ಅಜ್ಜನ ಸೈಕಲ್ ಸವಾರಿ

ಮೂವತ್ತೈದು ವರ್ಷ ಹಿಂದಾಣ ಇನ್ನೊಂದು ಲೇಖನ ಇಲ್ಲಿದ್ದು.  ಇದುದೆ ಎನ್ನ ಅಪ್ಪ (ವಿದ್ವಾನ್ ದಿವಂಗತ ಬೊಳುಂಬು  ಕೃಷ್ಣ ಭಟ್) ಬರದ ಒಂದು ಹವ್ಯಕ ಲೇಖನ. ಆ ಕಾಲಲ್ಲಿ ಈಗಾಣ ಕಾಲದ ಹಾಂಗೆ   ಟಿವಿಯ ಪೊದ್ರ ಇತ್ತಿಲ್ಲೆ.  ಆಧುನಿಕ ಕಾಲದ, ಕಾರು ಬೈಕು,  ವಿವಿಧ ತರದ ವೈಜ್ಞಾನಿಕ ಉಪಕರಣಂಗೊ ಕಡಮ್ಮೆ ಇದ್ದ ಕಾಲ ಅದು.    ಎಲ್ಲೋರಿಂಗು ಪುರುಸೊತ್ತು ಹೇಳ್ತದು ಇತ್ತು.  ಈಗಾಣ ಕಾಲಲ್ಲಿ ಕೆಲಸ ಏವದೂ ಇಲ್ಲದ್ರೂ, ಪುರುಸೊತ್ತು ಹೇಳ್ತದು ಆರ ಕೈಲಿಯುದೆ ಇಲ್ಲೆ. ಹಳ್ಳಿ ಮನೆಲಿ ಒಂದು ಸೈಕಲು ಹೇಳಿರು ಅಂದ್ರಾಣ ಕಾಲಲ್ಲಿ ವಿಶೇಷವೇ. ಅಂಬಗಾಣ ಕಾಲ ಹೇಂಗಿದ್ದಿಕ್ಕು ಹೇಳಿ ಮನಸ್ಸಿಲ್ಲಿ ಗ್ರೇಸಿಂಡು ಈ ಲೇಖನ ಓದಿ.  ಅಜ್ಜನ ಭಾಷೆಲಿ, ಅಜ್ಜನ ಶೈಲಿಲೇ  ಹೋವ್ತ ಈ  ಕಥೆಯ ಓದುವಗ ಒಪ್ಪಣ್ಣ ಕಳುದ ವರ್ಷ ಬರದ “ರೂಪತ್ತೆ ಕಾರು ಕಲುತ್ತ ಶುದ್ದಿ ನೆಂಪಕ್ಕು.  ಅಂದೇ ಈ ಕಥೆಯ ಬೈಲಿನವಕ್ಕೆ ಹೇಳೆಕು ಹೇಳಿ ಇದ್ದಿದ್ದೆ.  ಎಲ್ಲದಕ್ಕೂ ಕಾಲ ಕೂಡಿ ಬರೆಕಲ್ಲದೊ ?

ಎಲ್ಲಿ ಹೋದರೂದೆ ಕಟ್ಟಿದ ಮನೆ ತಪ್ಪದ್ದೆ ಒಂದು ಜಾತಿ ರೇಡಿಯೋ.     ಹಕ್ಕಿ ಎದ್ದು ನೆಲಕ್ಕೆ ಕೂರೇಕಾರೆ ಮದಲೆ ಸುರುವಾತು ಹರಟೆ ಮಾಡಲೆ. ನೆಡು ಇರುಳಾದರೂ ಮುಗಿವಲೆ ಇಲ್ಲೆ. ಮತ್ತೆ ಎಂತಾರೂದೆ ವಿಶೇಷ ಜೆಂಬಾರ ಮಿನಿ ಇದ್ದೂ ಹೇದಾದರೆ, ಮೈಕ್ರೋ, ಪೆಟ್ಟಿಪ್ಪಾಟ್ಟೋ ಇದ್ದೇ ಇದ್ದಾನೆ.

ಹಾಂಗೆ ಮಾರ್ಗಕ್ಕೆ ಇಳುದರೆ ಸಾಕು ಒಂದು ಸೈಕಲು.  ಮತ್ತೆ ದೊಡ್ಡ ಮಾರ್ಗಂಗಳಲ್ಲಿ ಹೇಂಗೂ ಇದ್ದಾನೆ !  ಮೋಂಟ್ರು, ರಾಲಿ, ಕಾರು ಹೇದೂ, ಅದಾದರೂ ಸಾರ ಇಲ್ಲೆ. ಎಲ್ಲಿಯಾದರೂ ದೂರ ಹೋಯೆಕಾರೆ ಒಂದು ಉಪಕಾರ ಇದ್ದು ಹೇಳುವೊ.  ಆದರೆ ಈ ಸೈಕಲ್ಲಿಂದ ಎಂತ ಪ್ರಯೋಜನ ಕೇಳ್ತೆ ಆನು. ಎಲ್ಲಿಯಾದರೂ ಹೋಪಲೆ ಹೆರಟರೆ ಸಾಕು. ಮಾರ್ಗ ಹೇದು ಇಲ್ಲೆ.  ಗುಡ್ಡೆ ಹೇದು ಇಲ್ಲೆ.  ಎಲ್ಲಿಯಾದರೂ ಇದ್ದೇ ಇದ್ದವು, ಈ ಸೈಕಲು ಪೋರಂಗೊ.  ಹಿಂದಂದ ಬಂದವು “ಕಿಣ್, ಕಿಣ್” ಮಾಡಿದವು.  ಎಲ್ಲಿಂದ ಬತ್ತು, ಹೇದು ಗೊಂತಾವುತ್ತೊ ? ನಾವು ಎತ್ತ ತಿರುಗಿತ್ತೋ ಅತ್ತಂದಾಯಿಂದಲೆ ಬಂದವು ಅವು ಮೈಗೆ ಹಾಕಲೆ, ಹಾಂಗೆ ಒಂದಾರಿ ಎಂಗಳ ಅಳಿಯ ರಾಮನ ಹತ್ತರೆ ಎನಗೆ ಹೇದು ಹೋತು.

“ಅಪ್ಪೋ, ರಾಮ ಈ ಬೆಳ್ಳೆಕ್ಕಾರಂಗೊ ಮಾಡಿದ್ದದು ಮತ್ತೆಲ್ಲ ಒಳ್ಳೆದಾಯಿದಾನೆ! ಆದರೆ ಈ ಕೆಟ್ಟುಂಕೆಣಿ ರೇಡಿಯೋ, ಮತ್ತೊಂದು ಹುಳು ಸೈಕಲು, ಎಂತಾಕೆ ಮಾಡಿ ಹಾಕಿದವೊ ” ಹೇದು.

ಅಷ್ಟಪ್ಪಾಗ ಅವನ ಲೆಕ್ಚರು ಸುರು ಆತು. “ಅಲ್ಲ ಮಾವ, ಬೆಳ್ಳೆಕ್ಕಾರಂಗೊ ಈ ಕಾಂಗ್ರೆಸ್ಸಿನವರ ಹಾಂಗೆ ಉಪಕಾರಕ್ಕೆ ಇಲ್ಲದ್ದ ಕೆಲಸ ಮಾಡುತ್ತವಲ್ಲ. ಅದರಿಂದ ಜೆನಂಗವಕ್ಕೆ ಒಳ್ಳೆ ಉಪಕಾರ ಇದ್ದು.  ಸೈಕಲಿಂದ ಸಮಯ ಉಳಿತಾಯ ಆವುತ್ತು. ರೇಡಿಯೋಂದ ಸಮಯ ಬೇಜಾರಿಲ್ಲದ್ದೆ ಕಳವಲೆ ಆವುತ್ತು. ಹಾಂಗಾಗಿ ಈ ಎರಡು ಸಾಧನಂಗೊ ಬಹಳ ಅಗತ್ಯ.  ದೂರ ಹೋಪಲೆ ಬಸ್ಸು ಕಾರು ಇದ್ದರೂದೆ ಅದು ನಮಗೆ ಬೇಕಪ್ಪಗ ಬೇಕಾದಲ್ಲಿ ಇದ್ದೊ ? ಸಮಯ ಕಾದು ಕೂರೆಡದೊ ? ಅಷ್ಟಪ್ಪಾಗ ಬಂದರೆ ಬಂತು, ಇಲ್ಲದ್ರೆ ಇಲ್ಲೆ. ಸೈಕಲ್ ಆದರೆ ಹಾಂಗಲ್ಲ, ನಮಗೆ ಬೇಕಪ್ಪಗ ಬಿಟ್ಟೊಂಡು ಹೋಪಲಾವುತ್ತಿಲ್ಲೆಯೊ ? ದೊಡ್ಡ ದೊಡ್ಡವಕ್ಕೆ ಕಾರು, ನಮ್ಮ ಹಾಂಗಿಪ್ಪವಕೆ ಸೈಕಲು ” ಹೇದು ರಂಗು ಮಾಡಿದ ಅಳಿಯ.

ಅಂಬಾಗ ಎನಗೆ ತೋರಿತ್ತು. ಅಪ್ಪದು ಹೇದು. ಆದರೆ ಸಮಯ ಕಳವಲೆ ರೇಡಿ (ರೇಡಿಯೋ) ಎನಗೆ ಅಗತ್ಯ ಇಲ್ಲೆ. ಎನಗೆ ಸಮಯ ಎಷ್ಟಿದ್ದರೂ ಸಾಲುತ್ತಿಲ್ಲೆ.  ಒಂದು ಮದುವೆ, ಉಪನಯನ, ಬಾರ್ಸ, ಪುಣ್ಯಾಯ, ಬೊಜ್ಜ, ವರ್ಶಾಂತ, ತಿತಿ, ಮತಿ ಹೇದು ದಿನ ನಿತ್ಯ ಇದ್ದೇಇದ್ದು.  ಎಷ್ಟು ಓಡಿದರೂ ಸಾಕಾವುತ್ತಿಲ್ಲೆ.  ಹಾಂಗಾಗಿ ನಮಗೂ ಒಂದು ಸೈಕಲ್ಲು ತೆಕ್ಕೊಂಡರೆ ಅಕ್ಕೋ ಹೇದು. ರಾಮನ ಹತ್ರೆ ಹೇದೂ ಹೋತು.  ಅವಂಗೆ ಅಷ್ಟು ಹೇದ್ದೇ ಸಾಕಾತು. ತೋಳಗೆ ಮೀಸೆ ಹೊಗುಸಲೆ ಎಡೆ ಸಿಕ್ಕಿದರೆ ಸಾಕಾಡ. ಅದು ಹೇಂಗಾದರೂ ಹೊಗುಗಾಡ. ಹಾಂಗೆ ರಾಮಂಗೆ ರಜ ಎಡೆ ಸಿಕ್ಕಿದ್ದು ಅವ ಅದರ ಗಟ್ಟಿ ಹಿಡುಕ್ಕೊಂಡ.

“ಅಕ್ಕು ಮಾವ, ಬಹಳ ಒಳ್ಳೆದು. ಅಪ್ಪಲೆ ಬೇಕು ನಮಗೂ ಒಂದು ಸೈಕಲು” ಹೇದು ಸುರು ಮಾಡಿದ.

“ಅಪ್ಪೋ ರಾಮ, ಅದರ ನಾವೆಲ್ಲಿ ಮಾಡುಸುವುದು ” ?

“ಮಾವ ಅದರ ಮಾಡುಸುವುದಲ್ಲ. ಅದು ಬೆಳ್ಳೆಕ್ಕಾರಂಗೊ ಮಾಡಿ ಕೊಡೆಯಾಲಕ್ಕೆ ಎಲ್ಲ ಕಳುಸುತ್ತವು. ಅಲ್ಲಿಂದ ತೆಕ್ಕೊಂಡರಾತು. ”

ಅಂಬಾಗ ಆನು ಹೇದೆ. “ಅದೆಲ್ಲಿ ಸಿಕ್ಕುತ್ತಪ್ಪ ! ಎನಗೆ ಅದೊಂದು ಅರಡಿಯ. ಆನು ಕೊಡೆಯಾಲಕ್ಕೆ ಅಡಕ್ಕೆ ತೆಕ್ಕೊಂಡು ಹೋದರೆ ರಾಮಪ್ಪ ಸೇನವನ ಬಂಡಸಾಲೆಗೆ,  ಶಂಭು ಭಾವನ ಹೋಟ್ಳಿಂಗೆ ಅಷ್ಟೆ ! ಮತ್ತೆ ಅಲ್ಲೆ ಇಲ್ಲೆ ತಿರುಗಿಂಡು ಹೋವುತ್ತ ಕಟ್ಟಲೆ ಇಲ್ಲೆ. ಬೇರೆಂತಾರು ಬೇಕಾದರೆ ಕಣ್ಯಾರಲ್ಲೆ ಸಿಕ್ಕುತ್ತಾನೆ. ಮತ್ತೆಂತಕೆ ಹೋಯೇಕು ನಮಗೆ ಆರಾರ ಬಾಗಿಲಿಂಗೆ.  ಹಾಂ. ನೆಂಪಾತು, ಅದ ನಾವು ಭಂಡಸಾಲೆಗೆ ಹೋಪಾಗ ತುಂಬಾ ಮೋಂಟ್ರುಗೊ ಓಡುತ್ತ ಆ ಒಂದು ಜಾಗೆ ಇದ್ದಾನೆ, ಎಂತ ಹೇಳುತ್ತವಪ್ಪ ಅದಕ್ಕೆ, “ಸೋಂಪನ ಕಟ್ಟೆ” ಅಲ್ಲದೊ, ಅಲ್ಲಿ ಕಲ್ಯಾಣಿ ಭಾವನ ಹೇದು ಬರಕ್ಕಂಡು ಒಂದು ದೊಡ್ಡ ಕಟ್ಟೋಣ ಇದ್ದಾನೆ.  ಅದು ಎಂತದಪ್ಪ, ಕಾಪಿ ಹೋಟ್ಳೋ, ಗಡಂಗೊ ? ಕಲ್ಯಾಣಿ ಹೇದರೆ ದೀವಿತ್ತಿಯೇ ಆಗಿರೇಕು. ಅದರ ಭಾವನ ಹೋಟ್ಳು ಹೇದರೆ ಗಡಂಗೇ ಆಯಿಕ್ಕು. ಅದರ ಬಾಗಿಲಿಲ್ಲಿ ಸುಮಾರು ನಿಲ್ಲಿಸೆಂಡು ಇದ್ದತ್ತು “.

ಅಂಬಾಗ ರಾಮ ಹೇಳಿದ “ಅಲ್ಲ ಮಾವ ! ಸೋಂಪನ ಕಟ್ಟೆ ಅಲ್ಲ, ಹಂಪನಕಟ್ಟೆ. ಕಲ್ಯಾಣಿ ಭಾವನದ್ದು ಅಲ್ಲ, ಕಲ್ಯಾಣಿಭವನ ಹೇದು. ಅದು ಕಾಪಿ ಹೋಟ್ಳೆ, ಗಡಂಗು ಅಲ್ಲ. ಶುದ್ದ ಉಡುಪಿ ಬ್ರಾಹ್ಮಣರದ್ದು. ಅದರ ಎದುರು ನಿಲ್ಲುಸಿದ್ದದು ಅಲ್ಲಿಗೆ ಕಾಪಿ ಕುಡಿವಲೆ ಬಂದವರದ್ದು.  ಮಾರುತ್ತ ಬಗೆ ಅಲ್ಲ. ಅದಿರಳಿ ನಿಂಗೊಗೆ ಆಯೇಕು ಹೇದು ಇದ್ದರೆ ಆನು ತಂದು ಕೊಡುವೆ, ರೂಪಾಯಿ ಎನ್ನ ಹತ್ರೆ ಕೊಟ್ಟರೆ ಸಾಕು.”

“ಅದಕ್ಕೆ ರೂಪಾಯಿ ಎಷ್ಟು ಬೇಕಕ್ಕು? ”

ರಾಮ ಹೇಳಿದ, “ರೂಪಾಯಿ ಎಂತದು, ಒಂದು ಮುನ್ನೂರು ಇದ್ದರೆ ಸಾಕಕ್ಕು” ಹೇದು ಸಲೀಸಾಗಿ ! ಎನಗೆ ಒಂದಾರಿ ಜುಂ ಹೇಳಿತ್ತು. “ಅಷ್ಟು ರೂಪಾಯಿ! ಇಷ್ಟು ರೂಪಾಯಿ ತೆಕ್ಕೊಂಡು ನಿನಗೆ ಒಬ್ಬಂಗೆ ಹೋಪಲೆಡಿಗೊ ?  ಆನೂ ಬರೆಕೊ ? ಅದು ಪೇಟೆ. ಹೇಗ್ರಿತ್ತವು ಬೇಕಾದರೂ ಇಕ್ಕು ಅಲ್ಲಿ. ನೀನು ಬಿಡುಸುತ್ತದರ ನೋಡೆಂಡು ಬಾಯಿಗೆ ಹಾಕಿಕ್ಕಲೆ !” ಹೇದು ಜಾಗ್ರತೆ ಹೇಳಿದೆ.

ಅಂಬಾಗ ಅವ ಹೇದ “ಅದೆಲ್ಲ ಸಾರ ಇಲ್ಲೆ, ನಿಂಗೊಗೆ ಹೆದರಿಕೆ ಬೇಡ” ಹೇದು.

“ಆದರೂದೆ ಎನಗೆ ಧೈರ್ಯ ಬರೇಕಾನೆ, ಈಗಾಣ ಮಕ್ಕೊಗೆ ಒಂದೊಂದು ವೇಷ.  ಹೇದರೆ ! ಎಣ್ಣೆ ಕಾಕತದ ಹಾಂಗಿರುತ್ತ ವಸ್ತ್ರದ ಅಂಗಿಯ ಎದುರಾಣ ಕಿಸೆಲಿ ರೂಪಾಯಿ ಹಾಕುಗು. ಎಲ್ಲೋರು ಕಾಣುತ್ತ ಹಾಂಗೆ, ಒಂದು ಪಕ್ಕೀಟು ಬೇಡ, ಅದರ ಮೇಗೆ ಹಾಕಲೆ ಚೌಕ ಬೇಡ. ಹೆಗಲಿಂಗೊಂದು ಎಲೆವಸ್ತ್ರ ಬೇಡ, ಎಂತದು ಬೇಡ. ದೊಡ್ಡ ದೊರೆ ಹಾಂಗೆ ಕುತ್ತ ನೆಡಗತ್ತೆ. ಹೇಂಗೆ ಹೀಂಗೆರುತ್ತವರ ಹತ್ತರೆ ರೂಪಾಯಿ ಕೊಡುತ್ತದು ?!”

ಅಂತೂ ರಾಮ ಎನ್ನ ಹೇಂಗಾರುದೆ ಚೆಪ್ಡಿ ಮಾಡಿ ಒಪ್ಪುಸಿ ರೂಪಾಯಿ ಬೇಡಿಂಡು ಹೋಗಿ, ಕೊಡೆಯಾಲಂದ ಒಂದು ಸೈಕಲ್ಲು ತೆಕೊಂಡೇ ಬಂದ. ಬಂದಿಕ್ಕಿ ಹೇಳುತ್ತ, “ಹರ್ಕುಲಿಸಿಂಗೆ ಅಷ್ಟು. ಬಿ ಎಸ್ ಸಿ ಗೆ ಇಷ್ಟು. ರಾಬಿನ್ ಹುಡಿಂಗೆ ಅಷ್ಟು. ಆಚದಕ್ಕೆ ಅಷ್ಟು, ಈಚದಕ್ಕೆ ಇಷ್ಟು” ಹೇದು ವಿವರುಸಲೆ ಸುರು ಮಾಡಿದ !

“ನೀನು ಅದಕ್ಕೆಲ್ಲಾ ಕ್ರಯ ಕೇಳಲೆ ಹೋದ್ದದೆಂತಕೆ, ನಮಗೆ ಬೇಕಾದ್ದು ಸೈಕಲು ಅಲ್ಲದೊ ?”

“ಅದೆಲ್ಲಾ ಸೈಕಲಿನ ಜಾತಿಗಳೇ,  ನಮ್ಮ ಭತ್ತಲ್ಲಿ ಬೇರೆ ಬೇರೆ ಜಾತಿ ಇಲ್ಲೆಯೊ, ತವ್ವನೋ, ಪುಂಜಕಯಮ್ಮೆಯೋ, ಕಳಮ್ಮೆಯೋ, ಹಾಂಗೆ”.

“ಹಾಂಗೋ! ಎನಗೆ ತೋರಿತ್ತು, ಹಾಂಗೆಲ್ಲ ಹೇದರೆ, ಒಂದೊಂದಾರಿ ಮಾರ್ಗಲ್ಲಿ ಪಟ ಪಟ ಪಟ ಮಾಡೆಂಡು ಹೆಂಡತ್ತಿಯನ್ನು ಹಿಂದೆ ಕೂರುಸೆಂಡು ಬತ್ತವಾನೆ, ಹಾಂಗಿರುಸ್ಸಾಗಿಕ್ಕು ಜಾನುಸಿದೆ. ಏ, ಅಬ್ಬ, ಆ ಜೆನಂಗಳ ಎಡೆಲಿ ಇವರದ್ದು ಒಂದು ಕುಶಾಲು. ಇವಕ್ಕೆ ಹೆಂಡತ್ತಿ ಇದ್ದರೆ ಅದರ ಎಲ್ಲೋರಿಂಗು ತೋರುಸೆಂಡು ತಿರುಗೇಕೋ, ಮೈಗೆ ಮೈ ಚಾಂಟುಸಿಂಡು ಕೂರುಸೆಂಡು ಹೋವುತ್ತದು ನೋಡೇಕು. ಅಲ್ಲ ಆ ಕೂಸುಗೊಕ್ಕಾದರೂ ಒಂದಿಷ್ಟು ನಾಚಿಕೆ ಬೇಕಾನೆ !? ಗೆಂಡನ ಮೈಗೆ ಚಾಂಟಿ ಕೂದೊಂಡು ನಾಲ್ಕು ಜೆನರ ಎದುರು ಪ್ರದರ್ಶನ ಇವರದ್ದುಮರ್ಯಾದೆ ಇಲ್ಲಾದ್ದ ದಗಣೆಗೊ. ಅವು ಆದರೂ ಬಿದ್ದರೆ ಕುಂಡೆಂದ ದೂಳು ಕುಡುಗಿಕ್ಕಿ, ಮೋರೆ ಹುಳಿ ಮಾಡ್ಯೊಂಡು ಹೋಕತ್ತೆ. ಈ ಕುದುರೆಗೊ ಸೀರೆ ರವಕ್ಕೆ ಹಾಕಿಂಡು ಹಾಂಗಿರುತ್ತ ಕೆಟ್ಟುಂಕೆಣಿಲಿ ಎಂತಕೆ ಕೂರೇಕು ಹೇದು ? ರಾಮ ! ನೀನೂದೆ ಹಾಂಗಿರುತ್ತದಕ್ಕೆ ಕ್ರಯ ಮಾಡಲೆ ಹೋದೆಯೋ ತೋರಿತ್ತು “.

“ಅದು ಮಾವ !, “ಮೋಟಾರ್ ಬೈಕು”. ಅದು ಯಂತ್ರಲ್ಲಿ ಹೋವುತ್ತದು, ಅದು ಈ ಮುನ್ನೂರಕ್ಕೆ ಎಲ್ಲಿಯೂ ಸಿಕ್ಕ !  ಮೂರು, ನಾಲ್ಕು ಸಾವಿರ ಕೊಡೆಕು” ಹೇದು.

“ಓಹೋ! ಹಾಂಗೋ.  ಆನು ಇಷ್ಟರ ವರೆಗೆ ಮಾಡಿದ ರೂಪಾಯಿ ಎಲ್ಲ ಹಾಕಿದರೂ ಹಾಂಗಿರುತ್ತದರ ತೆಗವಲೆ ಎಡಿಯಪ್ಪ ! ಅದೂ ಅಲ್ಲದ್ದೆ, ಈ ನಿನ್ನ “ಅತ್ತೆ”ಯ ಹತ್ತರೆ ಹಿಂದೆ ಕೂಬಲೆ ಹೇದರೆ ಅದು ಬಪ್ಪಲೂ ಬಾರ ! ಹಾಂಗಾಗಿ ನಮಗದರ ಸುದ್ದಿ ಬೇಡ. ಅದಿರಳಿ,   ಈ ಸೈಕಲಿಲಿ ಕೂರುತ್ತದು ಹೇಂಗೆ ಹೇಳು ನೋಡುವೊ ?”

“ನಾಳಂಗೆ ಗುಡ್ಡಗೆ ಹೋಗಿ ಅದರ ಕ್ರಮ ಎಲ್ಲ ಹೇದು ನಿಂಗೊಗೆ ಕಲುಸಿ ಬಿಡುತ್ತೆ”.

(ಇಲ್ಲಿ ವರೆಗೆ ನಿಂಗೊಗೆಲ್ಲ ಓದಿ ಆಯಿದು….)

೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦೦

ಮರುದಿನ ಉದಿಯಪ್ಪಗ ಆನು ಪಂಚಾಂಗ ಬಿಡುಸಿ ನೋಡಿದೆ. ಭರಣಿ ಕೃತ್ತಿಕೆಯೋ, ಅಮಾವಾಸೆಯೋ, ಸಂಕ್ರಾಂತಿಯೋ ಮಣ್ಣೋ ಇದ್ದೋ ಹೇದು. ಅದೊಂದೂ ಇಲ್ಲೆ. ವಾರವೂ ಒಳ್ಳೆದೇ ಸೋಮವಾರ.  ಆರ್ದ್ರಾ ನಕ್ಷತ್ರ.  ಕೆಲಸ ಸುರುಮಾಡ್ಳೆ ಆಗದ್ದ ದಿನ ಅಲ್ಲ. ಸೈಕಲು ತಂದ ಮರದಿನವೇ ಹೀಂಗಿರುತ್ತ ಒಳ್ಳೆ ಮುಹೂರ್ತವೂ ಸಿಕ್ಕಿದ್ದು ಶುಭಲಕ್ಷಣ ಹೇದು ತೋರಿತ್ತು. ಅಷ್ಟಪ್ಪಾಗ ಯಜಮಾನ್ತಿ ಒಂದಿಷ್ಟು ಅವಲಕ್ಕಿಗೆ ಮಜ್ಜಿಗೆ ಹಾಕಿ ತಂದು ಕೊಟ್ಟತ್ತು. ಎನಗೆ, ಬಾಕಿದ್ದವರ ಹಾಂಗೆ ಉದಿಯಪ್ಪಾಗಳೇ ಆ ಕಾಪಿ ಕಷಾಯ ಕುಡುದರೆ ಆವುತ್ತಿಲ್ಲೆ. ಅದು ಊಷ್ಣ. ಎನಗೆ ಆ ಹಳೆ ಕ್ರಮವೇ ಸಾಕು. ಅದಿರಳಿ. ಸೈಕಲು ಕಲ್ತ ಕತೆ ಅಲ್ಲೇ ಬಿಟ್ಟತ್ತಾನೆ. ಕೇಳಿ ಮತ್ತೆ – ಅದರ ಹತ್ರೆ ಹೇದೆ.  ಅದರ ಹೇದರೆ ಗೊಂತಾತಾನೆ, ಎನ್ನ ಎಜಮಾನ್ತಿ ಹತ್ತರೆ “ನೀನೂ ಒಂದಿಷ್ಟು ತಣ್ಣನೆ ಇದ್ದರೆ ತಿಂದಿಕ್ಕಿ ಬೇಗ ಒಂದಿಷ್ಟು ಮೈಚೆಂಡಿ ಮಾಡಿಂಡು ಬಾಳೆಲೆಲಿ ಎರಡು ಕುಡ್ತೆ ಅಕ್ಕಿ, ಒಂದು ತೆಂಗಿನ ಕಾಯಿ, ಎಲೆ ಅಡಕ್ಕೆ, ಒಂದು ಚಕ್ರ ಪೈಸೆ ಹಾಕಿ ಮಡಗಿಕ್ಕು.  ಆನಿಂದು ಸೈಕಲು ಕಲಿಯಲಿದ್ದು. ಅದಕ್ಕೆ ಒಂದು ಗಣಪತಿ ಪೂಜೆ ಸಣ್ಣಕೆ ಆಯೆಕು.” ಹೇದು.

ಅಂಬಾಗ ಅದು ಹೇಳಿತ್ತು. “ಅಂಬಾಗ ನಿಂಗೊಗೆ ಇಂದು ವಿದ್ಯಾರಂಭ !” ಹೇದು.  ಎನಗೆ ಎಲ್ಲಿಲ್ಲದ್ದ ಕೋಪ ಬಂತು. ಹೇದೆ, “ಮುಚ್ಚು ಬಾಯಿ, ಅಧಿಕ ಪ್ರಸಂಗ ಇಲ್ಲಿವರೆಗೆ ಬಂತು. ಗೆಂಡನ ನೆಗೆ ಮಾಡ್ಳೆ ಹೆರಟಿದು. ಕಲಿಕಾಲ ಮೀರಿತ್ತು. ಎನ್ನಬ್ಬೆ ಅಪ್ಪನ ಎದುರು ನಿಂದೊಂಡು ಮಾತಾಡಿದ್ದು ಇರಾಡ. ಅಜ್ಜ ಅಜ್ಜಿ ಅಜ್ಜನ ಎದುರಿಂಗೆ ಬಂದದೂ ಕೂಡ ಇರಾಡ, ನೀನು ಎನ್ನ ತಮಾಷೆ ಮಾಡಲೆ ಸುರುಮಾಡಿದೇನೆ ! ಎಲ್ಲ ಎನಗೆ ಅರಡಿಗು, ಬಾಯಿ ಮುಚ್ಚಿಂಡು ಹೇದಷ್ಟು ಮಾಡು” ಹೇದೆ.

ಕೊರಗೋಜಿಯ ಕಂಡ ಹಾವಿನ ಹಾಂಗೆ ಅದು ಕಂನ್ಹಿಕೊಟ್ಟಗ್ಗೆ ಹೊಕ್ಕತ್ತು. ಅಂತುದೆ ಒಂದು ಪ್ರಾರ್ತನೆ ಎಲ್ಲ ಮಾಡಿಕ್ಕೆ ಸೈಕಲು ತೆಕ್ಕೊಂಡು ಗುಡ್ಡಗೆ ಹೋದೆಯೊ.

ಸೈಕಲಿನ ಎದುರು ನಿಲ್ಲಿಸಿ ಅಳಿಯ, ಅದರ ಎಲ್ಲಾ ಬೇರೆ ಬೇರೆ ಕೈ, ಕಾಲು, ಕೆಮಿ ಮೂಗುಗಳ ಹೆಸರೆಲ್ಲಾ ವಿವರುಸಿ ಹೇಳಿದ.  ಎನ್ನ ಜೆನ್ಮ ಇಡೀ ಕಲ್ತರೂದೆ ಬಾರ ಅದರ ಹೆಸರುಗೊ ಎನಗೆ.   ಮತ್ತೆ ಹೇದ, ಇದರ ಕೈಲಿ ಹಿಡುದು, ಇದರಲ್ಲಿ ಕಾಲು ಮಡಗಿ ಪಕ್ಕನೆ ಹತ್ತಿ ಕೂರೆಕು. ಕಾಲಿಲ್ಲಿ ತಿರುಗುಸೇಕು. ಓಡದಿದ್ದರೆ ಸೈಕಲು ಕುತ್ತ ನಿಲ್ಲ, ಮೊಗಚ್ಚುಗು.  ಓಡಲಪ್ಪಾಗ ಹಾರಿ ಅದರ ಮೇಲೆ ಕೂರೆಕು. ಇಳಿವಲಪ್ಪಾಗ ಹಾರಿ ಇಳಿಯೆಕು. ಹೇದು ಉಪದೇಶ ಮಾಡಿಕ್ಕಿ ಎನ್ನ ಅದರಲ್ಲಿ ಕೂರುಸಿ ಅವ ಹಿಡುಕ್ಕೊಂಡು ಸುಮಾರು ಹೊತ್ತು ತಿರುಗಿಸಿದ.  ಎನಗೆ ಕೈಕಾಲು ತಿರುಗುಸಲೆ ಇನ್ನು ಗೊಂತಕ್ಕು  ಹೇಳಿ ತೋರಿತ್ತು.

ಅಳಿಯ ಮತ್ತೆ ರಜಾ ಹೊತ್ತು ನಿಲ್ಲುಸಿಕ್ಕಿ, ಆಸರ ಆವುತ್ತು ಮಾವ ಒಂದು ಕಾಪಿ ಕುಡುದಿಕ್ಕಿ ಬಪ್ಪೊ ಹೇದ. “ಎನಗೆ ಹೋಟ್ಳಿನ ಕಾಪಿ ಕುಡಿತ್ತ ಅಭ್ಯಾಸ ಇಲ್ಲೆ. ಕೆಲವು “ಬ್ರಾಹ್ಮಣರ ಹೋಟ್ಳು” ಹೆಸರಿಂಗೆ, ನೀರು ತಪ್ಪಲೆ ಆಳುಗೊ! ಹಾಂಗಿರುತ್ತವರ ಕಾಪಿ ಕುಡುದು ಹೊಟ್ಟೆಗೆ ಉಷ್ಣ ಆದರೆ ನಾಳಂಗೆ ಹೊಲಕ್ಕೊಡಿ ತಂಬ್ಳಿಯೋ, ನೆಲ್ಲಿಂಡಿ ತಂಬ್ಳಿಯೋ ಕಡವಲೆ ಹೇಳೆಕಕ್ಕು. ಆನು ಬತ್ತಿಲ್ಲೆ, ನೀನು ಬೇಕಾರೆ ಕುಡುದಿಕ್ಕಿ ಬಾ”, ಹೇದೆ.  ಅವ ಹಾಂಗೆ ಆ ಮಾರ್ಗದ ಕರೆಲಿದ್ದ ಹೋಟ್ಳಿಂಗೆ ಹೋದ.

ಎನಗೆ ರಜಾ ಹೊತ್ತು ಕೂದಪ್ಪಗ ಉದಾಸನ ಅಪ್ಪಲೆ ಸುರುವಾತು. ರಾಮ ಬಪ್ಪನ್ನಾರಕಂಗೆ ನಾಲ್ಕು ಸುತ್ತು ತಿರುಗುಸುವೊ ಹೇದು ತೋರಿತ್ತು.  ಹಾಂಗೆ ಎಮ್ಮೆ ಕೊಂಬಿನ ಹಾಂಗಿರುತ್ತದು ಎರಡು ಇದ್ದಾನೆ, ಅದರ ಹಿಡುಕ್ಕೊಂಡು, ಅದರ ಕಾಲು ತಪ್ಪುಸಿದೆ.  ಅಷ್ಟಪ್ಪಾಗ ಅದು ಅತ್ತಿತ್ತೆ ಮಾಲಲೆ ಸುರುವಾತದ.  ಗಟ್ಟಿಲೆ ಹಿಡುಕ್ಕಂಡು ರಜ ಮುಂದೆ ಮುಂದೆ ಹೋದೆ. ಈ ಅಡ್ಕಲ್ಲಿ ಎಲ್ಲ್ಲಿಯಾದರು ಬಿದ್ದರೆ, ಕಲ್ಲು ಮಿನಿ ತಾಗುಗು ಹೇದು ಮಾರ್ಗವೇ ಒಳ್ಳೆದು ತೋರಿತ್ತು.  ಹೇಂಗಾರುದೆ ಅತ್ತೂ ಇತ್ತೂ ಮಾಲುಸೆಂಡು,  ಮೊಳಪ್ಪಿಂಗೆ ಹೆಟ್ಟುಸೆಂಡು, ಮಾರ್ಗಕ್ಕೆ ಹೋದೆ .   ಅಲ್ಲಿ ಮೂಡು (ಪೂರ್ವ) ಮುಖ ಹಾಕಿ ನಿಂದು, ನಾವು ಹಿರಿಯವರ ಕಾಲಂದಲೂ ನಂಬಿಯೆಂಡು ಬಪ್ಪ ದೇವರಕ್ಕಳ ಎಲ್ಲ ಮನಸ್ಸಿಲ್ಲೆ ಜಾನುಸಿ ಆ “ಪೆಂಡಲು” ಹೇಳ್ತರ ಮೇಗೆ ಕಾಲು ಮಡಗಿ ಮೆಟ್ಟಿದೆ.  ಆನು ಮೆಟ್ಟಿದ್ದು ತಗ್ಗಿತ್ತು !  ಆಚದು ನೆಗ್ಗಿ ಬಂದು ಕಾಲಿಂಗೆ “ಟೊಯಿಂ” ಹೇದು ಹೆಟ್ಟಿತ್ತು ! ಕೂಬಲೆ ನೋಡುವಗ ಅದು ಕೆಳ ಮೇಗೆ ಹೋವುತ್ತದರಲ್ಲಿ ಪಕ್ಕ ಕೂಬ್ಬಲಾವುತ್ತೊ ?  ಅದೇಕೆ ಹಾಂಗಾವುತ್ತು ಹೇದು ಗೊಂತಾತಿಲ್ಲೆ. ಅಂತು ಹೇಂಗಾದರೂ ರಾಮ ಹೇದು ಕೊಟ್ಟ ಹಾಂಗೆ ಅದರಲ್ಲಿ ಕೂದೊಂಡು ಮಾರ್ಗಲ್ಲಿ ಸೈಕಲು ಬಿಟ್ಟೆ.  ಬಿಟ್ಟದು ಒಂದು ಗೊಂತು ಎನಗೆ. ಮತ್ತೆ ಎಂತೆಲ್ಲ ಆತು ಹೇದು ಎನಗೇ ಗೊಂತಿಲ್ಲೆ !

ಎನ್ನ ಅಪ್ಪ ಇಪ್ಪಾಗ ಹೇಳ್ತು ಕೇಟಿದೆ ” ಎಬ್ಬಿದ ಹಾಂಗೆ ಹೋಗದ್ರೆ ಹೋದ ಹಾಂಗೆ ಎಬ್ಬೆಕು” ಹೇದು.  ಕಡೆಂಗೆ ಇಲ್ಲಿಯುದೆ ಹಾಂಗೇ ಆತು. ಸೈಕಲು ಆನು ಹೇದ ಹಾಂಗೆ ಕೇಳುತ್ತಿಲ್ಲೆ.  ಇಳಿಜ್ಜಾರುದೆ. ಹೋತಯ್ಯಾ,   ಹೋತು ಸೈಕಲು ಒಂದು ಜಾತಿ. ಹೇಂಗಾದರೂ ಅದರಿಂದ ಇಳುದಿಕ್ಕುವೋ ಹೇದರೆ ಅದು ನಿಲ್ಲೇಕಾನೆ !?  ಅದರ ನಿಲ್ಲುಸುತ್ತ ಕೆಣಿ ನವಗೆ ಗೊಂತಿದ್ದೊ ? ರಾಮ ಹೇದ ಹಾಂಗೆ ಕಾಲಿಲ್ಲಿ ತಿರುಗಿಸೆಂಡು ಕೂದೆ. ಅದು ಮತ್ತೂ ಜೋರು ಹೋಪಲೆ ಸುರು ಆತು. ತಿರುಗಿಸೆಂಡು ಇಲ್ಲದಿದ್ದರೆ, ರಾಮ ಹೇಳಿದ್ದ “ಬೀಳುಗೂ” ಹೇದು. ಎಲ್ಲಿಯಾದರೂ ಬಿದ್ದರೆ ಎಂತ ಮಾಡುತ್ತದು ?

ಅಷ್ಟಪ್ಪಾಗ ಎದುರಂದ ಎರಡು-ಮೂರು ಮುಕ್ವೆತ್ತಿ (ಮೀನು ಮಾರ್ತ ಹೆಣ್ಣುಗೊ)ಗೊ ಮೀನು ಹೊತ್ತೊಂಡು ಎದುರಂಗೇ ಬತ್ತು ಕಂಡತ್ತು. ಇನ್ನು ಅವರ ಮೈಗೆ ಬೀಳದ್ದ ಹಾಂಗೆ ಹೋವುತ್ತದು ಹೇಂಗೆ ? ಎನಗೆ ತಿರುಗುಸಲೆ ಅರಡಿತ್ತಿಲ್ಲೆ. ಕಿಣ್ ಕಿಣ್ ಮಾಡುತ್ತು ಎಲ್ಲಿ ಹೇದುದೆ ಗೊಂತಿಲ್ಲೆ.  ಈ ಮುಕ್ವೆತ್ತಿಗಳ ಮೈಗೆ ಬಿದ್ದರೆ ಹೇಂಗಕ್ಕು ?  ನಾಳಂಗೆ ಪೌರೋಹಿತ್ಯಕ್ಕೆ ಹೋಪಗ  ಎಲ್ಲೋರುದೆ ನೆಗೆ ಮಾಡಿದರೆ ಹೇದು. ಎಂತಾದರೂ ಆಗಲಿ, ಇವರ ಮೈಗೆ ತಾಗಲೆ ಆಗ.  ಆನಿನ್ನು ಬಾಯಿಲೆ ಹೇಳ್ತೆ ಹೇದು ಹೇದೆ.

“ಎನಕ್ಕು ಈ ಗತಿಕೆಟ್ಟ ಸೈಕಲು ಅರಿನ್ನಿಲ್ಲ. ಇಪ್ಪೊ ಇದು ನ್ಹಾನ್ ಪರನ್ಹ ಪೋಲೆ ಇಲ್ಲ.  ಅಯಿಂದೆ ಕೊಂಡ್ ಕರೆಕ್ಕು ನಿನ್ನೊಳಿ. ಇಲ್ಲಾಂಗ್ಲಿ ಮೇಕನ್ನೆ ಬೀವು ಇಪ್ಪೊ! “ (ಎನಗೆ ಈ ಗತಿಕೆಟ್ಟ ಸೈಕಲು ಬತ್ತಿಲ್ಲೆ.  ಈಗ ಇದು ಆನು ಹೇಳಿದ ಹಾಂಗೆ ಕೇಳುತ್ತಿಲ್ಲೆ. ಹಾಂಗಾಗಿ ಕರೇಂಗೆ ನಿಂದೊಳಿ. ಇಲ್ಲದ್ರೆ ನಿಂಗಳ ಮೈಗೆ ಬೀಳುಗು.)  ಹೀಂಗೆ ಬಾಯಿ ಮಾಡಿದೆ. ಪುಣ್ಯಕ್ಕೆ ಅವು ಕರೆಂಗೆ ಹೋದವು. ಅವು ಹೋದರೂ ಸೈಕಲು ಹೇದ ಹಾಂಗೆ ಕೇಳೆಕಾನೆ ! ಅದು ಹೋಗಿ ಒಂದು ಮುಕ್ವೆತ್ತಿ ಮೈಗೆ ಒರಸೆಂಡು ಹೋತತ್ತೆ !   ಅದು ಬೈವಲೆ ಸುರುಮಾಡಿತ್ತು. ಆನಲ್ಲಿ ಬೀಳದ್ದ ಕಾರಣ ಅದು ಎಂತ ಹೇತು ಹೇದು ಗೊಂತಾತಿಲ್ಲೆ !.

ಅದ ಅಷ್ಟಪ್ಪಾಗ ಕಾಪಿ ಕುಡುಕ್ಕೊಂಡು ಇದ್ದಿದ್ದ ರಾಮಂಗೆ ಗೊಂತಾತು ಹೇದು ಕಾಣುತ್ತು. ಅವ ಹಿಂದೆ ಸೇಂಕು ಬಿಟ್ಟೊಂಡು ಒಡೆಂಡು “ಏ! ಮಾವ…! ಬ್ರೇಕು ಹಾಕಿಯೋ  …!” ಹೇದೊಂಡು ಬಂದ.    ಬ್ರೇಕು ಹೇದರೆ ಎಂತ ಹೇದು ಎನಗೆ ಗೊಂತಿದ್ದೊ ?  ಆನು ಎಲ್ಲಿಯಾದರೂ ಬೀಳುವೆ ಹೇದು ಜಾನುಸಿ, ಮೆಟ್ಟಲೆ ಹೇಳ್ತದಕ್ಕೆ ಹಾಂಗೆ ಹೇಳ್ತದಾಯ್ಕು ಹೇದು ಮತ್ತೂ ಜೋರು ಮೆಟ್ಟಿದೆ.   ಅದು ಮತ್ತೂ ಜೋರು ಓಡ್ಳೆ ಸುರು ಆತು.  ಇನ್ನೆಂತ ಮಾಡಿರಕ್ಕು ಹೇದು ಎನಗರಡಿಯ.

ಅದ ….!  ಅಷ್ಟಾಪ್ಪಾಗ ಎದುರಿಂದ ಕಣ್ಯಾರಕ್ಕೆ ಹೋಪ ಒಂದು ಬಸ್ಸುದೆ ಬಂತು.  ಎನಗೆ ಕೈಕಾಲು ನೆಡುಗಲೆ ಸುರು ಆತು.  ಎಂತ ಮಾಡುತ್ತು ಹೇದೆ ಗೊಂತಾತಿಲ್ಲೆ. ಅಂಬಗ ಆನು “ಓ….! ಸ್ವಾಮಿ…! ನನಗೆ ಈ ಸೈಕಲು ಗೊತ್ತಿಲ್ಲ…!   ಹಾಂಗಾದರೂ ಎಂಗಳ ಅಳಿಯ ರಾಮ ಇದ್ದಾನಲ್ಲಾ  ! ಅವನ ಒತ್ತಾಯಂದ ಇದರಲ್ಲಿ ಕೂತು ಈಗ ಇಳಿಯಲಿಕ್ಕೆ ಕೂಡುವುದಿಲ್ಲ.   ನೀವು ಮೋಂಟುರನ್ನು ನಿಲ್ಲಿಸಿಯೋ ನಿಲ್ಲಿಸಿ…!” ಹೇದು ಹೇದೆ.   ಆ ಮೋಂಟುರು ಗುರೂಂ ಹೇಳ್ತ ಶಬ್ದಕ್ಕೆ ಅವಕ್ಕೆ ಕೇಟತ್ತಿಲ್ಲೆಯೋ ಎಂತೊ ಮಣ್ಣೊ.  ಅವು ನಿಲ್ಲುಸಿದವೇ ಇಲ್ಲೆ. ಮತ್ತೆ ತಡವೇನೂ ಇಲ್ಲೆ. ಎರಡೂ ಹತ್ರೆ ಹತ್ರೆ ಬಂದದು ಎನಗೆ ಗೊಂತಿದ್ದು.  ಮತ್ತೆಂತೂ ಎನಗೆ ಗೊಂತಿಲ್ಲೆ ….!

ಮತ್ತೆ ಆನು ನೋಡುವಾಗ ಒಂದು ಮಂಚಲ್ಲಿ ಮನುಗೆಂಡು ಇದ್ದಿದ್ದೆ.  ಏಳಲೆ ನೋಡುವಾಗ ಎಡಿತ್ತಿಲ್ಲೆ.  ಅಲ್ಲಿ ಇಲ್ಲಿ ಬೇನೆ ಆವುತ್ತು. ಹತ್ತರೆ ಇದ್ದ ರಾಮ ಹೇದ, “ಏಳೇಡಿ ಹೇದು ಡಾಕ್ಟ್ರು ಹೇದಿಕ್ಕೆ ಹೋಯಿದ.  ಈಗ ಅವು ಬಕ್ಕು” ಹೇದು.   ಆನು ಹೇದೆ, “ಏವ ದಾಕುದಾರ, ಕಾಸರಗೋಡಿನ ವೈದ್ಯನೋ ? ಈ ಪ್ರಾಯ ಹೋಕಿಂದ್ಗೆ ಸೈಕಲಿಲ್ಲಿ ಕೂದು ಮೋಂಟರಿನ ಅಡಿಯಂಗೆ ಬಿದ್ದು ಆಸುಪತ್ರೆಲಿ ಹೊಲೆಯರು ತಂದು ಕೊಟ್ಟದರ ತಿಂಬಲಾತಾನೆ, ಬಂನ್ಗವೂ ಆತು, ಜಾತಿಯೂ ಹೋತು, ಅಯ್ಯೋ ದೇವರೇ….!”

ಇಲ್ಲಿಗೆ ಈ ಕತೆ ಮುಗುದ್ದು.  ವಿಮರ್ಶೆಗೆ ಸ್ವಾಗತ ಇದ್ದು.

ಬೊಳುಂಬು ಗೋಪಾಲ ಮಾವ.

ಬೊಳುಂಬು ಮಾವ°

   

You may also like...

15 Responses

  1. ತುಪ್ಪೆಕಲ್ಲು ತಮ್ಮ says:

    ಮಳಿಯಾಳಲ್ಲಿ ಹೆದ್ದು ಭಾರೀ ಕೋಶಿ ಆಯ್ದು

  2. ಅಯ್ಯಯೋ ಆನು ನಾಗರಬೆತ್ತ ಹಿಡುದು ಕಲುಸುತ್ತೆ ಹೇಳಿರೆ ಅಪ್ರೂಪಕ್ಕ್ಕೆ ಬತ್ತ ಎನ್ನ ಪುೞಿಯೂ ಹತ್ತರೆ ಬಾರನೋ ಹೇಳಿ.ಕೊರಗೋಜಿ ಹೇಳಿ ಹಾವಾಡಿಗ೦ಗೋಕ್ಕು ಹೇಳುಗು.ಮದಲಿ೦ಗೆಲ್ಲ ಮ೦ಗನ ಹಾ೦ಗೂ ಹಾವಿನ ತೆಕ್ಕೊ೦ಡು ಕೊರಗೋಜಿಗೊ ಮನೆ ಮನೆ ಬಕ್ಕು.ಅ೦ಬಗ ಎಲ್ಲ ಹಾವಿನ ತೋರ್ಸಏಡ ಹೇಳಿ ಅಜ್ಜ೦ದ್ರು ಬೇಗ ಪೈಸೆ ಕೊಟ್ಟು ಕಳುಸುಗು.ಹಾವು ಬ್ರಾಹ್ಮಣ ಹೇಳಿ ನಒಬಿಕೆ ಸೆರೇಲಿ ಕ೦ಡ್ರೆ ಬಿದಡುಸೇಕಕ್ಕು ಹೇಳಿ ಅಲ್ಲಿ೦ದಲೇ ಒ೦ದು ಮುಕ್ಕಲೋ ಒ೦ದಷ್ಟು ಅಕ್ಕಿಯೋ ಬತ್ತವೋ ಕೊಟ್ಟು ಕಳುಸುಗು.ಒಪ್ಪ೦ಗಳೊಟ್ಟಿ೦ಗೆ.

  3. ಅಯ್ಯಯೋ ಆನು ನಾಗರಬೆತ್ತ ಹಿಡುದು ಕಲುಸುತ್ತೆ ಹೇಳಿರೆ ಅಪ್ರೂಪಕ್ಕ್ಕೆ ಬತ್ತ ಎನ್ನ ಪುೞಿಯೂ ಹತ್ತರೆ ಬಾರನೋ ಹೇಳಿ.ಕೊರಗೋಜಿ ಹೇಳಿ ಹಾವಾಡಿಗ೦ಗೋಕ್ಕು ಹೇಳುಗು.ಮದಲಿ೦ಗೆಲ್ಲ ಮ೦ಗನ ಹಾ೦ಗೂ ಹಾವಿನ ತೆಕ್ಕೊ೦ಡು ಕೊರಗೋಜಿಗೊ ಮನೆ ಮನೆ ಬಕ್ಕು.ಅ೦ಬಗ ಎಲ್ಲ ಹಾವಿನ ತೋರ್ಸಏಡ ಹೇಳಿ ಅಜ್ಜ೦ದ್ರು ಬೇಗ ಪೈಸೆ ಕೊಟ್ಟು ಕಳುಸುಗು.ಹಾವು ಬ್ರಾಹ್ಮಣ ಹೇಳಿ ನಒಬಿಕೆ ಸೆರೇಲಿ ಕ೦ಡ್ರೆ ಬಿದಡುಸೇಕಕ್ಕು ಹೇಳಿ ಅಲ್ಲಿ೦ದಲೇ ಒ೦ದು ಮುಕ್ಕಲೋ ಒ೦ದಷ್ಟು ಅಕ್ಕಿಯೋ ಬತ್ತವೋ ಕೊಟ್ಟು ಕಳುಸುಗು ಹಾ೦ಗಾಗಿ ಅ೦ದಲ್ಲಾ ಈ ಕೊರಗೋಜಿಗೊ ಒ೦ದು ರೀತಿ ಬ್ಲೇಕ್ ಮೈಲ್ ಮಾಡಿಯೊ೦ಡಿತ್ತಿದ್ದವು..ಒಪ್ಪ೦ಗಳೊಟ್ಟಿ೦ಗೆ.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *