ಅಪ್ಪಯ್ಯ

April 10, 2016 ರ 1:00 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಪ್ಪಯ್ಯಂಗೆ ಮಾಸ್ತರಿಕೆ ಮಾಡಿ ಗೊತ್ತಿದ್ದು
ಕಶ್ಟಾ ತ್ರಾಸುಸಹಿಸ್ಕಂಡಿ ಕಲಿಸಿ ಗೊತ್ತಿದ್ದು
ಸರ್ಕಾರಿ ಕೆಲ್ಸ ಮಾಡೂಲಕ್ಕೆ
ಅಪ್ಪಂಗ್ ತ್ರಾಸಾಯ್ದು
ದಮ್ಮು ಕೆಮ್ಮು ಹೇಳ್ಕಂಡಿ
ಜೀವ್ನಾ ಹಾಳಾಯ್ದು!!

ಅಪ್ಪಾದ್ರೂ ಧ್ಯೈರ್ಯ ತಕಂಡಿ
ಕೆಲ್ಸ ಮಾಡಿದ್ದಾ
ನೀರ್ ಹಾಯ್ಕಂಡ್ ಶೀಕಾರ
ಶಾಲೆಗ್ ಮಳೇಲ್ ಹೋಗ್ತಿದ್ದಾ
ಥಂಡಿ ಗಾಳೀಲ್ ದಮ್ಮು ಇನ್ಮೂ ಹೆಚ್ಚಾಗ್ ಹೋಗ್ತಿತ್ತು
ದಾಕ್ಶಿಣ್ಯಾದ್ರೂ ಶೀಕಾರ ಗಂಗಮ್ನ ಮನೇಲ್ ಇರ್ತಿದ್ದಾ!!

ಅಪ್ಪಯ್ಯಂಗೆ ನಾಚ್ಕೆ ಮಾನ ಮರ್ಯಾದಿ ಜಾಸ್ತಿ
ಆದ್ರೆ ಎಂಥದು ಶೀಕಲ್ ಅವಂಗೆ ಬೇಜಾರೆ ಜಾಸ್ತಿ
ಓಡಾಡುಲಾಗ್ದೇ ಅಪ್ಪಾ ಡಬ್ಬೀಲಿ ಕಫ ಉಳ್ಗತಿದ್ದ
ಪಾಯಿಖಾನೆಗ್ ಹೋಪುಲಾಗ್ದೇ ಹಿತ್ಲಲ್ಲೇ ಕೂರ್ತಿದ್ದಾ!!

ಅಪ್ಪಯ್ಯನ ಕಂಡ್ರೆ ನಂಗೆ ಪಾಪ ಅನ್ಸೋಯ್ದು
ಬಿ.ಎ.ಬಿಎಡ್ ಓದ್ಸದ್ದು ಜಾಸ್ತೀನೆ ಅನ್ಸಿದ್ದು
ತಮ್ಮಂಗಂತೂ ಇಂಜನೀಯರಿಂಗ್ ಮಾಡ್ಸೇ
ಕೈತೊಳ್ದಾ
ಕಿರಿ ಮಗಂಗ್ ಎಂ.ಎಸ್ಸಿ. ಮಾಡ್ಸಿ ಲೆಕ್ಚರ್ ಮಾಡ್ಸಬುಟ್ಟಾ!!

ಕೊನೆಗ್ ಅಪ್ಪಾ ಮಾಸ್ತರಿಕೆಗೆ
ವಿ.ಆರ್.ಎಸ್.ತಕಂಡಾ
ನೋವು ಕಶ್ಟಾ ನುಂಗಕಂಡಿ
ಮಕ್ಕಾ ನೋಡ್ಕಂಡಾ
ಆಯಿಗಂತೂ ಜವಬ್ದಾರಿ
ಕಶ್ಟಾ ಆಗ್ತಿತ್ತು
ಕಣ್ಮುಂದ್ ಅಪ್ಪಾ ಮಾತಾಡ್ತಿದ್ರೆ ಖುಶೀಲ್ ಇದ್ದಬುಡ್ತು!!

ಅಪ್ಪಂಗ್ ಈಗಾ ಹಳೇದೆಲ್ಲಾ
ನೆನಪಾಗ್ತಾ ಇತ್ತು
ಮನೀಂದಾ ಹೊರ್ಗೆ ಹೊಗ್ದಗಿದ್ದೆ ಬೇಜಾರೇ ಆಗ್ತು
ಅಪ್ಪಯ್ಯ ಇಪ್ಪಶ್ಟ ದಿನಾನೂ
ನೆಮ್ಮದಿಯಿಂದಿರೊ
ದೇವ್ರು ಅವಂಗೆ ಆಯುಶ್ಯ
ಆರೋಗ್ಯಾ ಕೊಡೊ!!

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಕಲ್ಪನಾ ಅರುಣ್
  kalpana Arun

  ಎದು

  ಇದು ನನ್ನ ಅಪ್ಪನ ಸ್ವಂತ ಅನುಭವದ ವಿಚರದ್ದು

  ಅಪ್ಪಯ್ಯ ಈ ಕವಿತೆ ನನ್ನ ಅಪ್ಪನ ಬಗ್ಗೆಯೇ ಇದ್ದು ಚಲೋ ಇದ್ರೆ ಒಪ್ಪ ಕೊಡಿ ಪ್ಲೀಸೆ

  ಇದು ನನ್ನ ಅಪ್ಪನ ಕುರಿತದ್ದೇ ಹಾಡು .c

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಮಕ್ಕೊಗೆ ಬೇಕಾಗಿ ಅಪ್ಪ/ಅಮ್ಮ ಅದೆಷ್ಟು ಕಷ್ಟ ಬತ್ತವು. ನಿಜವಾಗಿಯೂ ಅವೆಲ್ಲಾ ವಂದನೀಯರು.

  [Reply]

  VA:F [1.9.22_1171]
  Rating: 0 (from 0 votes)
 3. ಶೀಲಾಲಕ್ಷ್ಮೀ ಕಾಸರಗೋಡು
  sheelalakshmi

  ಅರುಣಕ್ಕಾ,
  ಅಪ್ಪಯ್ಯನ್ ಕಷ್ಟಾ ನೆನ್ದು ಬೇಜಾರಾತು,
  ನಿಂಗೆಲ್ರೂ ಅವ್ರ ಜೊತೆಲೇ ಇಪ್ಪದು ಸಂತೋಷ.

  [Reply]

  VA:F [1.9.22_1171]
  Rating: 0 (from 0 votes)
 4. ಶೀಲಾಲಕ್ಷ್ಮೀ ಕಾಸರಗೋಡು
  sheelalakshmi

  ಕ್ಶಮ್ಸಿ ಕಲ್ಪನಕ್ಕಾ,
  ಹೆಸರು ತಪ್ಪಿ ಹೋಯ್ತು.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶೇಡಿಗುಮ್ಮೆ ಪುಳ್ಳಿಗೋಪಾಲಣ್ಣಚೆನ್ನೈ ಬಾವ°ಮಾಲಕ್ಕ°ಮಂಗ್ಳೂರ ಮಾಣಿಡಾಗುಟ್ರಕ್ಕ°ಪುಣಚ ಡಾಕ್ಟ್ರುಮುಳಿಯ ಭಾವದೊಡ್ಮನೆ ಭಾವದೇವಸ್ಯ ಮಾಣಿವಿಜಯತ್ತೆತೆಕ್ಕುಂಜ ಕುಮಾರ ಮಾವ°ಚೂರಿಬೈಲು ದೀಪಕ್ಕಪುತ್ತೂರುಬಾವಎರುಂಬು ಅಪ್ಪಚ್ಚಿಶಾಂತತ್ತೆರಾಜಣ್ಣಶರ್ಮಪ್ಪಚ್ಚಿವಾಣಿ ಚಿಕ್ಕಮ್ಮvreddhiಉಡುಪುಮೂಲೆ ಅಪ್ಪಚ್ಚಿಅಕ್ಷರದಣ್ಣಜಯಶ್ರೀ ನೀರಮೂಲೆಕೆದೂರು ಡಾಕ್ಟ್ರುಬಾವ°ಶಾ...ರೀಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ