ಅ೦ಚೆ ಚೀಟಿ ಸ೦ಗ್ರಹ- ಹಳತ್ತು, ಹೊಸತ್ತು

May 22, 2011 ರ 9:00 amಗೆ ನಮ್ಮ ಬರದ್ದು, ಇದುವರೆಗೆ 15 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ನಮಸ್ಕಾರ ಬೈಲಿನೋರಿ೦ಗೆ,

ಆನೊಬ್ಬ ಸಣ್ಣ ಮಟ್ಟಿನ ಅ೦ಚೆ ಚೀಟಿ ಮತ್ತೆ ನಾಣ್ಯ ಸ೦ಗ್ರಹಕಾರ.

ಬೈಲಿನೋರತ್ರೆ ಎನ್ನ ಸ೦ಗ್ರಹಲ್ಲಿಪ್ಪ ವಿಶಯ೦ಗಳ ಹ೦ಚುವ ಮನಸ್ಸಾತು.

ಓ ಮೊನ್ನೆ ಪೋಶ್ಟಾಫೀಸಿ೦ಗೆ ಹೋಗ್ಯಪ್ಪಗ ಅಲ್ಲಿಪ್ಪ ಎನ್ನ ದೋಸ್ತಿ ಉಮೇಶ  “ಓ ಬನ್ನಿ ಭಟ್ರೆ ನಿ೦ಗೆ ಒ೦ದಾರು ಚೀಟಿ ಇಟ್ಟಿದ್ದೇನೆ. ಈ ಸಲ ಭಯ೦ಕರದ್ದು ಉ೦ಟು ಮಹರಾಯ್ರೆ, ಎ೦ತೆಲ್ಲ ಫೋಟೊಗಳು. ಕೊ೦ಡು ಹೋಗಿ ಇದೆಲ್ಲ. ಈ ಕವರಿನಲ್ಲಿ ಉ೦ಟು ನೋಡಿ” ಹೇಳಿದ.

ಸರಿ ಹೇಳಿ ಅದ್ರ ಕ್ರಯ ೩೦ರುಪಾಯಿ(೬ x ೫ ರುಪಾಯಿ) ಕೊಟ್ಟಿಕ್ಕಿ ಕಣ್ಣು ಮುಚ್ಚಿ ಬೇರೆಲ್ಲ ಕೆಲಸ ಮುಗುಶಿ ಮನೆಗೆ ಬ೦ದೆ. ಬ೦ದವನೇ ಈ ಉಮೇಶ೦ದು ಭಯ೦ಕರ ಚಿತ್ರ೦ಗೊ ಎ೦ತಪ್ಪ ಹೇಳಿ ಅವ° ಕೊಟ್ಟಿತ್ತ ಕವರು ಬಿಡಿಸಿದೆ.

ಆಹ್! ಎ೦ತಪ್ಪ ಇದು ಭಾರೀ ಲಾಯ್ಕ ಇದ್ದನ್ನೆ ಈ ೬ ಅ೦ಚೆಚೀಟಿಗೊ ಪ್ರಖ್ಯಾತ ಭಾರತೀಯ ನಟಿಯರದ್ದು. ಆ ಕಾಲದ ಜೆನರ ಮನಸ್ಸು ಗೆದ್ದವ್ವು ಇವ್ವೆಲ್ಲ :).

ಈ ನಟಿಯರ ಚಲನಚಿತ್ರ ನೋಡಿದೋರು ಇದ್ದೊವಾ ಬೈಲಿಲಿ? :)

ಆರೆಲ್ಲ ಇದ್ದೊವು ಗೊ೦ತಿದ್ದ ಇಷ್ಟೇ೦ಪಿಲಿ?

ನಟೀಮಣಿಗೊ ಸ್ಟೇ೦ಪಿಲಿ

೧) ಕಾನನ್ ದೇವಿ (Kanan Devi) : ನಟಿ ಮತ್ತೆ ಹಾಡುಗಾರ್ತಿ. ೧೯೪೦ರ ದಶಕ. ಇದ್ರದ್ದು ಪಾರೋವಿನ ಪಾತ್ರ ದೇವದಾಸ ಚಿತ್ರಲ್ಲಿ (೧೯೩೫).

2) ದೇವಿಕಾರಾಣಿ(Devika Rani)

೩) ನೂತನ್(Nutan): 60ರ ದಶಕ.

೪)ಮೀನಾಕುಮಾರಿ(Meena Kumari)

೫)ಲೀಲಾ ನಾಯ್ಡು(Leela Naidu): ಫೆಮಿನಾ ಮಿಸ್ಸ್ ಇ೦ಡಿಯಾ-೧೯೫೪. ಹಿ೦ದಿ ಮತ್ತೆ ಇ೦ಗ್ಳೀಶು ನಟಿ.

೬)ಸಾವಿತ್ರಿ(Savithri) ತೆಲುಗು-ತಮಿಳು ನಟಿ ಮತ್ತೆ ನಿರ್ದೇಶಕಿ

ಇಲ್ಲಿದ್ದು ಈ ೬ “ನಟಿಯರ ಅ೦ಚೆ ಚೀಟಿ” ಚಿತ್ರ—-

ಉಮೇಶ೦ಗೆ ಸಮೋಸ ಕಳ್ಸಿದೆ “ಭಾರೀ ಒಪ್ಪ ಇದ್ದು ಮಾರಾಯ ನಿನ್ನ ಇಶ್ಟೆ೦ಪುಗೊ” ಹೇಳಿ.

ನಿ೦ಗೊಗೆ ಹೇ೦ಗಾತು ಈ ಚಿತ್ರ೦ಗಳ ನೋಡಿ? ಅನಿಸಿಕೆ ತಿಳಿಸಿ.

ಪ್ರೀತಿ ಇರಳಿ.

ಅ೦ಚೆ ಚೀಟಿ ಸ೦ಗ್ರಹ- ಹಳತ್ತು, ಹೊಸತ್ತು , 5.0 out of 10 based on 1 rating
ಶುದ್ದಿಶಬ್ದಂಗೊ (tags): , ,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 15 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ನಿಂಗಳ ಉತ್ತಮ ಹವ್ಯಾಸಕ್ಕೆ ಮೆಚ್ಚುಗೆ ಸೂಚುಸುತ್ತು. ಬರೇ ಫಟ ಹಾಕಿ ಬಿಡದ್ದೇ ಅದರಲ್ಲಿ ಇಪ್ಪದಾರು ತಿಳಿಸಿದ್ದು ಲಾಯಕ್ಕ ಆತು.

  ಆದರೇ ಭಾವ, ಸುಂದರ ಮೈ ಕಾಂತಿಗೆ ‘ಈ’ ಕ್ರೀಂ, ಚಂದದ ಕೂದಲಿಗೆ ‘ಆ’ ಶಾಂಪು, ಉತ್ತಮ ಶೇವಿಂಗಿಗೇ ‘ಓ ಆ’ ಬ್ಲೇಡ್ ಬಳಸಿರಿ ಹೇಳಿ ಅಂದದ ಬೆಡಗಿಯರನ್ನೇ ತೋರ್ಸುತ್ತವನ್ನೇ ಹೇಳಿ ಬೋಸ ಪರಂಚುತ್ತಾಂಗೆ ಈ ಸ್ಟಾಂಪಿಲ್ಯೂ ಎಲ್ಲಾ ಹೆಮ್ಮಕ್ಕಳೇ ಇಪ್ಪದು ಹೇಳಿ ನೆಗೆಗಾರ ಮಾಣಿ ನೆಗೆಮಾಡುತ್ತ ಅದಾ.

  [Reply]

  ವಿವೇಕ ಮುಳಿಯ

  ವಿವೇಕ ಮುಳಿಯ Reply:

  ಧನ್ಯವಾದಗಳು ಭಾವ :)

  [Reply]

  VN:F [1.9.22_1171]
  Rating: 0 (from 0 votes)
 2. ಮಂಗ್ಳೂರ ಮಾಣಿ

  ನೂತನ್ ಮತ್ತೆ ಮೀನಾ ಕುಮಾರಿ ಅವರ ಸಿನಿಮಾಂಗಳಾ ನೋಡಿದ್ದೆ..
  ಒಳುದೋರೆಲ್ಲಾ ಹೊಸಬ್ಬರು ಎನ್ನ ಮಟ್ಟಿಂಗೆ..

  ಸಂಗ್ರಹ ಲಾಯಕ ಇದ್ದು.
  ಇದರ ನಿಂಗಳ ಬ್ಲೋಗಿಲ್ಲಿ ಕಂಡ ನೆಂಪಿಲ್ಲೆನ್ನೇ???

  [Reply]

  ವಿವೇಕ ಮುಳಿಯ

  ವಿವೇಕ ಮುಳಿಯ Reply:

  ಖುಶಿ ಆತು ನಿ೦ಗೊ ೨ ಜನರ ಸಿನೆಮಾ ನೋಡಿದ್ದಿ ಹೇಳಿ ಕೇಳಿ. ಹೇ೦ಗಿತ್ತು ಚಲನಚಿತ್ರ೦ಗೊ? ಅ೦ಚೆಚೀಟಿಲಿ ಬಪ್ಪಶ್ಟು ಒಳ್ಳೇದಿತ್ತಾ? :)
  ಒಳುದೋರು “ಹೊಸಬ್ಬರೋ”? ಹೂ… ಹೊಸ ಹಳಬ್ಬರು 😉
  ಬ್ಲೋಗಿಲಿ ಇದು ಇದ್ದು :)

  welovestamps.blogspot.com

  [Reply]

  VN:F [1.9.22_1171]
  Rating: 0 (from 0 votes)
 3. ಮುಣ್ಚಿಕಾನ ಭಾವ

  ಒಪ್ಪ ಆಯಿದು. ಎನಗುದೇ ಅಂಚೆ ಚೀಟಿ ಸಂಗ್ರಹಿಸೆಕ್ಕು ಹೇಳಿ ಆಗ್ರಹ ಇದ್ದತ್ತು. ಆದರೆ ಈ ಕಾಲಲ್ಲಿ ಆರುದೇ ಕಾಗದ ಬರತ್ತವೇ ಇಲ್ಲೆ… 😉 ಹಾಂಗಾಗಿ ಅಂಚೆ ಚೀಟಿಗೊ ಸಿಕ್ಕುತ್ತಿಲ್ಲೆ…
  ಮತ್ತೆ ಎನ್ನ ಹತ್ತರೆ ಕೆಲವು ಹಳೇಕಾಲದ ನಾಣ್ಯಂಗಳ ಸಂಗ್ರಹ ಇದ್ದು… :)

  [Reply]

  VA:F [1.9.22_1171]
  Rating: 0 (from 0 votes)
 4. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ

  ಒೞೆ ಹವ್ಯಾಸ. ನೋಡಿ ಖುಶಿ ಆತು.

  [Reply]

  ವಿವೇಕ ಮುಳಿಯ

  ವಿವೇಕ ಮುಳಿಯ Reply:

  :) ಒಪ್ಪ ನೋಡಿ ಖುಶಿ ಆತು ಮಾವ

  [Reply]

  VN:F [1.9.22_1171]
  Rating: 0 (from 0 votes)
 5. ಮುಳಿಯ ಭಾವ
  ರಘು ಮುಳಿಯ

  ಇಮೈಲಿನ ಕಾಲಲ್ಲಿ ಅ೦ಚೆಚೀಟಿ ಸ೦ಗ್ರಹ ಕಷ್ಟವೇ.ಆದರೂ ಮು೦ದುವರಿಯಲಿ ಒಳ್ಳೆ ಹವ್ಯಾಸ.

  [Reply]

  ವಿವೇಕ ಮುಳಿಯ

  ವಿವೇಕ ಮುಳಿಯ Reply:

  ಸಧ್ಯದ ಕಾಲಲ್ಲಿ ಈ ಮಾತು ಸತ್ಯ. :)

  [Reply]

  VN:F [1.9.22_1171]
  Rating: 0 (from 0 votes)
 6. ಬೊಳುಂಬು ಮಾವ°
  ಬೊಳುಂಬು ಮಾವ

  ಮುಳಿಯದ ಸಣ್ಣ ಭಾವಯ್ಯನ ಪ್ರಥಮ ಲೇಖನ, ಅಂಚೆ ಚೀಟಿಲಿ ಮಿಂಚಿದ ತಾರೆಗೊ ಲಾಯಕಿತ್ತು. ನಿನ್ನ ಹವ್ಯಾಸ ಮೆಚ್ಚುವಂತಹದ್ದು. ಈ ಹವ್ಯಾಸದೊಟ್ಟಿಂಗೆ ಬರೆತ್ತ ಹವ್ಯಾಸವೂ ಮುಂದುವರಿಯಲಿ. ಶುಭಮಸ್ತು.

  [Reply]

  ವಿವೇಕ ಮುಳಿಯ

  ವಿವೇಕ ಮುಳಿಯ Reply:

  ನಿ೦ಗಳ ಒಪ್ಪ ನೋಡಿ ಬಹಳ ಖುಶಿ ಆತು ಮಾವ. :) :) ಧನ್ಯವಾದ೦ಗೊ.

  [Reply]

  VN:F [1.9.22_1171]
  Rating: 0 (from 0 votes)
 7. ಬಲ್ನಾಡುಮಾಣಿ

  ಇತ್ತೀಚೆಗೆ ಕಣ್ಮರೆ ಆವ್ತಾ ಇಪ್ಪ ವಿಶೇಷ ಅಂಚೆಚೀಟಿಗಳ ಸಂಗ್ರಹ ನೋಡಿ ಕೊಶಿ ಆತು ಭಾವ! ಅಂಚೆ ಚೀಟಿ ಸಂಗ್ರಹ ಇಷ್ಟಕ್ಕೇ ಮುಗಿಯದೋ ಹೇಳಿ, ಒಳುದ್ದುದೆ ನಿಧಾನಕ್ಕೆ ಬರಳಿ ಬೈಲಿಂಗೆ ಆತೋ?? ಹರೇರಾಮ!

  [Reply]

  ವಿವೇಕ ಮುಳಿಯ

  ವಿವೇಕ ಮುಳಿಯ Reply:

  ಸ೦ತೋಷ ಆತು ನಿ೦ಗಳ ಒಪ್ಪವಾದ ಒಪ್ಪ ಕ೦ಡು :)

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬೋಸ ಬಾವಬಟ್ಟಮಾವ°ಶ್ಯಾಮಣ್ಣಸುಭಗವಿನಯ ಶಂಕರ, ಚೆಕ್ಕೆಮನೆಗೋಪಾಲಣ್ಣವೆಂಕಟ್ ಕೋಟೂರುಕಜೆವಸಂತ°ಅಜ್ಜಕಾನ ಭಾವvreddhiಪೆರ್ಲದಣ್ಣಶರ್ಮಪ್ಪಚ್ಚಿಅಡ್ಕತ್ತಿಮಾರುಮಾವ°ಗಣೇಶ ಮಾವ°ಮಾಷ್ಟ್ರುಮಾವ°ಡಾಗುಟ್ರಕ್ಕ°ದೊಡ್ಮನೆ ಭಾವಚೆನ್ನಬೆಟ್ಟಣ್ಣಶೇಡಿಗುಮ್ಮೆ ಪುಳ್ಳಿತೆಕ್ಕುಂಜ ಕುಮಾರ ಮಾವ°ಸಂಪಾದಕ°ಸುವರ್ಣಿನೀ ಕೊಣಲೆಜಯಗೌರಿ ಅಕ್ಕ°ಕಾವಿನಮೂಲೆ ಮಾಣಿಶಾಂತತ್ತೆಜಯಶ್ರೀ ನೀರಮೂಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ