“ಊಟ ಹೆಚ್ಚಪ್ಪಲಾಗ, ಉಪಚಾರ ಕಮ್ಮಿ ಅಪ್ಪಲಾಗ”-{ಹವ್ಯಕ ನುಡಿಗಟ್ಟು-45}

“ಊಟ ಹೆಚ್ಚಪ್ಪಲಾಗ,ಉಪಚಾರ ಕಮ್ಮಿಅಪ್ಪಲಾಗ”-{ಹವ್ಯಕನುಡಿಗಟ್ಟು-45}

ನಮ್ಮದು ಊಟೋಪಚಾರಕ್ಕೆ ಹೆಸರುವಾಸಿಯಾದ ಸಂಸ್ಕಾರ. ನಮ್ಮ ಊಟ ಹದವಾಗಿರೆಕು.ಆದರಾತಿಥ್ಯ ಹೆಚ್ಚಾಗಿರೆಕು. ಹೇಳುವ ಧರ್ಮ ನಮ್ಮದು.ಇದರ ಅರ್ಥ ಸ್ವಂತಕ್ಕೆ ಕಮ್ಮಿ, ಹೆರಾಂಗೆ ಹೆಚ್ಚಿಗೆ.ಈ ಕ್ರಮಲ್ಲಿ ಅದೆಷ್ಟು ನಿಸ್ವಾರ್ಥ, ತ್ಯಾಗ,ಕೊಡುಗೆ, ಹುದುಗಿದ್ದು ಹೇಳಿ ಅರ್ಥ ಆವುತ್ತಿದ!!.ಇದಲ್ಲಿ ಶಾರೀರಿಕ ಮಾನಸಿಕ ಆರೋಗ್ಯ ಕಾಪಾಡುವ ಗುಟ್ಟೂ ಇದ್ದು!!!.

ಇತ್ತಿತ್ತಲಾಗಿ ಜೀವನಕ್ರಮ ವೆತ್ಯಾಸ ಆದಹಾಂಗೆ ಎಲ್ಲೋರ ಊಟಲ್ಲೂ ವೆತ್ಯಾಸವೆ!.ಉಪಚಾರಂಗಳೂ ಮದಲಾಣ ನಮುನೆ ಅಲ್ಲ!!. ಮದಲಾಣ ಕಾಲಲ್ಲಿ ಸಮಾ ಗೆಯಿಗು,ಸಮಾ ತಿಂಗು.ತಿಂದದು ಜೀರ್ಣ ಆಗಿ ಶರೀರಕ್ಕೆ ವಿಶೇಷ ಆಪತ್ತು ಬಾರ!. ಆದರೀಗ ತಿಂಬಲೆ ಹೆಚ್ಚಿಗೆ ಬೇಡ.[ಹೆಚ್ಚಿಗೆ ಬೇಡದ್ದು ಅಶನ ಮಾಂತ್ರ!].ತಿಂದ ಆಹಾರಲ್ಲೂ ಶರೀರಕ್ಕೆ ಬೇಕಾದ ಅನ್ನಾಂಗಕ್ಕೆ ಬದಲಾಗಿ ಬೇಡದ್ದ ಕಾಟಂಕೋಟೆಯೇ ಇಪ್ಪದು. ಅದರಿಂದಾಗಿ ಬೊಜ್ಜು ಬೆಳದತ್ತು ಹೇದೊಂಡು ಕೆಲಸ ಮಾಡುವ ಬದಲು ರೂಮಿನೊಳ ಕೂದೊಂಡು ವ್ಯಾಯಾಮ ಮಾಡುದು!!.ಕೆಲಸಲ್ಲಿ ವ್ಯಯ ಆಯೆಕ್ಕಾದ ವ್ಯಾಯಾಮ ಸುಮ್ಮನೆ ಪೋಲಾವುತ್ತು, ಹೇಳ್ವದು ಬೇರೆ.

’ಅತಿಥಿ ದೇವೋ ಭವ’ ಹೇಳುಗು. ಗ್ರೇಶದ್ದೆ ಬಂದವು ಅತಿಥಿಗೊ. ಅವು ದೇವರಿಂಗೆ ಸಮಾನ ಹೇಳ್ತ ನಂಬಿಕೆ.ಒಬ್ಬ ಕುಟುಂಬಸ್ಥ ಮದ್ಯಾಹ್ನ ಹೊತ್ತಿಂಗೆ ಉಂಬಲೆ ಒಳ ಹೋಪ ಮದಲೆ ಹೆರ ಜಾಲ ತಲೇಂಗೆ ಕಣ್ಣು ಹಾಯಿಸಿ, ಆರಾರು ಬತ್ತವೋ ನೋಡಿಕ್ಕಿ ಉಂಬಲೆ ಒಳ ಹೋಯೆಕ್ಕಡ.ಬಂದರೆ ಒಳ್ಳೆದು ಹೇಳ್ತ ಲೆಕ್ಕ. ಆದರೀಗ?!. ಗುಡ್ಡೆ ಕರೆಲೆ ಆರಾರು ಬಪ್ಪದು ಕಂಡ್ರೆ ಇಲ್ಲಿಗೆ ಬಾರದ್ರೆ ಸಾಕು, ಅತ್ಲಾಗಿ ಎಲ್ಯಾರು ತಿರುಗಿ ಹೋದೊವೂಳಿ ಆದರೆ; “ಬಚಾವು ಇಲ್ಲಿಗೆ ಬಯಿಂದವಿಲ್ಲೆ” ಹೇಳ್ವಕಾಲ!.ಇದೆಲ್ಲ ಗ್ರೇಶುವಾಗ ಈ ನುಡಿಗಟ್ಟು ಉಲ್ಟಾ ಹೊಡಶಿದ್ದೋ!. ಹೇಂಗೆ?.

 

ವಿಜಯತ್ತೆ

   

You may also like...

4 Responses

 1. ರಘು ಮುಳಿಯ says:

  ನುಡಿಗಟ್ಟು ತಿಳುಶುವ ಎರಡು ವಿಷಯ೦ಗಳೂ ಅರ್ಥಪೂರ್ಣ.ಧನ್ಯವಾದ ಅತ್ತೆ .
  “ಬ೦ದವಕ್ಕೆ ಒಂದು ಆಸರಿಂಗೆ ಕೊಡೆಕ್ಕು ಹೇಳಿಯೂ ಗೊಂತಾಗದ್ದವು” ಹೇಳಿ ಹಳಬ್ಬರು ಬೈವದು ಕೇಳಿತ್ತಿದ್ದೆ..

 2. ಚೆನ್ನೈ ಭಾವ° says:

  ಅಪ್ಪಪ್ಪು…. ಹಾಕವಂಗೆರಡು ಹೋಳಿಗೆ, ಬಳ್ಸವಂಗಿನ್ನೊಂದು ಸೌಟು ಪಾಚ ಹೇದು ಆಚವ ಗೌಜಿ ಮಾಡೆಕು, ಬೇಡ ಬೇಡ ಒತ್ತಾಯ ಮಾಡಿ ಹಾಕಿಕ್ಕೆಡ ಹೇದು ಈಚವ° ಸಮಾಧಾನ ಮಾಡೆಕು. ಅಂಬಗಳೇ ಇಪ್ಪದು ಸ್ವಾರಸ್ಯ.! ಶುದ್ದಿಗೊಂದೊಪ್ಪ

 3. ಬೊಳುಂಬು ಗೋಪಾಲ says:

  ಅರ್ಥಪೂರ್ಣ ನುಡಿಗಟ್ಟು. ಈಗಾಣ ಕಾಲಲ್ಲಿ ಕೆಲವೊಂದರಿ ಊಟಂದ ಜಾಸ್ತಿ ಉಪಚಾರವೇ ಅಪ್ಪದಿದ್ದು. ಬರೀ ಬಾಯಿ ಮಾತಿಂಗೆ ಮರ್ಯಾದಿ ಮಾಡುತ್ತವು.

 4. ಒಪ್ಪ ಕೊಟ್ಟ ರಘು ಮುಳಿಯ ,ಚೆನ್ನೈ ಭಾವಂಗೆ , ಬೊಳುಂಬು ಗೋಪಾಲಂಗೆ ಧನ್ಯವಾದಂಗೊ. ಗೋಪಾಲ ಹೇಳುವದು ಸರಿ,ಕೆಲವು ಸರ್ತಿ ಹೋಳಿಗೆ ಬೆಲಕ್ಕುವದಲ್ಲಿ ಮಾಂತ್ರ ಉಪಚಾರ ಆಗೆಂಡಿಕ್ಕು. ಹಾಂಗಿಪ್ಪೊವು ಬಂದಪ್ಪಗ ಮಾತಾಡ್ಸಿ ಆಸರಿಂಗೆ ಕೊಡ್ಳೆ ಬೇಜವಾಬ್ದಾರಿ ಮಾಡುವವರನ್ನು ಕಾಣುತ್ತು ನಾವು!!.ಆದರಾತಿಥ್ಯಲ್ಲಿ ಮದಾಲನೆದು ಬಂದಪ್ಪಗ ಯೋಗಕ್ಷೇಮ ಮಾತಾಡ್ಸಿರೆ ಹೋದವಕ್ಕೊಂದು ಸಂತೋಷ .

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *