“ಅತಿ ಆಶೆ ಇಪ್ಪಲಾಗ,ಅತಿ ಪ್ರೀತಿ ಅಪ್ಪಲಾಗ”-(ಹವ್ಯಕ ನುಡಿಗಟ್ಟು-78)

“ಅತಿ ಆಶೆ ಇಪ್ಪಲಾಗ, ಅತಿ ಪ್ರೀತಿ ಅಪ್ಪಲಾಗ”-(ಹವ್ಯಕ ನುಡಿಗಟ್ಟು-78)

ಈಚ ಮನೆ ಶಂಭು ಅಣ್ಣಂಗೂ ಆಚಮನೆ ಕಿಟ್ಟಣ್ಣಂಗೂ ಗಳಸ್ಯ-ಕಂಠಸ್ಯ!.ಎಲ್ಲಿಗೆ ಹೋವುತ್ತರೂ  ಒಟ್ಟಿಂಗೇ, ದಿನಲ್ಲಿ ನಾಲ್ಕಾರು ಸರ್ತಿ ಒಬ್ಬಕ್ಕೊಬ್ಬᵒ ಬೇಟಿ ಆಗಿ ಮಾತಾಡೀಯೊಳದ್ರೆ,ಅವಕ್ಕೆಉಂಡದು ಶರೀರಕ್ಕಿಡಿಯಾಳಿ ಶಾರದೆ ಅಕ್ಕನೂ ಸರಸಕ್ಕನೂ ಹೇಳ್ಳಿದ್ದು.

”ಈ ವರ್ಷಾಣ ನಿತ್ಯ ಸುತ್ತುವ ವಸ್ತ್ರ ತೆಗದಾತೊ ಶಾರದೆಕ್ಕೊ ನಿನಗೆ”?.ಸರಸಕ್ಕ ಕೇಳಿಯಪ್ಪಗ; “ಎಲ್ಲಿಂದ!,ಮನೆಸಾಮಾನು ಮುಗುದ್ದು,ಅದರ ತರೆಕು, ಮಕ್ಕಳ ಶಾಲೆ ಫೀಸು, ದನಗಳ ಹಿಂಡಿ,ಬೆಳೂಲು,ಹೀಂಗೆ ಹೇದೊಂಡು ಎನ್ನ ಮಾತಿನ ಹಾರ್ಸಿ ಮಾತಾಡುಸ್ಸೇ ಕಾಣುತ್ತು.ಒಳ್ಳೊಳ್ಳೆ ಕೈಮಗ್ಗದ ಸೀರೆ ಬಯಿಂದಾಡಪ್ಪ ನರಸಿಂಹನ ಟೆಕ್ಸ್ಟೈಲಿಂಗೆ, ನಿಂಗೊಗೊಂ?” ಶಾರದೆಕ್ಕನ ಮರು ಪ್ರಶ್ನೆ.

“ಇಲ್ಲೆಪ್ಪಾ.., ಇಲ್ಲಿ ಮಾತಾಡುವಗಳೂ ಅದೇ ವರಸೆ! ತಂದಪ್ಪಗ ಹೊಸತ್ತು ಸುತ್ತಿಗೊಳ್ಸು. ಅವಕ್ಕೂ ಅರಡಿತ್ತನ್ನೆ!”.

ಇಬ್ರು ಜೋಸ್ತಿಗೊಕ್ಕೂ ಸಮಯ ಪ್ರಜ್ಞೆಲಿ ಸಮಾಧಾನ ತಂದೊಂಡ್ರೂ ಮನಸ್ಸಿನೊಳಾಂದ ಬೇಜಾರಾದ್ದು ಅಪ್ಪು.

“ಏ ಭಾವಯ್ಯ, ದಾರಾ-ಧೂರಿ ಮಾಡದ್ದೆ, ರೆಜ ಕೈ ಬಲಿಕ್ಕೆ ಮಾಡಿ, ಒಳುಶಿಗೊಳದ್ರೆ,ಮಗಳಕ್ಕಳ ಮದುವೆ ಮಾಡಿಕೊಡೆಕು,ಹೊಸಮನೆ ಕಟ್ಟೇಕು, ಮಾಣಿಯಂಗಳ ಅನುಪತ್ಯ ಆಯೇಕು.” ಹೇದು ಇಬ್ರೂ ಖರ್ಚಿ ತೂಷ್ಣಿ ಮಾಡೀ ಒಳುಶಿದೊವು ಪಾಪ!. ಹೊಟ್ಟೆ-ಬಾಯಿ ಕಟ್ಟಿದವು, ರಜ ಪೈಸ ಕಟ್ಟಿ ಮಡಗಿದ ಅವಕ್ಕೆ; ಈಗ ಮೋದಿ ಅಜ್ಜನ ಕಾನೂನು ಬಂದಪ್ಪಗ ’ಅಯ್ಯನೆ ಮಂಡೆ’ ಹೇದಪ್ಪಲೆ ಸುರುವಾತು. ಬೇಕಾದ್ದಕ್ಕೆ ಖರ್ಚು ಮಾಡದ್ದೆ, ಪೀನಾರಿತನ ಮಾಡಿದ್ಸು ತಪ್ಪಾತೂಳಿ ಆತು.

ಶಂಭಣ್ಣನ, ಕಿಟ್ಟಣ್ಣನ ಲೋಗ್ಯ ಹೇಳಿರೆ,ಸೂಜಿ+ನೂಲು ಹೇದು ನೆಗೆ ಮಾಡುಗು. ಆದರೆ ಇತ್ತಿತ್ತಲಾಗಿ ಅವಕ್ಕಿಬ್ರಿಂಗೂ ರೆಜ ಮುರುಸಿದ್ದು, ಈಗ ಸೂಜಿ ಒಳಾಂಗೆ ನೂಲು ಹೋವುತ್ತೇ ಇಲ್ಲೇಳಿ ಕುಶಾಲು ಮಾಡುಗು ಹತ್ತರಾಣವು.

ಈ ಎರಡು ಪ್ರಕರಣಂದ ಹೆರಿಯವು ಹೇಳ್ತ “ಅತಿ ಆಶೆ ಇಪ್ಪಲಾಗ,ಅತಿ ಪ್ರೀತಿ ಅಪ್ಪಲಾಗ” ಹೇಳ್ತ ಮಾತು ನೆಂಪಾವುತ್ತು.

——–೦——–

ವಿಜಯತ್ತೆ

   

You may also like...

7 Responses

 1. Shyam says:

  ವಿಜಯತ್ತೆ ಲೈಕ iddu

 2. ಧನ್ಯವಾದ ಶ್ಯಾಮ್, ದೊಡ್ಡಪ್ಪನತ್ರೆ ಓದಲೆ ಹೇಳು.

 3. ನೂರಕ್ಕೆ ನೂರು ಸತ್ಯ ವಿಜಯತ್ತೆ
  ತುಂಬಾ ಜೆನ ಹೀಂಗೆ ಮಾಡಿ ಸೋತಿದವು

 4. ಅಪ್ಪು ಡಾಕ್ಟ್ರೆ, ಇತ್ತೀಚೆಗಾಣ ಪ್ರಸಂಗದೊಟ್ಟಿಂಗೆ ಬಹು ಹಿಂದಾಣದ್ದು ನೆಂಪಾತು. ಒಂದೊಂದು ಪ್ರಸಂಗ ನವಗೆ ಅದಕ್ಕೆ ಹೊಂದಿಕೆ ಆವುತ್ತಾಂಗಿದ್ದು ನೆಂಪಾವುತ್ತಿದ

 5. ಮದಲೊಂದರಿ ಫೈನಾನ್ಸಿನವು ನುಂಗಿದವು
  ಈಗ ಹೀಂಗೆ ಆತು
  ಆದರೂ ನಮ್ಮವು ಬುದ್ದಿ ಕಲಿತ್ತವಿಲ್ಲೆ

 6. S.K.Gopalakrishna Bhat says:

  ಅತಿ ಸರ್ವತ್ರ ವರ್ಜಯೇತ್

 7. ಗೋಪಾಲ ಹೇಳ್ತು ಸರಿ. ’ಏರಿಯಾಂಗ್ಲಿ ಕೊರೆವು’ ಹೇಳಿ ಮಲೆಯಾಳ ಗಾದೆಯೂ ಇದ್ದನ್ನೆ!.

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *