“ಊದುವ ಶಂಖ ಊದಿದೆ”-{ಹವ್ಯಕ ನುಡಿಗಟ್ಟು-50}

March 15, 2016 ರ 7:14 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಊದುವ ಶಂಖ ಊದಿದೆ”-{ಹವ್ಯಕ ನುಡಿಗಟ್ಟು-50}

“ಶಂಖ ಊದುದು ನಮ್ಮ ಸಂಸ್ಕೃತಿಗಳಲ್ಲಿ ಒಂದು.ಶಂಖ ಊದುವದರಿಂದ ಬಪ್ಪ ಕಂಪನ; ಭೂಮಿಲಿಪ್ಪ ಅನೇಕ ಕೆಟ್ಟ ಶಕ್ತಿಗಳ ನಾಶಮಾಡುತ್ತು.ಪರಿಸರ ಮಾಲಿನ್ಯಂದಾಗಿ ಓಜೋನ್ ಪದರಲ್ಲಿ ಅಪ್ಪ ರಂಧ್ರವ ತಡೆತ್ತು,ಶಂಖನಾದಂದ ನಮ್ಮ ದೇಹಲ್ಲಿ ಸಕಾರಾತ್ಮಕ ಶಕ್ತಿ ಸಂಚಾರಾವುತ್ತು.ಹಾಂಗೇ ಅದರ ಊದುವವಕ್ಕೆ ಶ್ವಾಸಕೋಶ ಬಲಿಷ್ಟಆವುತ್ತು. ಅದೂ ಅಲ್ಲದ್ದೆ ಮಹಾವಿಷ್ಣುವಿನ ಕೈಲಿಯೂ ಶಂಖ ಇದ್ದು.ಇದೆಲ್ಲಾ ಇತ್ತೀಚಿನ ದಿನಲ್ಲಿ ಸಂಶೋಧನೆ ಮಾಡಿಗೊಂತಾದ್ದಡ”. ಇಷ್ಟೆಲ್ಲಾ ನಮ್ಮ ವಿದ್ಯಾಪೀಠಕ್ಕೋಪ ಕುಞ್ಞ್ ಮಾಣಿ ಶಾಲೆಂದ ಬಂದು ಅಜ್ಜನತ್ರೆ ಹೇಳಿಯಪ್ಪಗ ಅವನ ಅಜ್ಜಂ “ಸಂಶೋಧನೆಂದ ತಿಳುದು ಬಯಿಂದೂಳಿ ಇತ್ತೀಚೆಗೆ  ಕೆಲಾವು ಜವ್ವನಿಗರು ಹೇಳುದು ಕೇಳಿತ್ತು. ಇವಕ್ಕೆಲ್ಲಾ ಬೇರಾರೋ ಮಾಡಿದ ಸಂಶೋಧನೆಂದ ತಿಳುದೇ ಆಯೆಕ್ಕಟ್ಟೆ!ಮಿನಿಯ. ನಮ್ಮ ಹೆರಿಯೊವು   ಹೇಳಿದ್ದೊವು ಹೇಳಿರೆ,ಮೂಢನಂಬಿಕೆ ಹೇಳಿಂಡಿಕ್ಕು.ನಂಬಿಕೆ ಬಾರ!ಅದಾರೋ ವಿದೇಶಲ್ಲಿ ಕೂದೊಂಡು ಸಂಶೋಧನೆ ಮಾಡಿದ್ದೂಳಿರೆ ನಂಬುಗಷ್ಟೆ!”. ಅಜ್ಜನ ಅಸಮಾಧಾನ. ಅದು ನಿಜವೂ ಅಪ್ಪು.

ಶಂಖ ಧ್ವನಿಗೆ ಅದೆಷ್ಟೋ ಸಕಾರಾತ್ಮ  ಗುಣಂಗೊ ಇಪ್ಪದರಿಂದಲೇ  ಒಳ್ಳೆಮಾತು ಹೇಳುವಗ;ಹೆಚ್ಚಾಗಿ ಮಾಶ್ಟ್ರು ಕ್ಲಾಸಿಲ್ಲಿ ಪಾಠ ಮಾಡಿದ ಮೇಲೆ ಈ ಶಬ್ಧ ಉಪಯೋಗುಸುದು, ಆನುಸಣ್ಣದಿಪ್ಪಗ ಕೃಷ್ಣ ಮಾಶ್ಟ್ರು ಹೇಳಿ ಇದ್ದಿದ್ದೊವು. ಅವು ಪಾಠಮಾಡಿದ ಮತ್ತೆ ಹೆಚ್ಚಾಗಿ “ಊದುವ ಶಂಖ ಊದಿದೆ.ತೆಕ್ಕಳ್ಳೊದು,ಬಿಡುದು ನಿಮಗೆ ಬಿಟ್ಟಿದ್ದು” ಹೇಳುಗು..ಒಳ್ಳೆ ಮಾತು ಹೇಳಿಯಪ್ಪಗ ಅದರ ಕೇಳಿಗೊಳದ್ರೆ,ಆಚರಣೆ ಮಾಡದ್ರೆ, ಹೆರಿಯೊವು.., “ಊದುವ ಶಂಖ ಊದಿದೆ. ಅದರ ತೆಕ್ಕೊಂಬದು,ಬಿಡುದು ನಿಂಗೊಗೆ ಸೇರಿದ್ದು” ಹೇಳುಗಿದ.ಇನ್ನೊಂದು ’ತೀರ್ಥ ಶಂಖ’ ಹೇಳಿದ್ದು. ’ಶಂಖಂದ ಬಂದದೇ ತೀರ್ಥ’ ಹೇಳುಗಲ್ಲೊ?ಅದರ ಇನ್ನೊಂದಾರಿ ವಿಮರ್ಶೆ ಮಾಡುವನೋ?

 

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

  1. ಬೊಳುಂಬು ಮಾವ°
    ಬೊಳುಂಬು ಗೋಪಾಲ

    ನುಡಿಗಟ್ಟು ಲಾಯಕಿದ್ದು. ಕ್ಲಾಸಿಲ್ಲಿ ಮಾಶ್ಟ್ರಕ್ಕೊ ಹೇಳೆಂಡಿದ್ದಿದ್ದು ನಿಜ. ಎಂಗಳ ಡುಂಡೀರಾಜನ ಪದ್ಯವುದೆ ನೆಂಪಾತು.
    ಅವಳ ಕಿವಿಯಲ್ಲಿ ನನ್ನ ಪ್ರೇಮ ಕವನವನ್ನು ಓದಿದೆ
    ಅದರಿಂದಾಗಿ ನನ್ನ ಬಲಗೆನ್ನೆ ಸ್ವಲ್ಪ ಊದಿದೆ !!

    [Reply]

    VA:F [1.9.22_1171]
    Rating: 0 (from 0 votes)
  2. K.Narasimha Bhat Yethadka

    ನಮ್ಮ ಕರ್ತವ್ಯವ ನಾವು ಮಾಡುವದು. ಅದರಿಂದ ನವಗೆ ಆತ್ಮ ತೃಪ್ತಿ ಸಿಕ್ಕುತ್ತು. ಮುಂದಾಣದ್ದು ತೆಕ್ಕೊಂಬವಕ್ಕೆ ಬಿಟ್ಟದು.ಒಳ್ಳೆ ನುಡಿಗಟ್ಟಿನ ಪ್ರಸ್ತುತಿ ಲಾಯಕಾಯಿದು ವಿಜಯಕ್ಕ.

    [Reply]

    VA:F [1.9.22_1171]
    Rating: 0 (from 0 votes)
  3. ವಿಜಯತ್ತೆ

    ಬೊಳುಂಬು ಗೋಪಾಲಂಗು, ಏತಡ್ಕ ನರಸಿಂಹಣ್ಣಂಗು ಧನ್ಯವಾದಂಗೊ

    [Reply]

    VN:F [1.9.22_1171]
    Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ಬಂಡಾಡಿ ಅಜ್ಜಿಪಟಿಕಲ್ಲಪ್ಪಚ್ಚಿಪ್ರಕಾಶಪ್ಪಚ್ಚಿವಿದ್ವಾನಣ್ಣಕಜೆವಸಂತ°ಪುತ್ತೂರುಬಾವರಾಜಣ್ಣಅನುಶ್ರೀ ಬಂಡಾಡಿಚುಬ್ಬಣ್ಣvreddhiಮಂಗ್ಳೂರ ಮಾಣಿಕೊಳಚ್ಚಿಪ್ಪು ಬಾವಉಡುಪುಮೂಲೆ ಅಪ್ಪಚ್ಚಿಎರುಂಬು ಅಪ್ಪಚ್ಚಿಶ್ರೀಅಕ್ಕ°ವೆಂಕಟ್ ಕೋಟೂರುಜಯಶ್ರೀ ನೀರಮೂಲೆಸಂಪಾದಕ°ವೇಣೂರಣ್ಣದೊಡ್ಮನೆ ಭಾವಬೊಳುಂಬು ಮಾವ°ಶರ್ಮಪ್ಪಚ್ಚಿಮಾಷ್ಟ್ರುಮಾವ°ಅಡ್ಕತ್ತಿಮಾರುಮಾವ°ಪುತ್ತೂರಿನ ಪುಟ್ಟಕ್ಕ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ