ಹುಂಡು ಪದ್ಯಂಗೊ.

February 28, 2011 ರ 10:00 amಗೆ ನಮ್ಮ ಬರದ್ದು, ಇದುವರೆಗೆ 19 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಬೈಲಿಂಗೆ ಬಂದರೆ ಏನಾರು ಬರೆಕು ಹೇಳಿ ಕಾಣುತ್ತು. ಬರವದೆಂತರ ಗೊಂತಾವ್ತಿಲ್ಲೆ.
ಅಷ್ಟಕ್ಕೆ ಬಂಡವಾಳವೂ ನಮ್ಮತ್ರೆ ಇಲ್ಲೇ. ಕಲ್ತದು ಕಾಮರ್ಸ್ (“commerce – jack of  all traders , master of none”).
ಸಾಹಿತ್ಯದ ಗಂಧ ಗಾಳಿ ಇಲ್ಲದ್ದೆ ಬರದರೆ ಶರ್ಮಪ್ಪಚ್ಚಿ ಬಡಿಗೆ ತೆಗಗು.
ನಿಂಗಳೂ ಇವಂಗೆ ಎಂತ ಬೆಗುಡೋ ಹೇಳಿ ಕೂದಲ್ಲಿಂದಲೇ ಬೈದರೋ ಹೇದು ಹೆದರಿಯೋಳ್ತು. :-)
ಎಂತಕೂ ನಿಂಗಳೂ ಎಳಕ್ಕ ಬಂದು ಇಲ್ಲಿ ಬರವಲೆ ಸುರುಮಾಡಿ ಅನೇಕ ಬಂಡಾರ ಇಲ್ಲಿ ಎದ್ದು ಬರಲಿ ಹೇಳಿ ಈ ಎನ್ನ ಸಣ್ಣ ಕೊಡುಗೆ ಇಲ್ಲಿ.

ತುಂಡು ಪದ್ಯಂಗೊ:

ಕೊಡೆ

ಕೊಡೆ ಕೊಡೆ ಕೊಡೆ
ಇದು ಎನ್ನ ಕೊಡೆ
ಆರಿಂಗೂ ಇದರ ಕೊಡೆ
ಮಳೆ ಬಂದರೂ ಕೊಡೆ
ಬಿಸಿಲಾದರೂ ಕೊಡೆ
ಬೇಕನಗೆ ಇದು ಎನ್ನ ಕೊಡೆ.
ಕೊಡೆ.. ಏ೦…

ದನ

ದನ ದನ ದನ
ಇದು ‘ನಮ್ಮ’ ದನ
ಇದು ನಮ್ಮ ಭಾಗ್ಯ ದನ
ಇದು ನಮ್ಮ ಪುಣ್ಯ ದನ
ಬೇಕೇ ಬೇಕು ‘ನವಗೆ’ ದನ.

ಮರ

ಮರ ಮರ ಮರ
ಇದು ತೆಂಗಿನ ಮರ
ಅದು ಮಾವಿನ ಮರ
ಆಚದು ಹಲಸಿನ ಮರ
ಅತ್ತಿ ಮರ ಇತ್ತಿ ಮರ
ಗೋಳಿ ಮರ ಅಶ್ವತ್ಥ ಮರ
ಮರ ಇಲ್ಲದ್ರೆ ನವಗೆ ‘ಬರ’.

ಕತ್ತಿ

ಕತ್ತಿ ಕತ್ತಿ ಕತ್ತಿ
ಇದು ಪೀಶ ಕತ್ತಿ
ಆಚದು ಮೆಟ್ಟು ಕತ್ತಿ
ಅದು ಕಡ್ಪ ಕತ್ತಿ
ಈಚದು ಸೊಪ್ಪಿನ ಕತ್ತಿ  – ಹುಲ್ಲಿನ ಕತ್ತಿ
ಮನೆಲಿ ಇಕ್ಕು ಕೆಲವು ಸರ್ತಿ
ಹಲವು ಬಡ್ಡು ಕತ್ತಿ .

ಪದ್ಯ

ಪದ್ಯ ಪದ್ಯ ಪದ್ಯ
ಇದು ಎನ್ನ ಪದ್ಯ
ನೋಡಿದು ಅಲ್ಲ  ಗದ್ಯ
ಇದ್ರಿಂದ ಹೆಚ್ಚಿಗೆ ಎನಗೆ ಅಸಾಧ್ಯ.

*~*~*

 

ಎಂತಾ…… ! ಇದರ ಮನೇಲಿ ಮನೆಯವು ನೋಡಿದ್ದವೋ ಹೇಳಿ ಕೇಳ್ತೀರೋ?

– ಇಲ್ಲೆ. ಅದಕ್ಕೆ ಕನ್ನಡ ಓದಲೆ ಬತ್ತಿಲ್ಲೆ. ಹಿಹಿಹಿ.!  

ಹುಂಡು ಪದ್ಯಂಗೊ., 5.0 out of 10 based on 1 rating
ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 19 ಒಪ್ಪಂಗೊ

 1. ಗೋಪಾಲಣ್ಣ
  Gopalakrishna BHAT S.K.

  ಅಹಾ…!
  ಹುಂಡು ಹುಂಡು ಪದ
  ಲಾಯ್ಕ ಅತು ಇದಾ

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಕೃಷ್ಣಭಾವ°
  ಬೊಳುಂಬು ಕೃಷ್ಣಭಾವ°

  ಚೆನ್ನೈ ಭಾವಾ
  ಈ ಹುಂಡು ಪದಂಗಳ ನಾಕು ಕೆಸೆಟ್ಟು ಮಾಡಿ. ಆಗದೋ? 😀

  [Reply]

  ಚೆನ್ನೈ ಬಾವ°

  ಚೆನ್ನೈ Reply:

  ಓಹ್ ಊಊಊಉಪ್ಪ್ಪ್ಪ್ಪ್ಪ್ಸ್ಸ್ಸ್ಸ್ಸ್ಸ ನಾಕೆಯೋ. ಆರಿಂಗೆ ಎಲ್ಲಾ?

  ಅಂಬಗ ಬೇಡಿಕೆ ಭಾರೀ ಕಮ್ಮೀ. ಅಸಲಾಗನ್ನೆಪಾ.

  [Reply]

  VA:F [1.9.22_1171]
  Rating: 0 (from 0 votes)
 3. ಭಾಗ್ಯಲಕ್ಶ್ಮಿ

  ಚೆನ್ನೈ ಭಾವನ ಹುನ್ದುಗೊಕ್ಕೆ ಒಂದೊಂದು ಒಪ್ಪ
  ಯಥಾನುಶಕ್ತಿ ಸಲ್ಲುಸಿದರುದೆ ಒಪ್ಪಣ್ಣಗದು ಕಪ್ಪ .

  [Reply]

  VA:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°
  ಚೆನ್ನೈ ಭಾವ

  ಭಾಗ್ಯಕ್ಕನ ಕಪ್ಪದೊಟ್ಟಿನ್ಗೆ ಎಲ್ಲಾ ಒಪ್ಪ ಒಪ್ಪಣ್ಣನ್ಗೆ ಅರ್ಪಣೆ. ಒಪ್ಪಣ್ಣನ ಪ್ರೋತ್ಸಾಹ ಇದಕ್ಕೊಂದು ಸ್ಫೂರ್ತಿ. ಇಲ್ಲದಿದ್ದರೆ ದನಕ್ಕೆ ಕೊಡೆ ಹಿಡ್ಕ್ದೊಂಡು ಕತ್ತಿಲಿ ಮರದ ಗೆಲ್ಲು ಕಡುದು ಹಾಕಿದ್ದು ಬೋಸ’ನ ಕಣ್ಣಿಂಗೆ ಬೀಳ್ತಿತ್ತಿಲ್ಲೆ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶಾ...ರೀಸುವರ್ಣಿನೀ ಕೊಣಲೆನೀರ್ಕಜೆ ಮಹೇಶಕಾವಿನಮೂಲೆ ಮಾಣಿಶ್ರೀಅಕ್ಕ°ದೊಡ್ಡಮಾವ°ಅಡ್ಕತ್ತಿಮಾರುಮಾವ°ಪೆರ್ಲದಣ್ಣಯೇನಂಕೂಡ್ಳು ಅಣ್ಣಸರ್ಪಮಲೆ ಮಾವ°ಶೀಲಾಲಕ್ಷ್ಮೀ ಕಾಸರಗೋಡುಸಂಪಾದಕ°ಬೋಸ ಬಾವಡೈಮಂಡು ಭಾವದೀಪಿಕಾಶಾಂತತ್ತೆಚೂರಿಬೈಲು ದೀಪಕ್ಕಬೊಳುಂಬು ಮಾವ°ದೊಡ್ಮನೆ ಭಾವಶೇಡಿಗುಮ್ಮೆ ಪುಳ್ಳಿವಿದ್ವಾನಣ್ಣಜಯಗೌರಿ ಅಕ್ಕ°ವಿನಯ ಶಂಕರ, ಚೆಕ್ಕೆಮನೆಸುಭಗಪುತ್ತೂರಿನ ಪುಟ್ಟಕ್ಕಚುಬ್ಬಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ