“ಅಕ್ಕಿಲಿ ಆಶೆ,ಅಕ್ಕನತ್ರೆ ಪ್ರೀತಿ”-{ಹವ್ಯಕ ನುಡಿಗಟ್ಟು-52}

March 26, 2016 ರ 7:00 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಅಕ್ಕಿಲಿ ಆಶೆ ಅಕ್ಕನತ್ರೆ ಪ್ರೀತಿ”-{ಹವ್ಯಕ ನುಡಿಗಟ್ಟು-52}

ಸತ್ಯಣ್ಣ ಮಗಳ ಮದುವಗೆ ನಿಜ ಮಾಡಿದ.ಮದುವಗೆ ತಯಾರಿ ಆಗೆಡದೊ?.ಒಂದೊಂದೇ ಕೆಲಸ ಮಾಡ್ತಾ ಹೋದಂ.ಅಕ್ಕ-ತಂಗೆಕ್ಕೊಗೆ,ಅತ್ತಿಗೆ-ನಾದಿನಿಯಕ್ಕೊಗೆ,ಮನೆವಕ್ಕೆಲ್ಲ ಜವುಳಿ ತೆಗೆಕಿದ.ಅಕ್ಕ-ತಂಗೆಕ್ಕಳ ಒಟ್ಟಿಂಗೆ  ಅಬ್ಬೆಯನ್ನೂ  ಜವುಳಿ ಮಳಿಗ್ಗೆ ಕರಕ್ಕೊಂಡೋದ.ಅಕ್ಕನತ್ರೆ

“ನಿಂಗೊಗೆಲ್ಲ ಬೇಕಾದಾಂಗಿದ್ದ ಸೀರೆ ತೆಗೆಯಿ.ಆದರೆ ಒಬ್ಬೊಬ್ಬನ ಲೆಕ್ಕಲ್ಲಿ ಸಾವಿರ ರೂಪಾಯಿಂದ ಮೇಗೆ ಹೋಪಲಾಗ ಹೇಳಿದಂ.ಒಂದಕ್ಕಂ ಸೀರೆ ಕೊಶಿ ಕಂಡು ಆಯ್ಕೆ ಮಾಡಿದ್ದರ ಕ್ರಯ ನೋಡೀರೆ ಒಂದೂವರೆ ಸಾವಿರ!.ಅದೇ ಜಾತಿ ಕೋಟನ್ ಸಿಲ್ಕು ಸೀರೆ ತಂಗಗೂ ಅತ್ತಿಗ್ಗೂ ಕೊಶಿ ಆದ್ದು.ಅಬ್ಬೆತ್ರೆ ಪಿಸು-ಪಿಸುನೆ “ಈ ಸೀರೆ ಆನು ತೆಗೆತ್ತೆ. ತಮ್ಮನ ಲೆಕ್ಕಲ್ಲಿ ಕೊಡ್ತಷ್ಟು ಕೊಡ್ಳಿ.ಮತ್ತೆ ಆನು ಸೇರ್ಸುವೆ”. ಹೇಳುವಗ ತಮ್ಮ ಅಕ್ಕು ಹೇಳೆಕ್ಕೊ!.ಅಂಬಗ ಅಬ್ಬೆ-

“ಅಕ್ಕ ಕೊಡುದು ಬೇಡ ಮಗನೆ, ಹೇಂಗೂ ಜವುಳಿಗೆ ಹೆರಟಾಯಿದು. ಅಕ್ಕಿಲಿ ಆಶೆ ಅಕ್ಕನತ್ರೆ ಪ್ರೀತಿ  ಹೇಳುವಾಂಗೆಂತರ”. ಅಬ್ಬೆಯ ಮಾತಿಂಗೆ ಮಗ ಹುಳಿ-ಹುಳಿ ಮೋರೆ ಮಾಡಿಂಡು ಒಪ್ಪಿದ.

ಹಿಂದಾಣ ಕಾಲಲ್ಲಿ ಕೊಟ್ಟ ಮಗಳಕ್ಕಳ ವರ್ಷಲ್ಲಿ ಒಂದೆರಡು ಸರ್ತಿ ಅವರ ಮನಗೆ ಹೋಗಿ ಕರಕ್ಕೊಂಡು ಬರೆಕು ಅಪ್ಪನ ಮನೆವು.ಈಗಾಣಾಂಗೆ ಅವೇಬಪ್ಪದೂ ಅಲ್ಲ.ಒಂದೇ ದಿನ ಇದ್ದು ಹೋಪದೂ ಅಲ್ಲ. ಬಂದರೆ ಎಂಟ್ಟತ್ತು ದಿನ ನಿಂಗಿದ. ಮಕ್ಕಳೂ ಅಬ್ಬೆ ಒಟ್ಟಿಂಗೆ ನಿಂಬೊವು ಕಡಮ್ಮೆಲಿ ಏಳೆಂಟುಜೆನ ಇಕ್ಕು.ಅಂಬಗ ಬಡತನವೂ ಹೆಚ್ಚಿಗೆ!.ಈಗಾಣಾಂಗೆ ಗವರ್ಮೆಂಟು ಕೆಲಸವೋ ಮನೆಂದ ಹೆರ ದುಡಿವ ಕೆಲಸವೋ ಇರ. ಅಣ್ಣ-ತಮ್ಮಂದ್ರಿಂಗೆ; ಅಕ್ಕ,ಅದರ ಮಕ್ಕೊ ಬರೆಕು, ನಿಲ್ಲೆಕ್ಕೂಳಿ ಇದ್ದರೂ ಅಕ್ಕಿಗೂ ಇತರ ಖರ್ಚಿಗೂ ತಾಪತ್ರಯ ಹೇಳಿ ಮನಸ್ಸಿಲ್ಲಿ ಇಕ್ಕು. ಆ ಭಾವನಗೆ ಉಂಟಾದ ನುಡಿಗಟ್ಟಿದು.  ಇದು ಅಕ್ಕ-ತಂಗೆಕ್ಕೊಗೆ ಮಾಂತ್ರ ಅಲ್ಲ, ಯಾವುದೇ ವಸ್ತುವಿನ ಆತ್ಮೀಯರಿಂಗೆ; ಕೊಡೆಕೂಳಿ ಇದ್ದರೂ ಕೈತಪ್ಪಿ ಹೋವುತ್ತನ್ನೆ! ಖರ್ಚಿ ಆವುತ್ತನ್ನೆ ಹೇಳಿ ಮನಸ್ಸಿಲ್ಲಿ ಅಪ್ಪಗ ಈ ನುಡಿಯ ಉಪಯೋಗುಸುತ್ತೊವು.

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ°

  ಈಗಳೂ ಕೆಲವು ಸರ್ತಿ ಆವುತ್ತಪ್ಪ ಹಾಂಗೆ . ವಿವರಣೆ ಪಷ್ಟಾಯ್ದದಾ

  [Reply]

  VA:F [1.9.22_1171]
  Rating: 0 (from 0 votes)
 2. K.Narasimha Bhat Yethadka

  ಅಕ್ಕಿಲಿ ಆಶೆ,ನೆಂಟ್ರ ಮೇಗೆ ಪ್ರೀತಿ ಹೇದೂ ಇದ್ದಲ್ಲದೋ?ಲಾಯಕಾಯಿದು ವಿಜಯಕ್ಕ.

  [Reply]

  VA:F [1.9.22_1171]
  Rating: 0 (from 0 votes)
 3. Lalitalaxmi Bhat

  ಹರೇರಾಮ..ಓಹೋಯ್ ವಿಜಯಕ್ಕ…..ಆರಾಮಾ? ರಾಶಿ ದಿನಾದ ಮೇಲೆ ಒಪ್ಪಣ್ಣನ ಮಾತಾಡ್ಸುಲೆ ಬಂಜೆ. ಚೆಂದಾಜು ಬರ್ದದ್ದು. ಶಂಕರಪಂಚಮಿಗೆ ಎಲ್ಲರ್ನೂ ಕರ್ಕಂಡು ಬಾರೇ…ಈ ಸಲ ಭಾರೀ ಜೋರು ಶಂಕರಪಂಚಮಿ..( ಹೋದ್ವರ್ಷ ಮಾವಿನಹಣ್ಣು ತಂದಿದ್ಯಲ್ದಾ? ಈ ವರ್ಷನೂ….ಮಾವಿನಹಣ್ಣು ತೆಕಂಡ್ಬಾ ಹೇಳ್ತಾ ಇಲ್ಲೆ ಮತ್ತೆ!)

  [Reply]

  VA:F [1.9.22_1171]
  Rating: 0 (from 0 votes)
 4. ವಿಜಯತ್ತೆ

  ಆರಾಮ, ಹರೇರಾಮ ಲಲಿತಾ,ಎಂತ ಮಾಡ್ತೆ? ಇತ್ತೀಚೆಗೆ ನಂಗೊಎಲ್ಲಾ ಒಳ್ಳೆ ಸಂತೋಷಲ್ಲಿದ್ದಲ್ಲೋ . ಹೀಂಗೆ ಒಂದೊಂದರಿ ಬಯಲಿಂಗೆ ಬಾರೇ .

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುಟ್ಟಬಾವ°ಅನಿತಾ ನರೇಶ್, ಮಂಚಿವೇಣಿಯಕ್ಕ°ಚುಬ್ಬಣ್ಣಪವನಜಮಾವಬೋಸ ಬಾವಶೀಲಾಲಕ್ಷ್ಮೀ ಕಾಸರಗೋಡುಅನು ಉಡುಪುಮೂಲೆದೊಡ್ಡಮಾವ°ಮಾಷ್ಟ್ರುಮಾವ°ಕಾವಿನಮೂಲೆ ಮಾಣಿಚೆನ್ನೈ ಬಾವ°ತೆಕ್ಕುಂಜ ಕುಮಾರ ಮಾವ°ಡಾಮಹೇಶಣ್ಣದೊಡ್ಮನೆ ಭಾವಕೆದೂರು ಡಾಕ್ಟ್ರುಬಾವ°ವೆಂಕಟ್ ಕೋಟೂರುಸುಭಗದೇವಸ್ಯ ಮಾಣಿದೀಪಿಕಾಶೇಡಿಗುಮ್ಮೆ ಪುಳ್ಳಿಡೈಮಂಡು ಭಾವಸಂಪಾದಕ°ಪೆರ್ಲದಣ್ಣವಾಣಿ ಚಿಕ್ಕಮ್ಮಕೊಳಚ್ಚಿಪ್ಪು ಬಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ