“ಇಡೀ ಮುಂಗಿದವಂಗೆ ಚಳಿ ಇಲ್ಲೆ”-{ಹವ್ಯಕ ನುಡಿಗಟ್ಟು-56}

May 31, 2016 ರ 2:18 pmಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಇಡೀ ಮುಂಗಿದವಂಗೆ ಚಳಿ ಇಲ್ಲೆ”—{ಹವ್ಯಕ ನುಡಿಗಟ್ಟು-56}
ನಾವು ಕೆರೆಲಿಯೋ ಹೊಳೆಲಿಯೋ ಮೀವಗ ಅರ್ಧಂಭರ್ದ ಮುಂಗಿರೆ ಚಳಿ ಅಪ್ಪದು.ಇಡೀ ಮುಂಗಿಯಪ್ಪಗ ಚಳಿ ಇಲ್ಲೆನ್ನೆ. ಮುಂಗಿ ಮಿಂದವಕ್ಕೆಲ್ಲೋರಿಂಗೂ ಈ ಅನುಭವ ಇದ್ದು.ಇದರ ನುಡಿಗಟ್ಟಿಲ್ಲಿ ಎಂತಕೆ ಬಳಸುವದು!?.ನೋಡುವೊಂ.
ಚುಬ್ಬಣ್ಣ ಮಾವ ಒಳ್ಳೆ ಮನುಷ್ಯ. ಪ್ರಾಮಾಣಿಕ ಜೆನ.ಎಲ್ಲಾ ಮನಗಳಲ್ಲೂ ಅಪ್ಪಹಾಂಗೆ ಅವರ ಮನೆಲಿಯೂ ಪಾಲು ಪಂಚಾಯಿತಿಗೆ ಸುರುವಾತು.ತಮ್ಮ ಗವರ್ಮೆಂಟ್ ಉದ್ಯೋಗಲ್ಲಿ ಪೇಟೆಲಿದ್ದ.ಅವಂಗೆ ಈಗ ಪಾಲಾಯೆಕ್ಕು,ಆ ಪಾಲಿಲ್ಲಿ ಬಪ್ಪ ಪೈಸಲ್ಲಿ ಪೇಟೆಲಿ ಸೈಟು ತೆಗದು ಮನೆಕಟ್ಟೆಕ್ಕು ಹೇಳ್ತ ಇರಾದೆ. ಆ ಪೇಟೆಲಿ ಕೆಲಸಲ್ಲಿದ್ದ ಮಗನ ಕಡೆಂದಲೇ ಅಬ್ಬೆ-ಅಪ್ಪ ಮಾತಾಡುದು[ಹೆಚ್ಚಿನ ಮನಗಳಲ್ಲೂ ಇದೇ ಕಾಣುತ್ತು]. ಅಪ್ಪನ ಬ್ಯಾಂಕ್ ಖಾತೆಲಿ ಇಪ್ಪ ಪೈಸವ ಅವಂಗೆ ಪಾಲು ಕೊಡ್ಳಾಗದೋ ಜಾಗೆಯ ತುಂಡುಮಾಡಿ ಮಾರಿ ಮುಡ್ಚುದೆಂತಕೆ ಹೇಳಿ ಚುಬ್ಬಣ್ಣ ಹೇಳಿರೆ; ತಮ್ಮನು ಅಪ್ಪನೂ ಇಬ್ರೂ ಬೇಂಕಿಲ್ಲಿಪ್ಪ ಪೈಸೆ ಕರಗುಸುದು ಬೇಡಾಳಿ ತರ್ಕ ಹಿಡಿವವು!.
ಈ ವಾದಾಂಟ ಕಂಡು ಬೊಡುದ ಚುಬ್ಬಣ್ಣನ ಎಜಮಾನ್ತಿ ಲಕ್ಷ್ಮಿ, ಗೆಂಡನತ್ರೆ; “ಅವಕ್ಕಿಬ್ರಿಂಗು ಬೇಕಾದಾಂಗೆ ಮಾಡಿಗೊಳಲಿ.ಸುಮ್ಮನೆ ನಿಂಗೊ ನಿಷ್ಠುರ ಕಟ್ಟಿಗೊಳೆಡಿ” ಹೇಳಿಯಪ್ಪಗ “ಆನು ಹೇಂಗಾರು ಅವರ ಕಣ್ಣಿಂಗೆ ಕೆಟ್ಟವ ಆಯಿದೆ. ಇನ್ನು ಮೂಲೆ ಅಡಗಿ ಕೂರುತ್ತಿಲ್ಲೆ. ’ಇಡೀ ಮುಂಗಿದವಂಗೆ ಚಳಿ ಇಲ್ಲೆ’. ಅಪ್ಪನ ಕಾರ್ಬಾರಲ್ಲಿ ಈ ಆಸ್ತಿ ಅರೂಪಾದ್ದರ ಇಷ್ಟು ಫಲವತ್ತಾಗಿ ಮಾಡಿದ ಬಙ್ ಮಾಸಿದ್ದಿಲ್ಲೆ.ಅಷ್ಟಪ್ಪಗ ಇದರ ಹರಿಹಂಚು ಮಾಡುವ ಮನಸ್ಸೆಂತಕೆ!?”.
ಅಪ್ಪು.ಸುರು,ಸುರುವಿಂಗೆ ಚುಬ್ಬಣ್ಣಮಾವಂಗೆ; ಅಪ್ಪ,ತಮ್ಮನ ಕಾದಾಟಕ್ಕೆ ಚಳಿ ಆತು.ಆದರೆ ತನ್ನ ಪ್ರಾಮಾಣಿಕತನಕ್ಕೆ ಬೆಲೆ ಸಿಕ್ಕದ್ದಪ್ಪಗ ಆ ಚಳಿ ಬಿಟ್ಟತ್ತು. ಬೆಂದು,ಬೆಂದೂ ಬಸವಳಿದ ಪ್ರಾಮಾಣಿಕರು ಬೇರೆಯವರಿಂದ ಬಪ್ಪ ಅಪ್ರಮಾಣಿಕ ಒತ್ತಡದ ಹೊಯ್ದಾಟಕ್ಕೆ ಬೇಜಾರಾಗಿ ತೋರುವ ತುಮುಲವ ಈ ನುಡಿಗಟ್ಟಿಲ್ಲಿ ಹೆಚ್ಚಾಗಿ ಬಳಸುತ್ತೊವು.
——–೦——-

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

  1. ಶೀಲಾಲಕ್ಷ್ಮೀ ಕಾಸರಗೋಡು
    sheelalakshmi

    ಲಾಯಕಿದ್ದು ವಿಜಯಕ್ಕಾ, `ಬೆಂದೂ ಬೆಂದೂ ಬಸವಳಿದ ಪ್ರಾಮಾಣಿಕರು’ ಹೇಳುವ ಪ್ರಯೋಗ ಇಷ್ಟ ಆತು.

    [Reply]

    VA:F [1.9.22_1171]
    Rating: 0 (from 0 votes)
  2. ಬೊಳುಂಬು ಮಾವ°
    ಗೋಪಾಲ ಬೊಳುಂಬು

    ಒಳ್ಳೆ ನುಡಿಗಟ್ಟು ವಿಜಯಕ್ಕಾ. ಅರ್ಥವತ್ತಾಗಿದ್ದು.

    [Reply]

    VA:F [1.9.22_1171]
    Rating: 0 (from 0 votes)
  3. ಮುಳಿಯ ಭಾವ
    ರಘು ಮುಳಿಯ

    ಉದಾಹರಣೆಯೊಟ್ಟಿಂಗೆ ನುಡಿಗಟ್ಟಿನ ವಿವರಣೆ ಅರ್ಥವತ್ತಾಗಿದ್ದು .ಧನ್ಯವಾದ ಅತ್ತೆ .

    [Reply]

    VA:F [1.9.22_1171]
    Rating: 0 (from 0 votes)
  4. ಶರ್ಮಪ್ಪಚ್ಚಿ
    ಶರ್ಮಪ್ಪಚ್ಚಿ

    ಅರ್ಥವತ್ತಾದ ನುಡಿಗಟ್ಟು. ಧನ್ಯವಾದ ವಿಜಯತ್ತಿಗೆಗೆ

    [Reply]

    VA:F [1.9.22_1171]
    Rating: 0 (from 0 votes)
  5. K.Narasimha Bhat Yethadka

    ವಿವರಣೆ ಲಾಯಕಾಯಿದು ವಿಜಯಕ್ಕ.

    [Reply]

    VA:F [1.9.22_1171]
    Rating: 0 (from 0 votes)
  6. ವಿಜಯತ್ತೆ

    ಓದಿ ಒಪ್ಪಕೊಟ್ಟ ಶೀಲಂಗೆ ,ಬೊಳುಂಬು ಗೋಪಾಲಂಗೆ,ಮುಳಿಯ ರಘುವಿಂಗೆ ,ಶರ್ಮಭಾವಂಗೆ,ನರಸಿಂಹಣ್ಣಂಗೆ ಎಲ್ಲರಿಂಗೂ ಮನಃ ಪೂರ್ವಕ ಧನ್ಯವಾದಂಗೊ.

    [Reply]

    VN:F [1.9.22_1171]
    Rating: 0 (from 0 votes)
  7. ಗೋಪಾಲಣ್ಣ
    S.K.Gopalakrishna Bhat

    ಸರೀಸೋತು ಸುಣ್ಣ ಆದ ಮೇಲೆ ಹೇಳುವ ಮಾತು ಇದು. ಇನ್ನು ಕಳಕ್ಕೊಂಬಲೇನಿಲ್ಲೇ ಹೇಳುವ ಭಾವ

    [Reply]

    VA:F [1.9.22_1171]
    Rating: 0 (from 0 votes)
  8. ವಿಜಯತ್ತೆ

    ಅಪ್ಪು ಗೋಪಾಲ , ಅದನ್ನೇ ಆನು ಬೆಂದೂ ಬೆಂದೂ ಬಸವಳಿದವು ಹೇಳಿ ಉಪಯೋಗಿಸಿದೆ . ಧನ್ಯವಾದಂಗೊ ನಿನಗೆ .

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಗಣೇಶ ಮಾವ°ಪುಟ್ಟಬಾವ°ಅನಿತಾ ನರೇಶ್, ಮಂಚಿಚುಬ್ಬಣ್ಣಅನುಶ್ರೀ ಬಂಡಾಡಿಉಡುಪುಮೂಲೆ ಅಪ್ಪಚ್ಚಿಅಜ್ಜಕಾನ ಭಾವಪ್ರಕಾಶಪ್ಪಚ್ಚಿನೆಗೆಗಾರ°ಶ್ರೀಅಕ್ಕ°ಶಾಂತತ್ತೆಯೇನಂಕೂಡ್ಳು ಅಣ್ಣಪುಣಚ ಡಾಕ್ಟ್ರುಶೀಲಾಲಕ್ಷ್ಮೀ ಕಾಸರಗೋಡುಬಟ್ಟಮಾವ°ವಿನಯ ಶಂಕರ, ಚೆಕ್ಕೆಮನೆಮಾಲಕ್ಕ°ವಾಣಿ ಚಿಕ್ಕಮ್ಮಕೆದೂರು ಡಾಕ್ಟ್ರುಬಾವ°ರಾಜಣ್ಣವಿದ್ವಾನಣ್ಣವೆಂಕಟ್ ಕೋಟೂರುಸುವರ್ಣಿನೀ ಕೊಣಲೆಶಾ...ರೀತೆಕ್ಕುಂಜ ಕುಮಾರ ಮಾವ°ಒಪ್ಪಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ

ಬೆಣಚ್ಚಿಪ್ಪಲ್ಲಿ ಹುಡ್ಕಲೆ