“ಆರತಿ ತೆಕ್ಕಂಡ್ರೆ ಉಷ್ಣ, ತೀರ್ಥ ತೆಕ್ಕಂಡ್ರೆ ಶೀತ”-(ಹವ್ಯಕ ನುಡಿಗಟ್ಟು-74)

December 3, 2016 ರ 11:28 pmಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಆರತಿ ತೆಕ್ಕಂಡ್ರೆ ಉಷ್ಣ, ತೀರ್ಥ ತೆಕ್ಕಂಡ್ರೆ ಶೀತ”-(ಹವ್ಯಕ ನುಡಿಗಟ್ಟು-74)

ಆಚಮನೆ ಅಚ್ಚುಮಕ್ಕᵒ ನೂ ಈಚಮನೆ ಈಚಕ್ಕನೂ ಮಾತಿಂಗೆ ತೊಡಗಿತ್ಕಂಡ್ರೆ ಪೂರ್ವಾಪರ ವಿಷಯಂಗಳೂ ಮನೆ,ಮಕ್ಕೊ, ಪುಳ್ಳಿಯಕ್ಕಳ ಶುದ್ದಿಗೊಲ್ಲ ಬಕ್ಕಿದ.ಆನು ಸಣ್ಣದಿಪ್ಪಗ ಒಂದಾರಿ ಒಂದು ಅನುಪ್ಪತ್ಯಲ್ಲಿ ಅವರ ಸಂಭಾಷಣೆ ಕೇಳಿಯೊಂಡತ್ತೆನಗೆ.  “ನಿನ್ನೆ  ತೀರ್ಥ ಅಮಾಸೆ ಅಲ್ಲೊ, ಪತ್ತ್ರಡೆ ಮಾಡಿದ್ದಿದ.ಅದರ ತಿಂದ  ಎನ್ನ ಒಂದು  ಪುಳ್ಳಿಗೆ ಇಂದು ಉಷ್ಣ ಆಯಿದಾಡ. ’ಆರತಿ ತೆಕ್ಕಂಡ್ರೆ ಉಷ್ಣ,ತೀರ್ಥ ತೆಕ್ಕಂಡ್ರೆ ಶೀತ’. ಹೇಂಗೆ ಸಾಂಕಿ ದೊಡ್ಡ ಮಾಡುಸ್ಸು ಹೀಂಗಿದ್ದ ಮಕ್ಕಳ” ಹೇಳಿತ್ತು ಅಚ್ಚುಮಕ್ಕᵒ ಈಚಕ್ಕನತ್ರೆ.

“ಈಗಾಣ ಮಕ್ಕಳ ಸಂಗತಿ ಹೇಳಿ ಸುಖ ಇಲ್ಲೆ  ಅಚ್ಚುಮಕ್ಕᵒ  ನಾವೆಲ್ಲ ಕಾಡಸೊಪ್ಪು,ತೋಡ ನೀರು. ತೆಕ್ಕಂಡು ದೊಡ್ಡಾದವಲ್ಲೊ!. ಎಂತಾಯಿದು ನವಗೆ ಹೇಳು!!.”

ಅವರ ಮಾತು ಹೀಂಗೇ ಸಾಗೆಂಡಿದ್ದತ್ತು ಹೇಳುವೊᵒ.ಎನಗೆ ಇದರ ಬಗ್ಗೆ ಕುತೂಹಲಾಗಿ ಮನಗೆ ಬಂದು ಅಜ್ಜಿ ಹತ್ರೆ ಕೇಳಿದೆ. “ಆರತಿ ತೆಕ್ಕಂಡ್ರೆ ಉಷ್ಣಾಡ ಆರತಿಯ ತೆಕ್ಕಂಬದೆಂತರ!?”

“ಅದುವೋ  ಆರತಿಯ ಕಿಚ್ಚಿನ ನಾಲಗಗೆ ಕೈಒಡ್ಡಿ , ಕಣ್ಣಿಂಗೆ ಆ ಬೆಶಿಯ ತಾಗ್ಸೆಂಬದು ಅಷ್ಟೆ. ಇಷ್ಟರಲ್ಲೇ ಉಷ್ಣಾಗಿ ಹೋದರೆ….!, ಹಾಂಗೇ ತಣ್ಣಂಗಿದ್ದ ತೀರ್ಥವ ಒಂದು ಸಕ್ಕಣ ಬಾಯಿಗೆ ತಾಗ್ಸುದು. ಇಷ್ಟಪ್ಪಗಳೇ ಶೀತಾಗಿ ಬಿಟ್ಟ್ರೆ ಬದುಕ್ಕುದು ಹೇಂಗೆ..!? ಹೇಳ್ತ ಅರ್ಥ.ಆಹಾರಲ್ಲಿ ತೀರಾ  ಸಣ್ಣ-ಸಣ್ಣ ವಿಷಯಲ್ಲೂ ಆಗದ್ದೆ ಬಪ್ಪಲಾಗ ನಮ್ಮ ದೇಹ ಪ್ರಕೃತಿಗೆ ಒಗ್ಗೆಕ್ಕು ಹೇಳ್ತಕ್ಕೆ ಮದಲಾಣವು ಪರೋಕ್ಷವಾಗಿ ಹೀಂಗೆ ಹೇಳ್ತವು”.ಅಜ್ಜಿಯ ಸಮರ್ಥನೆ ಅರ್ಥಾತೆನಗೆ.

—–೦—-

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಚೆನ್ನೈ ಬಾವ°
  ಚೆನ್ನೈ ಭಾವ

  ಹ್ಹೋ…. ಹಾಂಗೋ ಅದು ಕತೆ!!! ಒಪ್ಪ ಆಯಿದು ನುಡಿಗಟ್ಟು ವಿವರಣೆ

  [Reply]

  VA:F [1.9.22_1171]
  Rating: 0 (from 0 votes)
 2. ಶೀಲಾಲಕ್ಷ್ಮೀ ಕಾಸರಗೋಡು
  sheelalakshmi

  ವಿಜಯಕ್ಕ, ಸಾಲುಮರದ ತಿಮ್ಮಕ್ಕ ಹೇಳ್ತಾನ್ಗೆ `ನುಡಿಗಟ್ಟಿನ ವಿಜಯಕ್ಕ’ ಹೇಳಿ ನಿಂಗೊಗೆ ಬಿರುದು ಕೊಡ್ಲಕ್ಕಪ್ಪೋ…?

  [Reply]

  VA:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ತಂಗೆಕ್ಕೊ ಆತ್ಮೀಯತೆಲಿ ಅಕ್ಕಂಗೆ , ಹೇಂಗೆ ಬಿರುದಾಂಕಿತ ಕೊಟ್ಟರು ಚೊಕ್ಕವೆ ಹೇಳಿ ತಿಳುಕ್ಕೊಳ್ತೆ ಶೀಲಾ .

  [Reply]

  VN:F [1.9.22_1171]
  Rating: 0 (from 0 votes)
 4. ಗೋಪಾಲಣ್ಣ
  S.K.Gopalakrishna Bhat

  ಒಳ್ಳೇದು.ಕನ್ನಡದ ಎಲ್ಲ ಪ್ರದೇಶಲ್ಲೂ ಇಪ್ಪ ಗಾದೆ.ನಮ್ಮ ಭಾಷೆಯ ವಿಶೇಷ ಅಲ್ಲ ಎನಿಸಿತ್ತು

  [Reply]

  VA:F [1.9.22_1171]
  Rating: 0 (from 0 votes)
 5. ಗೋಪಾಲಣ್ಣ
  S.K.Gopalakrishna Bhat

  ಕಾಡ ಸೊಪ್ಪು ತೋಡ ನೀರು ನಮ್ಮದೇ ಭಾಗದ್ದು.

  [Reply]

  VA:F [1.9.22_1171]
  Rating: 0 (from 0 votes)
 6. ಬೊಳುಂಬು ಗೋಪಾಲ

  ಅಪ್ಪ ಅಮ್ಮಂದ್ರು ಈಗಾಣ ಮಕ್ಕಳ ಬೆಳಶುತ್ತ ಕ್ರಮವೇ ಹಾಂಗಿದ್ದು. ಜಾಲಿಂಗಿಳುದರೆ ಎರುಗು ಕಚ್ಚುಗು, ಬೆಶಿಲು ತಾಗಿಕ್ಕುಗು ಹೇಳಿ ವಿಪರೀತ ಪ್ರೀತಿ ತೋರುಸಿಯಪ್ಪಗ ಹೀಂಗೆಲ್ಲ ಅಪ್ಪದಾಯಿಕ್ಕು. ವಿಜಯಕ್ಕಂಗೆ ಕೊಡ್ಳಿಪ್ಪ ಬಿರುದು ಸರಿಯಾಗಿಯೇ ಇದ್ದು.

  [Reply]

  VA:F [1.9.22_1171]
  Rating: 0 (from 0 votes)
 7. ವಿಜಯತ್ತೆ

  ಬೊಳುಂಬು ಗೋಪಾಲ ಹೇಳುಸ್ಸು ಸರಿ. ಮಕ್ಕಳ ಪ್ರಕ್ರತಿ ಸಹಜವಾಗಿ ಬೆಳವಲೆ ಈಗಾಣ ಅಬ್ಬೆಪ್ಪ ಬಿಡುತ್ತೊವಿಲ್ಲೆ.! ಈ ಗೋಪಾಲ ದ್ವಯರು ಬಂದರೆ ಕೊಶಿ ಆವುತ್ತು.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಸುಭಗಗೋಪಾಲಣ್ಣವೇಣಿಯಕ್ಕ°ಪುತ್ತೂರುಬಾವಬಂಡಾಡಿ ಅಜ್ಜಿಮಂಗ್ಳೂರ ಮಾಣಿವೆಂಕಟ್ ಕೋಟೂರುಶೀಲಾಲಕ್ಷ್ಮೀ ಕಾಸರಗೋಡುದೇವಸ್ಯ ಮಾಣಿಪಟಿಕಲ್ಲಪ್ಪಚ್ಚಿದೀಪಿಕಾಅನಿತಾ ನರೇಶ್, ಮಂಚಿರಾಜಣ್ಣಅಜ್ಜಕಾನ ಭಾವಯೇನಂಕೂಡ್ಳು ಅಣ್ಣಪವನಜಮಾವಜಯಶ್ರೀ ನೀರಮೂಲೆಪೆಂಗಣ್ಣ°ಸರ್ಪಮಲೆ ಮಾವ°ಪುಣಚ ಡಾಕ್ಟ್ರುಅನುಶ್ರೀ ಬಂಡಾಡಿಕಜೆವಸಂತ°ಶ್ರೀಅಕ್ಕ°ಶ್ಯಾಮಣ್ಣನೀರ್ಕಜೆ ಮಹೇಶಮುಳಿಯ ಭಾವ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ