“ಆಸರಿಂಗೆ ಮಜ್ಜಿಗೆ ಒಳ್ಳೆದು, ಕತಗೆ ಅಜ್ಜಿ ಒಳ್ಳೆದು-{ಹವ್ಯಕ ನುಡಿಗಟ್ಟು-54}

ಆಸರಿಂಗೆ ಮಜ್ಜಿಗೆ ಒಳ್ಳೆದು,ಕತಗೆ ಅಜ್ಜಿ ಒಳ್ಳೆದು.{ ಹವ್ಯಕ ನುಡಿಗಟ್ಟು-54}

“ಈಗ ಒಳ್ಳೆ ಸೆಖೆ ಭಾವಯ್ಯ ಸರ್ಬತ್ತು ಕುಡುದರೆ ಮತ್ತೂ ಮತ್ತೂ ಆಸರು ಹೆಚ್ಚಾವುತ್ತು. ಮಜ್ಜಿಗೆನೀರು ಕುಡುದರೆ ಆಸರೂ ಅಡಗುತ್ತು ಹೊಟ್ಟೆಯೂ ತಣ್ಣಂಗಾವುತ್ತು”. ಈ ಮಾತಿನ ಈಗ ಎಲ್ಲೋರೂ ಹೇಳುತ್ತಕಾಲ.ಮಜ್ಜಿಗೆ ಬಿ.ಪಿ ಗೂ ಒಳ್ಳೆದು, ಸಕ್ಕರೆ ಕಾಯಿಲೆವಕ್ಕೂ ಒಳ್ಳೆದೂಳಿ ಕಾಟಿಪ್ಪಳ್ಳ ಡಾಕ್ಟ್ರುದೆ ಹೇಳುಗು.ಹಾಂಗೇ ಕೊಲೆಸ್ಟ್ರಾಲ್ ಹೇದೊಂದಿದ್ದಡ. ಅದು ಹೆಚ್ಚಿಗೆ ಆದರೆ ಅಪಾಯ ಹೇದೊಂಡು ಈಗಾಣ ಡಾಕ್ಟ್ರಕ್ಕೊ ಎಲ್ಲ ಹೇಳ್ತು ಕೇಳುತ್ತು ನಾವು.ಅದರನ್ನೂ ಕಡಮ್ಮೆ ಮಾಡ್ತ ಶಕ್ತಿ ಮಜ್ಜಿಗ್ಗೆ ಇದ್ದು ಹೇದೊಂಡು ಈಗಾಣ ವೈದ್ಯರೆಲ್ಲರ ಅಭಿಮತ. ನವಗಂತೂ ಊಟ ಉಂಡಾಂಗಾಯೆಕ್ಕಾರೆ ಮಜ್ಜಿಗೆ ಬೇಕು ಮಿನಿಯ!. ಜೆಂಬಾರದ ಊಟ ಉಂಡಿಕ್ಕಿ ಮಜ್ಜಿಗೆ ನೀರು ಕುಡುದರಿದ್ದನ್ನೆ ಪಂಚಭಕ್ಷ್ಯ ತಿಂದದೆಲ್ಲ ಜೀರ್ಣಆಗಿ ಸುಖಾ ಆವುತ್ತದು ಅಪ್ಪಾದ್ದೆ!. ಮಜ್ಜಿಗ್ಗೆ ಅಷ್ಟು ಶಕ್ತಿ ಮಾಂತ್ರ ಅಲ್ಲ. ಮೀಯೆಕ್ಕಾರೆ ರಜ್ಜ ಮದಲೆ ದಪ್ಪ ಮಜ್ಜಿಗೆಯ ಮೋರಗೆ ಮೆತ್ತುಸ್ಸು ಕಂಡಿದೆ ಒಂದು ಕುಞ್ಞಿ ಮೋಳಕ್ಕ. ಅದೆಂತರಬ್ಬೊ ಮೋರಗೆ ಹಾಕಿದ್ದು? ಕೇಟದಕ್ಕೆ “ಮಜ್ಜಿಗೆಲಿ ಅರಸಿನ ತಳದುಕಿಟ್ಟೀರೆ ಮೋರೆಂದ ಮುದ್ದಣಿ,ಕಪ್ಪುಕಲೆ ಹೋವುತ್ತು” ಹೇಳಿತ್ತು. ಅಂತೂ ಮಜ್ಜಿಗ್ಗೆ ಮಹಾಶಕ್ತಿ!.

ಇನ್ನು ಕತಗೆ ಅಜ್ಜಿ ಒಳ್ಳೆದೂಳಿ ಹೇಳ್ತ ಗುಟ್ಟೆಂತದು!?.ಮಕ್ಕೊಗೆಲ್ಲ ಅಜ್ಜಂದಲೂ ಹೆಚ್ಚಿಗೆ ಸಲಿಗೆ ಅಜ್ಜಿ ಹತ್ರೆ.ಅಪ್ಪೋ ಅಲ್ಲೋ?.ಅಪ್ಪಾದ್ದೆ!. ಅದಲ್ಲದ್ದೆ ಅಜ್ಜಂಗೆ ಕಸ್ತಲಪ್ಪಗ ಆಳುಗಳ ಲೆಕ್ಕಾಚಾರವೋ ’ಲೇವಾದೇವಿ’ ಯೋ ಆಗಿಕ್ಕಿ,ಮಿಂದಿಕ್ಕಿ ಕಸ್ತಲಪ್ಪಣ ಪೂಜೆ ಹೀಂಗೆಲ್ಲ ಮುಗಿವಗ ಸೊಕ್ಕಿಕ್ಕಿ[ಆಡಿಕ್ಕಿ] ಬತ್ತ ಮಕ್ಕೊಗೆ ಬೇಗ ಒರಕ್ಕು ಬಕ್ಕಿದ . ಅಜ್ಜಿಯಾದರೆ ಕಸ್ತಲಪ್ಪಣ ಹಾಲುಕರೆಯಾಣ,ಕಾಸಾಣ ಎಲ್ಲ ಆಗಿ ಮುಂದಾಣ ಕೆಲಸಂಗಳ ಸೊಸೆಯಕ್ಕೊಗೆ ಬಿಟ್ಟಿಕ್ಕಿ, ಚಾವಡಿ ಬಾಜರ ಹಲಗೆಲಿ ಕೂದೊಂಡು ಮಕ್ಕಳ ಎದುರೆ ಕೂರ್ಸೆಂಡು ಕತೆ ಹೇಳುಗಿದ. ಅದರ ನೋಡ್ಳೆ, ಕೇಳ್ಲೆ, ಒಂದು ಸಂತೋಷ!. ಆದರೆ……ಈಗೆಲ್ಲಿದ್ದು  ಕತೆ ಹೇಳ್ತ ಅಜ್ಜಿ!!?

ಈ ಕಾಲಲ್ಲಿ ಮಜ್ಜಿಗೆ ಮಾಡುವವೂ ಕಮ್ಮಿ.!ಅಜ್ಜ-ಅಜ್ಜಿಯರ ಸಾಂಕುವ ಮನಸ್ಸಿಪ್ಪೊವುದೆ ಕಮ್ಮಿ ಆಯಿದು.ಫ್ರಿಜ್ಜಿಲ್ಲಿ ಮಸರಿಕ್ಕು!. ಅಜ್ಜ-ಅಜ್ಜಿ ವೃದ್ಧಾಶ್ರಮಲ್ಲಿಕ್ಕು!! ಈ ಗಾದೆ ಬರದು ಮಡಗಿದ್ದು ಪುಸ್ತಕಲ್ಲಿಕ್ಕು!!!.  ಮಜ್ಜಿಗೆ ಹೇಳುಸ್ಸರ ಪೇಟೆ ಮಕ್ಕೊಗೆ[ ಕೆಲವೆಡೆ ಹಳ್ಳಿಲಿಯೂ] ಕಾಂಬಲೆ ಸಿಕ್ಕ!.. ಎಂತ ಹೇಳ್ತಿ?.

ವಿಜಯತ್ತೆ

   

You may also like...

7 Responses

 1. Harish says:

  ಸಕಾಲಿka, ಲೇಖನ , ಬಾಲ್ಯದತ್ತ ಮನಸ್ಸು ಹೋಪಂಗೆ maadittu. ಧನ್ಯವಾದ೦ಗೊ

 2. ನುಡಿಗಟ್ಟು ಲಾಯಕಿದ್ದು. ಸಂಗತಿ ಅಪ್ಪದು ಹೇಳಿ ಕಂಡತ್ತು. ಕಡೇಣ ವಾಕ್ಯಂಗಳ ಓದಿಯಪ್ಪಗ ಮನಸ್ಸಿಂಗೆ ತಟ್ಟಿತ್ತು.

 3. ಹರೀಶಂಗು ಬೊಳುಂಬುಮಾವಂಗು ಧನ್ಯವಾದಂಗೊ

 4. S.K.Gopalakrishna Bhat says:

  ಮಜ್ಜಿಗೂಟಕೆ ಲೇಸು ಮಜ್ಜನಕೆ ಮಡಿ ಲೇಸು /ಕಜ್ಜಾಯ ತುಪ್ಪ ಉಣಲೇಸು ಮನೆಗೊಬ್ಬ /ಅಜ್ಜಿ ಲೇಸೆಂದ ಸರ್ವಜ್ಞ //-ಹೇಳುವ ವಚನ ನೆನಪಾತು.ಮಜ್ಜಿಗೆ ಒಳ್ಳೆ ಪೇಯ. ಜಾಸ್ತಿ ಉಪ್ಪು,ಮೆಣಸು ಹಾಕದ್ದೆ ಕುಡಿದರೆ ಬಿ.ಪಿ.ಗೆ ಒಳ್ಳೇದು. ಹೊಟ್ಟೆಗೆ ಒಳ್ಳೇದು.

 5. ಅದಪ್ಪು ಗೋಪಾಲ ಆ ಸರ್ವಜ್ಞ ವಚನ ಸಮಯೋಚಿತ[ಅಜ್ಜಿಯೂ ಮಜ್ಜಿಗೆಯೂ ಎರಡೂ ಇದ್ದ ವಚನ ] . ನೀನು ನೆಂಪು ಮಾಡಿದ್ದದ. ಧನ್ಯವಾದ .

 6. ಚೆನ್ನೈ ಭಾವ° says:

  ಮಜ್ಜಿಗೆ ಶುದ್ದಿಯೂ ಅಜ್ಜಿಯ ಕತೆಯೂ ಅಕೇರಿಯಾಣ ಒಗ್ಗರೆಣೆಯೂ ಒಪ್ಪ ಆಯಿದು. ಎನಗೊಂದರಿ ಜಳುಂಬುಳುಂ ಬೋಚು ನೆಂಪಾದ್ದೂ ಅಪ್ಪು

 7. ಈ ಬೋಚು ಕಡವಗ ಬೊಚ್ಚುಬಾಯಿಮಕ್ಕಳ ಮಡಿಲ್ಲಿ ಕೂರುಸೆಂಡು ಕಡವ ಅಜ್ಜಿಯ ಕಾಂಬಲೆ ತುಡಿತ ಅಪ್ಪದು ಸರಿ . ಆದರೆ ಅದರ ಕಾಂಬಲೆ ಈಗ ಎಲ್ಲಿಗೆ ಹೋಗಲಿ ಚೆನ್ನೈಭಾವಾ?

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *