“ಅಶನ ಬೇಯಿಂದೋ ನೋಡ್ಳೆ ಒಂದವುಳು ಸಾಕು”–(ಹವ್ಯಕ ನುಡಿಗಟ್ಟು-14)

August 26, 2014 ರ 6:04 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

–ಅಶನ  ಬೇಯಿಂದೋ ನೋಡ್ಳೆ ಒಂದವುಳು ಸಾಕು—(ಹವ್ಯಕ ನುಡಿಗಟ್ಟು-14)

ಮದಲಿಂಗೆ  ಅಡಿಗೆ ಮಾಡ್ಳೆ ಸೌದಿ ಒಲೆ. ಅಶನದಳಗೆಲಿ ನೀರು ಮಡಗಿ ಕಿಚ್ಚಾಕಿ ನೀರು ಕೊದಿವಗ ಅಕ್ಕಿ ತೊಳದು ಹಾಕೆಕ್ಕು. ಹಾಂ..! ಮತ್ತದರ ಗೊಡವೆ ಇಲ್ಲದ್ದೆ ಬಿಟ್ಟಿಕ್ಕಿ ಹೋಪ ಹಾಂಗೂ ಇಲ್ಲೆಯಿದ!.ಅಡಿಗಡಿಗೆ ಕಿಚ್ಚು ಮುಂದೆ ಹಾಕೆಕ್ಕು, ಅಶನ ಹದಕ್ಕೆ ಬೆಂತೊ ನೋಡೆಕ್ಕು. ಇಲ್ಲದ್ರೆ ಕಿಚ್ಚು ಹೊತ್ತೆಂಡಿದ್ರೆ ಮುದ್ದೆ ಆಗಿ ಹೋಕು, ಅಥವಾ ಕಿಚ್ಚು ನಂದಿತ್ತು ಹೇದಾದರೆ;ನರುನುರುತ್ತಟೆ ಅಕ್ಕು!. ಹೀಂಗೆ ಬೆಂತೋ ನೋಡ್ಳೆ ಸೌಟಿಲ್ಲಿ ತೆಗದು ಒಂದವುಳಿನ ನಮ್ಮ ಕೈಬೆರಳಿಲ್ಲಿ ನುರುದು ನೋಡುವದಿದ!.ಅಳಗೆಲಿಪ್ಪದರ ಎಲ್ಲವನ್ನೂ ನೋಡೆಡನ್ನೆ!. ಈಗಾಣ ದಿನಲ್ಲಿ ಕುಕ್ಕರಿಲ್ಲಿ ಹಾಕಿ ಗ್ಯಾಸ್ ಒಲೆಲಿ ಮಡಗಿ ಅದು ಕೂಗಿ ಎಚ್ಚರಿಕೆ ಕೊಟ್ಟಪ್ಪಗ ಓಫ್ ಮಾಡಿರಾತು ಹೇಳುವೋ೦!. ಹಾಂಗಾಗಿ ಇಂತಾ ಮಾತುಗೊ ಇನ್ನಾಣವಕ್ಕೆ ಅರ್ಥವೇ ಆಗದೋ? ಎಂತೋಪ್ಪ!. ಅದಿರಳಿ, ಈ ನುಡಿಗಟ್ಟಿನ  ಕೆಲಾವು ಸಂದರ್ಭಲ್ಲಿ ಉಪಯೋಗುಸುತ್ತವು. ತೆಂಗಿನಕಾಯಿ ಕೊಯಿವಗ ಕೊನೆಂದ ಒಂದು ತೆಗದು ನೋಡಿರೆ ಸಾಕು,ಒಂದು ಇಡೀ ಬೆಳಗೆ, ಹಾಂಗೇ ಒಬ್ಬ ಮನುಷ್ಯನ  ಚುರುಕುತನ ಅಳವಲೆ, ಅವನ ಪ್ರಾಮಾಣಿಕತೆ,ನಿಷ್ಟೆ, ನೋಡ್ಳೆ, ಕಾರ್ಯಚಟುವಟಿಕೆಯ ಒಂದು ನೋಡೀರೆ ಸಾಕು, ಒಬ್ಬನ ಮಾತಿನ ವೈಖರಿಗೆ,ಹೀಂಗೆ ಕೆಲಾವು ಸಂದರ್ಭಲ್ಲಿ ಉಪಯೋಗುಸುದಲ್ಲದ್ದೆ, ಒಂದಬ್ಬೆ ಮಕ್ಕಳ ಹೋಲುಸುವಗ, ಹಾಂಗೇ ಒಂದು ಸಮುದಾಯವ ಹೋಲುಸುತ್ತಲ್ಲಿ, ಈ ನುಡಿಗಟ್ಟಿನ ಉಪಯೋಗುಸುತ್ತವು.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

 1. ರಾಮಚಂದ್ರ ಮಾವ°
  ಎ ರಾಮಚಂದ್ರ ಭಟ್

  ಅಪ್ಪು ಅಕ್ಕ . ಒಂದು ರಾಶಿಯ , ಒಂದು ಗುಂಪಿನ, ಒಬ್ಬನ ಒಂದು ಗುಣ ಸಮಗ್ರ ಚಿತ್ರವ ತೋರಿಸುತ್ತು. ಹೇಳಿದ ಹಾಂಗೆ ಅಳಗೆಯ ಅಡುಗೆ ಕಾಣದ್ದೋರಿಂಗೆ ಇದು ಗೊಂತಾಗ !

  [Reply]

  VA:F [1.9.22_1171]
  Rating: 0 (from 0 votes)
 2. K.Narasimha Bhat Yethadka

  ಚಿಕ್ಕ,ಚೊಕ್ಕ ವಿವರಣೆ ಲಾಯಕಾಯಿದು ವಿಜಯಕ್ಕ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಶರ್ಮಪ್ಪಚ್ಚಿಸುವರ್ಣಿನೀ ಕೊಣಲೆಗೋಪಾಲಣ್ಣಯೇನಂಕೂಡ್ಳು ಅಣ್ಣಪುತ್ತೂರುಬಾವದೊಡ್ಡಮಾವ°ಬೋಸ ಬಾವವಸಂತರಾಜ್ ಹಳೆಮನೆಅನುಶ್ರೀ ಬಂಡಾಡಿಪ್ರಕಾಶಪ್ಪಚ್ಚಿvreddhiಶೀಲಾಲಕ್ಷ್ಮೀ ಕಾಸರಗೋಡುಸುಭಗಕಳಾಯಿ ಗೀತತ್ತೆಕಜೆವಸಂತ°ಶಾಂತತ್ತೆಅಕ್ಷರ°ಕೆದೂರು ಡಾಕ್ಟ್ರುಬಾವ°ಅನಿತಾ ನರೇಶ್, ಮಂಚಿನೆಗೆಗಾರ°ಪೆರ್ಲದಣ್ಣವಿಜಯತ್ತೆದೊಡ್ಡಭಾವಶ್ಯಾಮಣ್ಣಉಡುಪುಮೂಲೆ ಅಪ್ಪಚ್ಚಿವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ