“ಅಶನ ಹಾಕಿದ ಮನೆಯೂ ಗೊಬ್ಬರ ಹಾಕಿದ ತೋಟವೂ ಹಾಳಾಗ” -{ಹವ್ಯಕ ನುಡಿಗಟ್ಟು-42}

November 23, 2015 ರ 6:29 amಗೆ ನಮ್ಮ ಬರದ್ದು, ಇದುವರೆಗೆ 2 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಅಶನ ಹಾಕಿದ ಮನೆಯೂ ಗೊಬ್ಬರ ಹಾಕಿದ  ತೋಟವೂ ಹಾಳಾಗ”-{ಹವ್ಯಕ ನುಡಿಗಟ್ಟು-42}

ಮದಲಿಂಗೆ ಕುಞ್ಞಣ್ಣಜ್ಜ  ಹೇದೊಬ್ಬ ಇದ್ದಿದ್ದಂ. ಅಂವ ಕೊಡುಗೈ ದಾನಿ  ಹೇಳ್ಲಕ್ಕು. ಮದ್ಯಾಹ್ನದ ಹೊತ್ತಿಂಗೆ ಆರು ಬಂದರೂ ಊಟ ಕೊಡದ್ದೆ ಇರಂ. ಬೇಡ್ತವು ಬಂದರೂ ಅಂತೇ ಕಳುಗಿಕ್ಕಂ. ಕೆಲವು ಸರ್ತಿ ಹೆರಾಣವು ಆರಾರು ಬಂದಪ್ಪಗ ಒಳ ಅಶನ ಇದ್ದೋ ಹೇದು ಅರ್ತುಗೊಳದ್ದೆ, ಹೆರಾಂದಲೇ ಎಜಮಾನ್ತಿಯ ದೆನಿಗೋದು; “ಮಿನಿಯಾ.., ಇವಂಗೊಂದ್ರಜ ಬಡುಸಿಕ್ಕು” ಹೇಳುಗು. ಅಷ್ಟಪ್ಪಗ ಅಲ್ಲಿ ಮುಗುದಿದ್ರೆ;   “ಕೇಳಿತ್ತೊ.., ಎಲ್ಲ ಸಮಲ್ಸಿ ಹೆರ ಹಾಕಿ ಆತು. ಅಶನ ಒಳುದ್ದಿಲ್ಲೆ. ನಿಂಗೊ ಇಲ್ಲಿ ಬಂದು ಅರಡಿಯದ್ದೆ ಅಲ್ಲಿಂದಲೇ ಬೊಬ್ಬೆ ಹಾಕಿರೆ ಹೇಂಗಪ್ಪಾ..!” ಹೇದು ಪೇಚಾಡಿಯೊಂಗು. ಬೇಡುತ್ತವಾದರೆ ಆ ಮನುಷ್ಯಂಗೆ ಒಂದು ಪಾವು ಅಕ್ಕಿ ಕೊಟ್ಟು ಕಳುಗ್ಗು. ಹಾಂಗೇ ಅವನ ಅಡಕ್ಕೆ ತೋಟಲ್ಲಿ, ಬತ್ತ ಬೆಳೆತ್ತ ಗೆದ್ದೆಲಿಯೂ ಒಳ್ಳೆ ಫಸಲು ಬಕ್ಕು. ಮಕ್ಕಳತ್ರೆಲ್ಲ ಮಾತಿಂಗೆ ಹೇಳುಗು “ ಊಟದ ಹೊತ್ತಿಂಗೆ ಬಂದವಕ್ಕೆ ಅಶನ ಹಾಕೆಕ್ಕು, ಕೃಷಿ ಭೂಮಿಗೆ ಗೊಬ್ಬರ ಹಾಕಿ ಸಾಂಕೆಕ್ಕು. ಇಂತೊವು ಏಳಿಗೆ ಆಗದ್ದಿರವು”.

ಈ ಅನ್ನದಾನ ಹೇಳುಸ್ಸು ಮನೆ ಮಾಡಿಕೂದವಕ್ಕೆ ಮಾಂತ್ರ ಅಲ್ಲ. ದೇಸ್ಥಾನಕ್ಕೂ ಅನ್ವೈಸುತ್ತು!. ಈಗ ಎಲ್ಲ ದೇವಸ್ಥಾನಂಗಳಲ್ಲಿಯೂ ಮದ್ಯಾಹ್ನದ ಹೊತ್ತಿಂಗೆ ಬಲಿವಾಡು ಕೊಂಡೋಗದ್ರೂ ಊಟದ ವ್ಯವಸ್ತೆ ಇದ್ದೇ ಇರ್ತು.ಹಾಂಗಿಪ್ಪ ಕ್ಷೇತ್ರ ಉದ್ಧಾರ ಆಗಿಯೇ ಆವುತ್ತು. ಅಂತೂ |ಅನ್ನದಾತ ಸುಖೀ ಭವ|. ಅನ್ನದಾನಕ್ಕಿದ್ದ ವಿಶೇಷ ಪುಣ್ಯ  ಒಪ್ಪೆಕ್ಕಾದ್ದೆ!.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 2 ಒಪ್ಪಂಗೊ

  1. ಗೋಪಾಲಣ್ಣ
    S.K.Gopalakrishna Bhat

    ಲಾಯಕ ಆಯಿದು ಚಿಕ್ಕಮ್ಮ.

    [Reply]

    VA:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣರಾಜಣ್ಣವೇಣಿಯಕ್ಕ°ಪುತ್ತೂರಿನ ಪುಟ್ಟಕ್ಕಚುಬ್ಬಣ್ಣಒಪ್ಪಕ್ಕಚೆನ್ನಬೆಟ್ಟಣ್ಣಎರುಂಬು ಅಪ್ಪಚ್ಚಿಅಕ್ಷರದಣ್ಣಪವನಜಮಾವಚೂರಿಬೈಲು ದೀಪಕ್ಕಶ್ಯಾಮಣ್ಣಪುಟ್ಟಬಾವ°vreddhiದೇವಸ್ಯ ಮಾಣಿಗೋಪಾಲಣ್ಣಸುಭಗಮಾಷ್ಟ್ರುಮಾವ°ದೊಡ್ಡಭಾವಕೇಜಿಮಾವ°ಕಜೆವಸಂತ°ಮಾಲಕ್ಕ°ವೆಂಕಟ್ ಕೋಟೂರುಕಾವಿನಮೂಲೆ ಮಾಣಿವೇಣೂರಣ್ಣಡೈಮಂಡು ಭಾವವಿನಯ ಶಂಕರ, ಚೆಕ್ಕೆಮನೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ