Oppanna.com

ಸಮರಸದ ಸಮಬಾಳು

ಬರದೋರು :   ಬಾಲಣ್ಣ (ಬಾಲಮಧುರಕಾನನ)    on   17/06/2013    11 ಒಪ್ಪಂಗೊ

ಬಾಲಣ್ಣ (ಬಾಲಮಧುರಕಾನನ)
Latest posts by ಬಾಲಣ್ಣ (ಬಾಲಮಧುರಕಾನನ) (see all)

ಸಮರಸದ ಸಮಬಾಳು

ಕನ್ನಡಕ  ಬೇಕಾವ್ತು
ಹಲ್ಲುದುರಿ ಹೋತು
ತಲೆ ಕಸವು ಉದುರಿತ್ತು
ತಲೆ ಸಾಣೆ ಆತು |೧|

ಆದರೆಂತದು ಕಮ್ಮಿ ?
ನಿತ್ಯವೂ ಕುಶಾಲು
ಎನ್ನೆದುರು ಗಾಳಿಲೇ
ಬರಗು ಕೈಬೆರಳು |೨|

ಏನೇನೊ ನೆವ ಹೇಳಿ
ಎನ್ನತ್ರೆ ಬಕ್ಕು
ಬಾಯಿ ಕುಣು ಕುಣು ಹಾಡು
ಹೇಳಿಂಡಿಕ್ಕು |೩|

ಮಕ್ಕೊ ಆರೂ ಇಲ್ಲೆ
ಅವಕ್ಕೆ ಗೊಂತಿದ್ದು
ಕೈಯೆಳದು ಕೇಳುಗವು
“ತಿಂಡಿ ಎಂತಿದ್ದು?”|೪|

“ಮಡುಗಿದ್ದೆ ನಿಂಗೊಗಿದ
ಹಪ್ಪಳವ ಸುಟ್ಟು ”
ತಿಂದವದ,  ಮುರುದೆನ್ನ
ಬಾಯಿಗೆ ಕೊಟ್ಟು |೫|

ಚೆಂದ ಚೆಂದದ  ಕುಪ್ಪಿ
ಬಳೆಗಳನೇ ತಂದು
ಕೈಹಿಡಿದು ಹಾಕಿದವು
ಕುದ್ದಾಗಿ ಇಂದು |೬|

ಅಪರೂಪ! ಏವಗಳೋ ?
ಎಂಗೊ ಕಾದಿದ್ದು
ಸಮರಸದ ಸಮಬಾಳು
ಇದ! ಎಂಗಳದ್ದು |೭|

~~~~~~~~~~

11 thoughts on “ಸಮರಸದ ಸಮಬಾಳು

  1. ಪದ್ಯ ಎಲ್ಲೋರಿಂಗುದೇ ಕೊಶಿ ಆದರೆ ಬರದ್ದು ಸಾರ್ಥಕ ಆತು .ಅಭಿಪ್ರಾಯ ತಿಳುಸಿದ ಎಲ್ಲರಿಂಗು ಧನ್ಯವಾದಂಗೊ.

  2. “ಕಿರಿದರೊಳ್ ಪಿರಿದರ್ಥವಂ” ಬರವದು ಹೇಂಗೆ ಹೇಳುದಕ್ಕೆ ಉತ್ತಮ ಉದಾಹರಣೆ ಬಾಲಣ್ಣ. ಅಭಿನಂದನೆಗೊ.

  3. ಜೀವನದ ರಥ ಚಕ್ರ
    ಹೀ೦ಗೆ ತಿರುಗಿಸಿರೆ
    ಹೋಪ ದಾರಿಯ ಸುತ್ತು
    ಕಾ೦ಬದದು ಹಸುರೇ

    ಸಮೃದ್ಧ ಸಾಹಿತ್ಯ.ಕೈ ಮುಗುದೆ ಬಾಲಣ್ಣ.

  4. ಪದ್ಯ ಲಾಯಿಕಾಯಿದು ಬಾಲಣ್ಣ.

  5. ಅಜ್ಜ ಅಜ್ಜಿಯರ ರಸಮಯ ಸಮರಸ ದಾಂಪತ್ಯದ ಪದ್ಯ ಸೊಗಸಾಗಿ ಬಯಿಂದು. “ಮಕ್ಕೊ ಆರೂ ಇಲ್ಲೆ” ಹೇಳುವ ಮಾತು ಕೇಳಿ ಅಪ್ಪಗ ಮನಸ್ಸಿಂಗೆ ತುಂಬಾ ಬೇಜಾರಾತು. ಮಕ್ಕೊ ಇದ್ದೂ ಕಡೇಣ ಕಾಲಲ್ಲಿ ಇಲ್ಲೆ ಹೇಳುವ ಪ್ರಸ್ತುತ ಗಂಭೀರ ಪರಿಸ್ಥಿತಿಯ ಬಾಲಣ್ಣ ಒಂದೇ ಗೆರೆಲಿ ಹೇಳಿದ್ದದು ಅದ್ಭುತ. ಗೆಂಡಂಗೆ ಪ್ರೀತಿಲಿ ಕೊಟ್ಟ ಹಪ್ಪಳವ ಹಂಚಿ ತಿಂದ ಅಜ್ಜ-ಅಜ್ಜಿಯರ ಜೋಡಿಯ ಮನಸ್ಸಿಲ್ಲೇ ಕಲ್ಪಿಸಿಕೊಂಡೆ.
    ಪದ್ಯ ಓದಿಯಪ್ಪಗ ಮಂಗಳೂರು ಹವ್ಯಕ ಸಭೆಲಿ ಕಳುದ ವರ್ಷ ಎಂಗೊ ಮಾಡಿದ ನಾಟಕ ನೆಂಪಾತು.

  6. ಪದ್ಯ ಅದ್ಭುತವಾಗಿ ಮೂಡಿ ಬೈ೦ದು. ಸಮರಸದ ಬಾಳು ಎಲ್ಲರದಾಗಲಿ ಎ೦ಬ ಆಶಯ

  7. ಏಳೇ ಏಳು ಪಾರಲ್ಲಿ ಪಾರವೇ ಇಲ್ಲದ್ದ ನೆಮ್ಮದಿಯ ಸೂತ್ರ ಹೇಳಿದ್ದಿ ಬಾಲಣ್ಣ, ನಿಂಗೊ ಗ್ರೇಟ್ !
    ಜೀವನದ ರಸವ ಸಮನಾಗಿ ಹಂಚಿಗೊಂಬದರಲ್ಲೇ ಬದುಕು ಸೊಗಸಪ್ಪದು – ಅದೇ ದಾಂಪತ್ಯದ ತಳಪಾಯ. ಅಂಥಾ ಸಾಮರಸ್ಯಕ್ಕೆ ಪ್ರಾಯದ ಹಂಗೇ ಇಲ್ಲೆ. ಅನ್ಯೋನ್ಯವಾಗಿಪ್ಪ ಗೆಂಡಹೆಂಡತಿ ಜೋಡಿಯ ಕಂಡಪ್ಪಗ ಅವಕ್ಕೊಂದರಿ ಹೊಡಾಡುವ° ಹೇಳಿ ಕಾಣ್ತು.
    ಸಾಮರಸ್ಯದ ಸೂತ್ರವ ಇಂದ್ರಾಣ ಪೀಳಿಗೆ ಅರ್ಥಮಾಡಿಗೊಡರೆ ನಮ್ಮ ಸಮಾಜಲ್ಲಿ ಇಷ್ಟೊಂದು ವಿಚ್ಚೇದನಂಗೊ ಖಂಡಿತಾ ಆಗಲೇಆಗ. ಪರಸ್ಪರ ಹೊಂದಿಗೊಂಡು ಬದುಕೆಕ್ಕು ಹೇಳುದು ನಮ್ಮ ಮಕ್ಕೊಗೆ ಮೊದಲ ಪಾಠ ಆಯೆಕ್ಕು.
    ಬಾಲಣ್ಣ, ಕವನವ ಓದಿ ಮೆಲುಕಾಡಿದಷ್ಟೂ ಅದರ ಆಳ ಹೆಚ್ಚಾವುತ್ತಾ ಹೋವ್ತು –

  8. ಪದ್ಯ ಲಾಯಕ ಆಯ್ದು. ವಾಪಾಸು ಓದಿರೆ ಮಂಡೆಬೆಶಿ ಆವ್ತು. ಹೀಂಗಿರ್ಸ ಬಾಳು ಅದೆಷ್ಟು ಮನೆಗಳಲ್ಲಿ ಕಾಂಗೋ!

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×