊನ್ನೆ ಉದಯವಾಹಿಲ್ಲಿ ಬಂದ ವಿಷಯದ ಸತ್ಯಾಸತ್ಯತೆ ಬಗ್ಗೆ ಸಣ್ಣ ಸಂಶಯ ಇದ್ದನ್ನೇ…
    ಪೆಪರಿಲ್ಲಿ ಬಂದ ವಿಷಯ ಸರಿಯೇ ಆದಲ್ಲಿ, ವಿಷಯ ಸರಿಯಾಗಿ ಗೊನ್ಥಿಪ್ಪವು ಯಾವ ಮೇಳ, ಕಲಾವಿದನ ಹೆಸರಿಸಿದರೆ ಯಕ್ಷಗಾನದ ಬಗ್ಗೆ ಅಪ್ಪ ಅಪಪ್ರಚರವ ತಡದ ಹಾಂಗೆ ಅವುತ್ತು

  4. ಮೊನ್ನೆ ಮೊನ್ನೆ ಬೈಲೂರಿನ ಹತ್ತರೆ ಹೀಂಗಾಯಿದು ಹೇಳಿ ಉದಯವಾಣಿಲಿ ಒಂದು ಸುದ್ದಿ ಇತ್ತು… ಈ ಬಾಲಣ್ಣನ ಪದ್ಯ ನೋಡಿ ಆ ಸುದ್ದಿ ಬರದ್ದಾದಿಕ್ಕೋ?

    1. ಉಮ್ಮಪ್ಪ,ಎನಗೆಂತ ಗೊಂತು?

      1. ಎನಗೂ ಗೊಂತಿಲೆ. ಅಂದರೂ ಈ ಹೊಸ ಪ್ರಸಂಗ ಪಷ್ಟಾಯಿದುಬಾಲಣ್ಣ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×