“ಎಬ್ಬಿದಲ್ಲೆ ಹೋಗದ್ರೆ, ಹೋದಲ್ಲೆ ಎಬ್ಬುದು”-{ಹವ್ಯಕ ನುಡಿಗಟ್ಟು-41}

November 8, 2015 ರ 12:33 pmಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಎಬ್ಬಿದಲ್ಲೆ ಹೋಗದ್ರೆ, ಹೋದಲ್ಲೆ ಎಬ್ಬುದು” {ಹವ್ಯಕ ನುಡಿಗಟ್ಟು-41}

ಸುಬ್ಬಮ್ಮ, ಮನೆ ಹೆರಿಯೋಳ್ತಿ. ಕೂಡು ಕುಟುಂಬಲ್ಲಿ ಒಂದು ಮನೆ ನೆಡೆಶುತ್ತ; ಸಾಮಾರ್ತಿಗೆಇಪ್ಪಹೆಮ್ಮಕ್ಕೊ. ಹತ್ತಿಪ್ಪತ್ತು ಜೆನ ಇದ್ದ ಆ ಮನೆಲಿ ಅದು ಹೇಳಿದ ಮಾತಿಂಗೆ ಬೆಲೆ ಇಕ್ಕು.ಹಾಂಗೆ ಹೇಳ್ಯೊಂಡು ಪ್ರತಿಯೊಬ್ಬನೂ ಅದರ ಗೆರೆ ಮೀರವು ಹೇಳಿ ಅಲ್ಲ. ಕೆಲವು ಸರ್ತಿ ಹೇಳಿದಾಂಗೆ ಕೇಳೆಕ್ಕಾರೆ ಅದೇಂಗೆ?.ಜಗಳ, ವಾದಾಂಟ ಆಗದ್ದಾಂಗೆ ಒರ್ಮೆಲಿ ಹೋವುತ್ತು!?. ಅದರ ಮಾತಿಲ್ಲೆ ಹೇಳ್ತರೆ…, ಕೆಲವು ಸರ್ತಿ “ಎಬ್ಬಿದಲ್ಲೆ ಹೋಗದ್ರೆ, ಹೋದಲ್ಲೆ ಎಬ್ಬೆಕ್ಕಾವುತ್ತು”.ಒಂದೊಂದಾರಿ ಸಣ್ಣ ಮಕ್ಕೊ ಗೆಂಟು ಪಿಟ್ಕಾಯಿಗಳ ಹಾಂಗೆ ಮಾಡ್ತವು. ಹಾಂಗೆ ಹೇಳ್ಯೊಂಡು ಅವಕ್ಕೆ ಮಿತಿಮೀರಿ ಶಿಕ್ಷೆ ಕೊಡ್ಳೂ ಎಡಿಯಯಿದ. ಅಷ್ಟಪ್ಪಗ ರಜ್ಜಹೊತ್ತಿಂಗೆ ಅವು ಹೇಳಿದಾಂಗೆ ಕೇಳೆಕ್ಕಾವುತ್ತು. ಆ ಸಮೆಲಿ ನಾವು “ಎನ್ನ ಕೆಮಿ ಕಾಶಿಗೆ ಹೋಯಿದು”[ಈ ನುಡಿಗಟ್ಟಿನ ಲಿಸ್ಟಿಲ್ಲಿ ಸುರುವಿಂಗೆ ಬರದ್ದೆ] ಹೇಳಿ ಕೂರೆಕ್ಕಾವುತ್ತು.ಈ ನುಡಿಗಟ್ಟು ಹೇಂಗೆ ಹುಟ್ಟಿತ್ತೂಳಿರೆ; ದನಗಳ ಗುಡ್ಡಗೆ ಬಿಡುವಗ ನಾವು ಹೇಳಿದ ಜಾಗೆಲೇ ಮೇದುಗೊ ಹೇಳಿರೆ ಅವು ಕೇಳ್ತವೊ?. ಅವು ಹೋದಲ್ಲೆ ಎಬ್ಬಿ ಬಿಡುವದು.ಗುಡ್ಡೆಂದ ಬಂದಪ್ಪಗ ನಮ್ಮ ಸುಪರ್ದಿಗೆ ಸಿಕ್ಕಿಪ್ಪಗ;  ಅವಕ್ಕಿದ್ದ ಜಾಗೆಲೇ ಕಟ್ಟಿಹಾಕುದು. ಹಾಂಗೇ ನವಗೆ ಸಂಬಂಧ ಪಟ್ಟ ದೊಡ್ಡವಕ್ಕೂ ಇದು ಅನ್ವೈಸುತ್ತು. ಎಂತ ಹೇಳ್ತಿ?.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. ಶರ್ಮಪ್ಪಚ್ಚಿ
  ಶರ್ಮಪ್ಪಚ್ಚಿ

  ಅರ್ಥಗರ್ಭಿತ ನುಡಿಗಟ್ಟು.
  ಎಬ್ಬಿದಲ್ಲೇ ಹೋಗದ್ರೆ ಹೋದಲ್ಲಿ ಎಬ್ಬೆಕ್ಕಾವ್ತು. ಆದರೂ ಒಂದು ನೋಟ ಅಲ್ಲಿಯೇ ಇರೆಕು.
  ಇಲ್ಲದ್ರೆ ಹೋದಲ್ಲೇ ಹೋಗಿ ನಮ್ಮ ಕೈ ತಪ್ಪುಗು.

  [Reply]

  VA:F [1.9.22_1171]
  Rating: 0 (from 0 votes)
 2. ಬೊಳುಂಬು ಮಾವ°
  ಬೊಳುಂಬು ಗೋಪಾಲ

  ಹಿಡಿತಕ್ಕೆ ಸಿಕ್ಕದ್ರೆ ಎಂತ ಮಾಡುವದು, ಎಬ್ಬಿದ ಹಾಂಗೆ ಏಕ್ಷನ್ ಮಾಡಿರೆ ಆತು. ಅದರ ಪಾಡಿಂಗೆ ಹೋವ್ತಾ ಇರ್ತು !
  ಗಟ್ಟಿಯಾದ ನುಡಿಗಟ್ಟು, ಸರಿಯಾದ ಮಾತು.

  [Reply]

  VA:F [1.9.22_1171]
  Rating: 0 (from 0 votes)
 3. ವಿಜಯತ್ತೆ

  ಶರ್ಮ ಭಾವನೂ ಬೊಳುಂಬು ಗೋಪಾಲನೂ ಹೇಳುತ್ತು ಸರಿ. ಅವು ಹೋದಲ್ಲೆ ಎಬ್ಬೀರೂ ಗಮನ ನಾವು ಮಡಿಕ್ಕೊಳೆಕ್ಕು. ಏಕ್ಷನ್ ಮಾಡೆಕ್ಕಪ್ಪದೂ ಸರಿ. ಆ ಸಮಯ ಕಳಿವಗ ನಮ್ಮ ಹಿಡಿತಕ್ಕೆ ಸಿಕ್ಕೆಡದೊ?

  [Reply]

  VN:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣದೀಪಿಕಾಕೆದೂರು ಡಾಕ್ಟ್ರುಬಾವ°ಬಟ್ಟಮಾವ°ಮುಳಿಯ ಭಾವನೆಗೆಗಾರ°ಹಳೆಮನೆ ಅಣ್ಣಶ್ರೀಅಕ್ಕ°ಕಾವಿನಮೂಲೆ ಮಾಣಿಡಾಗುಟ್ರಕ್ಕ°ಅನುಶ್ರೀ ಬಂಡಾಡಿಶರ್ಮಪ್ಪಚ್ಚಿನೀರ್ಕಜೆ ಮಹೇಶದೇವಸ್ಯ ಮಾಣಿಜಯಗೌರಿ ಅಕ್ಕ°ವೇಣೂರಣ್ಣಬೋಸ ಬಾವಚುಬ್ಬಣ್ಣವಿನಯ ಶಂಕರ, ಚೆಕ್ಕೆಮನೆವಸಂತರಾಜ್ ಹಳೆಮನೆಶ್ಯಾಮಣ್ಣಗಣೇಶ ಮಾವ°ವೇಣಿಯಕ್ಕ°ವಿಜಯತ್ತೆರಾಜಣ್ಣಸುವರ್ಣಿನೀ ಕೊಣಲೆಶೇಡಿಗುಮ್ಮೆ ಪುಳ್ಳಿ
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ