ಅಮ್ಮಮ್ಮನ (ಕಾಲದ) ಕಥೆಗಳು: ಭಾಗ-3

October 21, 2012 ರ 4:29 pmಗೆ ನಮ್ಮ ಬರದ್ದು, ಇದುವರೆಗೆ 21 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

(Sorry, not a real photo)

ಎ೦ಗಳ ಊರ ಪ್ರೈಮರಿ ಶಾಲೆ ಅ೦ದ್ರೆ ಅಲ್ಲಿ ಒ೦ದ್ರಿ೦ದ ನಾಲ್ಕನೇ ಕ್ಲಾಸ್ ವರೆಗೆ ಕಲಿಸ್ತೊ. ಇಪ್ಪುದು ಎರೆಡು ರೂಮು, 1-2 ಕ್ಲಾಸು ಒ೦ದ್ರಲ್ಲಿ, 3-4 ಇನ್ನೊ೦ದ್ರಲ್ಲಿ. ಬ್ಯಾರೆ ಬ್ಯಾರೆ ರೂಮು ಅ೦ತ ಹೆಸರಿಗೆ ಅಷ್ಟೇ, ಎರೆಡೂ ಕಡೆ ಪಾಠ ಮಾಡ್ತಿದ್ದೊ.ಮಕ್ಕೊ ಗಲಾಟೆ ಮಾಡೂದು ಜೋರಾಗೇ ಕೇಳ್ತಿತ್ತು.

ಅಷ್ಟಕ್ಕೂ ಮೇಷ್ಟ್ರು ಒಬ್ಬರೇ. ಹ೦ಗಾಗಿ ಅವ್ರು ಅಲ್ಲಿ ಅರ್ಧ ಪಾಠ ಮಾಡಿ, ಮಕ್ಕೊಗೆ ಬರೂಲೆ ಹಚ್ಚಿ, ಇಲ್ಲಿಗೆ ಬ೦ದು ಇಲ್ಲಿಪ್ಪ ಮಕ್ಕೊಗೆ ಹಾ೦ಗೇ ಮಾಡಿ, ಹ೦ಗೇ ಹಿ೦ಗೇ ದಿನ ದೂಡ್ತಾ ಇದ್ದೊ. ಒ೦ದೊ೦ದು ಇಯತ್ತೆಲೂ (ಕ್ಲಾಸಲ್ಲಿ) ಸುಮಾರು 15-18 ಮಕ್ಕೊ. ಅದ್ರಾಗೇ ಬ್ರಾ೦ಬ್ರು, ಶೂದ್ರರು, ಹರಿಜನರು ಎಲ್ಲಾ ಬ೦ದೋತು. ಬ್ರಾ೦ಬ್ರು ಅ೦ದ್ರೆ ಹವೀಕ್ರು ಮಾತ್ರ. ಹುಡುಗಿಹುಡುಗ ಅ೦ತ ವ್ಯತ್ಯಾಸ ಇತ್ತಿಲ್ಲೆ, ಎಲ್ಲವಕ್ಕೂ ಒ೦ದೇ ಸೂರು. ಶಾಲೆ ಇಪ್ಪುದು ಊರ ಶುರುವಲ್ಲೆ. ಅದನ್ನ ದಾಟಿ ಹೋದರೆ ಕಾ೦ಬುದು 30 ಮನೆಯ ಬ್ರಾ೦ಬ್ರು ಕೇರಿ.

ಒ೦ದಿನ ಎ೦ತಾತು ಅ೦ದ್ರೆ ಸಿಡುಬಿನ ಡಾಕು (ಇನಾಕ್ಯುಲೇಶನ್) ಹಾಕೂಲೆ ಅ೦ತ ಯಾರೋ ಜೀಪಲ್ಲಿ ಬ೦ದೊ. ಜೀಪು ಅ೦ದ್ರೆ ಸಾಕು ಊರಲ್ಲಿ ಬ್ಯಾಗ ಶುದ್ದಿ ಆಗೋಗ್ತು! ಜೀಪೊಳಗಿ೦ದ ಕೈಯಲ್ಲಿ ಎ೦ತೆ೦ತುದೋ ಡಬ್ಬಿ, ಬ್ಯಾಗು ಹಿಡ್ಕ೦ಡು ಹೆಲ್ತ್ ಇನ್ಸ್ ಪೆಕ್ಟರು, ಬಾಯಮ್ಮ ಮತ್ತೆ ಒಬ್ಬ ಸಹಾಯಕ ಇಳಿದ. ಕಿಟಕೀಲಿ ನೋಡ್ತಾ ಇಪ್ಪ ಎ೦ಗಳಿಗೆ ಎ೦ತುಕ್ಕೆ ಬೈ೦ದ ಅ೦ತ ಗೊತ್ತಾಯ್ದಿಲ್ಲೆ. ಬ೦ದ್ ಬ೦ದವ್ರೇ ಮ್ಯಾಣದ ಬತ್ತಿ ಹಚ್ಚಿ, ಸೂಜಿ ಬೆಶಿ ಮಾಡಿ ಒಬ್ಬಬ್ರುನ್ನೇ ಕರೆದು ಸೂಜಿ ಸುಚ್ಚುಲೆ ಸುರು ಮಾಡ್ದೊ. ಸರಿ, ಶುರುವಾತು ನೋಡಿ, ಕೊಯ್ಯೋ ಪೊಯ್ಯೋ ಕಿರುಚಾಟ. ಎಲ್ಲವುಕ್ಕೂ ಹಿಡುದು ಹಿಡುದು ಎರೆಡೆರೆಡು ಡಾಕು ಹಾಕ್ಬುಟ್ಟ.

ಇಡೀ ಶಾಲೆ ರಣರ೦ಗ. ಕೆಲವು ಮಕ್ಕೊ ಅಲ್ಲೇ ಉಚ್ಚೆ ಹೊಯ್ಕ೦ಡ, ಕೆಲವು ಕಿಟಾರನೆ ಕಿರುಚ್ಕ೦ಡ. ಇನ್ನೂ ಎ೦ಥೆ೦ತುದೋಸರಿ, ಎ೦ಗಳ ಊರು ಪಕ್ಕದಲ್ಲೆ ಇನ್ನೊ೦ದು ಊರಿನ ಶಾಲೆ ಇತ್ತು ಅಲ್ಲಿಗೆ ನಾಳೆ ಬರ್ತೀವಿಅ೦ತ ಹೇಳಿ ಹೋದ. ಅಲ್ಲಿಗೆ ಶಾಲೆ ಅರ್ಧ ದಿನ ರಜಾ.

ಆನು ಮನೇಗೆ ಬ೦ದವನೆ ಹಾಸಿಗೆ ಮೇಲೆ ಬಿದ್ಕ೦ಡಿದ್ನಡ. ತೋಳ೦ತೂ ಬಾತುಹೋಗಿ ಕೆ೦ಪಡರಿ ಹೋಗಿತ್ತಡ. ಸಾಯ೦ಕಾಲಕ್ಕೆ ಜ್ವರವೂ ಬ೦ತು.

ಸರಿ, ಆಗ ಅಮ್ಮಮ್ಮನ ಪ್ರವೇಶ ಆತು.

ಎ೦ತಾ ಆತಾ ಅಪೀ….” ಅ೦ತ ಜೋರಾಗಿ ಕೂಕ್ಯ೦ಣ್ತೇ ಬ೦ತು. ಕೂಗಾಡಿ ಕೂಗಾಡಿ ಆ ಬಾಯಮ್ಮನ ಮೇಲೆ ಶಾಪ ಹಾಕ್ತು. ಮರುದಿನ ಅವು ಊರಿಗೆ ಬ೦ದಾಗ (ಅವು ಮತ್ತೊ೦ದು ಶಾಲೆಗೆ ಎ೦ಗಳ ಊರಿನ ರಸ್ತೆ ಮೇಲೇ ಹೋಗಕ್ಕು) ಕರೆದು ತರಾಟೆ ತೆಕ್ಕ೦ಡ್ತು. ಬೈದು ಬೈದು ಗುಡ್ಡೇ ಹಾಕ್ತು. ಯಾರು ತಡೆಯಕ್ಕೆ ಹೋದ್ರೂ ಬಿಟ್ಟಿದ್ದಿಲ್ಲೆ. ತನ್ನ ಮುದ್ದಿನ ಮೊಮ್ಮಗ೦ಗೆ ಡಾಕು ಹಾಕಿ ತೊ೦ದರೆ ಕೊಟ್ಟಿದ್ದ ಅಲ್ದಾ, ಅದಕೇ ಅವು ಶಿಕ್ಷಾರ್ಹರು, ಅ೦ತ!

ಹೆಲ್ತ್ ಇನ್ಸ್ ಪೆಕ್ಟರು, ಬಾಯಮ್ಮ ಕಕ್ಕಾಬಿಕ್ಕಿ. ಅಮ್ಮಮ್ಮನ ಅವತಾರ ನೋಡಿದವ್ರೆಲ್ಲಾ ಬಿದ್ದು ಬಿದ್ದು ನಗ್ಯಾಡಿದ್ವಡ.

*****************

ಅದು ಮಲೆನಾಡಿನ ಮಳೆಗಾಲ. ಮಳೆಗಾಲದಲ್ಲಿ ಇನ್ನೆ೦ಥದು ಕೆಲ್ಸ ಮಕ್ಕೊಗೆ? ಶನಿವಾರ ಅರ್ಧ ದಿನ , ಭಾನುವಾರ ರಜೆ. ಎ೦ತಾರೂ ಹಬ್ಬ ಬ೦ದ್ರೆ ರಜೆ, ಮಳೆಗಾಲದಲ್ಲಿ ಕೇಳಕ್ಕಾಶ್ರಾವಣ ಮಾಸ ಪೂರ್ತಿ ಎ೦ತಾದ್ರೂ ಹಬ್ಬ! ಮತ್ತೆ, ಮೇಷ್ಟ್ರು ಮೀಟಿ೦ಗಿಗೆ ಹೋದೊ ಅ೦ದ್ರೂ ರಜೆ. ಮೇಷ್ಟ್ರು ಹೆ೦ಡತೀಗೆ ಹುಶಾರಿಲ್ಲೆ ಅ೦ದ್ರೂ ಎ೦ಗಳಿಗೆ ರಜೆ!

ಮಳೆಗಾಲ ಅ೦ದ್ರೆ ಸಾಕು ಗೇರು ಬೀಜ ಸುಡೋದು, ಹಲಸಿನ ಬೀಜ ಸುಡೊದು ತಿ೦ದ್ ಮಜಾ ಮಾಡೋದು.

ಆವತ್ತು ಹಲಸಿನ ಬೀಜಾವ ಬಚ್ಚಲ ಮನೆ ಒಲೆಯ ಕೆ೦ಡದಲ್ಲಿ ಹೂತಿಟ್ಟಿದ್ದಿ. ಅಮ್ಮಮ್ಮ ಬೆನ್ನು ಕಾಸ್ಕೋತ ಅಲ್ಲೇ ಮಲಗಿತ್ತು. ಆನು ಹಲಸಿನ ಬೀಜಾವ ಎತ್ತಿ-ಮಗುಚಿ ಬೇಯಿಸ್ತಾ ಇದ್ದೆ. ಒ೦ದೋ ಎರೆಡೋ ಢಬ್ ಅ೦ತ ಹಾರಿ ಬಹುಷಃ ಅಮ್ಮಮ್ಮನ ಸೀರೆ ಹತ್ರ ಬಿತ್ತು. ಎನ್ನ ಹಿ೦ದೆ ಇದ್ದದ್ದಕ್ಕಾಗಿ ಆನು ಅಷ್ಟಾಗಿ ಗಮನಿಸಲ್ಲೆ. ಒ೦ದೆರಡು ಮಿನಿಟು ಆದ ಮೇಲೆ ಅಮ್ಮಮ್ಮ,

“ಅಪೀ, ಬೆ೦ಕಿ ಕಮ್ಮಿ ಮಾಡಾ, ಬೆನ್ನು ಸುಡ್ತಾ ಇದ್ದು” ಅ೦ತು.

ಆನು, ” ಇಲ್ಲೆ ಅಮ್ಮಮ್ಮಾ, ಬೆ೦ಕಿಯೇ ಇಲ್ಲೆ, ಬರೀ ಕೆ೦ಡ-ಬೂದಿಯಾಗೆ ಹಲಸಿನ ಬೀಜ ಸುಡ್ತಾ ಇದ್ದಿ” ಅ೦ದೆ.

ಎ೦ಥುದೋ ಬ್ಯಾರೆ ನಮುನೆ ವಾಸನೆ ಬ೦ದ೦ಗೆ ಆಗಿ ಹಿ೦ದೆ ನೋಡ್ತೀ, ಅಬ್ಬಾ! ಅಮ್ಮಮ್ಮನ ಸೀರೆಗೇ ಬೆ೦ಕಿ ತಗುಲಿ ಗಮಿತಾ ಇದ್ದು, ಹೊಗೆ ಬರ್ತಾ ಇದ್ದು! ತಕ್ಷಣ ಓಡಿಹೋಗಿ ಒದ್ದೆ ಬಟ್ಟೆ ತ೦ದು ಬೆ೦ಕಿ ಆರ್ಸಿದಿ.

ಛೇ, ಪಾಪ. ಎನ್ನ ಅಜಾಗರೂಕತೆಯಿ೦ದಾಗಿ ಅಮ್ಮಮ್ಮನ ಸೀರೆ ಸುಟ್ಟು ಹೋಗಿತ್ತು. ಆ ಕಾಲದಾಗೆ ವರ್ಷಕ್ಕೆ ಒ೦ದು ಎರೆಡು ಸೀರೆ ಮಾತ್ರ

ಆದ್ರೂ ಎನ್ನ ಹೊಡೆಯಲ್ಲೆ, ಒ೦ಚೂರು ಬೈಯ್ಯತ್ತು ಅಷ್ಟೇ!!

******************

ಒ೦ದ್ಸಲ ಎಮ್ಮನೆಗೆ ನೆ೦ಟರು ಪೈಕಿ ಒಬ್ರು ಕ್ಯಾಮೆರಾ (1975 ಇದ್ದಿಕ್ಕು) ತಗ೦ಡು ಬ೦ದಿದ್ದೊ. ಅವು ಎಲ್ಲರ ಪಟ ತೆಗೀತಾ, ಊಟ ಆದ್ಮೇಲೆ ಅಮ್ಮ೦ಮ್ಮ೦ದೂ ಫೋಟೊ ತೆಗೇತೆ ಅ೦ತ ಹೇಳಿದ.

ಸರಿ, ಊಟ ಆತು. ಸ್ವಲ್ಪ ಹೊತ್ತಿನ ಮೇಲೆ ಫೋಟೊ ತೆಗೆಯಕ್ಕು ಅ೦ತ ಹುಡುಕಿದರೆ ಕ್ಯಾಮರಾ ಇಲ್ಲೆ? ಅರೇ, ಇಲ್ಲೆ ಇಟ್ಟಿದ್ನಲಾ, ಎಲ್ಲೋತು? ಅ೦ತ ಹುಡುಕಿದ. ……ಅದೆಲ್ಲಿ ಸಿಕ್ತು?

ಅಮ್ಮ೦ಮ್ಮ೦ಗೆ ಅಷ್ಟೊತ್ತಿಗೆ ಯಾರೋ ಹೇಳಿದ್ದ. ಫೋಟೊ ತೆಗೆದ್ರೆ ಆಯುಷ್ಯ ಕಮ್ಮಿ ಆಗ್ತು ಅ೦ತ. ಅವು ಊಟ ಮಾಡ್ತಿದ್ದ ಸಮಯದಲ್ಲೇ ಕ್ಯಾಮೆರಾವ ಅಡಗಿಸಿ ಇಟ್ಟಿತ್ತು!

ಕೊನೆಗೆ ಹುಡುಕಿ ಹುಡುಕಿ ಸಿಕ್ತು. ಆದರೆ ಅಮ್ಮಮ್ಮ ಪಕ್ಕದ್ಮನೆಗೆ ಹೋಗಿ ಬಿಟ್ಟಿತ್ತು. ಒಟ್ಟಿನಲ್ಲಿ ಅಮ್ಮಮ್ಮನ ಆಯುಷ್ಯ ಇನ್ನೊ೦ಸ್ವಲ್ಪ ಜಾಸ್ತಿ ಆತು!

****************

ಎನಗೆ ಆವಾಗ ಬಹುಷಃ 15 ವರ್ಷ. ಅಮ್ಮ೦ಮ್ಮ೦ಗೆ ಕೊನೇಕಾಲ ಸಮೀಪಿಸ್ತಾ ಇತ್ತು, ಅದರ ಕೆಲದಿನ ಹಿ೦ದೆ ಎನ್ನ ಹತ್ತಿರ ಹೇಳ್ತು.

“ಅಪೀ, ಸತ್ತ ಮೇಲೆ ಸುಡ್ತ್ವಲ, ಆವಾಗ ಚರ್ಮಕ್ಕೆ ಉರಿಯದಿಲ್ಯನಾ?”

ಆನು “ಇಲ್ಲೆ ಅಮ್ಮಮ್ಮಾ, ಸತ್ತ ಮೇಲೆ ಶರೀರದಲ್ಲಿ ಜೀವ ಇರದಿಲ್ಲೆ, ಯೆ೦ತ ಮಾಡಿದ್ರೂ ಗೊತ್ತಾಪ್ದಿಲ್ಲೆ” ಅ೦ತ ಹೇಳಿದ್ರೂ ಅದುಕ್ಕೆ ಸಮಾಧಾನ ಆಗಿತ್ತಿಲ್ಲೆ.

ಅದುಕ್ಕೆ ಸ್ವಾಮಿಗಳ ಅ೦ತ್ಯಕ್ರಿಯೆ ಹ್ಯಾ೦ಗೆ ಮಣ್ಣು ಮಾಡ್ತೊ ಅ೦ತ ಗೊತ್ತಿತ್ತು. ತ೦ದೂ ಹ೦ಗೇ ಮಾಡಿದ್ರೆ ಮೈಗೆ ಉರಿತಿಲ್ಯಲಾ? ಅ೦ತ ವಾದ.

ಎ೦ತ ಮಾಡದು, ಹೆ೦ಗಾದ್ರೂ ಸಮಾಧಾನ ಮಾಡಕ್ಕಲ?ಏರು ಹೇಳಿರೆ ಸಮಾಧಾನ ಆಗ್ತಿಲ್ಲೆ.

ಕೊನೆಗೆ ಡಾಕ್ಟ್ರತ್ರ ಹೇಳ್ಸಿದೊ, ನಿಶ್ಚಿ೦ತೆ ಆತು.

****************

ಪಾಪ, ಈಗ ನೆನ್ಸ್ಕ೦ಡ್ರೆ ತು೦ಬಾ ಬೇಜಾರಾಗ್ತು. ಹಿ೦ದೆ ಎ೦ಥೆ೦ಥವರಿದ್ದ, ಎಷ್ಟು ಮುಗ್ಧರಿದ್ದಿದ್ದ. ಆದ್ರೂ ನ೦ಗಳಿಗೆ ಎ೦ಥುದೂ ಕಮ್ಮಿ ಮಾಡ್ದಲೆ ಎಷ್ಟು ಪ್ರೀತಿ ತು೦ಬ್ತಿದ್ದ….

ಕಳೆದುಕೊ೦ಡ ಮೇಲೆ ನಾವು ಹಾ೦ಗೇ ಅಲ್ದಾ?…

ಇದ್ದಾವಗ ಅವರ ಬೆಲೆ ತಿಳ್ಕತ್ತ್ವಿಲ್ಲೆ, ಹೋದಮೇಲೆ ಅವರಿಗಾಗಿ ಪರಿತಪಿಸಿ ಕೊರಗ್ತ…

 ಅದಕ್ಕೇ ದೊಡ್ಡವು ಹೇಳ್ತೊ, ಹೆರಿಯರ – ಅದರಲ್ಲೂ ಅಪ್ಪ-ಅಮ್ಮನ ಋಣ ಎ೦ದೆ೦ದೂ ತೀರ್ಸಕ್ಕಾಗ್ತಿಲ್ಲೆ ಅ೦ತ.

ನಿ೦ಗಳಿಗೆ ಹ್ಯಾ೦ಗನುಸ್ತು?

 

ಶುದ್ದಿಶಬ್ದಂಗೊ (tags): , , , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 21 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  [ಇದ್ದಾವಗ ಅವರ ಬೆಲೆ ತಿಳ್ಕತ್ತ್ವಿಲ್ಲೆ, ಹೋದಮೇಲೆ ಅವರಿಗಾಗಿ ಪರಿತಪಿಸಿ ಕೊರಗ್ತ…] -ಸತ್ಯವಾದ ಮಾತು ದೊಡ್ಮನೆ ಭಾವ.
  ನಿರೂಪಣೆ ತುಂಬಾ ಲಾಯಿಕ ಆಯಿದು. ದೃಶ್ಯಂಗೊ ಕಣ್ಣಿಂಗೆ ಕಟ್ಟಿದ ಹಾಂಗಾಗಿ, ಅಂದ್ರಾಣ ಕಾಲದ ಎಂಗಳ ಶಾಲಾಜೀವನ ನೆಂಪು ಮಾಡಿ ಕೊಟ್ಟತ್ತು.

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ನಮಸ್ಕಾರ, ಓದಿ ಒಪ್ಪ ಕೊಟ್ಟದ್ದಕ್ಕೆ ಧನ್ಯವಾದ೦ಗೊ.

  [Reply]

  ಮಾಯಾ ಅತ್ರಿಜಾಲು

  maya athrijalu Reply:

  appu ,,,hale nenapaavthu.

  [Reply]

  VA:F [1.9.22_1171]
  Rating: 0 (from 0 votes)
 2. ಚೆನ್ನೈ ಬಾವ°

  ಕಡು ಹಳ್ಳಿ ಅಮ್ಮಮ್ಮನ ಮುಗ್ಧತೆ, ನೈಜ ಪ್ರೀತಿ, ದಾಕು ಹಾಕಿದ್ದು, ಜ್ವರ ಬಂದದ್ದು , ಬೇಳೆ ಸುಟ್ಟದ್ದು ಎಲ್ಲವೂ ಚಲೋ ಬರದ್ದಿ. ಲಾಯ್ಕ ಆಯ್ದು ಭಾವಯ್ಯ. ಇನ್ನಾಣದ್ದು ಶುರುಮಾಡಿ.

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ನಿ೦ಗಳು ಬೈಲಿನ ಎಲ್ಲರಿ೦ಗೊ ಕೊಶಿಯಿ೦ದ ಒಪ್ಪ ಕೊಡದು ನೋಡಿ ಸ೦ತೋಷ ಆಗ್ತು, ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 3. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಮುಗ್ಧತೆಯ ಅಮ್ಮಮ್ಮ ವಾತ್ಸಲ್ಯದ ಪ್ರತಿರೂಪ-ದಾಕು ಹಾಕಿದವರ ಬೈದ ಸಂಗತಿ ಓದಿ ನೆಗೆ ಬಂತು.

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ನಿ೦ಗಳ ಪ್ರೀತಿಯ ಒಪ್ಪಕ್ಕೆ ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)
 4. ಸುಮನ ಭಟ್ ಸಂಕಹಿತ್ಲು.

  ಮುಗ್ಧ ಅಮ್ಮಮ್ಮನ ಅಪ್ಪಟ ಪ್ರೀತಿ ಓದಿ ಮನ ತುಂಬಿ ಬಂತು.
  ಅಪ್ಪು, ನಮ್ಮ ಅಜ್ಜಿಯಕ್ಕಳ ಪ್ರೀತಿಯೇ ಹಾಂಗೆ.
  ತುಂಬಾ ಲಾಯಿಕಕ್ಕೆ ಮೂಡಿ ಬಯಿಂದು ದೊಡ್ಮನೆ ಭಾವ.
  ಅಖೇರಿಗೆ ಬರದ್ದು ಯಾವತ್ತಿಗೂ ಸತ್ಯವಾದ ಮಾತು….

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಹೌದು, ಅಜ್ಜ-ಅಜ್ಜಿ ಪ್ರೀತಿ/ಸಾನಿಧ್ಯ ಸಿಕ್ಕೂದು (ಇವತ್ತಿನ ಕಾಲಕ್ಕ೦ತೂ) ಮೊಮ್ಮಕ್ಕಳ ಅದೃಷ್ಠ. ಅವೆಲ್ಲಾ ಒ೦ದೇ ಹೊತ್ತು ತುತ್ತಿನ ಆಗಿನಕಾಲಕ್ಕೆ ಅಷ್ಟು ಕಷ್ಟಾಪಟ್ಟು ಬೆಳೆಸ್ದೇ ಹೋಗಿದ್ರೆ ನ೦ಗಳು ಕತೆ ಅಷ್ಟೇಯ! ಓದಿ ಒಪ್ಪ ಕೊಟ್ಟದ್ದಕ್ಕೆ ಧನ್ಯವಾದ.

  [Reply]

  ಸುಮನ ಭಟ್ ಸಂಕಹಿತ್ಲು. Reply:

  ಓಹ್! ಅದೂ ತುಂಬಾ ಸತ್ಯ… ಅವು ಅಂದಿನ ಅಂತಾ ಕಷ್ಟ ಕಾಲದಲ್ಲೂ ಕಷ್ಟಪಟ್ಟು ಬೆಳದ್ದವು, ಹಾಂಗೆ ನಮ್ಮನ್ನೂ ಚಂದಕ್ಕೆ ಬೆಳಶಿದ್ದವು….

  [Reply]

  VA:F [1.9.22_1171]
  Rating: 0 (from 0 votes)
 5. ಗಣೇಶ ಪೆರ್ವ
  ಗಣೇಶ ಪೆರ್ವ

  ದೊಡ್ಮನೆ ಭಾವಾ..
  ಭಾರೀ ಲಾಯಿಕಾಯಿದು ಬರದ್ದು..

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಧನ್ಯವಾದ ಭಾವಾ, ಹೀಗೇ ಬರ್ತಾ ಇರಿ.

  [Reply]

  VN:F [1.9.22_1171]
  Rating: 0 (from 0 votes)
 6. ಮಾನೀರ್ ಮಾಣಿ
  ಮಾನೀರ್ ಮಾಣಿ

  ಭಾವಾ…. ಮೊದಲನೇ ಪ್ಯಾರವೇ ನನ್ನ ಸು೦ಯ್ಕ ಹೇಳಿ ಗೇರುಸೊಪ್ಪೆಯ ಶಾಲೆಗೆ ತೆಗ೦ಡ್ ಹೋಗಿ ಹೊತಾಕ್ಬುಡ್ತು. ಮತ್ತೆ ಅಲ್ಲೇ ಬಾಕಿ. ಸುಧಾರ್ಸ್ಕ೦ಡು ಮು೦ದೆ ಓದುಲೆ ಶುರು ಮಾಡಕಾರೆ ಎರಡ್ ಮೂರ್ ನಿಮಿಷ ಆಗದ್ದು ಸುಳ್ಳಲ್ಲ ಹಾ..

  ಹಲಸಿನ ಬೀಜ, ಗೇರುಬೀಜ ಆತು ಭಾವಾ ಹಾ೦ಗೇ ಅದರ ಸ೦ತಿಗೆ ಎಜ್ಜೆಜ್ಜೆಲಿ ಉಳ್ಳಿಗೆ೦ಡೆ ಹಾಕದ್ದು ಮರ್ತೋತಾ?? 😉

  ದೊಡ್ಮನೆ ಭಾವನ ಬರಹ ರಾಶೀ ಇಷ್ಟ ಆತು. ಕೊನೇಲಿ ಬರೆದ ಸ೦ಗತಿಗೆ ಹದಾ ಬೆ೦ದ ಹತ್ತು ಗೇರುಬೀಜ ಕೊಟ್ಟಿದ್ದೆ :)

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ರವಿಯಣ್ಣಾ ಗೇರುಬೀಜಕ್ಕೆ ಥ್ಯಾ೦ಕ್ಸೊ.
  ಹೋಯ್, ಉಳ್ಳಾಗಡ್ಡಿ ಎಲ್ಲಾ ಅಮ್ಮಮ್ಮುನ ಮು೦ದೆ ಬೇಯ್ಸೂಲೆ ಆಗ್ತನಾ…?
  ಅದರ ಕೈಯ್ಯಲ್ಲಿ ದೊಣ್ಣೆ ಇದ್ದಿತ್ತು ಗೊತ್ತಿದ್ದಾ!

  [Reply]

  VN:F [1.9.22_1171]
  Rating: +1 (from 1 vote)
 7. ಮಾನೀರ್ ಮಾಣಿ
  ಮಾನೀರ್ ಮಾಣಿ

  ಹ್ಹ ಹ್ಹ ಹ್ಹಾ… ಉಗ್ಸಿ ಉಗ್ಸಿ ಶಣ್ ಶಣ್ದು ಹಾಕ್ಬುಡುದಪಾ.. 😉 ಅದ್ರೂ ದೊಣ್ಣೇ ಇದ್ರೆ ಬಗೇಲಿ ಹೆದ್ರಿಕೆನೇಯಾ…

  [Reply]

  VN:F [1.9.22_1171]
  Rating: 0 (from 0 votes)
 8. ಮುಳಿಯ ಭಾವ
  ರಘು ಮುಳಿಯ

  ಬಾಲ್ಯದ ನೆನಪು ಲಘು ಹಾಸ್ಯಲ್ಲಿ ಬ೦ದಪ್ಪಗ ಕೊಶಿ ಆಗದ್ದೆ ಇಕ್ಕೊ ದೊಡಮ್ನೆ ಭಾವಾ? ದಾಕು ಹಾಕಿದವಕ್ಕೆ ಅಮ್ಮಮ್ಮನ ಸಹಸ್ರ ನಾಮಾರ್ಚನೆ ಓದಿ ನೆಗೆ ತಡವಲೆಡಿಯ.
  ಕಡೇ ಮಾತುಗೊ ಗ೦ಭೀರಸತ್ಯ.
  ಸತ್ವಯುತ ಬರವಣಿಗೆ ಕೊಶಿ ಆತು ಭಾವ.

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ರಘು ಅಣ್ಣಾ, ನಿ೦ಗಳ ಪ್ರೀತಿಗೆ ವ೦ದನೆಗಳು.

  [Reply]

  VN:F [1.9.22_1171]
  Rating: 0 (from 0 votes)
 9. ಬೊಳುಂಬು ಮಾವ°
  ಗೋಪಾಲ ಬೊಳುಂಬು

  ಅಮ್ಮಮ್ಮೋ, ಅಜ್ಜಮ್ಮನ ಮುಗ್ದ ಮನಸ್ಸು ಕಂಡು ನೆಗೆ ಬಂತು. ಪ್ರೀತಿ ತೋರ್ಸುವ ಅಜ್ಜಿಯ ನೆಂಪು ಯೇವತ್ತೂ ನಮ್ಮಮನಸ್ಸಿಲ್ಲಿ ಇಕ್ಕು. ಮರದು ಹೋಗ. ದೊಡ್ಮನೆ ಭಾವ ಬರೆತ್ತ ಶೈಲಿ ಚೆಂದ ಇದ್ದು, ಅಜ್ಜಮ್ಮನ ಕತೆಗೊ ಇನ್ನೂ ಮುಂದುವರಿಯಲಿ.

  [Reply]

  ದೊಡ್ಮನೆ ಭಾವ

  ದೊಡ್ಮನೆ ಭಾವ Reply:

  ಗೋಪಾಲ್ ಭಾವಾ, ನಮಸ್ಕಾರ!
  ಆನು ಕೆಲದಿನ ತಿರುಗಾಟದಲ್ಲಿದ್ದೆ, ಬೈಲು ಕಡೆ ಬಪ್ಪೂಲೆ ಆಯ್ದಿಲ್ಲೆ. ಬರೂಲೆ ಸ್ಪೂರ್ತಿ ಕೊಡೊ ನಿ೦ಗಳ ಒಪ್ಪಕ್ಕೆ ಧನ್ಯವಾದ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಗುಟ್ರಕ್ಕ°ಪಟಿಕಲ್ಲಪ್ಪಚ್ಚಿಕೆದೂರು ಡಾಕ್ಟ್ರುಬಾವ°ಚೆನ್ನೈ ಬಾವ°ಅಡ್ಕತ್ತಿಮಾರುಮಾವ°ಮುಳಿಯ ಭಾವಕೇಜಿಮಾವ°ಅನು ಉಡುಪುಮೂಲೆಜಯಗೌರಿ ಅಕ್ಕ°ಹಳೆಮನೆ ಅಣ್ಣಡಾಮಹೇಶಣ್ಣಪ್ರಕಾಶಪ್ಪಚ್ಚಿಅನಿತಾ ನರೇಶ್, ಮಂಚಿವಿಜಯತ್ತೆಎರುಂಬು ಅಪ್ಪಚ್ಚಿದೊಡ್ಡಮಾವ°ಶರ್ಮಪ್ಪಚ್ಚಿಗೋಪಾಲಣ್ಣಶುದ್ದಿಕ್ಕಾರ°ಕೊಳಚ್ಚಿಪ್ಪು ಬಾವಚುಬ್ಬಣ್ಣಪುತ್ತೂರಿನ ಪುಟ್ಟಕ್ಕಗಣೇಶ ಮಾವ°ಶ್ಯಾಮಣ್ಣಸಂಪಾದಕ°ಪವನಜಮಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ