’ಎನ್ನ ಕೆಮಿ ಕಾಶಿಗೆ ಹೋಯಿದು’

May 29, 2014 ರ 6:24 amಗೆ ನಮ್ಮ ಬರದ್ದು, ಇದುವರೆಗೆ 8 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

’’ಎನ್ನ ಕೆಮಿ ಕಾಶಿಗೆ ಹೋಯಿದು’’[ಹವ್ಯಕ ನುಡಿಗಟ್ಟು –1 ]

ಒಂದುಸಮಾರಂಭಕ್ಕೆ ಹೋಗಿಪ್ಪಾಗ  ಗುರ್ತದ ಅತ್ತಿಗೆಯೊಂದು ಮಾತಾಡ್ತಾ ಮುದಿ ವಯಸ್ಸಿನ ಅದರ ಅತ್ಯೋರ ಬಗ್ಗೆ ಹೇಳ್ತಾ ಇದ್ದತ್ತು. ಅತ್ತೆ ಜೋರಿದ್ದವು. ಹೇಂಗೆ ಮಾಡೀರು ಸರಿ ಅಪ್ಪಲಿಲ್ಲೆ. ಎನ್ನತ್ರೆ ಪರಂಚುತ್ತರ್ಲಿ ಕೂಬ್ಬಲೆಡಿತ್ತಿಲ್ಲೆ. ಹೇಳಿಕ್ಕಿ ಆ ಹೊತ್ತಿಂಗೆ ’ಎನ್ನ ಕೆಮಿ ಕಾಶಿಗೆ ಹೋಯಿದು’ ಹೇಳಿ ಮಾಡಿಯೊಂಡಿಪ್ಪದಾನು.” ಹೇಳಿ ಬಾಯಿಮುಚ್ಚುವದ್ದೆ ಅದರ ಕೇಳ್ಸಿಗೊಂಡ ಐದು ವರ್ಷದ ಪುಟ್ಟಸೊಸೆಯೊಂದು “ಕೆಮಿ ಕಾಶಿಗೋಪದು ಹೇಂಗತ್ತೆ?” ಹೇಳಿ ಪ್ರಶ್ನೆ ಹಾಕಿತ್ತು!.ಅಷ್ಟೊತ್ತಿಂಗೆ ಎನಗೂ ಆ ಪುಟ್ಟಕೂಸಿಂಗು ಆಚೀಚೆ ಮಾತುಕತೆ ಆತಿದ.

ಕಾಶಿ ಹೇಳಿರೆ ಎಲ್ಲಿ ಗೊಂತಿದ್ದೊ? ಕೇಳಿದೆ.

ಪುಟ್ಟಿ;-“ಗೊಂತಿಲ್ಲೆ…ನಿಂಗಳೇ ಹೇಳಿ”

ಕಾಶಿ ಹೇಳಿರೆ…,ಬಹು ದೂರ ಇದ್ದ ಒಂದು ಪುಣ್ಯ ಕ್ಷೇತ್ರ.

ಪುಟ್ಟಿ:-“ಹಾಂಗಾರೆ…,ಅಲ್ಲಿಗೆ  ನಮ್ಮ ಕೆಮಿ ಹೋದರೆ ನವಗೆ ಕೆಮಿ ಕೇಳುವದೇಂಗೆ?”

ಹಾಂ..! ಅಲ್ಲೆ ಇಪ್ಪದು ಸಂಗತಿ !. ನವಗೆಂತಾರೂ ಕೇಳೆಡ ಹೇದಿದ್ದರೆ..,ಒಬ್ಬ ಕೇಳಿದ ಪ್ರಶ್ನಗೆ ಪ್ರತ್ಯುತ್ತರ ಹೇಳೆಡ ಹೇಳಿದ್ದರೆ ಹಾಂಗೆ ಹೇಳಿ ಜಾರಿಗೊಂಡರೆ ಮುಗುತ್ತು. ಗೊಂತಾತೊ?

ಪುಟ್ಟಿ:-“ಗೊಂತಾತೀಗ”ಹೇದೊಂಡು ತಲೆ ಆಡ್ಸಿತ್ತು.  ಅಷ್ಟೊತ್ತಿಂಗೆ  ಅಲ್ಲಿದ್ದ ಒಂದು ಹೆಮ್ಮಕ್ಕೊ “ನೀನು ಯಾವ ಶಾಲಗೆ ಹೋಪದು ಪುಟ್ಟಿ?” ಕೇಳುವಗ ಎನ್ನ ಕೆಮಿ ಕಾಶಿಗೋಯಿದು..,ಎನ್ನ ಕೆಮಿ ಕಾಶಿಗೋಯಿದು.., ಹೇಳ್ಯೊಂಡು ತನ್ನೆರಡೂ ಕೈ ನೆಗ್ಗಿ  ಕೊಣುಕ್ಕೊಂಡು ಓಡಿತ್ತು ಕೂಸು.

ಅಪ್ಪು.ನಮ್ಮಲ್ಲಿ ಬಳಕೆಲಿಪ್ಪ ಒಂದು ಮಾತಿದು, .ನಮ್ಮ ಹವ್ಯಕರ ಆಚಾರ-ವಿಚಾರ,ಜೀವನ ಕ್ರಮ, ಊಟೋಪಚಾರಗಳ ಕ್ರಮ, ವೈದಿಕ ಸಂಪ್ರದಾಯ,ಧಾರ್ಮಿಕ ವ್ಯವಸ್ಥೆ, ಹೀಂಗೆ ಒಟ್ಟು ಜೀವನ ಕ್ರಮಕ್ಕೆ ಒಂದು ವಿಶಿಷ್ಟವಾದ ಸ್ಥಾನ-ಮಾನ ಇಡೀ ಸಮಾಜಲ್ಲಿದ್ದು. ಈ ನಿಟ್ಟಿಲ್ಲಿ ಒಟ್ಟು ಕುಟುಂಬಲ್ಲಿ ಆದಷ್ಟು ಜಗಳವೂ ಅಪ್ಪಲಾಗ ಹೇಳುವ ಅಂತರಾಳ, ನೀನು ಹೇಳಿದ್ದು ಸರಿಯಲ್ಲ, ನೆಮ್ಮದಿಗೆ ವಿರೋಧ ಬಪ್ಪ ಪ್ರಸಂಗ, ಹೇಳಿ ಪರೋಕ್ಷವಾಗಿ ಸೂಚನೆ { ಖಡಾ ಖಂಡಿತ ಹೇಳುವ ಬದಲು} ನೀಡುವದೇ ’ಎನ್ನ ಕೆಮಿ ಕಾಶಿಗೆ ಹೋಯಿದು’ ಹೇಳುವದರ ಒಳಾರ್ಥ. ಹೇಳಿರೆ: ಉಪಾಯಲ್ಲಿ ವಿರೋಧ ವ್ಯಕ್ತ ಪಡಿಸಿದ ಹಾಂಗಾವುತ್ತಿದ!.ಜಗಳ ಬಪ್ಪ ಸಾದ್ಯತೆ ರಜ ಕಮ್ಮಿಯಾಗಿ  ಸಾಮರಸ್ಯಲ್ಲಿ ಹೋಪಲೆ ಎಡೆ ಆವುತ್ತು?

ಆದರೆ ಇದರ ಸದ್ಬಳಕೆ ಆಯೆಕ್ಕೇ  ಹೊರತು ದುರ್ಬಳಕೆ ಅಪ್ಪಲಾಗಯಿದ.ನೀತಿಯುತವಾದ ಮಾತು,ಒಳ್ಳೆದಕ್ಕೆ ಹೇಳುವ ಸಂದರ್ಭಲ್ಲಿಯೂ  ಕೆಮಿ ಕಾಶಿಗೆ ಹೋದರೆ: ಮಾಸ್ಟ್ರು ಪಾಠ ಮಾಡುವಾಗಲೂ ಕಾಶಿಗೋದರೆ ಮಾಂತ್ರ ಕಷ್ಟ.ಕೆಲವು ಅತ್ಯೋರಕ್ಕೊ “ಎನ್ನ ಸೊಸಗೆ ಒಳ್ಳೆದಕ್ಕೆ ಹೇಳಿರೆ ಕೇಳ್ಲೇ ಇಲ್ಲೆ ಅಂಬಗ ಅದರ ಕೆಮಿ ಕಾಶಿಗೋಗಿರ್ತು” ಹೇಳುದು ಕೇಳಿದ್ದೆ. ಹಾಂಗಪ್ಪಲಾಗಯಿದ.

ಹೀಂಗಿಪ್ಪ ’ನುಡಿಗಟ್ಟು’ ನಮ್ಮಲ್ಲಿ ಸುಮಾರಿದ್ದು. ಒಂದೊಂದು ನೆಂಪು ಮಾಡಿಯೊಂಬೊ ಆಗದೋ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 8 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶ್ರೀಕೃಷ್ಣ ಶರ್ಮ

  ಹವ್ಯಕ ನುಡಿಗಟ್ಟುಗಳಿಂದ ಸಮೃದ್ಧ ಆಗಿಪ್ಪ ನಮ್ಮ ಭಾಷೆಯ, ಈಗಾಣವಕ್ಕೆ ಪರಿಚಯ ಮಾಡಿ ಕೊಡೆಕಾದ ಅಗತ್ಯ ಇದ್ದು.
  ಇದು ಮುಂದುವರಿಯಲಿ

  [Reply]

  VA:F [1.9.22_1171]
  Rating: 0 (from 0 votes)
 2. ಶಾರದಾಗೌರೀ

  ಲಾಯ್ಕಾಯಿದು ವಿಜಯತ್ತೆ.
  ಸುಮಾರು ಸಂದರ್ಭಲ್ಲಿ ನಮ್ಮ ಕೆಮಿಯ ಕಾಶಿಗೆ ಕಳ್ಸೆಕ್ಕಾವುತ್ತು. ಅಂತೇ ಕೆಮಿ ತುಂಬುಸುವೋರು ಇರ್ತವಿದಾ..
  ವಿವರಣೆ ಕೊಟ್ಟು ಬರದ್ದದು ಚೆಂದ ಆಯಿದು.

  [Reply]

  VA:F [1.9.22_1171]
  Rating: 0 (from 0 votes)
 3. ನೆಗೆಗಾರ°

  ವಿಜಯತ್ತೆ, ನುಡಿಗಟ್ಟಿನ ಬಗ್ಗೆ ಅಜ್ಜಿಯಕ್ಕೊ ವಿವರ್ಸಿರೇ ಕೊಶಿ ಅಪ್ಪದು.
  ನಿಂಗೊ ಈ ಶುದ್ದಿ ಹೇಳ್ತಿ ಹೇದು ಗೊಂತಪ್ಪದ್ದೇ, ಕಾಶಿಗೆ ಹೋಗಿದ್ದ ಕೆಮಿ ಒಪಾಸು ಬಂತಿದಾ… 😉

  ಕಾಶಿಲಿ ಈ ಸರ್ತಿ ಮೋದಿ ಅಜ್ಜನೂ ಇದ್ದಿದ್ದ ಕಾರಣ ಗುಣಾಜೆಮಾಣಿಯ ಕೆಮಿ ಅಲ್ಲೇ ಇದ್ದತ್ತಡ!

  [Reply]

  VA:F [1.9.22_1171]
  Rating: 0 (from 0 votes)
 4. ವಿಜಯತ್ತೆ

  ಹರೇರಾಮ, ಒಪ್ಪ ಕೊಟ್ಟ ಎಲ್ಲರಿಂಗೂ ಧನ್ಯವಾದಂಗೊ, ಸಮಯ- ಸಂದರ್ಭಕ್ಕೆ ಹೊಂದಿಗೊಂಡು ಸತ್ಪರಿಣಾಮಕ್ಕಾಗಿ ಅವರವರ ಕೆಮಿಯ ಕಾಶಿಗೆ ಕಳುಗುತ್ತವಕ್ಕೂ ವಾಪಾಸು ಬರುಸುತ್ತವಕ್ಕೂ ಅಭಿನಂದನಗೊ. ಈ ನುಡಿಗಟ್ಟಿನ ಸದುಪಯೋಗ ಪಡಿಸಿಗೊಂಡರೆ, ಎಷ್ಟು ಒಳ್ಳೆದಲ್ಲೊ?. ಶರ್ಮಪ್ಪಚ್ಚಿ ಹೇಳಿದ ಹಾಂಗೆ ನುಡಿಗಟ್ಟುಗಳ ನೆಂಪಾದ ಹಾಂಗೇ ಬರೆತ್ತೆ.

  [Reply]

  VN:F [1.9.22_1171]
  Rating: 0 (from 0 votes)
 5. ಭಾಗ್ಯಲಕ್ಷ್ಮಿ

  ವಿಜಯತ್ತೆ , ನುಡಿಗಟ್ಟಿನ ಪ್ರಸ್ತುತ ಪಡಿಸಿದ ರೀತಿ ಲಾಯಿಕಾಯಿದು .ಆನು ಇದರ ಇಲ್ಲಿಯೇ ಸುರು ಕೇಳಿದ್ದು .ಧನ್ಯವಾದ೦ಗೊ

  [Reply]

  VA:F [1.9.22_1171]
  Rating: 0 (from 0 votes)
 6. ತೆಕ್ಕುಂಜ ಕುಮಾರ ಮಾವ°
  ತೆಕ್ಕುಂಜ ಕುಮಾರ ಮಾವ°

  ಹೀಂಗಿರ್ಸ ನುಡಿಗಟ್ಟುಗಳ್ಳ ಒಂದೊಂದಾಗಿ ಬೈಲಿಲಿಂಗೆ ಹಾಕಿಕ್ಕಿ ವಿಜಯತ್ತೆ.

  [Reply]

  VN:F [1.9.22_1171]
  Rating: 0 (from 0 votes)
 7. ವಿಜಯತ್ತೆ
  ವಿಜಯತ್ತೆ

  ಹರೇರಾಮ, ಖಂಡಿತ ನೆಂಪಾದ ಹಾಂಗೆ ಹಾಕುತ್ತಾ ಬತ್ತೆ.ನಮ್ಮದರ ಒಳಿಶಿ ಬೆಳೆಶೆಕ್ಕನ್ನೆ.ತಿಳುಕ್ಕೊಂಬ ಜೆನ ಇದ್ದು ಹೇದೊಂಡು ಸಂತೋಷಾವುತ್ತು.ತೆಕ್ಕುಂಜೆ ಮಾವಂಗೆ ಧನ್ಯವಾದಂಗೊ.

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣವಿನಯ ಶಂಕರ, ಚೆಕ್ಕೆಮನೆಸರ್ಪಮಲೆ ಮಾವ°ಪುತ್ತೂರಿನ ಪುಟ್ಟಕ್ಕಶರ್ಮಪ್ಪಚ್ಚಿಶೀಲಾಲಕ್ಷ್ಮೀ ಕಾಸರಗೋಡುಅನುಶ್ರೀ ಬಂಡಾಡಿವಿದ್ವಾನಣ್ಣಒಪ್ಪಕ್ಕಹಳೆಮನೆ ಅಣ್ಣಶುದ್ದಿಕ್ಕಾರ°ಪುಟ್ಟಬಾವ°ವಸಂತರಾಜ್ ಹಳೆಮನೆಉಡುಪುಮೂಲೆ ಅಪ್ಪಚ್ಚಿಅಕ್ಷರ°ವಿಜಯತ್ತೆಮಾಷ್ಟ್ರುಮಾವ°ಮಂಗ್ಳೂರ ಮಾಣಿದೀಪಿಕಾವೆಂಕಟ್ ಕೋಟೂರುಪೆಂಗಣ್ಣ°ಕಾವಿನಮೂಲೆ ಮಾಣಿಚೆನ್ನಬೆಟ್ಟಣ್ಣಪೆರ್ಲದಣ್ಣಕಳಾಯಿ ಗೀತತ್ತೆಬೊಳುಂಬು ಮಾವ°ಶ್ಯಾಮಣ್ಣ
ಬೈಲಿನ ಮೋರೆಪುಟ
ಸದ್ಯದ ಪಟಂಗೊ

ಬೆಣಚ್ಚಿಪ್ಪಲ್ಲಿ ಹುಡ್ಕಲೆ