“ಎಣ್ಣೆ ಹಾಕಿರೆ ಕಣ್ಣಿಂಗೆ ಗುಣ, ಮಣ್ಣು ಹಾಕಿರೆ ಮರಕ್ಕೆ ಗುಣ”-(ಹವ್ಯಕ ನುಡಿಗಟ್ಟು-67)

ಎಣ್ಣೆ ಹಾಕಿರೆ ಕಣ್ಣಿಂಗೆ ಗುಣ, ಮಣ್ಣು ಹಾಕಿರೆ ಮರಕ್ಕೆ ಗುಣ”.-(ಹವ್ಯಕನುಡಿಗಟ್ಟು-67)

ನಾವೆಂತಕಪ್ಪ ಈ ನುಡಿಯ ಬಳಸುತ್ತು..?

ಇದರೆಡೆಲಿ, ಪುರೋಹಿತ ಭಟ್ರತ್ರೆ, “ಈ ಅಷ್ಟಗೆ, ತಿಥಿ ಎಲ್ಲ ಮಾಡೀರೆ ಎಂತ ಗುಣ ಇದ್ದು”? ಹೇಳಿ ಪ್ರಶ್ನೆ ಹಾಕಿದᵒ, ಒಬ್ಬᵒ. ಮಾಣಿ.   ಅಂಬಗ  ಭಟ್ರು ಈ ನುಡಿಗಟ್ಟಿನ ಉಪಯೋಗಿಸಿ,  ಮಾಣಿಗೆ  ಮನದಟ್ಟು ಮಾಡಿದೊವು. ದೇವಕಾರ್ಯ, ಪಿತೃ ಕಾರ್ಯಂದ ಅಂಬಗಳೆ ಅದರ ಫಲ ಸಿಕ್ಕುದಲ್ಲ, ಪರೋಕ್ಷವಾಗಿ ನಿಧಾನಂದ ಸಿಕ್ಕಿಯೇ ಸಿಕ್ಕುತ್ತು”. ಹೇಳಿದೊವು.

ಕಣ್ಣಿಂಗೆ ಗುಣ ಆಯೆಕ್ಕಾದ್ದಪ್ಪು ಆದರೆ ಎಣ್ಣೆ ಹಾಕೆಕ್ಕಾದ್ದೆಲ್ಲಿಗೆ? ಕಣ್ಣಿಂಗೊ..,? ಅಪ್ಪಲೇ ಅಲ್ಲ. ಹೊಟ್ಟೆ ತುಂಬೆಕ್ಕಾರೆ ಬಾಯಿಗೆ ಆಹಾರ ಹಾಕುತ್ತಾಂಗೆ, ಕಣ್ಣಿಂಗೆ ಒಳ್ಳೆದಾಯೆಕ್ಕಾರೆ ತಲಗೆ ಎಣ್ಣೆ ಹಾಕೆಕ್ಕು. ಮಕ್ಕೊಗೆ ಪಿತ್ತಂದಾಗಿ ಸೌಖ್ಯ ಇಲ್ಲದ್ದಾದರೆ  ಮದಲಾಣ ಅಜ್ಜಿಯಕ್ಕೊ ತಾಮರೆ ತಿಕ್ಕುಗು ಅದಕ್ಕೆ ಊರದನದ ಬೆಣ್ಣೆ ಅಗತ್ಯ.ಬೆಣ್ಣೆಲಿ ತಲೆ ತಿಕ್ಕಿ-ತಿಕ್ಕಿ, ನೊರೆ ಬರುಸುಗು. ಮತ್ತೆ ಗೋಲಂಡ ಸೊಪ್ಪಿನ ಹಾಲು ತಲಗೆ ಹಾಕಿ ಮೀಶುಗು.’ ಇಲ್ಲಿ ಇದರ ಉಲ್ಲೇಖ ಮಾಡಿದ್ದೆಂತಕೇಳಿರೆ, ’ತಾಮರೆ’ ಹೇದರೆ ;  ಅದರ ಸೂಕ್ಷ್ಮತೆ ಮುಂದಾಣವಕ್ಕೆ ಗೊಂತಾಗಲಿ.

ಎಣ್ಣೆ ಕಾಣದ್ದ ತಲೆ ಹೇಳಿರೆ; ಕೆಂಚುಕಟ್ಟಿದ ತಲೆ,ಕೆಂಪಾದ ಕಣ್ಣು,ಎಣ್ಣೆ ಅಭಾವದ ಶರೀರದ ಲಕ್ಷಣ. ಸಣ್ಣ ತರದ ಕೂಸುಗೊ ಎಣ್ಣೆಯೂ ಹಾಕದ್ದೆ ತಲೆಬಿಕ್ಕಿಹಾಕೆಂಡು ಅಜ್ಜಿಯಕ್ಕಳ ಎದುರಿಂಗೆ ಬಂದರೆ.., “ತಲಗೆ ರಜ ಎಣ್ಣೆಹಾಕಿ ಬಾಚಲಾಗದೊ ಕೂಸೆ?. ತಲೆ ಬಿಕ್ಕಿಹಾಕೆಂಡು  ’ದೂಮೃಕ್ಕಾಳಿ’ ಹಾಂಗೆ ತಿರುಗುಸ್ಸೆಂತಕೆ?” ಕೇಳುಗು. ತಲಗೆ ದಿನಾ ಎಣ್ಣೆ ಹಾಕಿ,ಬಾಚೆಂಡಿರೆಕು.  ವಾರಕ್ಕೊಂದರಿ ಆದರೂ ತಲಗೆ,ಮೈಗೆ ಎಣ್ಣೆಹಾಕಿ ಮಿಂದರೆ ಕಣ್ಣಿಂಗೊಳ್ಳೆದು.ಮಾಂತ್ರ ಅಲ್ಲ; ಶರೀರ ನುಸುಲಿಂಗೆ, ಚರ್ಮ ಕಾಂತಿಗೆ,ಅಗತ್ಯ.ಹೇದು ಹಳಬರ ಅನುಭವವೂ ಈಗಾಣ ಡಾಕ್ಟ್ರಕ್ಕಳ ಉಪದೇಶವೂ ಅಪ್ಪು.

ಇನ್ನು..,ನಾವು ಎಂತದೇ ಹಲ-ಫಲ ನೆಟ್ಟತ್ಕಂಡ್ರೆ, ಅದಕ್ಕೆ ಈಟು ಎಷ್ಟು ಮುಖ್ಯವೋ ಬುಡಕ್ಕೆ ಮಣ್ಣು ಹಾಕುದೂ ಅಷ್ಟೇ ಮುಖ್ಯ.ನಮ್ಮ ತಲಗೆ ಹಾಕಿದ, ಎಣ್ಣೆ; ತಲೆಲಿದ್ದ ಮೆದುಳು ನರಂಬು ಹೀರಿ ಒಳ್ಳೆ ಕಾರ್ಯ ಚಟುವಟಿಕೆ ಮಾಡ್ತಾಂಗೆ, ಈಟುದೆ ಮಣ್ಣಿಂಗೆ ಸೇರಿ ಬೇರಿಲ್ಲಿ ಹೀರಿ ಸಸ್ಯಂಗೊ ಬೆಳವಲೆ ಸಹಕಾರಿ ಆವುತ್ತದು ಕೃಷಿಕರಿಂಗೆ ಗೊಂತಿದ್ದ ವಿಚಾರವೆ.

ಎಂತ ಹೇಳ್ತಿ?.

——-0———

 

 

ವಿಜಯತ್ತೆ

   

You may also like...

15 Responses

 1. S.K.Gopalakrishna Bhat says:

  ಬಂದೆ ಚಿಕ್ಕಮ್ಮ.ಹಲವು ಕೆಲಸಗಳ ಕಾರಣ ಲೇಖನ ಓದಲೇ ಆಯಿದಿಲ್ಲೆ.ತಾಮರೆ ಹೇಳಿರೆ ಎಂತದು?ಅದಕ್ಕೂ ತಾವರೆ ಹೂಗಿಂಗೂ ಎಂತ ಸಂಬಂಧ ?
  ಈ ಲೇಖನ ಒಳ್ಳೆದಾಯಿದು.

 2. ಹರೇರಾಮ. ಗೋಪಾಲ, ತಾಮರೆ ಹೇಳೀರೆ ಶಬ್ಧಾರ್ಥ ತಾವರೆ ಆದರೂ ನಮ್ಮ ಆಡು ಭಾಷೆಲಿ ಪಿತ್ತ ವಿಕೋಪಂದ ಬಪ್ಪಂತಾ ಒಂದು ಕಾಯಿಲಗೆ (ಆಯುರ್ವೇದ ಪ್ರಕಾರ ವಾತ,ಪಿತ್ತ, ಕಫ ಈ ಮೂರರ ಏರು ಪೇರು ಕಾಯಿಲಗೆ ಕಾರಣ ಅಲ್ಲೊ). ಮಾಡುವ ಪೂರ್ವ ನಿರ್ಬಂಧ ತಯಾರಿ. ಎರಡು ಅಥವಾ ಮೂರು ತಿಂಗಳಿಂಗೊಂದಾರಿ ತಾಮರೆ ತಿಕ್ಕೀರೆ ಅದಕ್ಕೆ ಸಂಬಂಧದ ಸೀಕು ಬತ್ತಿಲ್ಲೇಳಿ ಮದಲಾಣ ಅಜ್ಜಿಯಕ್ಕಳ ಅನುಭವ.ತಾಮರೆ ತಿಕ್ಕುವ ಕ್ರಮ ಎನ್ನ ಹೆರಿಯರು ಹೇಳೆಂಡಿದ್ದರ ಮೇಲೆ ಉಲ್ಲೇಖ ಮಾಡಿದ್ದೆ.

 3. S.K.Gopalakrishna Bhat says:

  ಸಂತೋಷ ಚಿಕ್ಕಮ್ಮ.ಎನ್ನ ಅಜ್ಜಿ ಹಾಂಗೆ ಹೇಳುದು ಕೇಳಿದ್ದೆ .ಹಾಂಗೆ ತಿಕ್ಕುದು ಅವು ವಿವರಿಸಿದ್ದವು.ಆನು ಕಂಡದು ಇಲ್ಲೆ.ಈಗ ಮರೆತೇ ಹೋದ ಒಂದು ವಿಷಯ ನೆಂಪು ಮಾಡಿದ್ದು ಒಳ್ಳೆದಾತು.

 4. ಸಂತೋಷಾತು ಗೋಪಾಲ , ಹಳೆಬೇರು-ಹೊಸಚಿಗುರು ಹೇಳುಗು .ಅಪ್ಪು,ಹಳೆಬೇರಿನ ಎಳ್ಳಿಂದೇಳು ಭಾಗದ ಅನುಭವಂಗಳ ಎನಗೊಂತಿದ್ದದರ ನಿಂಗಳಲ್ಲಿ ಈ ವಿಜಯತ್ತೆ( ನಿನ ಚಿಕ್ಕಮ್ಮ ಹೇಳುವೊಂ) ಹಂಚಿಗೊಂಡಪ್ಪಗ ನಿಂಗಳ ಸ್ಪಂಧನ ಇದ್ದನ್ನೆ ಅದು ಸಾರ್ಥಕತೆ ಭಾವನೆ ತತ್ತು. ಈ ಬಯಲಿನವು ಹೀಂಗೇ ಸ್ಪಂಧಿಸಿ ಹೇಳ್ತಾ.. ಹರೇರಾಮ.
  ,

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *