ಅಪ್ಪಯ್ಯ ಇವತ್ತು ನಾನು…

August 9, 2015 ರ 1:00 pmಗೆ ನಮ್ಮ ಬರದ್ದು, ಇದುವರೆಗೆ ಒಪ್ಪ ಬೈಂದಿಲ್ಲೆ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಅಪ್ಪಯ್ಯ ನಾಈಗ ಕಲ್ತಕಂಡ್ ಕೂಸೆಯೋ
ನನ್ನ ಜೀವ್ನ ಮಾಡ್ಕಂಬಷ್ಟು ತಾಕತ್ ಇದ್ದವ್ಳೊ
ನನ್ನ ಗಂಡ್ನ ಅರ್ಸಕಂಬ್ಳಕ್ಕೆ ನಂಗೆ ಶಕ್ತಿ ಇದ್ದೊ
ನನ್ನಿಷ್ಠ ಬಾಳೂಲೆ ನಂಗೆ ಹಕ್ಕಿದ್ದೊ||

ನಿಂಗ್ಳ ಕಾಲ್ದಾಂಗ್ ತಲೆಬಗ್ಸೂಲೇ ನಂಗ್ ಆಗ್ತಿಲ್ಯೋ
ಮಾಣಿ ಸಂತಿಗ್ ವಡನಾಡ್ದೆ ಮದ್ವೆ ಆಗ್ತಿಲ್ಯೋ
ಒಬ್ರಿಗೊಬ್ರು ಅರ್ಥ ಮಾಡ್ಕಂಡ್ ಮದ್ವೆ ಆಗವೊ
ಹಾಂಗಾಗಿ ಮೊದ್ಲೆ ನಂಗೆ ಮಾಣಿ ಗೊತ್ತಿರವೊ||

ಹಳ್ಳಿ ಮನೆ ಕೊಟ್ಗೆ ಕೆಲ್ಸಾ ನನ್ನ ಕೈಲಿ ಆಗ್ತಿಲ್ಲೆ
ತೋಟ್ದಲ್ ನಿಂತ್ಕಂಡ್ ನೀರೂ ಗೊಬ್ರ ಉಣ್ಸೂಲೇ ಬತ್ತಿಲ್ಲೆ
ಪೇಟೇಲ್ ನಾನು ಒದ್ಕಂಡಿ ನೌಕರಿ ಮಾಡ್ದವ್ಳು
ಹಳ್ಳಿ ಮಾಣಿ ಮೆಚ್ಚಕಂಬ್ಲೆ ಹೇಂಗೆ ಸಾಧ್ಯಾ ಹೇಳು||

ಪೇಟೇಲಿ ಅವ್ನ ಹತ್ರ ಮನೆ ಮಂದಿರವೊ
ಕಾರು ಬೈಕು ಓಡಾಡುಲಕ್ಕೆ ಮನೇಲಿರವೊ
ಆಫೀಸಿಗೆ ಹೋಪಂತಾ ತಾಕತ್ತಿರವೊ
ನಂಗಿಂತಾ ಹೆಚ್ಗೆ ಸಂಬ್ಳ ತಕಂಬರವೊ||

ಅಪ್ಪಯ್ಯ ನಿನಕೇಲಿ ಆಗ್ತಿಲ್ಲೆ ನಂಗೆ ಮಾಣಿ ಹುಡ್ಕೂಲೇ
ನಾ ಈಗಾ ಒಬ್ಬವ್ನ ಒಪ್ಪಕಂಡ್ ಇದ್ದೆ
ನಾ ಹೇಳ್ದವಂಗೆ ನೀ ಮದ್ವೆ ಮಾಡ್ಕೊಡೊ
ಸುಖಸಂಸಾರ ನಡೇಲಿ ಹೇಳಿ ಆಶೀರ್ವದಿಸವೊ||

ಹವೀಕ್ರೆ ಆಗೊ ಹೇಳಿ ಹಠ ಹಿಡ್ಯಡ್ದೊ
ಪ್ರೀತಿ ಮುಂದೆ ಅದ್ಕೆಲ್ಲಾ ಬೇಲೇನೇ ಇಲ್ಯೊ
ಅಪ್ಪಯ್ಯ ಮುಂದೆ ನಾನು ಛಲೋ ಆಗಿ ಇರವೊ
ಅಂದ್ರೆ ನೀ ಅಳ್ಯಂಗ್ ಮಗ್ಳ ಧಾರೆ ಎರ್ಯವೊ||

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಅಕ್ಷರ°ಶ್ರೀಅಕ್ಕ°ಶ್ಯಾಮಣ್ಣಪುತ್ತೂರಿನ ಪುಟ್ಟಕ್ಕಸುಭಗತೆಕ್ಕುಂಜ ಕುಮಾರ ಮಾವ°ಉಡುಪುಮೂಲೆ ಅಪ್ಪಚ್ಚಿವಿದ್ವಾನಣ್ಣಸುವರ್ಣಿನೀ ಕೊಣಲೆಎರುಂಬು ಅಪ್ಪಚ್ಚಿಒಪ್ಪಕ್ಕಬಟ್ಟಮಾವ°ಗಣೇಶ ಮಾವ°ಅನು ಉಡುಪುಮೂಲೆಯೇನಂಕೂಡ್ಳು ಅಣ್ಣಸಂಪಾದಕ°ವಿನಯ ಶಂಕರ, ಚೆಕ್ಕೆಮನೆಶರ್ಮಪ್ಪಚ್ಚಿಶಾಂತತ್ತೆಕಜೆವಸಂತ°ಶೇಡಿಗುಮ್ಮೆ ಪುಳ್ಳಿಡಾಗುಟ್ರಕ್ಕ°ಕೇಜಿಮಾವ°ಶೀಲಾಲಕ್ಷ್ಮೀ ಕಾಸರಗೋಡುನೀರ್ಕಜೆ ಮಹೇಶvreddhi
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ