ಆಯ್ಕೆ ಮಾಡ್ಳೆ ಮಕ್ಕೊಗೂ ಅವಕಾಶ ಕೊಡಿ

May 22, 2014 ರ 9:35 amಗೆ ನಮ್ಮ ಬರದ್ದು, ಇದುವರೆಗೆ ಒಂದೇ ಒಪ್ಪ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

-ಆಯ್ಕೆ ಮಾಡ್ಳೆ ಮಕ್ಕೊಗೂ ಅವಕಾಶಕೊಡಿ

ಬೇಸಗೆರಜೆ ಮುಗುಕ್ಕೊಂಡು ಬಂತು.ಇನ್ನು ಶಾಲಾ- ಕಾಲೇಜು ಪ್ರಾರಂಭದ ಗೌಜಿ.ಹೈಸ್ಕೂಲು ಮುಗುದವಕ್ಕೆ ಕಾಲೇಜು ಸೇರ್ತ ಗಡಿಬಿಡಿ.ಅವಕ್ಕೆ ಮುಂದಿನ ಶಿಕ್ಷಣಲ್ಲಿ ಯಾವ ವಿಷಯ ತೆಕ್ಕೊಳೆಕ್ಕು ಹೇಳ್ವಗೊಂದಲ.ಕಾರಣ, ಅಪ್ಪ-ಅಮ್ಮ ನೀನು ಇಂಜಿನಿಯರಾಗು ಹೇಳುಗು.ಸ್ನೇಹಿತರೆಲ್ಲ ಡಾಕ್ಟ್ರು ಆಗು ಹೇಳುಗು.ತನಗೆ ಒಳ್ಳೆ ಮಾಸ್ಟ್ರಾಯೆಕ್ಕು ಹೇಳಿ ಮನಸ್ಸಿನೊಳ ಇದ್ದು.ಇದರ ಅಪ್ಪ-ಅಮ್ಮನ ಮುಂದೆ ಹೇಳಿಯೊಂಡರೆ ವಾಚಾಮಗೋಚರ ಬೈಗು.ಅಶನ-ನೀರು ಮುಟ್ಟವು.ಹೀಂಗಿಪ್ಪ ಪರಿಸ್ಥಿತಿಲಿ ಎಂತ ಮಾಡುವದು?ತನಗೆ ಇಷ್ಟ ಇಲ್ಲದ್ದದರ ಕಲಿವಲೂ ಮನಸ್ಸಿಲ್ಲೆ,ತಲಗೂ ಹೋಗ! ಇಂತ ಸಂದರ್ಭಲ್ಲಿ ಹಿರಿಯವರತ್ರೆ ಹೇಳಿ ತನ್ನ ಇಷ್ಟವ ಸಾದುಸಲೆಡಿಗಾದೊವು ಸಾದುಸಿಯೊಂಗು. ಅಲ್ಲದ್ದವು ಕೆಲವು ಮಕ್ಕೊ ಮೌನಿಯಾಗಿ ಬಿಡುಗು.ಕೆಲವು ಓದುವ ಉತ್ಸಾಹವನ್ನೇ ಕಳಕ್ಕೊಂಗು. ಅತಿ ಸೂಕ್ಷ್ಮ ಮನಸ್ಸಿನವು ಆತ್ಮಹತ್ಯೆ ಮಾಡಿದ ಉದಾಹರಣೆಯನ್ನೂ ಕೇಳಿದ್ದೆ.

ತಮ್ಮಮಕ್ಕೊ ಹೆಚ್ಚು ಕಲ್ತು ಒಳ್ಳೆ ಪ್ರತಿಭಾವಂತರಾಯೆಕ್ಕು ಹೇಳಿ  ಮಕ್ಕಳ ಅಬ್ಬೆ-ಅಪ್ಪಂಗೆ ಇಪ್ಪದು ಸಹಜ.ಆದರೆ ತಮ್ಮ ಮನೋಭಿಲಾಶೆಯ ಮಕ್ಕಳಮೇಲೆ ಹೆಚ್ಚು ಒತ್ತಾಯ ಪೂರ್ವಕ ಹೇರ್ಲಾಗಯಿದ.ಅದಕ್ಕೊಂದು ಇತಿ-ಮಿತಿ ಚೌಕಟ್ಟು ಬೇಕು.ಹಾಂಗಿಲ್ಲದ್ದೆ, ಮಿತಿಮೀರಿದರೆ; ಆವುತ್ತ ಹಾಂಗೆ ಅಪ್ಪ ಬದಲಾಗಿ ಆಗೆಡದ್ದ ಹಾಂಗೆ ಆಗಿ ಹೋಕಿದ!.ಕೆಲವು ಉದಾಹರಣೆಲಿ ಹೆತ್ತವರ ಒತ್ತಾಯಕ್ಕೆ ಕಟ್ಟುಬಿದ್ದು ಇಂಜಿನಿಯರ್ ಕಾಲೇಜಿಂಗೆ ಸೇರಿ ಅದರೊಳ ಹೊಕ್ಕಪ್ಪಗ ಅಲ್ಲಿ ರಾಗಿಂಗ್ ಹೇಳುವ ಪೆಡಂಭೂತ ಸಿಕ್ಕಿಯಪ್ಪಗ  ಜೀವನವೇ ಬೇಡಾಹೇಳಿ ಕಾಣದ್ದಿರ!.

ಈಗ ಅಬ್ಬೆಮಲೆಹಾಲು ಮರದಪ್ಪಗ,ಪೆಚೆ-ಪೆಚೆ ಮಾತಾಡ್ಳೆ ಸುರುಮಾಡಿಯಪ್ಪಗಳೇ ಇಂಗ್ಲಿಷ್ ಮೀಡಿಯಂ  ಎಲ್.ಕೆ.ಜಿ  ಗೆ ಹಾಕದ್ದೆ ಇರವು.  ಮನೆಲಿ ಅಜ್ಜ-ಅಜ್ಜಿ ಒಟ್ಟಿಂಗೆ ಬೆರಕ್ಕೊಂಡು ಅವರೊಟ್ಟಿಂಗೆ ಕತೆ ಹೇಳ್ಸಿಗೊಂಡು ಇಪ್ಪ ಮಕ್ಕೊ ಹುಡುಕ್ಕಿ ಹೇಳುವಿರೊ?   ನಮ್ಮ ಆಚಾರ-ವಿಚಾರ,ಸಂಸ್ಕೃತಿ-ಸಂಸ್ಕಾರ ಕಲುಶುವ  ಮನೆ ಎಲ್ಲಿದ್ದು ಹೇಳಿ? ಈಗ ಒತ್ತೆಪ್ಪೋಕನ ಹಾಂಗೆ ಒಂದೇ ಇಪ್ಪಕಾರಣ ಅದಕ್ಕೆ ಇನ್ನೊಬ್ಬರೊಟ್ಟಿಂಗೆ ಬೆರದು ಗೊಂತಿಲ್ಲೆ.ಅಜ್ಜನಮನೆ,ಅತ್ತೆಮನೆ, ದೊಡ್ಡಬ್ಬೆ-ಕಿರಿಯಬ್ಬೆ ಮನೆ ಹೇಳಿ ಮಕ್ಕಳ ಕಳುಗಲೆ ಪುರುಸೊತ್ತೆಲ್ಲಿದ್ದು?ಕೂಡಿ-ಬೆರ್ಸಿ,ಆಡಿ-ಪಾಡಿ, ಬಿದ್ದು-ಎದ್ದು ಮಾಡುತ್ತಾ ಬೆಳವಕಾಲ  ಅದೆಷ್ಟೋ ಹಿಂದೆ ಬಿದ್ದು ಇತಿಹಾಸಕ್ಕೆ ಸೇರಿಆತಲ್ಲೊ?ಮುಂದಾಣ ಪೀಳಿಗಗೆ ಅಕ್ಕ-ತಂಗೆಕ್ಕಳ ಮನೆ, ದೊಡ್ದಬ್ಬೆ-ಕಿರಿಯಬ್ಬೆ ಮನೆ ಇಪ್ಪದಾದರು ಎಲ್ಲಿಂದ?ಅದೆಲ್ಲ ಜಾನ್ಸುವಾಗ; ನಾವು ಆಚಾರ-ವಿಚಾರ,ಸಂಸ್ಕಾರ,ಸಂಬಂಧಂಗಳ ಕಟ್ಟ ಕಟ್ಟಿ ಅಟ್ಟದ ಮೂಲೆ ಸೇರ್ಸಿ ಆತನ್ನೆ ಹೇಳಿ ಬೇಜಾರ ಆವುತ್ತಿಲ್ಯೊ? ಕಾಲಾಯ ತಸ್ಮೈ ನಮಃ  ಹೇಳಿಯೊಂಡು ಕೂರದ್ದೆ  ನಮ್ಮ ಶ್ರೀಗುರುಗೊ ಹೇಳುವ ಹಾಂಗೆ  ಆ ರೀತಿ ಕೂಲಂಕುಷ ವಿಚಾರ ಮಾಡೆಕ್ಕಾದ ಅನಿವಾರ್ಯತೆ ಇದ್ದು.

ಆನೀಗ ಹೇಳ್ಲೆ ಹೆರಟದೆಂತರ ಹೇಳಿರೆ; ಮಕ್ಕೊಗೆ ಏವ ವಿಷಯಲ್ಲಿ ಆಸಕ್ತಿ ಇದ್ದು ನೋಡಿಗೊಂಡು ಆ ರೀತಿಲಿಯೇ ಪ್ರೋತ್ಸಾಹ ಮಾಡಿರೆ  ’ಸೀಂಡ್ಳಕ್ಕೆ ಗೊಬ್ಬರ ಮಡಗಿದ ಹಾಂಗೆ’ ಅವು ಬೆಳಗು. ಮುಂದಾಣ ವಿದ್ಯಾಭ್ಯಾಸದ ಹೊಡೆಂಗೆ ಆಲೋಚನಗೆ ಅವಕ್ಕೂ ಅವಕಾಶ ಕೊಟ್ಟರೊಳ್ಳೆದು. ಎಂತ ಹೇಳ್ತಿ?  ——೦——

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ ಒಂದು ಒಪ್ಪ

 1. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ

  ಮಕ್ಕೊಗೆ ಮಾರ್ಗದರ್ಶನ ಮಾಡ್ಲಕ್ಕೇ ವಿನಃ ಅವರ ಮೇಗೆ ಒತ್ತಡ ಹೇರಲೆ ಆಗ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಡಾಮಹೇಶಣ್ಣvreddhiಸರ್ಪಮಲೆ ಮಾವ°ಶಾ...ರೀವೇಣೂರಣ್ಣಒಪ್ಪಕ್ಕನೀರ್ಕಜೆ ಮಹೇಶಎರುಂಬು ಅಪ್ಪಚ್ಚಿಪ್ರಕಾಶಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುದೀಪಿಕಾಕಾವಿನಮೂಲೆ ಮಾಣಿಕಜೆವಸಂತ°ಚೂರಿಬೈಲು ದೀಪಕ್ಕತೆಕ್ಕುಂಜ ಕುಮಾರ ಮಾವ°ವಿದ್ವಾನಣ್ಣಉಡುಪುಮೂಲೆ ಅಪ್ಪಚ್ಚಿವಸಂತರಾಜ್ ಹಳೆಮನೆಸಂಪಾದಕ°ಬಂಡಾಡಿ ಅಜ್ಜಿಬೋಸ ಬಾವವಿನಯ ಶಂಕರ, ಚೆಕ್ಕೆಮನೆಅನಿತಾ ನರೇಶ್, ಮಂಚಿಜಯಗೌರಿ ಅಕ್ಕ°ಪೆರ್ಲದಣ್ಣವೆಂಕಟ್ ಕೋಟೂರು
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್

ಬೆಣಚ್ಚಿಪ್ಪಲ್ಲಿ ಹುಡ್ಕಲೆ