“ಅಟ್ಟು- ಉಣ್ಣೆಕ್ಕು,ಕೊಟ್ಟು- ತರೆಕು”-(ಹವ್ಯಕ ನುಡಿಗಟ್ಟು-77)

January 16, 2017 ರ 11:33 pmಗೆ ನಮ್ಮ ಬರದ್ದು, ಇದುವರೆಗೆ 7 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಅಟ್ಟು- ಉಣ್ಣೆಕ್ಕು, ಕೊಟ್ಟು- ತರೆಕು”-(ಹವ್ಯಕ ನುಡಿಗಟ್ಟು-77)

ಆನು ಸಣ್ಣದಿಪ್ಪಗ ಎನ್ನ ಅಪ್ಪನ ಮನೆಲಿ ಗೆದ್ದೆಬೇಸಾಯ ಇದ್ದತ್ತು.ಅಲ್ಲಿ ಬೆಳದ ಬತ್ತವೇ ಆಳುಗೊಕ್ಕೆ ಕೂಲಿ ಕೊಡ್ಳೂ ಮನೆವಕ್ಕೆ ಉಂಬಲೂ ಸಾಕಾಗೆಂಡಿತ್ತು.ಏಣಿಲು ಬೇಸಾಯ ಮುಗುದಪ್ಪಗ (ಸುಗ್ಗಿ ಬೆಳೆಯೂ ಇದ್ದತ್ತು)ಒಂದು ಗೆದ್ದೆಲಿ,ಸೊವುತ್ತೆ,ಮೆಣಸು, ಬದನೆ,ಬಚ್ಚಂಗಾಯಿ, ಹೀಂಗಿರ್ತ್ತೆಲ್ಲ ಅಪ್ಪᵒ ಮಾಡುಗು. ಅಂಬಗೆಲ್ಲ ಪಂಪಿನ ನೀರು ಹಾಕುದು. ಅದಕ್ಕೂ ಕೆಲವು ವರ್ಷ ಮದಲೆ ಜೊಟ್ಟೆ ಮೊಗವದಾಡ.ಮತ್ತೆ ಕರೆಂಟಿನ ಮೋಟರ್ ಬಂತು ಹೇಳುವೊᵒ. ಅಂತೂ ಕೃಷಿಲಿ ಬಹು ಆಸಕ್ತಿ ಅಪ್ಪಂಗೆ.

ಒಂದಾರಿ ಎನ್ನ ಸೋದರಮಾವ ಬಂದಿಪ್ಪಾಗ ಅಪ್ಪನೊಟ್ಟಿಂಗೆ ನೆಟ್ಟಿಗೆದ್ದೆ ಕರೆಂಗೆ ಹೋದೊವು. ಅವರೊಟ್ಟಿಂಗೆ ಆನೂ ತಿರುಗಾಟಕ್ಕೆ ಹೋದೆ.ಅಪ್ಪᵒ ಮೂರ್ನಾಲ್ಕು ಬಚ್ಚಂಗಾಯಿ ಕೊಯಿದು ನೇಲಕ್ಕುರುವೆಲಿ ಹಾಕುದು ಕಂಡು;ಮಾವ “ಇಷ್ಟೆಲ್ಲ ಒಟ್ಟಿಂಗೆ ಕೊಯಿತ್ತೆಂತಕೆ ಭಾವಯ್ಯ” ಹೇಳಿಯಪ್ಪಗ

“ಒಂದೆರಡು ನಿಂಗೊಗೆ ಕೊಂಡೋಪಲೆ” ಎನ್ನಪ್ಪನ ಉತ್ತರ ಬಂದಪ್ಪಗ

“ಬೇಡಪ್ಪ”. ಮಾವನ ಸಂಕೋಚ.

“ಅಟ್ಟು- ಉಣ್ಣೆಕ್ಕು, ಕೊಟ್ಟು- ತರೆಕು. ಹೇಳಿ ಒಂದು ಮಾತಿದ್ದು. ಅಡಿಗೆ ಮಾಡಿ ಉಣ್ಣೆಕ್ಕು,ಹೇಳುವ ಅರ್ಥಲ್ಲೇ ನಾವು ಕೃಷಿಮಾಡಿ ಉಣ್ಣೆಕ್ಕು,ಅಥವಾ ತಿನ್ನೆಕ್ಕೂಳಿಯೂ ಆವುತ್ತು.ನಿಂಗೊ ಕೊಟ್ಟದರ ಎಂಗೊ ತಪ್ಪ ಹಾಂಗೇ ಎಂಗೊ ಕೊಟ್ಟದರ ನಿಂಗಳೂ ಕೊಂಡೋಯೆಕ್ಕು”. ಹೇಳುವಗ , ಮಾವ ಸುಮ್ಮನಾದೊವು.

ಅಂಬಗ ಈ ಮಾತಿನ ಒಳಾರ್ಥ, ನಿಜ ತಿರುಳು  ಎನಗೆ   ದಾಖಲಾಗದ್ರೂ ಮತ್ತೆ ಬುದ್ದಿ ಬಪ್ಪಗ, ಅಪ್ಪ ಮಾತಾಡುವಗೆಲ್ಲ  ಹೇಳುವ  ಹಲವಾರು ನುಡಿಗಟ್ಟುಗೊ ಒಂದೊಂದೇ ತಲಗೆ ಹೋವುತ್ತದು ಅಪ್ಪಾದ ಮಾತು.

——-೦——–

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 7 ಒಪ್ಪಂಗೊ

 1. ಗೋಪಾಲಣ್ಣ
  S.K.Gopalakrishna Bhat

  ಸರಿ ,ಒಳ್ಳೆ ಮಾತು.ಪ್ರತ್ಯುಪಕಾರದ ಮಹತ್ವ ತಿಳಿಸುತ್ತು

  [Reply]

  VA:F [1.9.22_1171]
  Rating: 0 (from 0 votes)
 2. ಅನು ಉಡುಪುಮೂಲೆ

  ವಿಜಯತ್ತೆ ಒಳ್ಳೆ ಮಾತು. ದುಡುದು ತಿಂಬದರಲ್ಲೂ , ಹಂಚಿ ತಿಂಬದರಲ್ಲೂ ಸುಖ ಇದ್ದು ಹೇಳುವ ಅರ್ಥ ಬತ್ತು.

  [Reply]

  VN:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ಅಪ್ಪು ದುಡುದು ತಿಂಬದರ, ಹಂಚಿ ತಿಂಬದರ ಮಹತ್ವ ಸಾರುವ ಸಂದೇಶವಿದು. ಗೋಪಾಲಂಗೂ ಅನುಪಮಂಗೂ ಧನ್ಯವಾದಂಗೊ

  [Reply]

  VN:F [1.9.22_1171]
  Rating: 0 (from 0 votes)
 4. ಚೆನ್ನೈ ಬಾವ°

  ಅದೇ ವಿಜಯತ್ತೆ….. ಆನು ಕಾಲಿ ಕರಡಿಗೆ ಕೊಡೆಕು ನಿಂಗೊ ಉಪ್ಪಿನಕ್ಕಾಯಿ ತುಂಬುಸಿ ಕೊಡೆಕು. ಅಲ್ಲದ

  [Reply]

  VN:F [1.9.22_1171]
  Rating: 0 (from 0 votes)
 5. ವಿಜಯತ್ತೆ

  ಅಕ್ಕು ಚೆನೈಭಾವಂಗೆ, ರಜ ಉಪ್ಪಿನಕಾಯಿ ಎನ್ನೆತ್ರೆ ಇಪ್ಪದರಿಂದ ಕೊಡ್ಳೆ ಸಂತೋಷವೆ. ಆ ಹೆಳೆಲಿಯಾರು ಬನ್ನಿ.

  [Reply]

  pattaje shivara?ma bhat Reply:

  ವಿಜಯಕ್ಕ ಹೇಳಿದ ಬೇಸಾಯ ಎಂಗಳ ಮನೇಲೂ ಪ್ರಾಕಿಂಗೆ ಅಪ್ಪ ಮಾಡಿಯೊಂಡು ಇತ್ತಿದ್ದವು. ಈಗ ಹಳ್ಲಿಲಿ ಹಸಿಮೆಣಸಿಂಗು ಪೇಟೆಗೆ ಹೋಯೆಕ್ಕು.

  [Reply]

  ವಿಜಯತ್ತೆ

  ವಿಜಯತ್ತೆ Reply:

  ಆದಪ್ಪು ಕೂಲಿ ಸಮಸ್ಯೆಂದಾಗಿ ಕೃಷಿ ಭೂಮಿ ಪೂರಾ ಹಡಿಲು. ಹೆಚ್ಚಿನಕಡೆಲೂ ಬೆಳೆ ಬತ್ತಗೆದ್ದೆಲಿ ಮನೆ!. ಮದಲಾಣವು ಬತ್ತಬೆಳೆತ್ತ ಗೆದ್ದೆಲಿ ಮನೆ ಕಟ್ಟವು. ಬರೆಯೋ ಗುಡ್ಡೆಯೋ ತಟ್ಟು ತೆಗದು ಮನೆ ಕಟ್ಟುಗಷ್ಟೆ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೇಜಿಮಾವ°ಮಾಲಕ್ಕ°ಗೋಪಾಲಣ್ಣಪೆರ್ಲದಣ್ಣಕೊಳಚ್ಚಿಪ್ಪು ಬಾವಪ್ರಕಾಶಪ್ಪಚ್ಚಿಶಾ...ರೀಪುಟ್ಟಬಾವ°ಶಾಂತತ್ತೆಮುಳಿಯ ಭಾವಚುಬ್ಬಣ್ಣಅನಿತಾ ನರೇಶ್, ಮಂಚಿಸಂಪಾದಕ°ಮಂಗ್ಳೂರ ಮಾಣಿದೊಡ್ಡಮಾವ°ಜಯಶ್ರೀ ನೀರಮೂಲೆಪುತ್ತೂರಿನ ಪುಟ್ಟಕ್ಕರಾಜಣ್ಣದೀಪಿಕಾಕಾವಿನಮೂಲೆ ಮಾಣಿಹಳೆಮನೆ ಅಣ್ಣಪವನಜಮಾವಕಳಾಯಿ ಗೀತತ್ತೆಅಡ್ಕತ್ತಿಮಾರುಮಾವ°ವಾಣಿ ಚಿಕ್ಕಮ್ಮಕೆದೂರು ಡಾಕ್ಟ್ರುಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ