ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,           (ಭಾಗ-14)

 

 

ಒಂದು ಕ್ಷಣ ಹರಿಣಿಗೆ ಕಕ್ಕಮಕ್ಕ ಹೇಳ್ತಾಂಗೆ ಆದರೂ ಮನಸ್ಸಿನ ಭಾವನೆಗಳ ಒಂದು ರಜ್ಜವೂ ಹೆರ ತೋರ್ಸದ್ದೆ ನೆಗೆ ನೆಗೆ ಮಾಡಿಯೊಂಡೇ ಮಗಳ ಎದುರುಗೊಂಡತ್ತು,

“ಆಹಾ…ಇದಾರು…ಸುರಭಿಯೋ….ಬಾ…ಬಾ…ಒಂದು ಫೋನು ಮಾಡ್ತಿದ್ದರೆ ಬಸ್ಟ್ಯಾಂಡಿಂಗೆ ಆನೇ ಬತ್ತಿತೆನ್ನೇ…? ಬಾ….” ಹೇಳಿಯೊಂಡೇ ಮಗಳ ಕೈಂದ ಬ್ಯಾಗಿನ ತೆಕ್ಕೊಂಡು ಇನ್ನೊಂದು ಕೈಲಿ ಮಗಳ ಕೈ ಹಿಡಿದು ಒಳಾಂಗೆ ಕರಕ್ಕೊಂಡು ಹೋತು. ಸಣ್ಣಾಗಿಪ್ಪಾಗ ಮಾಡಿಯೊಂಡಿತ್ತಿದ್ದ ಹಾಂಗೆ ಅಬ್ಬೆಯ ಎದೆಲಿ ಮೋರೆ ಮಡುಗಿ ಆ ಕಾಟನ್ ಸೀರೆಯ ಮರ್ಮರಲ್ಲಿ ಮೂಗು ತಿಕ್ಕೇಕು ಹೇಳ್ತ ಆಶೆಯ ಬಲವಂತವಾಗಿ ನುಂಗಿಯೊಂಡು ಸುರಭಿ ಒಳಾಂಗೆ ಹೋತು. ಅಂದು ಅದು ಮನೆ ಬಿಟ್ಟು ಹೋಪಾಗ ಅದರ ಕೋಣೆ ಹೇಂಗಿತ್ತಿದ್ದೋ ಈಗಳೂ ಹಾಂಗೇ ಇಪ್ಪದ್ರ ಅದು ಗಮನಿಸಿತ್ತು. ಧೂಳು, ಕಸವು ಎಂತದೂ ಇಲ್ಲದ್ದೆ ಫಳ ಫಳ ನೆಲಕ್ಕ, ಮಡಿ ಮಡಿ ವಸ್ತ್ರಂಗೋ….ಈಗಷ್ಟೇ ಸುರಭಿ ಅಲ್ಲಿಂದ ಹೆರ ಹೋದಿಕ್ಕಿ ಬಂದದು ಹೇಳ್ತಾಂಗೆ…..

 

“ಸುರಭೀ….ಈಗ ಆರು ಗಂಟೆ ಆತಷ್ಟೇ….ದೊಡ್ಡಾ ಉದಿ ಆಯಿದಿಲ್ಲೆ…,ರಜ್ಜ ಹೊತ್ತು ಒರಗಲಕ್ಕು ಆತೋ…ಆನು ಗೀಸರ್ ಸ್ವಿಚ್ಚು ಹಾಕಿ ಮಡುಗುತ್ತೆ, ನೀರು ಬೆಶಿಯಪ್ಪಾಗ ಮೀವಲಕ್ಕು ಮಿನಿಯಾಂ, ಅಷ್ಟಪ್ಪಗ ಅಪ್ಪನೂ ವಾಕಿಂಗಿಂದ ಬಕ್ಕಿದ. ಇಬ್ರೂ ಒಟ್ಟಿಂಗೆ ಕಾಪಿ ಕುಡಿವಲಕ್ಕು…., ಹರಿಣಿ ಮಗಳ ಹಾಸಿಗೆಯ ಸರಿ ಮಾಡಿ ಅದಕ್ಕೆ ಮನುಗಲೆ ಅಟ್ಟಣೆ ಮಾಡಿ ಕೊಟ್ಟತ್ತು.

 

`ಅಬ್ಬೇ…, ನೀನೆಂತಕೆ ಹೆರಾಣವರ ಹಾಂಗೆ ಎನ್ನ ಸುರಭೀ ಹೆಳಿ ದಿನುಗೋಳ್ತೆ….ಇನ್ನು ಮುಂದೆ ಎಂದಿಂಗೂ ಆನು ನಿನ್ನ ಅದೇ ಹಳೇ ಒಪ್ಪಕ್ಕ ಅಪ್ಪಲೆ ಸಾಧ್ಯವೇ ಇಲ್ಲ್ಯೋ…..’ ಹೇಳ್ತ ಮಾತುಗೊ ಸುರಭಿಯ ನಾಲಗೆ ಕೊಡಿವರೆಂಗೆ ಬಂದ್ರೂ ಅದು ಹೆರ ಬಯಿಂದಿಲ್ಲೆ. ಎಂತಕೆ ಹೇಳಿರೆ ಹರಿಣಿ ಮಗಳ ಕಂಡಪ್ಪದ್ದೆ ಯೇವದೇ ರೀತಿಯ ತಾತ್ಸಾರ, ನಿರ್ಲಕ್ಷ್ಯ ತೋರ್ಸದ್ರೂ ಅದರ ನಡತೆಲಿ, ಮಾತಿಲ್ಲಿ ಮೊದಲಾಣ ಸಲಿಗೆ, ಕೊಂಗಾಟ ಇಲ್ಲದ್ದದು, ದೂರದ ನೆಂಟ್ರ ಉಪಚಸರ್ುವ ಹಾಂಗೆ ಒಂದು ಅಂತರ ಮಡುಗಿಯೇ ಅದು ಮಾತಾಡ್ಸಿದ್ದದೂ ಅಲ್ಲದ್ದೆ ಸುರಭಿಯ ಮನಸ್ಸಿನ ಒಳಾಂದ ಹೊಡಚ್ಚಿ ಹೊಡಚ್ಚಿ ಬಪ್ಪ ಅಪರಾಧೀ ಮನೋಭಾವ….ಇದೆಲ್ಲವೂ ಸೇರಿ ಅವರಿಬ್ರ ನೆಡೂಕೆ ಒಂದು ಅದೃಶ್ಯ ಗೋಡೆಯೇ ನಿಮರ್ಾಣ ಆತು. ಆಸ್ಪತ್ರೆಲಿಪ್ಪಾಗಾದ್ರೆ ಆದಿತ್ಯನ ಸಹಜ ಸರಳ ನಡವಳಿಕೆಯೆಡೆಲಿ ಇದೆಲ್ಲ ಗೌಣವಾಗಿತ್ತಿದ್ದು. ಅಡಿಗೆ ಕೋಣೆಗೆ ವಾಪಾಸು ಹೋದ ಹರಿಣಿ ತೆಳ್ಳವಿಂಗೆ ಕಡಕ್ಕೊಂಡು ಇತ್ತಿದ್ದೋಳು ಅದರ ಕರೇಂಗೆ ಮಡುಗಿ ಅಕ್ಕಿ ಹೊಡಿಯ ರೊಟ್ಟಿ ಮಾಡ್ಲೆ ಹೆರಟತ್ತು. ಮಗಳ ಇಷ್ಟ ಅಯಿಷ್ಟಂಗಳ ಅಬ್ಬೆಯಾದೋಳಿಂಗೆ ಮರವಲೆಡಿಗೋ? ಸುರಭಿ ಹೋದ ಮತ್ತೆ ರೊಟ್ಟಿ ಮಾಡ್ತ ಅಭ್ಯಾಸವೇ ಬಿಟ್ಟೋಗಿತ್ತಿದ್ದು. ಹಾಂಗಾಗಿ ಈಗ ಅಕ್ಕಿ ಹೊಡಿ ಡಬ್ಬಿಯ ಹುಡ್ಕೇಕಾಗಿ ಬಂತು. ಕೈಗೊ ಚಕಚಕನೆ ಕೆಲಸ ಮಾಡಿಯೊಂಡೇ ಇದ್ರೂ ಹರಿಣಿಯ ಮನಸ್ಸು ಯೋಚಿಸಲೆ ಸುರು ಮಾಡಿತ್ತು….

 

`ಆಸ್ಪತ್ರೆಗೆ ಆರದ್ದೋ ಒತ್ತಾಯಕ್ಕೆ ಬಯಿಂದೆ ಹೇಳ್ತಾಂಗಿದ್ದ ಚಯರ್ೆ ತೋಸರ್ಿದ ಸುರಭಿ ಇಂದು ಏಕಾಏಕಿ ಇಲ್ಲಿಗೆ ಬಂದ ಕಾರಣಾದ್ರೂ ಎಂತಾದಿಕಪ್ಪಾ? ಅದೂ ಒತ್ತೆಯಾಗಿ…! ಅಂಬಗ ಮೊನ್ನೆ ಫೋನಿಲ್ಲಿ ಮಾತಾಡುವಾಗ ಒಂದು ಶುದ್ದಿಯೂ ಹೇಳದ್ದು ಏಕೆ…? ಎಂತೋ ತರಿಕಿಟ ಆಗಿಯೇ ಬಂದದು ಈ ಕೂಸು….ಗೆಂಡ ಹೆಂಡತ್ತಿಯೊಳ ಎಂತಾರೂ ಜಗಳ….ಕೋಪ…ತಾಪ…?? ಉಮ್ಮಪ್ಪಾ…ಆರಿಂಗೆ ಗೊಂತು….? ಬಂದ ಗಳಿಗೆಲಿ ಅದರೆಲ್ಲ ಕೇಳ್ತದು ಎಷ್ಟು ಸರಿ…? ಒಟ್ಟಿಲ್ಲಿ ವಿಷಯ ಎಂತೋ ಕಯಿಕ್ಕೆಯೇ ಇಪ್ಪ ಹಾಂಗೆ ಕಾಣ್ತಪ್ಪ….ಇರಳಿ…ಇರಳಿ…`ಊರಿಗೆ ಬಂದವಳು ಕೇರಿಗೆ ಬಾರಳೇ…ಕೇರಿಗೆ ಬಂದವಳು ನೀರಿಗೆ ಬಾರಳೇ…’ ಹೇಳ್ತಾಂಗೆ ಎಲ್ಲವೂ ನಿಧಾನಕೆ ಗೊಂತಕ್ಕು. ಆನು ಮಾಂತ್ರ ಅಪ್ಪಿ ತಪ್ಪಿಯೂ ಅದರ ಜೀವನದ ಬಗ್ಗೆ ತೊಳಚ್ಚಲೆ ಹೋವುತ್ತಿಲ್ಲೆ. ಅದು ಅಂದೇ ಹೇಳಿದ್ದನ್ನೇ…`ಎನ್ನ ವೈಯ್ಯಕ್ತಿಕ ಜೀವನ…’ ಹೇಳಿ…? ಮನೆಗೆ ಆರು ಬಂದ್ರೂ ಚೊಕ್ಕಕೆ ಉಪಚಸರ್ಿ ಕಳುಸೇಕಾದ್ದದು ಎನ್ನ ಧರ್ಮ….,ಅದರ ಮಾಡಿಯೊಂಡು ಹೋಪದು….ನಂಬಿದ ಆ ಶಕ್ತಿ ಇದುವರೆಂಗೂ ಕೈಹಿಡಿದು ನೆಡಸಿದ್ದು….ಇನ್ನು ಮುಂದೆಯೂ ಹಾಂಗೇ ಇಕ್ಕಷ್ಟೆ. ಹಾಂಗಾದ ಕಾರಣ ಸುರಭಿಯ ಆಗಮನದ ಬಗ್ಗೆ ಮಂಡೆ ಬೆಶಿ ಮಾಡೇಕಾದ ಅಗತ್ಯ ಇಲ್ಲೆ…..ಅಂದರೂ ಸುರಭಿಯ ಮದುವೆಯ ಹಿರಿಯರೆಲ್ಲ ಸೇರಿ ಮಾಡಿರುತ್ತಿದ್ರೆ ಈ ನಮೂನೆಲಿ ಅದಕ್ಕೆ ಬರೇಕಾಗಿ ಬತ್ತಿತೋ? ಅಳಿಯಂ ಮಗಳು ಸುರೂವಾಣ ಸತರ್ಿ ಮನೆಗೆ ಬತ್ತಾ ಇಪ್ಪದು ಹೇಳಿಯಪ್ಪಗ ಮನೆಯೊಳ, ಮನಸ್ಸಿನೊಳ ಉಕ್ಕಿ ಉಕ್ಕಿ ಬಪ್ಪ ಸಂಭ್ರಮ, ಸಡಗರವ ಹೇಳಿ ಮುಗುಶಲೆ ಎಡಿತ್ತಿತೋ? ಪಾಯಸ, ಹೋಳಿಗೆಯ ಗೌಜಿ…ಒಳ, ಹೆರ ಸುಧರಿಕೆ ಮಾಡ್ತ ಗೌಜಿ….ಹೂಂ….ಎಲ್ಲದಕ್ಕೂ ಯೋಗ್ಯತಿಗೆ ಬೇಕು….ಅವರವರ ತಲೆಲಿ ಬರದ್ದದೇ ಸಿಕ್ಕುಗಷ್ಟೆ….ಮಗಳಿಂಗೆ ಒಣಕ್ಕಟೆ ರೊಟ್ಟಿಯ ಬೇಶಿ ಹಾಕುತ್ತದೇ ಎನ್ನ ಯೋಗ್ಯತಿಗೆ ಆಗಿದ್ದಿದ್ರೆ ಅದರ ಆರಿಂಗಾರೂ ತಪ್ಸಲೆ ಎಡಿಗೋ…? ಹೇಳಿದ ಹಾಂಗೆ ಮೋಹನಂಗೆ ಸುರಭಿಯ ಆಗಮನ ಹಿತ ಆಗದಿದ್ರೆ…? ಇಷ್ಟ್ರವರೆಂಗೆ ಅಂವ ಅನುಭವಿಸಿದ ಬಂಙವೇ ಸಾಕು. ಇನ್ನು ಮುಂದೆ ಯೇವದೇ ಕಾರಣಕ್ಕೂ ಅಂವ ನೋಯಲೆ ಆಗ. ಹಾಂಗೆ ಹೇಳಿ ಮನೆಗೆ ಬಂದ ಮಗಳ ಮನಸ್ಸಿಂಗೂ ಘಾಸಿಯಾಗದ್ದ ಹಾಂಗೆ ಪರಿಸ್ಥಿತಿಯ ನಿಭಾಯಿಸೇಕಲ್ದೋ…? ಹೆಂಡತ್ತಿಯಾಗಿಯೂ ಅಬ್ಬೆಯಾಗಿಯೂ ಇಬ್ರ ನೆಡೂಕೆ ಎಂತ ಕಟಿಪಿಟಿಯೂ ಆಗದ್ದ ಹಾಂಗೆ ನೋಡಿಯೋಳೇಕಾದ ಗುರುತರ ಜವಾಬ್ದಾರಿಯೂ ಎನ್ನ ಮೇಗೆ ಇದ್ದನ್ನೇ….’

 

“ಹರಿಣೀ…ಹರಿಣೀ…” ದಿನುಗೋಳಿಯೊಂಡೇ ಮೋಹನ ವಾಕಿಂಗು ಮುಗುಶಿ ಒಳಾಂಗೆ ಬಂದ. “ಆರದ್ದು ಹರಿಣಿ ಆ ಮೆಟ್ಟು…?” ಮೆಟ್ಲಿನ ಬುಡಲ್ಲಿ ಅಪರಿಚಿತ ಜೋಡಿನ ಕಂಡು ಅಂವ ಕೇಳಿದ್ದದು.

 

ಹರಿಣಿ ಮಾತಾಡದ್ದೆ ಮಗಳ ಕೋಣೆಯ ಬಾಗಿಲಿಲ್ಲಿ ನಿಂದು ಒಳಾಂಗೆ ಬಗ್ಗಿ ನೋಡಿತ್ತು. ಸುರಭಿ ಗುಡಿಹೆಟ್ಟಿ ಗಡದ್ದಿಂಗೆ ಒರಗಿತ್ತಿದ್ದು. ಆ ಕೋಣೆಯ ಬಾಗಿಲಿನ ಮೆಲ್ಲಂಗೆ ಎರಶಿಕ್ಕಿ ಮೋಹನನತ್ರೆ ಬಂದು ಪಿಸಿ ಪಿಸಿನೆ ಹೇಳಿತ್ತು,

 

“ಇದಾ…ಸುರಭಿ ಬಯಿಂದು, ನಿಂಗೋ ಅದರತ್ರೆ ಕೋಪುಸಲಾಗ….,ಎನಗೆ ಬೇಕಾಗಿಯಾದ್ರೂ ಅದು ಇಲ್ಲಿ ಇಪ್ಪಷ್ಟು ದಿನ ಅದರತ್ರೆ ಚೆಂದಕೆ ಇರೇಕು…,ನಾವು ಎಷ್ಟಾದ್ರೂ ಅದರ ಅಬ್ಬೆ ಅಪ್ಪಂ ಅಲ್ದೋ…?” ಹೇಳ್ತದ್ರ ಹೇಳಿಕ್ಕಿ ಹರಿಣಿ ನಿರೀಕ್ಷೆಂದ ಗೆಂಡನ ಮೋರೆಯನ್ನೇ ನೋಡಿತ್ತು. ಎಳ್ಳುಕಾಳಿನ ಮೊನೆಯ ಸಾವಿರದ ಒಂದು ಪಾಲು ಹೇಳ್ತಿಲ್ಲ್ಯೋ? ಅಷ್ಟು ಸಣ್ಣ ಗಳಿಗೆಲಿ ಮೋಹನನ ಕಣ್ಣಿಲ್ಲಿ ಫಳಕ್ಕನೆ ಒಂದು ಬೆಣಚ್ಚು ಮೂಡಿ ಮರೆಯಾದ್ದದ್ರ ಹರಿಣಿ ಗಮನಿಸಿಯೇ ಬಿಟ್ಟತ್ತು. ಹರಿಣಿ ಮೋರೆ ತಿರುಗಿಸಿ ಗೋಡೆಲಿಪ್ಪ ಗುರುಗಳ ಪಟವ ನೋಡಿತ್ತು, ಅದೇ ಅನುಕಂಪದ ನೆಗೆಮೋರೆ, ಅದೇ ಅಭಯ ಹಸ್ತ….ತುಂಬಿ ಬಂದ ಕಣ್ಣಿನ ಉದ್ದಿಯೊಂಡು ಮೋಹನನತ್ರೆ ಎಂತೋ ಹೇಳ್ಲೆ ಹೇಳಿ ಅಂವನ ಹೊಡೇಂಗೆ ನೋಡಿತ್ತು. ಅಂವ ಎಲ್ಲಿದ್ದಂ? ಬೈರಾಸು ಸುತ್ತಿಯೊಂಡು ಮೀವಲೆ ಹೋಗಿಯಾಗಿತ್ತಿದ್ದು.

 

ಸುರಭಿ ಎದ್ದು ಮಿಂದಿಕ್ಕಿ ಕಾಪಿ ಕುಡಿವಲೆ ಬತ್ತದೂ ಮೋಹನ ಪೂಜೆ ಎಲ್ಲ ಮುಗುಶಿ ದೇವರ ಕೋಣೇಂದ ಹೆರ ಬತ್ತದೂ ಸರೀ ಆತು.

 

“ಸುರಭಿ…,ನೀನು ಕಾಪಿ ಕುಡಿ…,ಎನಗೆ ರಜ್ಜ ಕೆಲಸ ಬಾಕಿ ಇದ್ದು…”ಹೇಳಿಕ್ಕಿ ಮೋಹನ ಅಂವನ ಕೋಣೆಗೆ ಹೋದಂ.

 

`ಅಯ್ಯೋ….ಅಪ್ಪಾಂ…, ನಿಂಗೋಗೂ ಆನು ಹೆರಾಣೋಳು ಆಗಿ ಹೋದನೋ….ಹಾಂಗಾರೆ ನಿಂಗಳ ಒಪ್ಪಕ್ಕ ಸತ್ತೇ ಹೋತೋ….?’ ಸುರಭಿಯ ಸ್ವಗತ ಸಂಭಾಷಣೆ ಆರಿಂಗಾರೂ ಕೇಳೀರೆ ಅಲ್ದೋ ಉತ್ತರ ಬಪ್ಪದು?

 

ಹರಿಣಿ ಸುರಭಿಯೊಟ್ಟಿಂಗೆ ಲೋಕಾಭಿರಾಮ ಮಾತಾಡೇಂಡು ಬೆಶಿ ಬೆಶಿ ರೊಟ್ಟಿ ಮಾಡಿ ಕೊಟ್ಟತ್ತು. ಅಬ್ಬೆಯ ಕೈಯ್ಯ ಹತ್ತಿಯ ಹಾಂಗಿಪ್ಪ ಆ ರೊಟ್ಟಿಗಳ ಅದು ತಿನ್ನದ್ದೆ ಸುಮಾರು ಐದಾರು ತಿಂಗಳೇ ಆಗಿತ್ತಿದ್ದಲ್ದೋ….? ಎಷ್ಟೋ ದಿನಂದ ಉಪವಾಸ ಇತ್ತಿದ್ದವರ ಹಾಂಗೆ ರೊಟ್ಟಿ, ಬೆಣ್ಣೆ, ಚಟ್ನಿ, ಗಟ್ಟಿ ಮಸರು ಎಲ್ಲವನ್ನೂ ಮತ್ತೆ ಮತ್ತೆ ತಿಂದತ್ತು. ಹರಿಣಿಯೂ ನಿರ್ವಂಚನೆಂದ ಮಗಳ ಉಪಚಸರ್ಿತ್ತು. ಮಗಳು ತಿಂಬದ್ರ ತೃಪ್ತಿಂದ ನೋಡಿತ್ತು.

 

“ಸುರಭೀ…,ನೀನು ರಜ್ಜ ರೆಸ್ಟು ತೆಕ್ಕೋ ಮಿನಿಯಾಂ…ಆನು ಅಪ್ಪಂಗೆ ತಿಂಡಿ ಕಾಪಿ ಕೊಟ್ಟಿಕ್ಕೆ ಬತ್ತೆ ಆಗದೋ…?”

ಅಪ್ಪನೆದುರು ಇಪ್ಪದ್ರಿಂದ ತಾನು ಒಳ ಹೋಪದೇ ಒಳ್ಳೇದು ಹೇಳ್ತದ್ರ ಅಬ್ಬೆ ಓರೆಗೆ ಹೇಳಿದ್ದದು ಹೇಳಿ ಅರ್ಥ ಮಾಡಿಯೋಂಬಲೆ ಎಡಿಯದ್ದಷ್ಟು ಬೋಸಿ ಅಲ್ಲನ್ನೇ ನಮ್ಮ ಕಥಾನಾಯಕಿ…

 

ಕಸ್ತಲಪ್ಪಗಾಣ ಹೊತ್ತಿಂಗೆ ಹರಿಣಿ ಸುರಭಿಯ ಕರಕ್ಕೊಂಡು ಪೇಟೆಗೆ ಹೋತು. ಅದಕ್ಕೆ ಇಷ್ಟ ಅಕ್ಕು ಹೇಳಿ ಕಂಡ ಡ್ರೆಸ್ಸುಗಳನ್ನೋ, ಅಲಂಕಾರದ ವಸ್ತುಗಳನ್ನೋ ಅದು ಬೇಕು ಹೇಳದ್ರೂ ತೆಗದತ್ತು. ಐಸ್ಕ್ರೀಂ ಪಾರ್ಲರಿಂಗೆ ಹೋಗಿ ಅದರ ಅಚ್ಚುಮೆಚ್ಚಿನ ಐಸ್ಕ್ರೀಮೋ…ಹಣ್ಣಿನ ರಸವೋ…ಇನ್ನು ಎಂತೆಲ್ಲ ಇದ್ದೋ ಅದೆಲ್ಲವನ್ನೂ ತೆಗಶಿ ಕೊಟ್ಟತ್ತು. ಮನೆಗೆ ವಾಪಾಸಪ್ಪಗ ಮೋಹನ ವೆರಾಂಡಲ್ಲೇ ಕೂದೊಂಡಿತ್ತಿದ್ದಂವ ಎದ್ದಿಕ್ಕಿ ಒಳ ಹೋದಂ. ಸುರಭಿಯ ತಲೆ ತಗ್ಗಿತ್ತು. ಕಣ್ಣು ತುಂಬಿತ್ತು. ಹರಿಣಿ ಇದೇವದ್ರನ್ನೂ ನೋಡಿದ್ದೇ ಇಲ್ಲೆ ಹೇಳ್ತಾಂಗೆ,

“ಇದಾ…,ನಿಂಗೊ ಸುಮಾರು ದಿನಂದ ಸಬ್ಬಸಿಗೆ ಸೊಪ್ಪಿನ ತಾಳು ಮಾಡೇಕು ಹೇಳಿಯೊಂಡಿತ್ತಿದ್ದಿಯಲ್ದೋ…?ಇಂದು ಸಿಕ್ಕಿತ್ತಿದಾ…” ಹೇಳಿಯೊಂಡೇ ಸೀತಾ ಒಳಾಂಗೆ ಹೋತು. ಅಂದರೆ ಇಷ್ಟು ಹೊತ್ತಿಲ್ಲಿ ಹರಿಣಿ ಒಂದು ವಿಷಯವ ಸರಿಯಾಗಿಯೇ ಗಮನಿಸಿತ್ತಿದ್ದು. ಎಂತಾ ಹೇಳಿರೆ ಮೋಹನ ಆಸ್ಪತ್ರೆಲಿಪ್ಪಾಗ ಸುರಭಿಯ ನಡತೆಲಿತ್ತಿದ್ದ ಆ ಸೆಡವು, ಬಿಗುಮಾನ ಈಗ ಇಲ್ಲಲೇ ಇಲ್ಲೆ! ಅಷ್ಟು ಮಾಂತ್ರ ಅಲ್ಲ…, ಎಂತದೋ ಒಂದು ದೊಡ್ಡ ಸಮಸ್ಯೆಯ ಎಳದು ಹಾಕಿಯೊಂಡೇ ಅದು ಇಲ್ಲಿಗೆ ಬಂದದು…ಮೊದಲೆಲ್ಲ ಹರಿಣಿ ಹತ್ತು ಮಾತಾಡೇಕಾರೆ ಇದು ನೂರು ಮಾತಾಡಿಯಕ್ಕು. ಇಂದು ಸರೀ ಉಲ್ಟಾ…ಹರಿಣಿ ಹಾಂಗೋ ಕೇಳೀರೆ ಹಾಂಗೆ…ಹೀಂಗೋ ಕೇಳೀರೆ ಹೀಂಗೆ…, ಈ ಹೊಸ ಸುರಭಿ ಹರಿಣಿಗೊಂದು ಪ್ರಶ್ನೆಯೇ ಆಗಿ ಕಂಡತ್ತು. ಎಂತದೇ ಆಗಲಿ ಮಗಳು ಅದರ ಸಮಸ್ಯೆಗಳ ಬಾಯಿ ಬಿಟ್ಟು ಹೇಳಿರೆ ಮಾಂತ್ರ ತಾನು ಅದ್ರಲ್ಲಿ ಮಧ್ಯಪ್ರವೇಶ ಮಾಡ್ತದು ಹೇಳಿ ಹರಿಣಿ ನಿಶ್ಚೈಸಿ ಆಗಿತ್ತಿದ್ದನ್ನೇ? ಹಾಂಗಾದ ಕಾರಣ ಅದು ಅಳಿಯಂಗೆ ಫೋನು ಮಾಡಿ `ನಿಂಗಳೊಳಾಣ ಕಥೆ ಎಂತರ….?’ ಹೇಳಿಯೂ ಕೇಳ್ಲೆ ಹೋಯಿದಿಲ್ಲೆ. ಮೋಹನನ ಬಗ್ಗೆಯೂ ಆಶಾವಾದಿಯಾಗಿಯೇ ಇತ್ತಿದ್ದು.

 

ಸುರಭಿ ಬಂದು ನಾಲ್ಕೈದು ದಿನ ಆತು. ಅಪ್ಪನೂ ಮಗಳೂ ಒಟ್ಟಿಂಗೆ ಕೂದು ಕಾಪಿಯೋ ಊಟವೋ ಮಾಡ್ತ ಹಾಂಗಿದ್ದ ಸಂದರ್ಭಂಗೊ ಬಪ್ಪಾಗ ಅವರಿಬ್ರೊಳ ತೀರಾ ಔಪಚಾರಿಕವಾದ ಮೂರು ನಾಕು ಮಾತುಗೊ ಎಷ್ಟೋ ಅಷ್ಟೇ….ಮೊದಲೆಲ್ಲ ಅಪ್ಪ ಮಗಳ ಮಾತುಕತೆ ಹೇಳಿರೆ ಮಳೆಕಾಲದ ಜೋಗು ಜಲಪಾತದ ಹಾಂಗೆ….ನೆಗೆ, ಮಾತುಗೋ…ಪರಸ್ಪರ ಚೇಡ್ಸಾಣ….,ಎಲ್ಲವೂ ಅಬ್ಬರಂದ ಹರ್ಕೊಂಡೇ ಇಕ್ಕು. ಈಗ…? ಕಡು ಬೇಸಗೆಯ ಜೋಗಿನ ಹಾಂಗೆ…ಬೇಕೋ ಬೇಡದೋ ಹೇಳಿ ರಜ್ಜ ರಜ್ಜ ನೀರು ತೊಟ್ಟಿಕ್ಕುತ್ತ ಹಾಂಗೆ….

 

ಒಂದು ದಿನ ಇರುಳು ಹರಿಣಿ ಕೆಲಸ ಎಲ್ಲ ಮುಗುಶಿ ಹಾಲಿಂಗೆ ಹೆಪ್ಪು ಹಾಕಿಯೊಂಡಿಪ್ಪಾಗ ಸುರಭಿ ಅಲ್ಲಿಗೆ ಬಂತು.

“ಅಬ್ಬೇ, ನಿನ್ನ ಕೆಲಸ ಎಲ್ಲ ಆತೋ…?” ಸುರಭಿ ಕೇಳಿತ್ತು.

ಹರಿಣಿ ಸರಕ್ಕನೆ ತಿರುಗಿ ಕಣ್ಣರಳ್ಸಿ ನೋಡಿತ್ತು. ಮಗಳ ಸ್ವರಲ್ಲಿತ್ತಿದ್ದ ಆ ಕಂಪನ ಹರಿಣಿ ಆ ನಮುನೆ ನೋಡ್ತ ಹಾಂಗೆ ಮಾಡಿತ್ತು.

 

“ಎಂತ ಬೇಕು ಸುರಭಿ…?” ಹರಿಣಿ ಕಾತರಂದ ಕೇಳಿತ್ತು. ಇಲ್ಲಿಗೆ ಬಂದ ಲಾಗಾಯ್ತಿಂದ ಹೆಚ್ಚಿನ ಹೊತ್ತೂದೆ ಅದರ ಕೋಣೆಯೊಳಾವೆ ಕೂದೊಂಡಿಪ್ಪ ಮಗಳು ಇಂದು ತನ್ನ ಹುಡ್ಕಿಯೊಂಡು ಬಂದದೂ ಅಲ್ಲದ್ದೆ ಕಣ್ಣು ನೀರು ಹಾಕುತ್ತ ಪೀಠಿಕೆಯ ಹಾಂಗೂ ಕಾಣ್ತನ್ನೇ…ಹೇಳಿ ಜಾನ್ಸಿಯೋಂಡತ್ತು ಹರಿಣಿ.

 

“ಅಬ್ಬೇ….ಅದೂ….ಆನೂ….” ಸುರಭಿ ತಡದು ತಡದು ಹೇಳ್ಲೆ ಸುರು ಮಾಡಿಯಪ್ಪಾಗಳೇ ವಿಷಯದ ಗಂಭೀರತೆಯ ಅರ್ಥ ಮಾಡಿಯೊಂಡ ಹರಿಣಿ ಕೂಡ್ಲೇ ಸುರಭಿಯ ಭುಜ ಬಳಸಿ ಹಿಡಿದು ಅಲ್ಲೇ ಇಪ್ಪ ಒಂದು ಸ್ಟೂಲಿಲ್ಲಿ ಕೂಬಲೆ ಹೇಳಿತ್ತು.

 

“ಇದಾ…ಆನು ಅಪ್ಪಂಗೆ ಇರುಳಾಣ ಮಾತ್ರೆ ಮದ್ದುಗಳ ಕೊಟ್ಟಿಕ್ಕಿ ಬತ್ತೆ ಮಿನಿಯಾಂ…ಮತ್ತೆ ಮೇಗೆ ಟೇರೇಸಿಂಗೆ ಹೋಪ…ಅಲ್ಲಿ ಮಾತಾಡುವೋಂ ಆಗದೋ….?”

ಹರಿಣಿ ಹಾಂಗೆ ಹೇಳ್ಲೂ ಒಂದು ಬಲವಾದ ಕಾರಣವೇ ಇದ್ದು. ಮಗಳ ಬಗ್ಗೆ ಮೋಹನನ ಮನಸ್ಸಿಲ್ಲಿ ಮದಕದ ಹಾಂಗೆ ಕೂಡಿ ನಿಂದ ಬೇನೆ ಇನ್ನೂ ಆರಿದ್ದಿಲ್ಲೆ ಹೇಳಿ ಅದಕ್ಕೂ ಗೊಂತಿದ್ದು. ಅದರ ಮೇಗಂದ ಈಗ ಅದು ಕಣ್ಣೀರು ಹಾಕುತ್ತರನ್ನೂ ನೋಡಿರೆ ಅಂವಂಗೆ ಹೇಂಗೆ ಆಗೇಡ? ಅದೂ ಅಂವನ ಆರೋಗ್ಯ ಇಷ್ಟು ನಾಜೂಕಾಗಿ ಇಪ್ಪಾಗ…ಮಗಳ ವಿಷಯಲ್ಲಿ ಅಂವ ಎಷ್ಟು ತಣ್ಣಂಗೆ ಹೇಳಿರೂ ಅಂವನ ಆಂಗಿಕ ಭಾಷೆಗಳ, ಕಣ್ಣಿನ ಭಾವನೆಗಳ ಹಿಂದಾಣ ಭಾವವ ಹರಿಣಿಗೆ ಬೇರೆಯವು ಹೇಳಿಕೊಡೇಕೋ? ಹಾಂಗಾದ ಕಾರಣ ಸುರಭಿಯ ವಿಷಯಲ್ಲಿ ಇನ್ನೂ ಇನ್ನೂ ಅಂವ ದುಃಖ ಅನುಭವಿಸುವ ಹಾಂಗೆ ಅಪ್ಪಲಾಗ ಹೇಳಿಯೇ ಅವಂಗೆ ಕಾಣದ್ದ ಜಾಗೆಗೆ ಹೋಗಿ ಮಾತಾಡುವೋಂ ಹೇಳಿ ಅದು ಹೇಳಿದ್ದದು.

(ಇನ್ನೂ ಇದ್ದು)

ಶೀಲಾಲಕ್ಷ್ಮೀ ಕಾಸರಗೋಡು

   

You may also like...

14 Responses

 1. ಅದಿತಿ says:

  ಈ ಸರ್ತಿಯಾಣ ಕಂತು ತುಂಬಾ ಕುತೂಹಲಕಾರಿಯಾಗಿದ್ದು. 🙂 ಸುರಭಿಗೆ ಎಂತಾದ್ದು ಹೇಳುದಕ್ಕಿಂತ ಮೋಹನನ ನಡವಳಿಕೆ ಹೆಚ್ಚು ಆಸಕ್ತಿ ಮೂಡುಸುತ್ತು.

 2. ಹೂಂ. ಅಪ್ಪು ಅದಿತಿ. ನೋಡುವೊಂ ಎಂತೆಲ್ಲ ಆವುತ್ತು…ಹೆಂಗೆಲ್ಲಾ ಆವುತ್ತು ಹೇಳಿ…

 3. ಬೊಳುಂಬು ಗೋಪಾಲ says:

  ಕತೆ ಒಳ್ಳೆ ಸಸ್ಪೆನ್ಸ್ ಲ್ಲಿ ಇದ್ದಾನೆ. ಸುರಭಿ ಎಂತ ಹೇಳುಗಪ್ಪಾ..?? ಆನು, ಆನು ಹಾಂ. ಹಾಂಗೆಂತಾರೂ ಆಯಿಕ್ಕೊ !!?
  ನೋಡೊ ಇನ್ನಾಣ ವಾರ.

 4. sheelalakshmi says:

  ಹೂಂ. ಅಪ್ಪು ಗೋಪಾಲಣ್ಣ, `ಆನು, ಆನು’ ಹೇಳ್ತದೇ ಎಲ್ಲ ಸಮಸ್ಯೆಗೊಕ್ಕೆ ಮೂಲ….

 5. ಕತೆ ಒಂದು ನಮುನೆ ಹೇಂಗೆ ಹೋಕು ಹೇಳ್ತ ಅಂದಾಜಿದ್ದು ..ಅದಲ್ಲಿ ಸುರಭಿಗೆ ಕಾಣದ್ದ ಹಾಂಗೆ ಅರುಂಧತಿ ಎಲ್ಲಿ ಹುಗ್ಗೆಂಡಿಕ್ಕು ಹೇಳ್ತ ಪ್ರಶ್ನೆ. ಅದೀಗ ಕತೆಯ ಕಳಕ್ಕೇ ಇಳುದ್ದಿಲ್ಲೆ! !!!.ಶೀಲಾ ಕತೆಯ ಓಘ ಓದುಸೆಂಡು ಹೋವುತ್ತು.

  • ಶ್ಯಾಮಣ್ಣ says:

   ಅರುಂಧತಿ ಹೇಳಿರೆ ಮದುವೆಲಿ ಭಟ್ಟ ಮಾವ ಮದಿಮ್ಮಾಳಿಂಗೆ ಆಕಾಶ ತೋರ್ಸಿ ‘ನೋಡು ‘ ಹೇಳಿ ತೋರ್ಸುದಲ್ಲದ? ಹಾಂಗೆ ರಿಜಿಸ್ಟರು ಮದುವೇಲಿ ತೋರ್ಸುವೋರು ಆರಿದ್ದವು? ಹಾಂಗಾಗಿ ಸುರಭಿಗೆ ಅರುಂಧತಿ ಕಾಣದ್ದದು….

   • ಶ್ಯಾಮಣ್ಣ says:

    ಬಹುಶ ಆದಿತ್ಯ ಗೂ ಸುರಭಿಗೂ ಈ ಅರುಂಧತಿ ಕಾಣದ್ದ ವಿಷಯಲ್ಲಿ ಸಣ್ಣಮಟ್ಟಿನ ಲಡಾಯಿ ಆಯಿದು. ಅದಕ್ಕೆ ಅರುಂಧತಿ ಎಲ್ಲಿದ್ದು ಹೇಳಿ ಹರಿಣಿ ಹತ್ರೆ ಕೇಳಿ ಕೊಂಡು ಹೋಪಲೆ ಸುರಭಿ ಬಂದದು. ಹೇಂಗೂ ಟೆರೇಸಿಂಗೆ ಹೋವ್ತವನ್ನೇ… ಅಲ್ಲಿ ಹರಿಣಿ ತೋರ್ಸುಗು…

   • sheelalakshmi says:

    ಶಾಮಣ್ಣ, ಯಬ್ಬಾ… Hats off to ur imagination

    • sheelalakshmi says:

     ಶಾಮಣ್ಣಾ, ರಜ್ಜ ಎನಗೂ ಬರವಲೆ ಬಾಕಿ ಮಡುಗಿ ಮಿನಿಯಂ….

    • ಶ್ಯಾಮಣ್ಣ says:

     Hats off to ur imagination – ಇದರ ಹವ್ಯಕಲ್ಲಿ “ನಿಂಗಳ ಕಲ್ಪನೆಗೆ ಟೊಪ್ಪಿ ರಟ್ಟಿತ್ತು” ಹೇಳಿ ಹೇಳ್ಲಕ್ಕು … ಅಪ್ಪೋ…

    • sheelalakshmi says:

     ಶಾಮಣ್ಣ, ಹಾಂ…ಅಪ್ಪು. ಆದರೆ ಟೊಪ್ಪಿ ರಟ್ಟಿತ್ತು ಅಲ್ಲ, ಟೊಪ್ಪಿ ತೆಗದು ಕೈಲಿ ಹಿಡಿದು ನಿಂಗಳ ಅಭಿಪ್ರಾಯವ ಗೌರವಿಸುತ್ತೆ ಹೇಳಿ…

  • sheelalakshmi says:

   ವಿಜಯಕ್ಕ ,ಅರುಂಧತಿ ಬಪ್ಪಲೆ ವೇದಿಕೆ ತಯಾರಾವುತ್ತಾ ಇದ್ದು.

 6. ಮಾದಕದ ಹಾಂಗೆ ಕೂಡಿ ನಿಂದ ಬೇನೆಲಿ ಮದಕ ಹೇದರೆ ಸಣ್ಣ ನೀರಿನ ಹೊಂಡ ಅಲ್ಲದೋ?

 7. sheelalakshmi says:

  ಶಿವರಾಮಣ್ಣ,
  ಗುಡ್ಡೆಗಳ ಮಧ್ಯಲ್ಲಿ ಇಪ್ಪ ಪ್ರಾಕೃತಿಕ ತಗ್ಗು ಪ್ರದೇಶದ ಸುತ್ತಲೂ ಕಟ್ಟೆ ಕಟ್ಟಿ ಮೇಲಂದ ಹರುದು ಬಪ್ಪ ನೀರಿನ ಸಂಗ್ರಹಿಸುವಂತಾದ್ದು ಮದಕ. ಇಲ್ಲಿ ಆನು ಆ ಉಪಮೆ ಎಂತಕೆ ಕೊಟ್ಟೆ ಹೇದರೆ ಮೋಹನ ತನ್ನ ಭಾವನೆಗಳ ಹೆರ ಹಾಕದ್ದೆ ಮೌನದ ಕಟ್ಟೇಲಿ ಅದರ ಬಂಧಿಸಿ ಮಡುಗಿದ್ದ ಅಲ್ಲದೋ? ಕೆರೆ ಲಿಯಾದ್ರೆ ಒರತ್ತೆ ಬಂದು ತುಂಬುತ್ತದು ಅಲ್ದೊ? ಮದಕಲ್ಲಿ ಹೆಂಗೆ ನೀರು ಮೇಲಂದ ಬೀಳ್ತೋ ಅದೇ ರೀತಿ ಮನ ನೋಯುವಂತಾ ಭಾವನೆಗೂ ಹೆರಾಂದ ದಾಳಿ ಮಾಡಿ ಸಂಗ್ರಹ ಆತು ಹೇಳ್ತದು ತಾತ್ಪರ್ಯ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *