“ಅರಸಿಂಗೆ ಸಿಕ್ಕ ಅರೆಹಸಿ”-{ಹವ್ಯಕ ನುಡಿಗಟ್ಟು–61}

July 25, 2016 ರ 6:45 pmಗೆ ನಮ್ಮ ಬರದ್ದು, ಇದುವರೆಗೆ 14 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

  “ಅರಸಿಂಗೆ ಸಿಕ್ಕ ಅರೆಹಸಿ”-{ಹವ್ಯಕ ನುಡಿಗಟ್ಟು-61}

ಆನು ಸಣ್ಣದಿಪ್ಪಗಣ ಒಂದು ಸಂದರ್ಭ.ಅಪ್ಪನೂ ಎಂಗೊ ಮಕ್ಕಳೂ ಉಂಬಲೆ ಕೂಯಿದಿಯೊᵒ.ತೊಂಡೆಕಾಯಿ ತಾಳು ಮಾಡಿದ್ದರ ಮದಾಲು ಬಡುಸಿತ್ತು ಅಬ್ಬೆ. ಮತ್ತೆ ಅಶನ,ತುಪ್ಪ ಹೀಂಗೆಲ್ಲ ಬಟ್ಳಿಂಗೆ ಬಿದ್ದಪ್ಪಗ; ಅಪ್ಪᵒ   ಕೈನ್ನೀರು  ತೆಗದಿಕ್ಕಿ ಉಂಬಲೆ ಸುರುಮಾಡಿಕ್ಕಿ ಎನ್ನತ್ರೆ “ನೋಡು ಮೋಳೆ,  ಅರಸಿಂಗೆ ಸಿಕ್ಕದ್ದದು ನವಗೆ ಸಿಕ್ಕಿತ್ತಿದ!”. ಹೇಳಿದೊವು.ಆನು ಅಪ್ಪನ ಮೋರೆಯನ್ನೇ ಪ್ರಶ್ನಾರ್ಥಕ ಭಾವನೆಂದ ನೋಡಿದೆ!!. ಅಬ್ಬೆ ತಾಳಿನ ಬಾಗವ ಸೌಟಿಲ್ಲಿ ತೆಗದು ಕೈಲಿ ಅಮರ್ಸಿ ನೋಡಿಕ್ಕಿ; “ಆಗ ಇಳುಗುವಗ ಬೆಂದಹಾಂಗೆ ಕಂಡತ್ತಪ್ಪ!”. ಹೇಳಿತ್ತು. “ಆಗ ಬೆಂದಾಂಗೆ ಕಂಡದು ಈಗ ಅರೆಬೆಂದಾಂಗೆ ಆದ್ದೇಂಗೋ”. ಹೇಳೆಂಡು ಬೇರೆ ಎಸರು ಬೆಂದಿ ಮೇಲಾರ ಹಾಕೆಂಡು ಉಂಡಿಕ್ಕಿ ಎದ್ದೊವು.ಅಪ್ಪᵒ  ಹೆರ ಹೋಗಿಯಪ್ಪಗ ಆನು ಅಬ್ಬೆ ಹತ್ರೆ “ಎಂತಕೆ ಅಪ್ಪᵒ  ಅರಸಿಂಗೆ ಸಿಕ್ಕದ್ದದು ನವಗೆ ಸಿಕ್ಕಿತ್ತು. ಹೇಳಿದ್ದದು?”

“ನೀನು ನಿನ್ನ ಅಪ್ಪನತ್ರೇ ಕೇಳು ಹೋಗು” ಹೇಳಿತ್ತು ಅಬ್ಬೆ.ಅಬ್ಬಗೆ ಗೊಂತಿದ್ದೂ ಎನ್ನ ಸಾಗಹಾಕಲೆ ಹೇಳುದೂಳಿ ಎನಗೊಂತಾಯಿದು.ಆದರೂ ಎನಗೆ ಹಾಂಗಿಪ್ಪದರ ತಿಳಿವಲೆ ಕುತೂಹಲ!.

ಅಪ್ಪᵒ  ಹೆರ ಹೋಗಿ ಚಾವಡಿಲಿ ಮನುಗಿದ್ದವಷ್ಟೆ. ಕೇಳಿದೆ.

“ಅದುವೋ.., ನೀನು ಇಂದ್ರಾಣ ತಾಳು ಉಂಡಿದಿಲ್ಲಿಯೊ?.

“ಉಂಡಿದೆ.”

“ಅದು ಸರೀ ಬೇಯಿಂದಿಲ್ಲೆನ್ನೆ!, ಹಾಂಗಿಪ್ಪದೆಲ್ಲ ಅರಸುಗೊಕ್ಕೆ ಸಿಕ್ಕಯಿದ. ಅರಸುಗೊಕ್ಕೆಲ್ಲ ಏನಿದ್ದರೂ ಒಳ್ಳೆದಾಯಿದೋ ತಿಂಬಲೆ ಯೋಗ್ಯವೋ ಹೇಳಿ ಪರಾಮರ್ಶೆ ಮಾಡಿ ನೋಡದ್ದೆ ಕೊಟ್ಟತ್ತ್ಕಂಡ್ರೆ ಅವ್ರಲ್ಲಿಂದ ಬಡುದ್ದೋಡುಸುಗು. ಈಗ ಗೊಂತಾತೊ ?”  ಆನು ಗೊಂತಾತು ಹೇಳಿಯಪ್ಪಗ “ಆತು ಒಂದು ಕ್ಷಣ ಮನುಗುತ್ತೆ” ಹೇದವು. ಹೀಂಗಿಪ್ಪ ಕೆಲಾವು ವಿಷಯಂಗೊ ಪರೋಕ್ಷವಾಗಿ ನಾಟುತ್ತಾಂಗೆ ಹೇಳುದು ನಿಂಗೊ ಕೇಳಿಪ್ಪಿ.

——–೦——-

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 14 ಒಪ್ಪಂಗೊ

  1. ವಿಜಯತ್ತೆ

    ಹರೇರಾಮ ಗೋಪಾಲ . ನಮ್ಮ ಗೋಪಾಲ ಯಾವಾಗಲೂ ಬಪ್ಪವ ಏಕೆ ಬಯಿಂದಯಿಲ್ಲೆ ಹೇಳಿ ಗ್ರೇಶಿತ್ತಿದ್ದೆ.

    [Reply]

    ಗೋಪಾಲಣ್ಣ

    S.K.Gopalakrishna Bhat Reply:

    ಎಂತದೋ ರಜ ಪುರುಸೊತ್ತಿಲ್ಲದ್ದ ಹಾಂಗೆ ಆವುತ್ತು ಒಂದೊಂದು ದಿನ.ಚಿಕ್ಕಮ್ಮ ಬರೆದ ಎಲ್ಲವನ್ನೂ ಓದುತ್ತೆ. ಬರೆವಲೆ ಕೆಲವೊಮ್ಮೆ ತಡ ಆವ್ತು.

    [Reply]

    VA:F [1.9.22_1171]
    Rating: 0 (from 0 votes)
  2. ಬೊಳುಂಬು ಮಾವ°
    ಗೋಪಾಲ ಬೊಳುಂಬು

    ಒಳ್ಳೆ ನುಡಿಗಟ್ಟು. ಇದ್ದದರ ಇದ್ದ ಹಾಂಗೆ ನೇರವಾಗಿ ಹೇಳುವುದರ ಬದಲು ಹೀಂಗೆ ಸುತ್ತು ಬಳಸಿ ಹೇಳಿಯಪ್ಪಗ ಅರ್ಥ ಆಯೆಕಾದವಂಗೆ ಆವ್ತು. ಮುಸುಂಟಿಂಗೆ ಬಡುದ ಹಾಂಗುದೆ ಅಪ್ಪಲಿಲ್ಲೆ ಅಲ್ಲದೊ ವಿಜಯಕ್ಕ.

    [Reply]

    VA:F [1.9.22_1171]
    Rating: 0 (from 0 votes)
  3. ವಿಜಯತ್ತೆ

    ಅಪ್ಪು ಗೋಪಾಲ ಸರಿಯಾಗಿ ಹೇಳಿದೆ. ನುಡಿಗಟ್ಟಿಲ್ಲಿ ಒಳಾರ್ಥ , ದ್ವಾಂದ್ವಾರ್ಥ ವಿಶ್ಲೇಷಣಾರ್ಥ ಹೇಳಿಯೆಲ್ಲ ಇದ್ದಿದ .

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಗೋಪಾಲಣ್ಣವೇಣೂರಣ್ಣಚೆನ್ನಬೆಟ್ಟಣ್ಣತೆಕ್ಕುಂಜ ಕುಮಾರ ಮಾವ°ಸಂಪಾದಕ°ಡೈಮಂಡು ಭಾವಜಯಗೌರಿ ಅಕ್ಕ°ಬೊಳುಂಬು ಮಾವ°ಡಾಗುಟ್ರಕ್ಕ°ಪ್ರಕಾಶಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಪೆಂಗಣ್ಣ°ಅಡ್ಕತ್ತಿಮಾರುಮಾವ°ಅನುಶ್ರೀ ಬಂಡಾಡಿವೆಂಕಟ್ ಕೋಟೂರುಶ್ರೀಅಕ್ಕ°ವಾಣಿ ಚಿಕ್ಕಮ್ಮದೊಡ್ಡಮಾವ°ದೊಡ್ಮನೆ ಭಾವಅಜ್ಜಕಾನ ಭಾವದೇವಸ್ಯ ಮಾಣಿರಾಜಣ್ಣಅನು ಉಡುಪುಮೂಲೆಹಳೆಮನೆ ಅಣ್ಣಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ