”ಇರುಳು ಕಂಡ ಬಾವಿಗೆ ಹಗಲು ಹಾರಿದ ಹಾಂಗೆ”–{ಹವ್ಯಕ ನುಡಿಗಟ್ಟು–20}

November 16, 2014 ರ 5:26 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಇರುಳು ಕಂಡ ಬಾವಿಗೆ ಹಗಲು ಹಾರಿದ ಹಾಂಗೆ”-[ಹವ್ಯಕ ನುಡಿಗಟ್ಟು—20]
ಕೆಲಾವು ವರ್ಷ ಹಿಂದೆ ಅಪ್ಪನ ಪರಿಚಯಸ್ತರು ಆರೋ ಮನಗೆ ಬಂದ ಸಂದರ್ಭ. ಸುಖ, ದುಃಖ ಮಾತಾಡ್ತಾ ಅವರವರ ಹೆಂಡತ್ತಿ,ಮಕ್ಕಳ ವರ್ತಮಾನವೂ ಆತ್ಮೀಯರಲ್ಲಿ ಬಾರದ್ದೆ ಇರಯಿದ!. ಅವು ಎನ್ನಪ್ಪನತ್ರೆ ಮಾತಾಡ್ತಾ “ಎಂತ ಹೇಳಿಯೂ ಸುಖ ಇಲ್ಲೆ ಭಾವ! ಕೊಟ್ಟ ಮಗಳು ಅಪ್ಪನ ಮನೆಲಿ ಬಂದುಕೂದರೆ; ಅದೊಂದು ನಿತ್ಯ ಕರಕ್ಕರೆ ಮಿನಿಯ! ನವಗೆ ಮಗಳ ಸಾಂಕಲೆಡಿಯದ್ದೆ ನಾವು ಮದುವೆ ಮಾಡುಸ್ಸೊ ಹೇಳು?ಇಪ್ಪ ಹಾಂಗೆ ಇದ್ದರೆ ಅದೊಂದು ಚೆಂದ. ಕೂಸಿಂಗೆ ಮದುವೆ ಆಗಿ ಒಂದೆರಡು ತಿಂಗಳಿಲ್ಲೇ ಕೂಸಿನ ಬದುಕು ಹೀಂಗಾತು” ಅವರ ಮಗಳ, ಒಡದು ಹೋದ ದಾಂಪತ್ಯದ ಕಣ್ಣೀರ ಕತೆಯ ಕೇಳಿದ ಎನ್ನಪ್ಪ; “ಮೊದಲೇ ಅವರ ಬುದ್ಧಿ ನೇರ್ಪ ಇಲ್ಲೆ ಹೇಳಿ ಗೊಂತಿದ್ದತ್ತು ಹೇಳ್ತೆ ನೀನು! ಮತ್ತೆಂತಕೆ… ’ಇರುಳು ಕಂಡ ಬಾವಿಗೆ ಹಗಲು ಹೋಗಿ ಹಾರ್ತ ಜೆಂಬಾರ’ ಬೇಕಾತೊ!? ಕೇಳಿದೊವು. “ಎಂತ ಮಾಡ್ಳಿ? ಮಾಣಿಯ ಅಬ್ಬೆಪ್ಪ ಮೊಂಡು ತರ್ಕಿಗೊ ಆದರೂ ಮಾಣಿ ಜೆನ ಸೀದ ಜಾನ್ಸಿಗೊಂಡೆ.ಕೇಳಿಗೊಂಡು ಬಪ್ಪಗ ಕೊಡದ್ದರೆ;ಬಾಕಿ ಆದರೆ ಪ್ರಾಯ ನಿಲ್ಲುತ್ತೊ ಹೇಳು. ಆದರೀಗ ನೋಡೀರೆ ಅಳಿಯ ’ಅಬ್ಬೆಪ್ಪಾರಿ’. ಅವ ಎನ್ನ ಮಗಳ “ಪಾಣಿಗ್ರಹಣ’’ ಮಾಡಿದ್ದಲ್ಲ. ಪ್ರಾಣಿಗ್ರಹಣ ಮಾಡಿದ್ದದು!!.ನಿತ್ಯ ಅವರ ಪೆಟ್ಟು ತಿಂದೊಂಡು ಆನಲ್ಲಿ ಕೂರ್ತಿಲ್ಲೆ ಹೇಳ್ತು ಮಗಳು!!.ನಮ್ಮ ಕರುಳು ಕರಂಚುತ್ತಲ್ಲೊ! ಕರಕ್ಕೊಂಡು ಬನ್ನಿ ಹೇಳಿತ್ತು ಹೆಂಡತ್ತಿ.ಹಾಂಗೇ ಮಾಡಿದೆ.”
ಮೇಗೆ ಹೇಳಿದ ಸಂಗತಿ, ಒಂದೆರಡು ಮನೆಯ ಕತೆ ಅಲ್ಲ!. ಈಗೀಗ ಹಲವಾರು ಮನೆ ಕತೆ-ವ್ಯಥೆ!!.ಕೆಲವು ಉದಾಹರಣೆಲಿ ಒಂದೇ ಹೊಡೆಯಾಣ ಪೆಟ್ಟಿಂಗೆ ಇನ್ನೊಂದು ಹೊಡೆ ಬೇನೆ ತಿಂಬದಾದರೆ; ಇನ್ನು ಕೆಲವು ಎರಡೂ ಹೊಡೆಯೋರು ಕೈ ಕೈ ಹರ್ಕತ್ತು ಮಾಡಿ ಮುರುಸಿದ್ದಾಗೆಂಡಿಕ್ಕು.ಅಂತೂ ಸೋಲುದು ಕೂಸುಗಳೇ ಹೇಳ್ವದರ ಮರವಲೆಡಿಯ!.
ಈ ನುಡಿಗಟ್ಟು ಮದುವೆ ವಿಷಯಕ್ಕೆ ಮಾಂತ್ರ ಅನ್ವಹಿಸಿದ್ದಲ್ಲ. ಗೊಂತಿದ್ದು-ಗೊಂತಿದ್ದೂ ನಾವು ಎಡವಿ ಬೀಳ್ಲಾಗ ಹೇಳಿ ಎಚ್ಚರಿಕೆ ಕೊಡುವ ಹೇಳಿಕೆಯಿದು. ಕೆಲವು ವಿಷಯಂಗಳಲ್ಲಿ ಅತೀವ ಚಿಂತನೀಯ ಹೇಳುಗು ಎನ್ನಪ್ಪ. ಗ್ರಹಚಾರ ಸುತ್ತುವಾಗ ನಾವು ಎಷ್ಟೇ ಚಿಂತನೆ ಮಾಡಿರೂ ಸೋಲುತ್ತು. ಹಾಂಗೆ ಹೇದೊಂಡು ಜಾಗ್ರತೆ ಮಾಡದ್ರೂ ಆಗಯಿದ. ನಿಂಗೊ ಎಂತ ಹೇಳ್ತಿ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. parvathimbhat
  parvathimhat

  ಸತ್ಯವಾದ ಮಾತು ವಿಜಯಕ್ಕ .ಇರುಳು ಕ೦ಡ ಬಾವಿಗೆ ಹಗಲು ಹೋಗಿ ಆರೂ ಬೇಕೂ ಹೇಳಿ ಬೇಳ್ತೊವಿಲ್ಲೆ .ಆದರೆ ಕೆಲವು ಸರ್ತಿ ಹಾ೦ಗಿದ್ದ ಪರಿಸ್ಥಿತಿ ಬ೦ದು ಹೋವುತ್ತು.ಹಾ೦ಗಾಗಿ ಜೀವನಲ್ಲಿ ಜಾಗ್ರತೆ ಇದ್ದಷ್ಟು ಸಾಲ ಅಲ್ಲದಾ ?.

  [Reply]

  VA:F [1.9.22_1171]
  Rating: 0 (from 0 votes)
 2. manjunatha prasa

  ಇದು ಒಳ್ಳೆ ಒಂದು ಮಾತು ಅಕ್ಕ ಇದರ ಮನಸ್ಸಿಲ್ಲಿ ಮಡಗಿಯೊಂಡಿದ್ದರೆ ಯಾವಾಗಲೂ ಒಳ್ಳೇದು

  [Reply]

  VA:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ಹರೇರಾಮ, ಸರಿ ಪಾರ್ವತಿ,ಇರುಳು ಕಂಡ ಬಾವಿಗೆ ನೇರವಾಗಿ ಆರೂ ಹೋಗಿ ಬೀಳ್ತವಿಲ್ಲೆ . ಅಷ್ಟು ವಿವೇಕಶೂನ್ಯತೆ ಇಪ್ಪಲಾಗ ಹೇಳ್ವದಕ್ಕಾಗಿಯೇ ಈ ನುಡಿಗಟ್ಟು. ಒಪ್ಪ ಕೊಟ್ಟ ಪಾರ್ವತಿಗೆ, ಮಂಜುನಾಥ ಪ್ರಸಾದಂಗೆ ಧನ್ಯವಾದಂಗೊ

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪುತ್ತೂರಿನ ಪುಟ್ಟಕ್ಕರಾಜಣ್ಣಡೈಮಂಡು ಭಾವಶಾಂತತ್ತೆವಿನಯ ಶಂಕರ, ಚೆಕ್ಕೆಮನೆವೇಣಿಯಕ್ಕ°ಬೊಳುಂಬು ಮಾವ°ಪುತ್ತೂರುಬಾವವಾಣಿ ಚಿಕ್ಕಮ್ಮಗೋಪಾಲಣ್ಣದೀಪಿಕಾಶುದ್ದಿಕ್ಕಾರ°ಬೋಸ ಬಾವಸಂಪಾದಕ°ಮುಳಿಯ ಭಾವಬಟ್ಟಮಾವ°ಪುಣಚ ಡಾಕ್ಟ್ರುಹಳೆಮನೆ ಅಣ್ಣದೇವಸ್ಯ ಮಾಣಿಜಯಗೌರಿ ಅಕ್ಕ°vreddhiಕಳಾಯಿ ಗೀತತ್ತೆವಿದ್ವಾನಣ್ಣಚುಬ್ಬಣ್ಣವಿಜಯತ್ತೆಸುವರ್ಣಿನೀ ಕೊಣಲೆ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಮನೆಯೊಳಗೆ ಮನೆಯೊಡೆಯ ಇದ್ದಾನೋ ಇಲ್ಲವೋ?
ಹಸ್ತೋದಕ ಕೊಟ್ಟಪ್ಪದ್ದೆ ಸಾರಿನ ಕವಂಗ ನೆಗ್ಗಿ ಆತು
ಊದು ವನಮಾಲಿ ಮುರಳಿಯಾ

ಬೆಣಚ್ಚಿಪ್ಪಲ್ಲಿ ಹುಡ್ಕಲೆ