Oppanna.com

ತೆಳ್ಳವು ದೋಸೆ

ಬರದೋರು :   ಶರ್ಮಪ್ಪಚ್ಚಿ    on   07/05/2017    9 ಒಪ್ಪಂಗೊ

ಅನ್ನಪೂರ್ಣ ಬೆಜಪ್ಪೆ ಇವು ತೆಳ್ಳವು ದೋಸೆ ಬಗ್ಗೆ ಬರದ ಕವನ ಇಲ್ಲಿದ್ದು. ಓದಿ ನಿಂಗಳ ಒಪ್ಪ ಕೊಟ್ಟು ಪ್ರೋತ್ಸಾಹಿಸಿ

  • ಶರ್ಮಪ್ಪಚ್ಚಿ
ತೆಳ್ಳವು ದೋಸೆಅನ್ನಪೂರ್ಣ ಚಂದ್ರಶೇಖರ

ತೆಳ್ಳವು ದೋಸೆ ಎಂಗೊಗಿಷ್ಟ
ಬೆಲ್ಲ ಕಾಯಿಸುಳಿ ಅದಕೊಪ್ಪ.|ಆಹಾ|

ರವೆಯಾದರು ಅಕ್ಕು
ಚಟ್ಟಣಿ ಮೊಸರಾದರೂ ಅಕ್ಕು
ಕಾಯ್ಹಾಲಾದರು ಅಡ್ಡಿಲ್ಲೆ
ತಿಂಬಲೆ ರುಚಿಯಪ್ಪದು
ಎಂದಿಂಗೂ ತೆಳ್ಳವು ಮಾಂತ್ರ.||ತೆಳ್ಳವು||

ಉದ್ದಿನ ದೋಸೆಯೋ
ಮೆಂತೆ ದೋಸೆಯೋ
ಚಪಾತಿ ಇಡ್ಲಿಯೊ ಎಂತದೆ
ತಿಂಡಿ ಇದ್ದರು ಬೇಕು
ತೆಳ್ಳವು ದೋಸೆ ಒಟ್ಟಿಂಗೆ.||ತೆಳ್ಳವು||

ತೆಳ್ಳವು ತಿಂದರೆ ಹೊಟ್ಟೆಗೆ ಎಂದೂ
ಆಗದ್ದೆ ಬಾರ ನೋಡಣ್ಣ|2|
ಅದು ಎಂಗೊಗೆ ಮನೆಯ
ದೇವರ ಹಾಂಗೆ.
ಅದುವೆ ಎಂಗೊಗೆ ಪರಮಾನ್ನ.||ತೆಳ್ಳವು||

ಅಕ್ಕಿಯ ನೊಂಪಿಂಗೆ ಕಡೆಯೆಕ್ಕು
ಹಿಟ್ಟಿಂಗೆ ನೀರು ಸೇರ್ಸೆಕ್ಕು
ಕಾವಲಿಗೆ ಒಳ್ಳೆತ ಕಾಯೆಕ್ಕು
ತೆಳ್ಳಂಗೆ ದೋಸೆಯ ಎರೆಯೆಕ್ಕು
ಚುಯಿಂಚುಯಿಂ ಶಬ್ದ ಅಂಬಗ ಬಕ್ಕು||ತೆಳ್ಳವು||

ಬೇವಗ ಒಳ್ಳೆ ಪರಿಮಳ ಬಕ್ಕು.
ಗರಿ ಗರಿ ದೋಸೆ ಆಯೆಕ್ಕು
ತುಪ್ಪದ ಪಸೆಯ ಮಾಡೆಕ್ಕು
ಕವುಂಚಿ ಮೊಗಚ್ಚಿ ಹಾಕೆಕ್ಕು
ಬೆಶಿಬೆಶಿ ದೋಸೆ ತಿನ್ನೆಕ್ಕು
ಆಹಾ ತೆಳ್ಳವು ದೋಸೆಯ ಗಮ್ಮತ್ತು.|2| ||ತೆಳ್ಳವು||

~~~***~~~

  • ಅನ್ನಪೂರ್ಣ

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

9 thoughts on “ತೆಳ್ಳವು ದೋಸೆ

  1. ತೆಳ್ಳವು, ಬೆಲ್ಲ ಕಾಯಿಸೂಳಿ..ಆಹಾ..ಕವನವೇ ಲಾಯ್ಕ ಆಯಿದು.ಹಾಡಿದ್ದೂದೆ ಕೇಳಿಯಪ್ಪಗ ಈಗಲೇ ತೆಳ್ಳವು ತಿನ್ನೆಕೂಳಿ ಆವ್ತನ್ನೇ..ಆನುದೆ ಕವುಂಚಿ ಮೊಗಚ್ಚಿ ಹಾಕುಲಿಲ್ಲೆ..

  2. ತೆಳ್ಳವು ಪದ್ಯ ತೆಳ್ಳವು ದೋಸೆ ಹಾಂಗೇ ಸೂಪರ್ ಆಯಿದು.

  3. ತೆಳ್ಳವು ಚಟ್ಟಣಿ ರೆಡಿಯಾತೋ ಹೇದಪ್ಪಗ ಚಿಟ್ಟಾಣಿ ಬಂದವೋ ಕೇಟ ಇಟ್ಟೇಣಿ ಮೆಟ್ಳಿಂದ ಆಚಕರೆ ಪುಟ್ಟ

    ಧ್ವನಿಸಹಿತ ಪದ್ಯಕ್ಕೊಂದೊಪ್ಪ

  4. ಒಳ್ಳೆ ಕವನ ಮೂಡಿ ಬಯಿಂದು ತೆಳ್ಳವಿನ ಬಗ್ಗೆ, ಅನ್ನಪೂರ್ಣ!. ಆದರೆ ಎನ ಗೊಂತಿದ್ದ ಹಾಂಗೆ ತೆಳ್ಳವಿನ ಕವುಂಚಿ ಹಾಕಲಿಲ್ಲೆ. ದೋಸಗಳಲ್ಲಿ ಕವುಂಚಿ ಹಾಕದ್ದೆ ಮಾಡುವ ದೋಸೆಯೇ ತೆಳ್ಳವು.ಅದು ನಿಜಕ್ಕೂ ಬೊಡಿಯದ್ದೆ ತಿಂಬಾಂಗಿದ್ದ ದೋಸೆಯೇ ಸೈ!.

    1. ಧನ್ಯವಾದ ವಿಜಯಕ್ಕ. ಆನು ತೆಳ್ಳವಾದರೂ ರಜ ತುಪ್ಪ ಪಸೆ ಮಾಡಿ ರಜ ಹೊತ್ತು ಕವುಂಚಿ ಹಾಕಿಕ್ಕಿ ತೆಗವದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×