ಶುಬತ್ತೆ ಮಗ ‘ಮೇಗಿ’ ಮಾಡಿದ ಶುದ್ದಿ – ಭಾಮಿನಿಲಿ

March 22, 2011 ರ 7:30 amಗೆ ನಮ್ಮ ಬರದ್ದು, ಇದುವರೆಗೆ 30 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ರಂಗಮಾವನ ಮನೆಗೆ ಹೋಪಲೆ
ಬೆಂಗಳೂರಿನ ಆ ಶುಬತ್ತೆ ತು –
– ರಂಗ ವೇಗದ ಕಾರಿನೇರಿತು ಗೆಂಡನೊಟ್ಟಿoಗೆ
ಚೆಂಗಯಿಯ ಬರ್ತುಡೆಯ ಪಾರ್ಟಿಗೆ
ಬೆಂಗಳೂರಿಲೆ ಕೂದ ಪುತ್ರಗೆ
ತಂಗಳಶನವು ಕೊದಿಲು ಇದ್ದು ಫ್ರಿಜ್ಜಿನೊಳದಿಕ್ಕೆ
~
ಗೌರಿ ಉಂಬೆಯ ಹಾಲು ತಪ್ಪಿತು
ಮೂರಿ ತಪ್ಪಿತು ಗಂಗೆಯಂಬಿಯ
ಊರ ಜನಗಳ ಹರಟೆ ತಪ್ಪಿತು ಮಾಣಿಗಾತು ಕೊಶಿ
ಆರು ಇಲ್ಲೆನೆ ಏಳುಸಲೆ ಬೆಶಿ –
– ಲೇರಿದರು ಸರಿ ಒರಗುಲಕ್ಕದ
ಏರಿ ಬೈಕಿನ ತಿರುಗುಲಕ್ಕದ ಗೆಳೆಯರೊಟ್ಟಿoಗೆ
~
ಮೂರು ದಿನದೊಳ ಖಾಲಿಯಾತಡ
ಸಾರು ಪಲ್ಯ ಫ್ರಿಜ್ಜಿಲಿಟ್ಟಿಹ
‘ನೀರೆ ಗತಿ ಬಿಸ್ಲೆರಿಯ ಕೇನಿನ’ ಅಡುಗೆ ಮಾಡದ್ರೆ
ಡೈರಿ ಹಾಲಿನ ಪೇಕೆಟಿನ ತಂ –
– ದಿರಿಸಿ ‘ಮೇಗಿ’ಯ ಭರದಿ ಮಾಡುವ
ಕೋರುತಲಿ ಫೋರ್ಕಿಲ್ಲಿ ಭುಂಜಿಪ ಆಸೆಯಾತವಗೆ
~
ಬೊಬ್ಬೆ ಹಾಕುತಲಿತ್ತು ಟೀವಿಯು
ಅಬ್ಬರದಿ ಮೈಕೆಲನ ಪದ್ಯವ
ದಬ್ಬಣದಿ ಕೆಮಿಗೊಕ್ಕೆ ಕುತ್ತಿದ ತೆರದಿ ಗೌಜಿಯಲಿ
ಗಬ್ಬಲಡ್ಕದ ಚುಬ್ಬಅಣ್ಣನೊ
ಸುಬ್ಬಲಕ್ಷ್ಮಿಯ ಪದ್ಯ ಕೇಳುಗು
ಸಬ್ಬಲಿಲಿ ಗೆಡು ನೆಡಲೆ ಅಡಕೆಯ ಗುಂಡಿ ತೋಡುವಗ
~
ತಂದ ಹಾಲಿನ ಬೆಶಿಗೆ ಮಡುಗಿ ಮು –
– ದಂದ ನೂಡುಲು ಮಾಡಲೋಸುಗ
ಚೆಂದದಲಿ ‘ಮೇಗಿ’ಯನು ಬೇವಲೆ ಗೇಸಿಲಿರಿಸಿದನು
ಇಂದಿರಕ್ಕನ ಮಗ ನಿಶಾಂತನೊ
ಬೆಂದ ಕುಚ್ಚಿಲು ಗಂಜಿ ಉಣ್ಣುಗು
ಒಂದೆರಡು ದಿನ ಅಡುಗೆ ಮಾಡಲೆ ಅಮ್ಮ ಇಲ್ಲದ್ರೆ
~
ಹಾಲು ನೂಡುಲು ಒಲೆಲಿ ಮಡುಗಿಕಿ
ಹೋಲಿನೊಳದಿಕೆ ಟೀವಿ ನೋಡುತ
ಓಲಗದ ದೇವೇಂದ್ರನಂದದಿ ಸೋಫದಲಿ ಕೂದ°
ತಳದಿ ಹೊತ್ತಿದ ‘ಮೇಗಿ’ ವಾಸನೆ
ತಿಳಿದ ಮಾಣಿಯು ಹೋಗಿ ನೋಡಿರೆ
ನಳನ ಕಿಚನಾಗಿತ್ತು ರುಚಿರ ಕ್ಷೀರವಾರಿಧಿಯು
~
ಕೇoಡುಲಿನ ನಂದುಸುವ ಕಾರ್ಯಕೆ
ತುಂಡುಸುಸಲೇ ಕರಿಯ ಕೇಕಿನ
ಮೊಂಡು ಮಾಣಿಯು ರಂಗ ಮಾವನ ಮನೆಗೆ ಹೋಗದ್ದು
ಭಂಡ ಧೈರ್ಯದಿ ಮಾಡಿದಡುಗೆ ಚ –
– ರಂಡಿಗಿಡ್ಕಿದ ವರ ಪ್ರಚಂಡನು
ಸೇoಡುವಿಚ್ಚಿನ ತಂದು ತುಂಡುಸಿ ತಿಂದ ಕೋದಂಡ
ಶುಬತ್ತೆ ಮಗ 'ಮೇಗಿ' ಮಾಡಿದ ಶುದ್ದಿ - ಭಾಮಿನಿಲಿ , 5.0 out of 10 based on 7 ratings
ಶುದ್ದಿಶಬ್ದಂಗೊ (tags): , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 30 ಒಪ್ಪಂಗೊ

 1. ತು೦ಬಾ ….. ತು೦ಬಾ………..ಲಾಯಿಕಾಯಿದು..

  [Reply]

  VA:F [1.9.22_1171]
  Rating: 0 (from 0 votes)
 2. ಮೋಹನಣ್ಣ
  ಮೋಹನಣ್ಣ

  ನಿಜವಾಗಿಯೂ ಸುರುವಿನ ಆಟಲ್ಲಿ ಸೆ೦ಚುರಿ ಬಾರ್ಸಿದ್ದೆ.ರಘು ಭಾವನ ಭಾಮಿನಿಯ ಒಲುಸಲೆ ಪ್ರಯತ್ನ೦ಗೊ ಇನ್ನೂ ಬರ್ಜರೀ೦ದ ಸಾಗಲಿ.ಎ೦ಗೊ ಕಲ್ತು ಮರದ ಹಲವು ಷಟ್ಪದಿಗಳೋ ಅಶ್ಟಪದಿಗಳೊ ಇನ್ನೆ೦ತೆಲ್ಲವೋ ಎಲ್ಲವೂ ಬರಳಿ ಬಯಿಲಿಲ್ಲಿ.ಒಪ್ಪ೦ಗಳೊಟ್ಟಿ೦ಗೆ

  [Reply]

  VA:F [1.9.22_1171]
  Rating: 0 (from 0 votes)
 3. ಮುಣ್ಚಿಕ್ಕಾನ ಪ್ರಮೋದ
  ಮುಣ್ಚಿಕಾನ ಪ್ರಮೊದ

  ಮೇಗಿ ಬಾಮಿನಿಲಿ ಇನ್ನೊ ಮುಂದುವರಿಯಲಿ……..

  [Reply]

  VA:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  Gopalakrishna BHAT S.K.

  ಉತ್ತಮ ಕವಿತೆ.ರಘು ಅಣ್ಣನೂ ಈ ಭಾವಯ್ಯನೂ ಭಾಮಿನಿ ಬರೆತ್ತಾ ಇರಲಿ;ಸ್ಪರ್ಧೆ ಆರೊಗ್ಯಕರವಾಗಿ ಇದ್ದರೆ ಚೆಂದ.

  [Reply]

  VA:F [1.9.22_1171]
  Rating: 0 (from 0 votes)
 5. ಶ್ರೀಅಕ್ಕ°

  ಕುಂಟಿಕಾನ ಭಾವ°, ಒಳ್ಳೆ ಭಾಮಿನಿಲಿ ಬೈಲಿಂಗೆ ರಂಗಪ್ರವೇಶ ಆಯಿದು. ಸ್ವಾಗತ ಭಾವಂಗೆ ಬೈಲಿಂಗೆ!! :-)

  ಒಪ್ಪಣ್ಣನ ಶುದ್ದಿಗಳ ಎಷ್ಟು ಆಳವಾಗಿ ಓದಿದ್ದಿ ಹೇಳುದು ಈ ಭಾಮಿನಿಲಿ ಸರಿಯಾಗಿ ಗೊಂತಾವುತ್ತು. ಒಂದು ಎರಡು ದಿನ ಬೈಲಿನ ಸಂಚಾರಲ್ಲಿ ಇದರ ಬರದ್ದಲ್ಲ ಹೇಳುದು ಸ್ಪಷ್ಟ!! ಬೈಲಿನ ಪಾತ್ರಂಗ, ಆಶಯ ಎಲ್ಲವನ್ನೂ ಅರ್ತುಗೊಂಡು ಬರದ ಭಾಮಿನಿ!! ತುಂಬಾ ಚೆಂದ ಆಯಿದು.

  ಅಬ್ಬೆ ಮನೆಲಿಲ್ಲದ್ದಿಪ್ಪಗ ಮಕ್ಕೋ ಹೇಂಗಿರ್ತವು ಹೇಳಿ ಬರದ್ದದು ಲಾಯ್ಕಾಯಿದು. ಇಂದಿರಕ್ಕನ ಮಗ° ನಿಶಾಂತನ ಹಾಂಗೆ ಬೆಶಿ ಬೆಶಿ ಹೆಜ್ಜೆ ಮಡಿಕ್ಕೊಂಡು ಉಂಬಲೆ ಎಡಿಗಾವುತ್ತಿತ್ತರೆ ಹೊಟ್ಟೆಯೂ ತಂಪಾವುತ್ತಿತ್ತು ಅಲ್ಲದ್ದೆ, ಅಡಿಗೆಕೋಣೆ ಚಾಂದ್ರಾಣ ಅಪ್ಪದುದೇ, ಪಾತ್ರ ಹೊತ್ತುದುದೇ ತಪ್ಪುತಿತ್ತು ಅಲ್ಲದಾ? ಸುಲಾಬ ಮಾಡ್ಲೆ ಹೋಗಿ ಕೆಲಸ ಹೆಚ್ಚು ಮಾಡಿಗೊಂಡ° ಮಾಣಿ!!

  ಬೈಲಿಲಿ ಭಾಮಿನಿಯ ಅಲೆಗ ಇನ್ನುದೇ ಬರಲಿ..

  [Reply]

  ಕುಂಟಿಕಾನ ಭಾವ

  ಕುಂಟಿಕಾನ ಭಾವ Reply:

  ಶ್ರೀ ಅಕ್ಕ,
  ಧನ್ಯವಾದಂಗೋ..ಬೈಲಿಲ್ಲಿ ಧಾರಾಳ ಮೇದೊಂಡಿತ್ತಿದ್ದೆ … ಈಗ ಗೆಡು ನೆಡಲೆ ಸುರು ಮಾಡಿದ್ದು..:)
  ಚಾಂದ್ರಾಣ ಆದ್ದರ ಮನಾರ ಮಾಡಿದ್ದು ಶುಬತ್ತೆಯೇ ಅಡ.. ಎರಡು ದಿನ ಕಳುದು ಎತ್ತಿದ ಮತ್ತೆ.. ಮೊನ್ನೆ ಫೋನಿಲ್ಲಿ ಹೇಳ್ಯೋoಡು ನೆಗೆ ಮಾಡಿತ್ತು .

  [Reply]

  VN:F [1.9.22_1171]
  Rating: +4 (from 4 votes)
 6. ಕುಂಟಿಕಾನ ಭಾವ
  ಕುಂಟಿಕಾನ ಭಾವ

  ನಿಂಗ ಎಲ್ಲೋರ ಪ್ರೋತ್ಸಾಹಕ್ಕೆ ಅನಂತ ಧನ್ಯವಾದಂಗೊ…
  ಬೈಲಿಲ್ಲಿ ಕೃಷಿ ಮಾಡಲೆ ಖಂಡಿತವಾಗಿಯೂ ಪ್ರಯತ್ನ ಮಾಡ್ತಾ ಇರ್ತೆ..:)

  [Reply]

  VN:F [1.9.22_1171]
  Rating: +3 (from 3 votes)
 7. ಬೊಳುಂಬು ಮಾವ°
  ಬೊಳುಂಬು ಗೋಪಾಲ ಮಾವ

  ಅಮ್ಮ ಊರಿಂಗೆ ಹೋಗಿ ಅಪ್ಪಗ ಮಾಣಿಯ ಕಾರ್ಬಾರಿನ ವರ್ಣನೆ ಭಾಮಿನಿಲಿ ಭರ್ಜರಿ ಆಯಿದು. ಸೋಫಾಲ್ಲಿ ದೇವೆಂದ್ರನ ಹಾಂಗೆ ಮಾಣಿಯ ಒಡ್ಡೋಲಗವ ಕಲ್ಪನೆ ಮಾಡಿ ನೆಗೆ ಬಂತು. ಯಬ್ಬೋ, ಮೂರು ದಿನಕ್ಕೆ ಬೇಕಾದಷ್ಟು ಪಲ್ಯ ಸಂಬಾರು ಮಾಡಿ ಪ್ರೀತಿಲಿ ಮಗಂಗೆ ಫ್ರಿಜ್ಜಿಲ್ಲಿ ಮಡಗಿದ ಶುಭತ್ತೆಯ, ಪುತ್ರ ಪ್ರೇಮ ಮೆಚ್ಚೆಕಾದ್ದೆ !! ಪ್ರಾಸ ಜೋಡಣೆ, ಕಲ್ಪನೆ, ವ್ಯಂಗ್ಯ ಎಲ್ಲವೂ ಲಾಯಕಾಯಿದು ಕುಂಟಿಕಾನ ಭಾವಯ್ಯಾ. ಬರೆತ್ತಾ ಇರು, ಓದಿ ಒಪ್ಪ ಕೊಡ್ತ ಕೊಶಿ ಎಂಗಳದ್ದು.

  [Reply]

  VA:F [1.9.22_1171]
  Rating: +1 (from 1 vote)
 8. ದೀಪಿಕಾ
  deepika

  ಬಾರೀ ಲಾಯಿಕ್ಕಾಯಿದು :-)

  [Reply]

  VA:F [1.9.22_1171]
  Rating: 0 (from 0 votes)
 9. ಕಳಾಯಿ ಗೀತತ್ತೆ
  ಕಲಾಯಿ ಗೀತತ್ತೆ

  ಲಾಯ್ಕ ಆಯಿದು ಭಾವ ..ಬರದ್ದು …

  [Reply]

  VA:F [1.9.22_1171]
  Rating: 0 (from 0 votes)
 10. ಚೆನ್ನೈ ಬಾವ°
  ಚೆನ್ನೈ ಭಾವ

  ಅಂಬಗ ಈ ಬೆಂಗಲೂರ್ಲಿ ಇರ್ತವು ಪ್ರಿಜ್ಜಿಂದ ತಣ್ಕಟೆ ತಿಂಗಷ್ಟೆ ಅಂದರೂ ಬ್ರೆಡ್ ಜಾಮು ಪಿಜ್ಜಾ ಹತ್ರೆ ಹೋಗವಪ್ಪೋ!!

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೇವಸ್ಯ ಮಾಣಿಶಾ...ರೀಪ್ರಕಾಶಪ್ಪಚ್ಚಿಕೆದೂರು ಡಾಕ್ಟ್ರುಬಾವ°ಚೆನ್ನಬೆಟ್ಟಣ್ಣಶ್ಯಾಮಣ್ಣರಾಜಣ್ಣಪುತ್ತೂರುಬಾವಮಂಗ್ಳೂರ ಮಾಣಿಒಪ್ಪಕ್ಕಶುದ್ದಿಕ್ಕಾರ°ಮುಳಿಯ ಭಾವವಿನಯ ಶಂಕರ, ಚೆಕ್ಕೆಮನೆಶೇಡಿಗುಮ್ಮೆ ಪುಳ್ಳಿಶರ್ಮಪ್ಪಚ್ಚಿಕಾವಿನಮೂಲೆ ಮಾಣಿದೊಡ್ಡಮಾವ°ಅಕ್ಷರ°ಅನುಶ್ರೀ ಬಂಡಾಡಿಜಯಗೌರಿ ಅಕ್ಕ°ನೆಗೆಗಾರ°ತೆಕ್ಕುಂಜ ಕುಮಾರ ಮಾವ°ಪುಟ್ಟಬಾವ°ಜಯಶ್ರೀ ನೀರಮೂಲೆಅಕ್ಷರದಣ್ಣಪುಣಚ ಡಾಕ್ಟ್ರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ