“ಉಂಡಾತೋ ಕೇಳಿರೆ, ಮುಂಡಾಸು ಮೂವತ್ತುಮೊಳ”-{ಹವ್ಯಕ ನುಡಿಗಟ್ಟು-64}

“ಉಂಡಾತೋ ಕೇಳಿರೆ ಮುಂಡಾಸು ಮೂವತ್ತು ಮೊಳ”-{ಹವ್ಯಕ ನುಡಿಗಟ್ಟು-64}

 

ಅದೇ… ಈ ಊಟಕ್ಕೂ ಮುಂಡಾಸಿಂಗು ಎಂತ ಸಂಬಂಧವೋಪ್ಪ!. ಬಯಲಿಲ್ಲಿ ನಮ್ಮ ಪಟ್ಟಾಜೆ ಶಿವರಾಮಣ್ಣ ಕೇಳಿದ್ದೊವು.ಅವರ ಹಾಂಗೆ ಎನಗೂ ಒಂದು ಕಾಲಲ್ಲಿ ಮನಸ್ಸಿಂಗೆ ಹೀಂಗೆ ಜಿಜ್ಞಾಸೆ ಬಂದದಪ್ಪು!. [ಬೇರೆ ಕೆಲಾವು ಜೆನಕ್ಕೆ ಬಂದಿಕ್ಕು ಹೇಳುವೊᵒ]

ಅದೆಂತರಂಬಗ!?…ಒಂದು ಉದಾಹರಣೆ ಹೇಳ್ತೆ. ಆನು ಸಣ್ಣದಿಪ್ಪಗ ಗೆದ್ದೆ ಬೇಸಾಯ ಇದ್ದತ್ತು  ಅಪ್ಪನ ಮನೆವಕ್ಕೆ.ಗೆದ್ದೆ ಹೂಡುತ್ತ ಚನಿಯ, ಮಜ್ಜಾನ ಮುಟ್ಟ; ಹೂಡಿಕ್ಕಿ, ಎತ್ತುಗಳ ಮೀಶಿ ಹಟ್ಟಿಲಿ ಕಟ್ಟಿಕ್ಕಿ  ಜಾಲಿಂಗೆ ಬಂದು ಅಪ್ಪನತ್ರೆ ಅಂದಾದ ಕೆಲಸ ಒಪ್ಪುಸುತ್ತ ಸಮಯ. “ಎರುಕ್ಕುಲೆಕ್ಕು ಚಿನಿಯಾರ ಪಾಡಿಯಾನೊ?”. ಅಪ್ಪನ ಪ್ರಶ್ನೆ.

“ ಇನಿ ಈರ್ ಪಂಡ್ನಾತ್ ಅಡತ್ತ್ ಆಯಿಜ್ಜಿ ಇದ್ದೆ”. [ಆ ಕಾಲಲ್ಲಿ ಹರಿಜೆನಂಗೊ ಬ್ರಾಹ್ಮಣ ಗೆಂಡುಮಕ್ಕಳ ಸಂಬೋಧನೆ ಮಾಡುವ ಶಬ್ಧ ’ಇದ್ದೆ’ ಹೇಳಿಯಾದರೆ, ಹೆಮ್ಮಕ್ಕಳ  ’ದೆತ್ತಿ’ ಹೇಳುಗು.]

“ಇದು ಉಂಡಾತೊ ಕೇಳಿದ್ದಕ್ಕೆ ಮುಂಡಾಸು ಮೂವತ್ತು ಮೊಳ ಹೇಳ್ತನ್ನೆ”. ಮನೆಜೆಗಿಲ್ಲಿ ಆರೊಲ್ಲ ಇದ್ದಿದ್ದವರತ್ರೆ ಹೇಳಿಯೊಂಡಿಕ್ಕಿ ಅಪ್ಪ ಅದಕ್ಕೆ ಮೊದಲು ಹಾಕಿದ ಪ್ರಶ್ನೆಯನ್ನೆ ಹಾಕಿ ಉತ್ತರ ಪಡಕ್ಕೊಂಡವು.

ಅಷ್ಟಪ್ಪಗ ಎನ್ನ ಸೋದರಮಾವ  ಅಲ್ಲಿ ಇತ್ತಿದ್ದವು ಅಪ್ಪನತ್ರೆ  “ಅದೆಂತಕೆ ಬಾವಯ್ಯ ಮುಂಡಾಸಿನ ಶುದ್ದಿ ಇದಲ್ಲಿ ಜೋಡುಸುದು?” ಕೇಳಿದೊವು.

“ಅದುವೋ  ಮದಲಿಂಗೆ ಮನೆ ಎಜಮಾನ ದೊಡ್ಡ ಅನುಪತ್ಯ ಮಾಡುವಗ ದೊ..ಡಾ..ಮುಂಡಾಸು ಕಟ್ಟುಗಿದ. ಎರಡ್ನೇ ಹಂತಿಗೆ ಮನೆವೆಲ್ಲ ಕೂದರೂ ಎಜಮಾನನ ಕಾಣ್ತಿಲ್ಲೆ!. [ಮನೆ ಎಜಮಾನ ಉಂಬಲೆ ಕೂಬ್ಬಗ ಮುಂಡಾಸು ಬಿಡುಸೆಕ್ಕು. ಮದಿಮ್ಮಾಯ ಮಾಂತ್ರ ಮುಂಡಾಸು ಕಟ್ಟೆಂಡೇ ಕೂಬ್ಬ ಕ್ರಮ] ನಿಂಗೊಗೆ ಉಂಡಾತೊ?.ಎಲ್ಲೋರೂ ಕೂದೊವು”. ಉಂಬಲೆ ದೆನಿಗೇಳುವಗ, ಮುಂಡಾಸು ಮೂವತ್ತು ಮೊಳ ಇದ್ದು, ಅದರ ಬಿಡುಸೆಂಡಿರುತ್ತಾ ಬಿಡುಸಿ ಆಯಿದಿಲ್ಲೇಳಿ ಅವᵒ  ಹೇಳ್ತಿಪ್ಪದು.”

“ಓಹೋ ಹಾಂಗೋ ವಿಷಯ!”.

ಇಲ್ಲಿ ಓದುಗರು ಗಮನುಸೆಕ್ಕಾದ ವಿಷಯ ಎಂತಾಳಿರೆ; ಇದು.., ಕೇಳಿದ ಪ್ರಶ್ನಗೆ ಸರಿಯಾದ ಉತ್ತರ ಅಲ್ಲದಿದ್ದರೂ ಪೆದಂಬೂ ಅಲ್ಲ. ಕೆಲವು ಸರ್ತಿ ಮಕ್ಕೊಗೆ ನಾವೊಂದು ಕೇಳುವಗ ಅವು ಮತ್ತೊಂದು ಹೇಳ್ತೊವು. ಅವು ಮದಲೇ ನಮ್ಮತ್ರೆ ಒಪ್ಪುಸುತ್ತ ವಿಷಯ ರೆಡಿ ಮಾಡಿ ಬಂದಿರುತ್ತೊವು. ಅದರ ಅವಕ್ಕೆ ಒಪ್ಪುಸಲೆ ಅಂಬ್ರೇಪು. ಮೇಲೆ ಚನಿಯ ಹೇಳಿದ ಉತ್ತರವೂ ಇದೇ ರೀತಿದು. ಮನೆ ಎಜಮಾನಂಗೂ ಅದೇ. ಎನ ಮುಂಡಾಸು ಬಿಡುಸಿ ಆಯಿದಿಲ್ಲೆ,ಅದು ಮೂವತ್ತು ಮೊಳ ಇದ್ದೂಳಿ  ಒಪ್ಪುಸೆಕ್ಕಾಯಿದವಂಗೆ.

ಎನ ಗೊಂತಿದ್ದ ಹಾಂಗೆ ಹೇಳಿದೆ. ನಿಂಗೊ ಎಂತ ಹೇಳ್ತಿ…..?  —-೦—-

 

 

 

 

ವಿಜಯತ್ತೆ

   

You may also like...

11 Responses

 1. ಲಾಯಕಕೆ ಹೇಳಿದ್ದಿರಿ ವಿಜಯಕ್ಕ.

 2. ಬೊಳುಂಬು ಗೋಪಾಲ says:

  ವಿಜಯಕ್ಕ, ಈ ನುಡಿಗಟ್ಟು ಕೇಳಿತ್ತಿದ್ದೆ. ಅದರ ಹಿನ್ನೆಲೆ ಹೀಂಗಿದ್ದು ಹೇಳಿ ಗೊಂತಿತ್ತಿಲ್ಲೆ.
  ಮೊಬೈಲು ಗುರುಟಿಯೊಂಡು, ಗೇಮು ಆಡಿಯೊಂಡು, ಟಿವಿ ನೋಡ್ಯೊಂಡು ಇಪ್ಪ ಈಗಾಣ ಕಾಲದವು ಕೊಡ್ತ ಉತ್ತರಂಗೊ, ಹೀಂಗೇ ಇಕ್ಕಷ್ಟೆ. ಏಕೆ ಹೇಳಿರೆ ಪ್ರಶ್ಣೆ ಸರಿ ಕೇಳಿರೆ ಅಲ್ಲದೊ ಉತ್ತರ ಸರಿಯಾಗಿ ಬಪ್ಪದು.

 3. ಶೀಲಂಗೂ ಬೊಳುಂಬು ಗೋಪಾಲಂಗೂ ಧನ್ಯವಾದಂಗೊ . ಹ.. ಹ.., ಈಗಾಣವರ ಹಿಂಗಿದ್ದ ನುಡಿಗಟ್ಟಿಂಗಾದರೂ ಹೋಲುಸಲೆ ಏಡಿಗನ್ನೆ. ಅದೇ ಸಮಾಧಾನ ಗೋಪಾಲಣ್ಣ.

 4. manjunatha says:

  ತುಂಬ ಹಳೆ ನುಡಿಗಟ್ಟು ಸುಮಾರು ಸರ್ತಿ ಕೇಳಿದ್ದೆ ಅಕ್ಕ. ಆದರೆ ಅದರ ಹಿನ್ನಲೆ ಹಿಂಗೇ ಹೇಳಿ ಈಗ ಗೊಂತಾತಷ್ಟೆ.ಚಿಕ್ಕದಾಗಿ ಚೊಕ್ಕದಾಗಿ ಬರದ್ದೆ.

 5. Venugopal Kambaru says:

  ಲಾಯಕ ಆಯಿದು

 6. ಕಂಬಾರು ವೇಣುಗೋಪಾಲಂಗೆ, ಮಂಜುನಾಥಂಗೆ ಧನ್ಯವಾದಂಗೊ. ಈ ನುಡಿಗಟ್ಟಿನ ಹಿನ್ನೆಲೆ ಕೇಳಿದ ಪಟ್ಟಾಜೆ ಶಿವರಾಮಣ್ಣ ಇದರ ಓದಿದ್ದವಿಲ್ಯೊಪ್ಪ!.ಸುದ್ದಿ ಇಲ್ಲೆನ್ನೇ!!

  • ಓದಿದ್ದೆ. ಇದರ ಹಿನ್ನೆಲೆ ಹೀಂಗೆ ಹೇಳಿ ಎನಗೆ ಈಗ ಗೊಂತಾತಷ್ಟೇ. ಧನ್ಯವಾದಂಗೊ ವಿಜಯಕ್ಕಂಗೆ. ಇನ್ನೂ ತುಂಬಾ ಗಾದೆಗಳ/ನುಡಿಗಟ್ಟುಗಳ ವಿವರಣೆ ನಿಂಗಳಿಂದ ನಿರೀಕ್ಷಿಸುತ್ತೆ

 7. ಶಿವರಾಮಣ್ಣಾ, ನಿಂಗಳ ಒಪ್ಪ ನೋಡಿ ಸಂತೋಷಾತು. ಓದುವವು, ಇನ್ನೂ ಬರೆಯಿ ಹೇಳುವೊವು ಇದ್ದರೆ; ಬರೆತ್ತವಕ್ಕೆ ಉತ್ಸಾಹ ಅಲ್ಲದೋ?. ಎನ ಗೊಂತಿದ್ದರ ಇದಲ್ಲಿ ಬರೆತ್ತಾ ಇರುತ್ತೆ.ಓದಿ ನೋಡಿ ಅಭಿಪ್ರಾಯ ಹೇಳಿಯೊಂಡಿರಿ. ಎರಡು ವರ್ಷಂದ ಸುರುಮಾಡಿದ್ದೆ ಈ ನುಡಿಗಟ್ಟು. ಹಾಕಲೆ. ಹಾಕೆಕ್ಕು ಹೇಳಿದೊವು ಬಯಲಿನೊವೇ. ವಿಷೇಶವಾಗಿ ಶರ್ಮಭಾವ.

 8. ಇನ್ನೊಂದಿದ್ದು. ಉಂಡವಂಗೆ ಹಶು ಹೆಚ್ಚು, ತಿಂದವಂಗೆ ಕೊದಿ ಹೆಚ್ಚು ಹೇಳಿ. ನಿಧಾನಕೆ ತಿಳಿಶಿ.

 9. ಹರೇರಾಮ , ಶಿವರಾಮಣ್ಣ , ಖಂಡಿತ ತಿಳುಶುವೋ ಇದರ .

 10. ವಿಜಯತ್ತೆ,
  ಈ ನುಡಿಗಟ್ಟು ಹಲವು ಸರ್ತಿ ಮಾತಿಲಿ ಬತ್ತು. ಲಾಯ್ಕದ ವಿವರಣೆ.
  ಚನಿಯಂಗೆ ದನಿ ಉಣ್ಣು ಹೇಳಿ ಅಪ್ಪಗ ಗ್ರೇಶಿದಷ್ಟು ಕೆಲಸ ಆಗದ್ದೆ ಉಂಬಲೂ ಅದಕ್ಕೆ ಹಿತ ಆಗದ್ದ ಹಾಂಗೆ ಕಾಣ್ತು ಮಾತಿಲಿ. ಮದಲಾಣ ಕಾಲಲ್ಲಿ ಕೆಲಸದ ಬಗ್ಗೆ ಅಷ್ಟು ಶ್ರದ್ಧೆ ಇತ್ತಪ್ಪ!
  ಧನ್ಯವಾದಂಗೊ..

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *