ಶಾಂತ ಸಾಗರ ವೀಚಿ

June 25, 2011 ರ 7:00 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಶಾಂತ ಸಾಗರ ವೀಚಿಗಳಿಂದ
ಸಾವಿರ ಸುರಿವದು ಹವಳ|
ಮಾತಿಲ್ಲದ ಮೊರೆತಂಗಳಿಂದ
ಸಾವಿರ ಸುರಿವದು ತುಹಿನ||

ಹದತಪ್ಪಿದ ತೆಪ್ಪವು ಮುಳುಗಿರೂ
ಹುಟ್ಟಡಗಿತ್ತೋ ಅದರೊಳವೇ|
ತಳಸೇರಿದ ತೆಪ್ಪದ ಕೊರಡು
ಕೊನರದೆ ಇದ್ದತ್ತೋ ಒಳವೇ||

ಮುಗಿಲಿಲ್ಲದ ಬಾನಂಗಳಿಂದ
ಸಾವಿರ ಕೇಳುಗು ಬಾನಿ|
ಹಲ್ಲಿಲ್ಲದ ಬಾಯಿಗಳಿಂದ
ಸಾವಿರ ಹೊಟ್ಟುಗು ವಾಣಿ||

.

ಗಿಳಿಬಾಗಿಲ ದಳಿ ರಪ್ಪನೆ ಮುಚ್ಚಿ
ಗಟ್ಟಿಗೆ ಬಾಗಿಲ ಜಡುದೂ|
ಸಂಕಲೆ ಹಾಕಿಯೆ ಬೀಗವ ಹೊಡದೂ
ಮತ್ತೂ ಪವನನ ನಿರೀಕ್ಷೆಯೋ ?||
.
ಶಾಂತಸಾಗರ ವೀಚಿಗಳಿಂದ
ಆವಿಯಾದ್ದದು ಪವನ|
ಮಾತಿಲ್ಲದ ಮನಮಿಡಿತಗಳಿಂದ
ಮೂಡಿ ಬಂದದು ಕವನ||
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಶಾಂತಸಾಗರ ವೀಚಿಗಳಿಂದ ಮೂಡಿಬಂದ ಈ ಕವನಂಗೊ ಅದ್ಭುತ ಆಯಿದು ಬೊಳುಂಬು ಭಾವ.

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ತೆಕ್ಕುಂಜದ ಅಣ್ಣಂಗೆ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°
  ಚೆನ್ನೈ ಭಾವ

  ಶಾಂತಸಾಗರಲ್ಲಿ ಬೊಳುಂಬು ಭಾವನ ಅಮೂಲ್ಯ ರತ್ನಂಗಳೇ ತುಂಬಿಗೊಂಡಿದ್ದು ಹೇಳಿ ನಮ್ಮ ಒಪ್ಪ.

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಚೆನ್ನೈ ಭಾವಂಗೆ ಧನ್ಯವಾದಂಗೊ.

  [Reply]

  VN:F [1.9.22_1171]
  Rating: 0 (from 0 votes)
 3. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ವೀಚಿ, ತುಹಿನ, ಬಾನಿ ಹೀಂಗಿಪ್ಪಶಬ್ದಂಗೊ ಕೇಳದ್ದೆ ಸುಮಾರು ಸಮಯ ಆತು.
  [ಗಿಳಿಬಾಗಿಲ ದಳಿ ರಪ್ಪನೆ ಮುಚ್ಚಿ
  ಗಟ್ಟಿಗೆ ಬಾಗಿಲ ಜಡುದೂ|
  ಸಂಕಲೆ ಹಾಕಿಯೆ ಬೀಗವ ಹೊಡದೂ
  ಮತ್ತೂ ಪವನನ ನಿರೀಕ್ಷೆಯೋ ?||]
  ಕೇಳಲೆ, ತಿಳಿವಲೆ, ವಿಮರ್ಶೆ ಮಾಡಿ ಸತಾಸತ್ಯತೆ ತಿಳಿವಲೆ ಮನಸ್ಸು ಇಲ್ಲದ್ದವರ ಸ್ಥಿತಿ ಕೂಡಾ ಹೀಂಗೇ ಅಲ್ಲದಾ?

  [Reply]

  ಬೊಳುಂಬು ಕೃಷ್ಣಭಾವ°

  ಬೊಳುಂಬು ಕೃಷ್ಣಭಾವ° Reply:

  ಶರ್ಮಪ್ಪಚ್ಚಿಗೆ ಧನ್ಯವಾದಂಗೊ.
  ಖಂಡಿತ, ನಿಂಗೊ ಹೇಳಿದ್ದು ನಿಜ. ಇದರ ಬರವಗ ಎನ್ನ ಮನಸ್ಸಿಲಿ ಇದ್ದದುದೇ ಅದರ ಹೋಲುವ ವಿಚಾರಂಗಳೇ.

  [ಗಿಳಿಬಾಗಿಲ ದಳಿ ರಪ್ಪನೆ ಮುಚ್ಚಿ
  ಗಟ್ಟಿಗೆ ಬಾಗಿಲ ಜಡುದೂ|
  ಸಂಕಲೆ ಹಾಕಿಯೆ ಬೀಗವ ಹೊಡದೂ
  ಮತ್ತೂ ಪವನನ ನಿರೀಕ್ಷೆಯೋ ?||]

  ಹಾಂಗುದೇ ಆವುತ್ತು, ಅದಲ್ಲದೆ ಕೆಳ ಇಪ್ಪ ಹಾಂಗೂ ಆವುತ್ತು.

  [ಗಿಳಿಬಾಗಿಲ ದಳಿಯ ಮುಚ್ಚಿ
  ಸಂಕೊಲೆಯ ಜಡುದು ಬೀಗವ ಹೊಡದು ಮೇಲಂಗೆ…
  ಮತ್ತೂ ಪವನನ ನಿರೀಕ್ಷೆಯೋ ?||]

  ~ ಈಗ ಇಪ್ಪದರಲ್ಲಿ ಹಾಡುತ್ತರೆ ಎಲ್ಲಾ ಚರಣಂಗಳನ್ನೂ ಒಂದೇ ರಾಗಲ್ಲಿ ಹಾಡ್ಲೆ ಎಡಿಗು. ಆದರೆ ಸುರುವಿಂಗೆ ಆನು ಬರದ್ದದು ಎರಡನೆಯದರ. ಅದೊಂದು ಚರಣ ಮಾಂತ್ರ ಬೇರೆ ರಾಗಲ್ಲಿ ಇರೆಕ್ಕು ಹೇಳ್ತ ಕಾರಣಕ್ಕೆ ಉದ್ದೇಶಪೂರ್ವಕವಾಗಿಯೇ ಹಾಂಗೆ ಬರದ್ದದು.
  ಎನ್ನ ಮನಸ್ಸಿಲಿ ಈ ಪದ್ಯಕ್ಕಾಗಿ ಒಂದು ರಾಗದ ಕಲ್ಪನೆ ಇದ್ದು. ಆದರೆ ಬೇರೆ ರೀತಿಲಿ ಸಂಯೋಜನೆ ಮಾಡ್ತವಕ್ಕುದೇ ಸ್ವಾಗತ. ಹೇಂಗೆ ಹಾಡ್ಲಕ್ಕು ಹೇಳ್ತ ಸ್ವತಂತ್ರ ಕಲ್ಪನೆಗೊ ಆರಿಂಗಾರೂ ಇದ್ದರೆ ಎನಗೆ ಒಂದು ವೈಯಕ್ತಿಕ ಸಂದೇಶ ಕಳುಸಲಕ್ಕು.

  [Reply]

  VN:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  Gopalakrishna BHAT S.K.

  ಉತ್ತಮ ಕವನ.

  [Reply]

  VA:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  {ಶಾಂತಸಾಗರ ವೀಚಿಗಳಿಂದ
  ಆವಿಯಾದ್ದದು ಪವನ
  ಮಾತಿಲ್ಲದ ಮನಮಿಡಿತಗಳಿಂದ
  ಮೂಡಿ ಬಂದದು ಕವನ}
  ಸು೦ದರ ಸಾಲುಗೊ,ಅರ್ಥಪೂರ್ಣ.ಚಿ೦ತನೆಗೆ ವಿಷಯ೦ಗೊ ತು೦ಬಿದ ಗ೦ಭೀರ ಕವನ,ಅಭಿನ೦ದನೆ ಬೊಳು೦ಬು ಭಾವ೦ಗೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಡ್ಕತ್ತಿಮಾರುಮಾವ°ಸುವರ್ಣಿನೀ ಕೊಣಲೆಅಕ್ಷರ°ವಿಜಯತ್ತೆಅನುಶ್ರೀ ಬಂಡಾಡಿಮಾಲಕ್ಕ°ಚೆನ್ನಬೆಟ್ಟಣ್ಣಉಡುಪುಮೂಲೆ ಅಪ್ಪಚ್ಚಿಕೇಜಿಮಾವ°ವಿದ್ವಾನಣ್ಣಮಂಗ್ಳೂರ ಮಾಣಿಡಾಗುಟ್ರಕ್ಕ°ಮಾಷ್ಟ್ರುಮಾವ°ಅಜ್ಜಕಾನ ಭಾವಸುಭಗದೇವಸ್ಯ ಮಾಣಿಕೆದೂರು ಡಾಕ್ಟ್ರುಬಾವ°ಶುದ್ದಿಕ್ಕಾರ°ಶಾಂತತ್ತೆವೇಣಿಯಕ್ಕ°ಪುಟ್ಟಬಾವ°ನೆಗೆಗಾರ°ಶಾ...ರೀvreddhiಒಪ್ಪಕ್ಕಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ