ಎನ್ನ ಕನಸಿನ ಕೂಸು ಹುಟ್ಟಿತ್ತಿದಾ…..

May 12, 2013 ರ 11:11 amಗೆ ನಮ್ಮ ಬರದ್ದು, ಇದುವರೆಗೆ 10 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ಇದಾ ಕೂಸು ಹುಟ್ಟಿದ್ದು ಏವಾಗ ಹೇದು ಕೇಳಿಕ್ಕೆಡಿ . ಎನ್ನ ಕನಸಿನ ಕೂಸು ಭೂಮಿಕಾ ಪ್ರತಿಷ್ಠಾನ ಮನ್ನೆ  ಮಾರ್ಚ್ ೨೨ಕ್ಕೆ ರಿಜಿಸ್ತ್ರಿ ಆತು.

ಈ ಕೂಸು ಹುಟ್ಟುವ ಮದಲಾಣ ಕಥೆ ಹೇಳದ್ದರೆ ಸರಿಯಾಗ.

ಆನು ಎಂಟು ವರ್ಷಂದ ಡೇನ್ಸು (ಭರತನಾಟ್ಯ) ಕ್ಲಾಸ್ಸು ನಡೆಶ್ಯೊಂಡು ಬತ್ತಾ ಇದ್ದೆ. ಸುಮಾರು ೧೦೦ ಮಕ್ಕೊ ಕಲಿತ್ತಾ ಇದ್ದವು. ಇಷ್ಟು ಸಮಯಲ್ಲಿ ರಜ ಮಕ್ಕೊ ಡೇನ್ಸು ಪರೀಕ್ಷೆ ಕಟ್ಟಿ ಒಳ್ಳೆ ಮಾರ್ಕು ತೆಗದು ಮುಂದುವರ್ಸುತ್ತಾ ಇದ್ದವು,ರಜ ಮಕ್ಕೊ ರಜ ಸಮಯ ಕಲ್ತು ಬಿಟ್ಟಿದವು, ಬೇರೆ ಹೊಸ ಮಕ್ಕೊ ಸೇರಿದವು . ಒಟ್ಟಿಲಿ ಎಂಟು ವರ್ಷಂದ ಏವುದೇ ಅಡೆತಡೆ ಇಲ್ಲದ್ದೆ ಕ್ಲಾಸ್ಸು ನಡೆತ್ತಾ ಇದ್ದು. ಅದಕ್ಕೆ ಲಾಸ್ಯರಂಜಿನಿ ಉಡುಪುಮೂಲೆ ಹೇದು ನಾಮಕರಣವೂ ಆಗಿತ್ತು. ಸುಮಾರು ಕಡೆ ಕಾರ್ಯಕ್ರಮವೂ ಕೊಟ್ಟಾಯ್ದು. ಆದರೆ ರಿಜಿಸ್ತ್ರಿ ಆಗಿತ್ತಿಲ್ಲೆ. ರಿಜಿಸ್ತ್ರಿ ಮಾಡಿದರೆ ಒಳ್ಳೇದು ಹೇದು ತುಂಬ ಜನ ಅಭಿಪ್ರಾಯಪಟ್ಟವು. ಸರ್ಕಾರಂದ ಎಂತಾದ್ರು ಸಿಕ್ಕುತ್ತರೆ ಸಿಕ್ಕುಗೋ ಹೇದು. ( ಕೇರಳ ಸರ್ಕಾರಂದ ಸಿಕ್ಕುದು ಮಣ್ಣಂಗಟ್ಟಿ. ಅವಕ್ಕೆ ಕನ್ನಡದವರ ಕಂಡರೆ ಆವುತ್ತಿಲ್ಲೆ).

ಆದರೆ ಈ ಕ್ಲಾಸ್ಸು ಬರೇ ಡೇನ್ಸಿನ ಉದ್ದೇಶ ಮಾಂತ್ರ ಮಡುಗ್ಯೊಂಡು ಸುರುವಾದ್ದು.ಎನ್ನ ಉದ್ದೇಶಂಗಳ ವಿಶಾಲವಾಗಿ ತೆಕ್ಕೊಳ್ಳೆಕ್ಕು ಹೇದು ತುಂಬಾ ಸಮಯಂದ ಆಲೋಚನೆ ಇದ್ದತ್ತು. ಎನಗೆ ಸಂಗೀತ, ಸಾಹಿತ್ಯ, ಡೇನ್ಸು, ಯಕ್ಷಗಾನ , ಜಾನಪದ ನೃತ್ಯಂಗ ಎಲ್ಲದರಲ್ಲೂ ಆಸಕ್ತಿ ಇದ್ದು. ಆನು ಇಪ್ಪ ಊರಿಲಿ (ಎಡನೀರು) ಈ ಎಲ್ಲದಕ್ಕೂ ಪ್ರೋತ್ಸಾಹ ಇದ್ದರೂ ಅವಕಾಶಂಗ ಇಲ್ಲೆ. ಪೇಟೆಲಿ ಬೆಳವ ಮಕ್ಕೊಗೆ ಬೇಸಗೆ ರಜೆಲಿ ಹಾದಿಲೊಂದು , ಬೀದಿಲೊಂದು ಬೇಸಗೆ ಶಿಬಿರ ನಡೆತ್ತು. (ಎಲ್ಲವೂ ಪೈಸೆಗೆ ಬೇಕಾಗಿ ನಡವದು ಅದು ಬೇರೆ ವಿಷಯ.) ಇಲ್ಲಿಯಾಣ ಮಕ್ಕೊಗೆ ಹಾಂಗಿಪ್ಪ ಅವಕಾಶಂಗ ಇಲ್ಲೆ. ಅದೆಂತರ ಹೇದು ನೋಡಿಯೇ ಗೊಂತಿಲ್ಲೆ.ಗ್ರಾಮೀಣ ಪ್ರದೇಶಲ್ಲಿ ಬೆಳವ ಮಕ್ಕೊ ಪ್ರತಿಭೆ ಇದ್ದರೂ ಸರಿಯಾದ ಪೋಷಣೆ ಇಲ್ಲದ್ದೇ ಮುರುಟಿ ಹೋವುತ್ತಾ ಇದ್ದವು. ಹಾಂಗಿಪ್ಪಗ ಇಲ್ಲಿ ಹೀಂಗಿಪ್ಪ ಚಟುವಟಿಕೆಗೊ ನಡವ ಹಾಂಗೆ ಆಯೆಕ್ಕು ಹೇದು ಆನು ಕನಸು ಕಂಡೊಂಡು ಇತ್ತಿದ್ದೆ. ಅದಕ್ಕೆ ಸರಿಯಾಗಿ ಎನ್ನ ಯಜಮಾನ(ಗೆಂಡ° ಬಾವ)ರ ಸಹಕಾರವೂ ಸಿಕ್ಕಿತ್ತು. ಎನ್ನ ಸಣ್ಣ ಮಾವ°ನ (ಉಡುಪುಮೂಲೆ ಅಪ್ಪಚ್ಚಿ) ಸಲಹೆಯೂ , ಹಿರಣ್ಯ ವೆಂಕಟೇಶಣ್ಣನ ಮಾರ್ಗದರ್ಶನವೂ ಸಿಕ್ಕಿ , ವಿಶಾಲವಾದ  ದೃಷ್ಟಿಕೋನವ ಮಡಿಗ್ಯೊಂಡು  ಭೂಮಿಕಾ ಪ್ರತಿಷ್ಠಾನ ರೂಪುಗೊಂಡತ್ತು.

ಭೂಮಿಕಾ ಪ್ರತಿಷ್ಠಾನದ ನಿರ್ದೇಶಕಿ ಆನಾದರೂ, ಮಾವ° ( ಉಡುಪುಮೂಲೆ ಗೋಪಾಲಕೃಷ್ಣ ಭಟ್ಟರು) ಗೌರವಾಧ್ಯಕ್ಷರು. ರಾಘವೇಂದ್ರ ಭಟ್ರನ್ನೇ ಕೋಶಾಧಿಕಾರಿ ಮಾಡಿದರೆ ಒಳ್ಳೆದು ಹೇದು ಕಂಡತ್ತು. ಸಣ್ಣ ಅತ್ತೆ ಕುಸುಮಾರಘುರಾಮ ಭಟ್ ಕಾರ್ಯದರ್ಶಿ, ರಘುರಾಮ ಭಟ್ (ಉಡುಪುಮೂಲೆ ಅಪ್ಪಚ್ಚಿ) ಜತೆ ಕಾರ್ಯದರ್ಶಿ. ಡಾ।ವೆಂಕಟೇಶ ಉಪಾಧ್ಯಕ್ಷ . ಅಲ್ಲದ್ದೆ ಹಿರಣ್ಯ ವೆಂಕಟೇಶ ಭಟ್, ಶಾರದಾ, ಸತ್ಯಮೂರ್ತಿ ವಗೆನಾಡು, ಶಂಕರಿ, ದೀಪಾ ಶಂಕರಿ ಎಲ್ಲರೂ ಸಂಸ್ಥೆಯ ಸದಸ್ಯರು.

ಹುಟ್ಟಿದ ಕೂಸಿಂಗೆ ಹೆಸರು ಮಡುಗುವ (ಉದ್ಘಾಟನಾ) ಕಾರ್ಯಕ್ರಮ ಮಾಡೆಕ್ಕು ಹೇದು ಗಡಿಬಿಡಿಲಿ ಹೆರಟತ್ತು. ಒಳ್ಳೆ ದಿನ ನೋಡಿ ಎಪ್ರಿಲ್ ೧೧ ಕ್ಕೆ ಹೇದು ನಿರ್ಧಾರ ಮಾಡಿ, ಎಡನೀರು ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮಿಗಳ ದಿವ್ಯ ಹಸ್ತಲ್ಲಿ ಉದ್ಘಾಟನೆ ಮಾಡ್ಸೆಕ್ಕು ಹೇದು ಆಲೋಚನೆ ಮಾಡಿ ಅವರ ಹತ್ತರೆ ಹೋದಪ್ಪಗ ಅವರ ಒಪ್ಪಿಗೆಯೂ , ಶಾಲೆಯ ವಠಾರಲ್ಲೇ ಮಾಡ್ಳೆ ಸ್ಥಳಾವಕಾಶವೂ ಸಿಕ್ಕಿತ್ತು. ಕಾರ್ಯಕ್ರಮದ ಅಧ್ಯಕ್ಷತೆಗೆ ಶ್ರೀ ಟಿ. ಶಾಮ ಭಟ್ ( ಆಯುಕ್ತರು, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ) ಅವಕ್ಕೆ ಹೇಳಿಯಪ್ಪಗ ಸಂತೋಷಲ್ಲಿ ಒಪ್ಪಿದವು. ಅದೇ ಸಮಯಲ್ಲೇ ಮಕ್ಕೊಗೆ ಮೂರು ದಿನದ ಸಾಹಿತ್ಯ ಶಿಬಿರವೂ ನಡೆಶುವ ಹೇದು ಆಲೋಚನೆ ಬಂತು . ಆದರೆ ಮಕ್ಕೊಗೆ ರಜೆ ಸಿಕ್ಕುತ್ತ ಸಮಯ . ಎಲ್ಲ ಶಾಲೆಗೊಕ್ಕೆ ತಿಳಿಶುಲೆ ಎಡಿತ್ತೋ ಇಲ್ಲೆಯೋ ಹೇದೂ ಆತು. ಆದ ಹಾಂಗೆ ಆಗಲಿ…. ಶಿಬಿರ ನಡೆಶುವ° . ಮುಂದೆ ಮಡುಗಿದ ಕಾಲಿನ ಹಿಂದೆ ಮಡುಗುಲೆ ಇಲ್ಲೆ ಹೇದು ನಿರ್ಧಾರ ಮಾಡಿತ್ತು. ಕನ್ನಡ ಸಾಹಿತ್ಯ ಪರಿಷತ್ತಿನ ಗಡಿನಾಡಿನ ಘಟಕದ ಅಧ್ಯಕ್ಷರಾದ  ಎಸ್.ವಿ.ಭಟ್ಟರ ಸಂಪರ್ಕಿಸಿ ಈ ಶಿಬಿರಕ್ಕೆ ಪರಿಷತ್ತಿನ ಸಹಕಾರ ಏನಾದರೂ ಸಿಕ್ಕುಗೋ….? ಹೇದು ಕೇಳಿದೆ.  ಇಂತಹ ಒಂದು ಕೆಲಸ ಮಾಡ್ತಾ ಇಪ್ಪದಕ್ಕೆ ಅವುದೆ ಕೊಶಿಲಿ ಒಪ್ಪಿಗೊಂಡು ಸಹಕರುಸುವ ಹೇದು ಹೇದವು…… ನಮ್ಮ ಬಾಲಣ್ಣ (ಬಾಲ ಮದುರಂಕಾನ) ನ ಹತ್ತರೆಯೂ ಮಾತಾಡಿ ಸಲಹೆ ಸೂಚನೆ ತೆಕ್ಕೊಂಡೆ. ಕಾಗದ ಪ್ರಿಂಟಿಂಗೆ ಕೊಟ್ಟತ್ತು, ಪೇಪರಿಲೂ ಹಾಕ್ಸಿತ್ತು..ಗೌಜಿಯೋ ಗೌಜಿ…..

ಮಕ್ಕಳ ಕೈಂದ  ಯಾವುದೇ ರೀತಿಯ ಶುಲ್ಕ ತೆಕ್ಕೊಳ್ಳದ್ದೆ  ಸಂಪೂರ್ಣ ಉಚಿತವಾಗಿ ನಡವಂತಹ ಶಿಬಿರ.  ಅಂತೂ ಎಪ್ಪತ್ತು ಮಕ್ಕ ಹೆಸರು ನೋಂದಾವಣೆ ಮಾಡ್ಸಿದವು . ಇಷ್ಟು ಮಕ್ಕ ಹೆಸರು ನೋಂದಾವಣೆ ಮಾಡ್ಸಿದ್ದು ನೋಡಿ ತುಂಬಾ ಕೊಶಿ ಆತು. ಈ ಹಳ್ಳಿಲೂ ಇಷ್ಟು  ಮಕ್ಕ ಆಸಕ್ತಿ ವಹಿಸಿದ್ದು ನೋಡಿ ಆಶ್ಚರ್ಯ ಆತು.  ಕೇವಲ ಒಂದೇ ವಾರಲ್ಲಿ ಎಲ್ಲಾ ತಯಾರಿಯೂ ಆತು.

ಎಡನೀರು ಶ್ರೀಗಳ ದಿವ್ಯ ಹಸ್ತಗಳಿಂದ ದೀಪ ಬೆಳಗಿಸಿ ಸಂಸ್ಥೆಯ ಉದ್ಘಾಟನೆ  ಆತು. ಎಸ್.ವಿ. ಭಟ್  ಶಿಬಿರದ ಉದ್ಘಾಟನೆ ಮಾಡಿದವು. ಕಾರ್ಯಕ್ರಮದ ಅಧ್ಯಕ್ಷತೆ ಟಿ.ಶಾಮ ಭಟ್ ವಹಿಸಿದವು.ಕಾರ್ಯಕ್ರಮದ ನಿರೂಪಣೆ ಹಿರಣ್ಯ ವೆಂಕಟೇಶಣ್ಣ ಮಾಡಿದರೆ ಸ್ವಾಗತ ಭಾಷಣ ಕುಸುಮಾರಘುರಾಮ ಭಟ್ (ಉಡುಪುಮೂಲೆ ಚಿಕ್ಕಮ್ಮ) ಮಾಡಿದವು . ರಘುರಾಮ ಭಟ್ (ಉಡುಪುಮೂಲೆ ಅಪ್ಪಚ್ಚಿ) ಧನ್ಯವಾದ ಸಮರ್ಪಣೆ ಮಾಡಿದವು. ಈ ಕಾರ್ಯಕ್ರಮದ ನಂತರ ಮಕ್ಕೊಗೆ ಶಿಬಿರ ಆರಂಭ ಆತು.

ಮೂರು ದಿನದ ಶಿಬಿರ ಚೆಂದಕೆ ನಡದತ್ತು. ಈ ಮೂರು ದಿನಂಗಳಲ್ಲಿ  ಗುರುಮೂರ್ತಿ ನಾಯ್ಕಾಪು, ಎಸ್.ವಿ.ಭಟ್, ಪುಂಡರೀಕಾಕ್ಷ, ಶ್ರೀನಿವಾಸ ಭಟ್ ಸೇರಾಜೆ, ಸುಬ್ರಹ್ಮಣ್ಯ ಭಟ್, ಗೋವಿಂದ ಶರ್ಮ ಕೋರಿಕ್ಕಾರು,ಪ್ರೇಮಲತಾ ಶರ್ಮ ಎಡನೀರು, ಅನುಪಮಾ ಉಡುಪುಮೂಲೆ , ವಿ.ಬಿ.ಕುಳಮರ್ವ ಇವೆಲ್ಲ ಸಂಪನ್ಮೂಲ ವ್ಯಕ್ತಿಗಳಾಗಿ ಸಹಕರಿಸಿದ್ದವು.  ಕವಿತೆ ರಚನೆ, ಕಥಾ ರಚನೆ ,ಚಿತ್ರಕಲೆ, ಯೋಗಾಸನ , ಪ್ರಾಣಾಯಾಮ, ಭಾಷಣ, ಸಂಭಾಷಣೆ ರಚನೆ, ಅಬಿನಯ, ಭಜನೆ, ಕೆಲವೊಂದು ದೇಶೀಯ ಆಟಂಗೊ…….ಇತ್ಯಾದಿ ಅನೇಕ ವಿಷಯಂಗಳ ಮಾಹಿತಿಯ ಮಕ್ಕೊಗೆ ಈ ಶಿಬಿರಲ್ಲಿ ಹೇಳಿ ಕೊಟ್ಟಿದು. ಪ್ರತಿದಿನ ಉದಿಯಪ್ಪಗ ೯.೩೦  ಶಿಬಿರ ಸುರುವಾದರೆ ಹೊತ್ತೋಪಗ ೫ ಗಂಟೆಯ ವರೆಗೆ ಈ ಕಾರ್ಯಕ್ರಮ ನಡದ್ದು. ಉದಿಯಪ್ಪಗ ೧೧ ಗಂಟೆಗೆ ಮಕ್ಕೊಗೆ ಒಂದು ಲಘು ಉಪಾಹಾರ ,ಮಧ್ಯಾಹ್ನ ೧.೩೦ ಗೆ ಊಟ ,ಹೊತ್ತೋಪಗ ೫ ಗಂಟೆಗೆ ಒಂದು ಲಘು ಉಪಾಹಾರ ವ್ಯವಸ್ಥೆ ಮಾಡಿದ್ದು.   ಒಟ್ಟಿಲಿ ಈ ಶಿಬಿರದ ಸಂಪೂರ್ಣ ವಿವರಣೆ ಕೊಡ್ಳೆ ಶಬ್ದಂಗಳೇ ಇಲ್ಲೆ. ಎಲ್ಲಾ ಮಕ್ಕಳೂ ತುಂಬಾ………….ಕೊಶಿ ಪಟ್ಟವು. ಮೂರು ದಿನ ಮುಗುದ್ದೇ ಗೊಂತಾಯಿದಿಲ್ಲೆ.ಕೊನೆಯ ದಿನ ಅಂತೂ ಶಿಬಿರ ಮುಗುದತ್ತನ್ನೇ ಹೇದು ಮಕ್ಕೊ ಕಣ್ಣೀರು ಹಾಕುಗ ಎನಗೆ  ಈ ಶಿಬಿರ ಮಾಡಿದ್ದಕ್ಕೂ ಸಾರ್ಥಕ ಆತು ಹೇದು ಕಂಡತ್ತು. ಇನ್ನೊಂದರಿ ಮಾಡುಗ ಒಂದು ವಾರ ಮಾಡೆಕ್ಕು ಹೇದು ಎಲ್ಲರೂ ಅಭಿಪ್ರಾಯ ಪಟ್ಟವು.

ಅಂತೂ ಸಮಾರೋಪ ಸಮಾರಂಭಕ್ಕೆ ಎತ್ತಿತ್ತು. ಕಾರ್ಯಕ್ರಮದ ನಿರೂಪಣೆ ಮಾಡಿದ ರಾಘವೇಂದ್ರ ಭಟ್  ” ಇದು ಅಂತ್ಯ ಅಲ್ಲ ಆರಂಭ. ಇನ್ನು ಮುಂದೆಯೂ ಇಂತಹ ಕಾರ್ಯಕ್ರಮಂಗ ನಡೆಶೆಕ್ಕು ಹೇಳುವ ಉದ್ದೇಶ ಎಂಗಳದ್ದು ” ಹೇಳ್ತ ವಿಷಯವ ವಿವರವಾಗಿ ತಿಳಿಶಿದವು. ಅತಿಥಿಯಾಗಿದ್ದ ನಾ.ಕಾರಂತ ಪೆರಾಜೆ ಶಿಬಿರದ ಮಹತ್ವದ ಬಗ್ಗೆ ಮಕ್ಕೊಗೆ ಮಾಹಿತಿ ನೀಡಿದವು.ಕಾರ್ಯಕ್ರಮದ ಅಧ್ಯಕ್ಷರಾದ ಅಡ್ಕ ಗೋಪಾಲಕೃಷ್ಣ ಭಟ್ ಮಕ್ಕೊಗೆ  ಸಂಸ್ಕಾರದ ಬಗ್ಗೆ ಮಾಹಿತಿ ನೀಡಿದವು. ಉಡುಪುಮೂಲೆ ಗೋಪಾಲಕೃಷ್ಣ ಭಟ್ ಮಕ್ಕೊಗೆ ಪ್ರಮಾಣ ಪತ್ರ ಕೊಟ್ಟು ಆಶೀರ್ವಾದ ಮಾಡಿದವು.

ಭೂಮಿಕಾ ಹೇಳ್ತ ಕೂಸು ಹುಟ್ಟಿದ್ದು. ನಾಮಕರಣ ಕಾರ್ಯಕ್ರಮ ಭಾರೀ ಗೌಜಿಲಿ ನಡದತ್ತು.   ಇದಕ್ಕೆ ಪ್ರತ್ಯಕ್ಷವಾಗಿಯೂ,ಪರೋಕ್ಷವಾಗಿಯೂ ತುಂಬ ಜನ ಸಹಕಾರ ನೀಡಿದ್ದವು. ಈ ಸಂದರ್ಭಲ್ಲಿ ಅವರೆಲ್ಲರ ಸಹಕಾರಕ್ಕೆ ಇನ್ನೊಂದರಿ ಧನ್ಯವಾದ ಹೇಳ್ತಾ ಇದ್ದೆ. ಅಲ್ಲದ್ದೆ ಇನ್ನುಮುಂದೆಯೂ ಇದೇ ರೀತಿ ಎಲ್ಲರ ಸಹಕಾರದ ನಿರೀಕ್ಷೆಲಿ ಇರ್ತೆ.  ಈ ಕೂಸಿನ  ಬೇಳವಣಿಗೆಗೆ  ಎಲ್ಲರೂ ಒಳ್ಳೆ ಮನಸಿಲಿ ಆಶೀರ್ವಾದ ಮಾಡಿ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 10 ಒಪ್ಪಂಗೊ

 1. ಗೋಪಾಲಣ್ಣ
  ಎಸ್.ಕೆ.ಗೋಪಾಲಕೃಷ್ಣ ಭಟ್ಟ

  ಬಹಳ ಸಂತೋಷ..ಉತ್ತರೋತ್ತರ ಅಭಿವೃದ್ಧಿ ಆಗಲಿ

  [Reply]

  VA:F [1.9.22_1171]
  Rating: 0 (from 0 votes)
 2. parvathi marakini

  ಬಹಳ ಉತ್ತಮ ಕೆಲಸ ಶುರು ಮಾದಿದ್ದಿ. ತುಂಬಾ ಖುಷಿ ಆತು. ಉತ್ತರೋತ್ತರ ಅಭಿವ್ರುದ್ದಿ ಆಗಲಿ ಹೇಳಿ ಹಾರೈಸುತ್ತೆ.

  [Reply]

  VA:F [1.9.22_1171]
  Rating: 0 (from 0 votes)
 3. ಬಾಲಣ್ಣ (ಬಾಲಮಧುರಕಾನನ)
  ಬಾಲಣ್ಣ (ಬಾಲಮಧುರಕಾನನ)

  ಅನುಪಮನ ಆಸಕ್ತಿಯ ಕಂಡು ತುಮ್ಬಾ ಸಂತೋಷ ಆತು.ಎನಗೆ ಶಿಬಿರಕ್ಕೆ ಬಪ್ಪಲೆ ಎಡಿಗಾತಿಲ್ಲೆ ,ಅನಿವಾರ್ಯವಾಗಿ ಬೆಂಗಳೂರಿಂಗೆ ಹೋಯೆಕಾಗಿ ಬಂತು .ಶಿಬಿರ ಚೆಂದಕೆ ಕಳುದ್ದಕ್ಕೆ ಅಭಿನಂದನೆಗೊ. ಇನ್ನುದೇ ಚೆಂದಕೆ ಮುಂದರಿಯಲಿ.ಶುಭವಾಗಲಿ.

  [Reply]

  VN:F [1.9.22_1171]
  Rating: 0 (from 0 votes)
 4. ಕೆ.ನರಸಿಂಹ ಭಟ್ ಏತಡ್ಕ

  ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಅದ್ಭುತ ಪ್ರತಿಭೆ ಇರುತ್ತು ಹೇಳುವದು ಆನು ಕಂಡ ಸಂಗತಿ.ಅಂತಹ ಮಕ್ಕಳ ಪ್ರತಿಭಾ ವಿಕಸನದ ಉದ್ದೇಶಂದ ಹುಟ್ಟಿದ ಭೂಮಿಕಾ ಪ್ರತಿಷ್ಠಾನ ಬೆಳಗಿ ಬಾಳುತ್ತ ಬರಳಿ ಹೇದು ಶುಭಾಶಯಂಗೊ.

  [Reply]

  VA:F [1.9.22_1171]
  Rating: 0 (from 0 votes)
 5. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಅನುಪಮ ಶುರು ಮಾಡಿದ ಅನುಪಮ ಕಾರ್ಯಕ್ರಮಕ್ಕೆ ಶುಭ ಹಾರೈಕೆಗೊ. ಭೂಮಿಕಾ ಪ್ರತಿಷ್ಟಾನದ ಚೊಚ್ಚಲ ಕಾರ್ಯಕ್ರಮ ಭರ್ಜರಿ ಆತು. ಅಷ್ಟೊಂದು ಜೆನ ಮಕ್ಕೊ ಸೇರಿ ಶಿಬಿರ ನೆಡದ್ದು ಕಂಡು ಕೊಶಿ ಆತು. ಭೂಮಿಕಾ ಬೆಳೆಯಲಿ ಎಲ್ಲೋರನ್ನೂ ಬೆಳಶಲಿ,
  ಎಂದೆಂದೂ ಬೆಳಗಲಿ.

  [Reply]

  VA:F [1.9.22_1171]
  Rating: 0 (from 0 votes)
 6. ವಿದ್ಯಾ ರವಿಶಂಕರ್
  ವಿದ್ಯಾ ರವಿಶಂಕರ್

  ಶುಭ ಹಾರೈಕೆಗೊ ಅನು.

  [Reply]

  VN:F [1.9.22_1171]
  Rating: 0 (from 0 votes)
 7. ಚೆನ್ನೈ ಬಾವ°
  ಚೆನ್ನೈ ಭಾವ°

  ಶುಭಮಸ್ತು. ಕೀರ್ತಿ ಯಶಸ್ಸು ಭೂಮಿಕಾಂಗೆ ಮೊಳಗಲಿ ಹೇದು ಆಶಿಸಿತ್ತು ಇತ್ಲಾಗಿಂದ.

  [Reply]

  VA:F [1.9.22_1171]
  Rating: 0 (from 0 votes)
 8. ಮುಳಿಯ ಭಾವ
  ರಘುಮುಳಿಯ

  ಗ್ರಾಮೀಣ ಪ್ರತಿಭೆಗೊಕ್ಕೆ ಒ೦ದು ಒಳ್ಳೆ ಭೂಮಿಕೆಯಾಗಿ ”ಭೂಮಿಕಾ” ಬೆಳೆಯಲಿ.ಉಡುಪುಮೂಲೆ ಕುಟು೦ಬದ ಈ ಪ್ರಯತ್ನಕ್ಕೆ ಶುಭಹಾರೈಕೆಗೊ.

  [Reply]

  VA:F [1.9.22_1171]
  Rating: 0 (from 0 votes)
 9. ವಿಜಯತ್ತೆ

  ಅನುಪಮಾ, ನಿನ್ನ ಕನಸಿನ ಕೂಸು ಹುಟ್ಟಿ ನನಸು ಮಾಡಿತ್ತು . ಹಾಂಗೇ ಆಯುರಾರೋಗ್ಯಲ್ಲಿ ನೂರಾರು ವರ್ಷ ಬಾಳಿ ಬೆಳಗಲಿ ಹೇದು ಹಾರೈಸುತ್ತೆ

  [Reply]

  VN:F [1.9.22_1171]
  Rating: 0 (from 0 votes)
 10. ಮಾಲಕ್ಕ°

  ॥ಹರೇ ರಾಮ॥
  ತುಂಬಾ ಸಂತೋಷ ಆತು ಅನು. ನಿನ್ನ ಎಲ್ಲಾ ಕನಸುಗೊ ಸಾಕಾರವಾಗಲಿ. ಪ್ರೀತಿಯ ಶುಭ ಹಾರೈಕೆಗೊ.

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಕೆದೂರು ಡಾಕ್ಟ್ರುಬಾವ°ಪುತ್ತೂರಿನ ಪುಟ್ಟಕ್ಕಮುಳಿಯ ಭಾವಪಟಿಕಲ್ಲಪ್ಪಚ್ಚಿಕಜೆವಸಂತ°ಅನು ಉಡುಪುಮೂಲೆದೀಪಿಕಾಮಾಲಕ್ಕ°ಅಕ್ಷರದಣ್ಣದೊಡ್ಮನೆ ಭಾವಮಂಗ್ಳೂರ ಮಾಣಿಸಂಪಾದಕ°ವೇಣಿಯಕ್ಕ°ಶಾ...ರೀಕಾವಿನಮೂಲೆ ಮಾಣಿಬಂಡಾಡಿ ಅಜ್ಜಿಗಣೇಶ ಮಾವ°ಶಾಂತತ್ತೆಎರುಂಬು ಅಪ್ಪಚ್ಚಿಯೇನಂಕೂಡ್ಳು ಅಣ್ಣಮಾಷ್ಟ್ರುಮಾವ°ಜಯಶ್ರೀ ನೀರಮೂಲೆಶ್ಯಾಮಣ್ಣಡಾಗುಟ್ರಕ್ಕ°ಕೇಜಿಮಾವ°ಪುಟ್ಟಬಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ