ಎಲೆ ತಿಂಪಜ್ಜನ ಕತೆ

October 20, 2014 ರ 3:07 pmಗೆ ನಮ್ಮ ಬರದ್ದು, ಇದುವರೆಗೆ 4 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

ತಿಂಪಜ್ಜ ಏವ ಕೆಲಸವನ್ನಾದರೂ ಬಿಡುಗು ಎಲೆ ತಿಂಬದರ ಅಲ್ಲ. ಉದಿಯಪ್ಪಗ ಮೀವದು, ಜೆಪ ಮಾಡುದು ಹೇಂಗೆ ಬಿಡ್ಲೆ ಎಡಿಯದೋ ಹಾಂಗೆ ಎಲೆ ತಿಂಬದನ್ನು ಕೂಡಾ. ದಿನಕ್ಕೆ ಎರಡು ಸರ್ತಿ ತಿಂಪಜ್ಜಂಗೆ ಪೇಟೆಗೆ ಹೋಪಲೆ ಇದ್ದು. ಉದಿಯಪ್ಪಗ ಒಂದರಿ, ಹೊತ್ತೋಪಗ ಒಂದರಿ. ಹೋಗದ್ದೆ ಕಳಿಯ. ಕೆಲಸ ಇದ್ದರೂ ಇಲ್ಲದ್ರೂ ಹೋಪದು ಹೋಯೆಕ್ಕೇ. ಪೇಟೆಲಿ ನಾಲ್ಕು ಮಾರ್ಗದ ಹತ್ರೆ, ಪಿಂಟೋ ಪುರ್ಬುವಿನ ಜವುಳಿ ಅಂಗಡಿ ಹಿಂದೆ ಒಂದು ಕಸವು ಹಾಕುವ ಜಾಗೆ ಇದ್ದಲ್ದ? ಅಲ್ಲಿ ಒಂದು ಸರ್ತಿ ನಿಂಗ ಬೇಕಾರೆ ನೋಡಿ, ಅಲ್ಲಿ ಎಲೆ ತಿಂದು ಉಗುದ ಗುರ್ತ ಇದ್ದು. ಆರು ಉಗುದ್ದು ಹೇಳಿ ಗ್ರೇಶಿದ್ದಿ? ದಿನಕ್ಕೆ ಎರಡು ಸರ್ತಿ ಪೇಟೆಗೆ ಹೋದ ತಿಂಪಜ್ಜ, ಲಸ್ರಾದುವಿನ ಪಾತ್ರೆ ಅಂಗಡಿಂದ ಈಚ ಹೊಡೆಲಿ ಒಂದು ಪೇಪರು ಮಾರುವ ಗೂಡಂಗಡಿ ಇದ್ದದ, ಅಲ್ಲಿಂದ ಎಲೆ ತೆಕ್ಕೊಂಡು, ಬಾಯಿಗೆ ಹಾಕಿ ಆಗುಕ್ಕೊಂಡು ಈಚ ಕರೆಂಗೆ ಬಂದು, ಅಲ್ಲಿಪ್ಪ ಎಲೆಟ್ರಿ ಕಂಬಕ್ಕೆ ಎರಗಿ ನಿಂದು, ಸುಮಾರು ಹೊತ್ತು ಅಗುದೂ ಆಗುದು, ಆ ಕೊಳಕ್ಕು ಕಸವಿನ ರಾಶಿಗೆ ತುಪ್ಪುದು. ಆ ಕೊಳಕ್ಕಿಲಿ ಅರ್ದಕ್ಕರ್ದ ಇವು ತುಪ್ಪಿದ್ದೆ ಇಕ್ಕು. ಜೆನಂಗ, ಆ ಕಸವಿಲಿ ಕೆಲವು ಸರ್ತಿ ಹೆಗ್ಗಣ ಸತ್ತದರನ್ನೂ ತಂದು ಹಾಕುತ್ತವು, ಆ ನಾತವನ್ನುದೆ ತಡಕ್ಕೊಂಡು, ಇವು ಅಲ್ಲೇ ತುಪ್ಪುದು. ಆ ಸತ್ತ ಹೆಗ್ಗಣದ ಮೇಲೆ ಬೀಳದ್ದ ಹಾಂಗೆ ಜಾಗ್ರೆತೆಲಿ ತುಪ್ಪುತ್ತವು ಮಾಂತ್ರ. ಅದೆಂತಕೆ ಹೇಳಿರೆ, ಬಾಯಿಂದ ತುಪ್ಪುದಲ್ಲದಾ? ಎಲ್ಲಿಯಾದರೂ ತುಪ್ಪುವಾಗ ಬಾಯಿಗೂ, ಆ ಸತ್ತ ಹೆಗ್ಗಣಕ್ಕೂ ಸಂಪರ್ಕ ತಾಗಿದರೆ, ಹೆಗ್ಗಣ ತಿಂದು ಜಾತಿ ಕೆಟ್ಟತ್ತು ಹೇಳಿ ಅಪ್ಪಲಾಗನ್ನೇ?

ಮೊದಲಿಂಗೆ ತಿಂಪಜ್ಜಂಗೆ ಎಲೆ ತಿಂಬ ಅಬ್ಯಾಸ ಇತ್ತಿಲ್ಲೆ. ಪ್ರಾಯ ಕಾಲಲ್ಲಿ ಸುತ್ತ ಇಪ್ಪ ಜೆನಂಗಳ ಅಬ್ಯಾಸಂಗಳ ನೋಡಿ ಅಪ್ಪಗ ತಿಂಪಜ್ಜಂಗು ಏವದಾದರೂ ಒಂದು ಒಳ್ಳೆ ಅಬ್ಯಾಸ ಬೆಳೆಶಿ ಕೊಳ್ಳೆಕ್ಕು ಹೇಳಿ ಕಂಡತ್ತು. ಹಾಂಗೆ ಬೀಡಿ ಎಳವದು ಹೇಳಿ ನಿರ್ದಾರ ಮಾಡಿ, ಗಣೇಶ ಬೀಡಿ ಎಳವಲೆ ಸುರು ಮಾಡಿದವು. ಆದರೆ ಒಂದು ಸರ್ತಿ ಬೀಡಿ ಎಳವಗ ಹೊಗೆ ನೆತ್ತಿಗೆ ಹತ್ತಿ, ಸೆಮ್ಮ ಸುರು ಆಗಿ, ತಡವಲೆಡಿಯದ್ದೆ, ಈ ಗಣೇಶ ಬೀಡಿ ಬಯಂಕರ ಖಾರ ಹೇಳಿ ಕಂಡತ್ತು. ಹಾಂಗೆ ಗಣೇಶ ಬೀಡಿ ಬೇಡ ಹೇಳಿ ಪ್ರಕಾಷ ಬೀಡಿ ಎಳವಲೆ ಸುರು ಮಾಡಿದವು. ಆದರೆ ಅದುದೇ ಖಾರ ಹೇಳಿ ಕಂಡತ್ತು. ಅದು ಬೇಡ ಹೇಳಿ ಬ್ರಿಸ್ಟಲು ಸಿಗ್ರೇಟು ಎಳದು ನೋಡಿದವು. ಸಿಗ್ರೇಟು ಎಳದರೆ ಕೇನ್ಸರು ಬತ್ತು ಹೇಳಿ ಆರೋ ಹೆದರ್ಸಿದವಡ. ಹಾಂಗೆ ಅದರ ಬಿಟ್ಟು ಮೂಗಿಂಗೆ ಹೊಡಿ ಎಳವಲೆ ಸುರು ಮಾಡಿದವು. ಹೊಡಿ ಎಳದರೆ ಮೂಗು ದೊಡ್ಡ ಅಕ್ಕು ಹೇಳಿ ಆರೋ ಹೇಳಿದವು. ಅಂಬಗ ಇನ್ನೆಂತರ ಮಾಡುದು ಹೇಳಿ ಅಪ್ಪಗ ಅದ, ಅಡಕ್ಕೆ ವ್ಯಾಪಾರದ ಅಬ್ಬು ಬ್ಯಾರಿ ಈ ಎಲೆ ತಿಂಬದರ ಕಲಿಶಿದ್ದು.

ಅಬ್ಬು ಬ್ಯಾರಿ ಹೇಳಿರೆ ತಿಂಪಜ್ಜ ಏವಾಗಳೂ ಅಡಕ್ಕೆ ಕೊಡುವ ಬ್ಯಾರಿ. ಪಟ್ಟಾ ಪಟ್ಟಿಯ ವಸ್ತ್ರ ಸುತ್ತಿ, ಬೆಳಿ ಅಂಗಿ ಹಾಕಿ, ಬೆಳಿ ಮುಂಡಾಸು ಸುತ್ತಿ, ಗಜಗಜ ಎಲೆ ಅಗುಕ್ಕೊಂಡು, ಈ ಅಬ್ಬು ಬ್ಯಾರಿ ಅಡಕ್ಕೆ ತೆಕ್ಕೊಂಬಲೆ ಸೀದಾ ತಿಂಪಜ್ಜನ ಮನೆಗೆ ಬಕ್ಕು. ಬಾರಿ ಚೆಂದಕ್ಕೆ ಮಾತಾಡಿ ತಿಂಪಜ್ಜನ ಮಂಗ ಮಾಡಿ ಅಡಕ್ಕೆ ತೆಕ್ಕೊಂಡು ಹೋಕು. ಮಾತು ಹೇಳಿರೆ ಬ್ಲೇಡಿಲಿ ಬೆಣ್ಣೆ ಕೊಯ್ದಾಂಗೆ ಮಾತಾಡುಗು. ಪೇಟೆಂದ ಎರಡು ರೂಪಾಯಿ ಜಾಸ್ತಿಗೆ ಅಡಕ್ಕೆ ತೆಕ್ಕೊಂಗು. ಅಂಬಗ ಅದಕ್ಕೆ ಲೋಸು ಆಗದಾ ಕೇಳೆಡಿ. ಅದು ತೂಕಲ್ಲಿ ಮೋಸ ಮಾಡ್ತು ಹೇಳಿ ತಿಂಪಜ್ಜಂಗೆ ಗುಮಾನಿ ಇದ್ದು. ಎರಡು ಕಿಲ ಅಡಕ್ಕೆಲಿ ನೂರು ಗ್ರಾಮು ಕಂಡಿತ ಮೋಸ ಇದ್ದು ಅದರದ್ದು. ಗೊಂತಾಗದ್ದ ಹಾಂಗೆ ಬತ್ತಿ ಮಡುಗುವ ಜೆನ ಅದು.

ತಿಂಪಜ್ಜ ಏನು ಕಮ್ಮಿ ಕುಳ ಅಲ್ಲ. ಒಂದು ಸರ್ತಿ ಈ ಅಬ್ಬು ಬ್ಯಾರಿಗೆ ಸರೀ ಟಕಾಯಿಸಿದ್ದವು. ಅದು ಹೇಂಗಾತು ಹೇಳಿರೆ, ತಿಂಪಜ್ಜ ಒಂದು ನಾಯಿ ಸಾಂಕಿತ್ತಿದ್ದವು. ಅದು ಸರೀ ತಿಂದು ತಿಂದು, ಪುಟುಕ್ಕೆನೆ ಆಗಿ, ಬಾರಿ ಚೆಂದ ಇತ್ತಿದ್ದು. ಈ ಅಬ್ಬು ಬ್ಯಾರಿ ಬಂದಿಪ್ಪ ಬಂದಿಪ್ಪಗ ಈ ನಾಯಿಯ ನೋಡುಗು. ಅದಕ್ಕುದೇ ಹೀಂಗಿಪ್ಪ ಒಂದು ನಾಯಿ ಸಾಂಕೆಕ್ಕು ಹೇಳಿ ಕಂಡತ್ತು. ಹಾಂಗೆ ಅದುದೇ ಒಂದು ನಾಯಿಯ ಎಲ್ಲಿಂದಲೋ ಸಂಪಾದಿಸಿ ತಂದು ಸಾಂಕುಲೆ ಸುರು ಮಾಡಿತ್ತು. ಅದರ ಕರ್ಮಕ್ಕೆ ಆ ನಾಯಿ ಏನು ಮಾಡಿರೂ ತೋರವೇ ಆಯಿದಿಲ್ಲೆ. ಎಲುಕ್ಕೊಟೆ ಕಟ್ಟಿಕೊಂಡು ಇತ್ತು.

ಅಬ್ಬು ಬ್ಯಾರಿ ತಿಂಪಜ್ಜನ ಹತ್ತರೆ ಕೇಳಿತ್ತು. “ಅಲ್ಲ, ನಿಂಗಳ ನಾಯಿ ಇಷ್ಟು ತೋರ ಆಗಿ ಚೆಂದ ಇದ್ದು. ಎನ್ನ ನಾಯಿ ಎಷ್ಟು ತಿಂಬಲೆ ಹಾಕಿರೂ ಎಂತಕೆ ಎಲುಕ್ಕೊಟೆ ಕಟ್ಟುದು?”

ತಿಂಪಜ್ಜ ಬಾರಿ ಕದೀಮ. ಅದಕ್ಕೆ ಹೇಳಿಕೊಟ್ಟವು ” ಈಗ ನಿನಗೆಂತ ನಿನ್ನ ನಾಯಿ ತೋರ ಆಯೆಕ್ಕಾ?”

“ಅಪ್ಪು”

“ಒಂದು ಕೆಲಸ ಮಾಡು, ಅದರ ಕುಂಡೆಗೆ ಒಂದು ಬೂಚು ಹಾಕು”

“ಬೂಚು ಹಾಕಿರೆ ತೋರ ಆವುತ್ತಾ?”

“ಹಾಕಿ, ಮತ್ತೆ ನೋಡು”

ಆ ಬ್ಯಾರಿ, ಪೆದ್ದ, ಅಪ್ಪು ಹೇಳಿ ಗ್ರೇಶಿತ್ತು. ಮನೆಗೆ ಬಂದು ನಾಯಿಯ ಹಿಡುದು ಮಡುಗಿ ಅದರ ಕುಂಡೆಗೆ ಒಂದು ಬೂಚು ಹಾಕಿತ್ತು. ಪಾಪ, ಆ ನಾಯಿಗೆ ವಿಸರ್ಜನೆ ಮಾಡ್ಳೆ ಎಡಿಯದ್ದೆ, ಹೊಟ್ಟೆ ಕಟ್ಟೀ ಕಟ್ಟಿ, ಹೊಟ್ಟೆ ಉಬ್ಬರಿಸಿ ಒಂದೇ ವಾರಲ್ಲಿ ತೋರ ಆತು.

ಬ್ಯಾರಿಗೆ ಕುಶೀ ಆತು. ಬಂದು ತಿಂಪಜ್ಜನ ಹತ್ತರೆ ಹೇಳಿತ್ತು.

“ಆಣ್ಣೇರೆ, ನಿಂಗ ಹೇಳಿದ ಹಾಂಗೆ ಮಾಡಿದೆ. ನಾಯಿ ಸರೀ ತೋರ ಆಯಿದು. ಇನ್ನೆಂತ ಮಾಡೆಕ್ಕು?”

“ಇನ್ನೆಂತರ ಮಾಡುದು, ಬೂಚು ತೆಗೆ”

ಬ್ಯಾರಿ ಮನೆಗೆ ಬಂದು, ನಾಯಿಯ ಕುಂಡೆಂದ ಬೂಚು ತೆಗವಲೆ ನೋಡಿತ್ತು. ಬೂಚು ಹೆರ ಬೈಂದಿಲ್ಲೆ. ಎಷ್ಟು ಎಳದರೂ ಬಾರ. ಕಡೇಂಗೆ ಕುಪ್ಪಿಯ ಬೂಚು ಬಾರದ್ರೆ ಹಲ್ಲಿಲಿ ಕಚ್ಚಿ ಎಳದು ತೆಗೆತ್ತಲ್ಲದಾ, ಹಾಂಗೆ ಹಲ್ಲಿಲಿ ಕಚ್ಚಿ ಎಳದತ್ತು. ಇದು ಎಳದ ರಭಸಕ್ಕೆ ಬೂಚು ಒಂದೇಸಲಕ್ಕೆ ಹೆರ ರಟ್ಟಿತ್ತು. ಅದರ ಒಟ್ಟಿಂಗೆ ನಾಯಿ ಹೊಟ್ಟೆಯ ಒಳ, ಒಂದು ವಾರಂದ ಕಟ್ಟಿ ಕೊಂಡದು ಎಲ್ಲ ಹೆರಂಗೆ ಪಿಚಕಾರಿಯ ಹಾಂಗೆ ರಟ್ಟೆಕ್ಕಾ. ಬ್ಯಾರಿಯ ಮುಸುಡು, ಮೋರೆ, ಕೆಮಿ ಒಳ ಎಲ್ಲ ಅಂಟಿಕೊಂಡತ್ತತ್ತೆ. ಮತ್ತೆ ಬ್ಯಾರಿ ಮೂರುದಿನಲ್ಲಿ ಮೂವತ್ತು ಸರ್ತಿ ಮಿಂದಿದಡ. ಆದರೂ ಅದಕ್ಕೆ ಇನ್ನೂ ವಾಸನೆ ಇದ್ದು ಹೇಳಿ ಸಂಶಯ. ಹಾಂಗೆ ಮತ್ತೆ ದಿನಕ್ಕೆ ಕಮ್ಮಿಲಿ ಒಂದು ಕುಪ್ಪಿ ಸೆಂಟು ಮೆತ್ತಿಕೊಂಡೇ ಅದು ಹೆರ ಹೆರಡುದು. ಅದಾದ ಮತ್ತೆ ರಜ ಸಮಯ ತಿಂಪಜ್ಜನ ಮನೆ ಹೊಡೆಂಗೆ ಅದು ತಲೆ ಹಾಕಿ ಮನಿಗಿದ್ದಿಲ್ಲೆ. ಹಾಂಗೇಳಿ ವ್ಯಾಪಾರ ಬಿಡ್ಳಾವುತ್ತಾ?

ಈ ಅಬ್ಬು ಬ್ಯಾರಿ ಏವಾಗ ನೋಡಿರೂ ಎಲೆ ಅಡಕ್ಕೆ ಜುಗುಕ್ಕೊಂಡೇ ಇಕ್ಕು. ತಿಂಪಜ್ಜಂಗೆ ಎಲೆ ತಿಂಬ ಅಬ್ಯಾಸ ಹಿಡಿಶಿದ್ದು ಇದೆ ಅಬ್ಬು ಬ್ಯಾರಿ. “ಬಚ್ಚಿರೆ ಎಷ್ಟು ಬೇಕಾರೂ ತಿಂಬಲಕ್ಕು” ಹೇಳಿ ಮರ್ಲು ಮಾಡಿ ಎಲೆ ತಿಂಬಾಂಗೆ ಮಾಡಿತ್ತು. ಸುರು ಸುರುವಿಂಗೆ ತಿಂಪಜ್ಜಂಗೆ ಹೊಗೆಸೊಪ್ಪು ಹಾಕದ್ದೆ ತಿಂಬ ಅಬ್ಯಾಸ ಆದ್ದು. ಆದರೆ ಮತ್ತೆ ಒಂದರಿ ಇದೇ ಬ್ಯಾರಿ “ಹೊಗೆಸೊಪ್ಪು ಹೇಳಿರೂ ಎಲೆಯೇ ಅಲ್ಲದಾ. ಒಣಗಿದ್ದು ಅಷ್ಟೇ” ಹೇಳಿ, ಎಲೆ ಅಡಕ್ಕೆ ಹೊಗೆಸೊಪ್ಪು ಎಲ್ಲಾ ತಿಂಬಾಂಗೆ ಮಾಡಿ ಹಾಕಿತ್ತು. ಹೊಗೆಸೊಪ್ಪು ಸುರುವಾಣ ಸರ್ತಿ ತಿಂದಿಪ್ಪಗ ತಿಂಪಜ್ಜಂಗೆ ರಜ ಅಮಲು ಆದಾಂಗೆ ಆದರೂ ಮತ್ತೆ ಅಬ್ಯಾಸ ಆತು.

ತಿಂಪಜ್ಜನ ಸುರುವಾಣ ಮಗಳು ಸುಮತಿಯ ಕೊಟ್ಟದು ಬೆಂಗ್ಳೂರಿಂಗೆ. ಸುಮತಿಗೆ ಎರಡು ಮಕ್ಕ ಇದ್ದವು. ಅಮರು ಮಕ್ಕ ಅವು. ಸುರುವಾಣದ್ದು ಕೂಸು, ಮತ್ತಾಣದ್ದು ಮಾಣಿ. ರಜೆಲಿ ಎಲ್ಲ ಅವು ಉರಿಂಗೆ ಬಪ್ಪದಿದ್ದು, ಅಜ್ಜನ ಮನೆಗೆ ಹೇಳಿ. ಅವು ಇಪ್ಪಷ್ಟು ಸಮೆಯ ಮನೆ ಹೇಳ್ತದು ಗದ್ದಲ ಬೀಡು. ಲೂಟಿ ಹೇಳಿರೆ ಲೂಟಿ ಮಕ್ಕ ಅವು ಎರಡುದೇ. ಅಕ್ಕ ಹೆಚ್ಚು ಗಲಾಟೆ ಇಲ್ಲೆ, ಆದರೆ ಮಹಾ ಸೀಂತ್ರಿ, ಮೆಲ್ಲಂಗೆ ತಮ್ಮಂಗೆ ಎಂತ ಮಾಡೆಕ್ಕೂಳೀ ಹೇಳಿ ಕೊಡುದು, ತಮ್ಮ ಆ ಕೆಲಸವ ಜಾರಿಗೆ ತಪ್ಪದು.

ಬೆಂಗ್ಳೂರಿಲಿ ಸುಮತಿಯ ಮನೆಲಿ ಎಂತಾರು ಜೆಂಬ್ರಂಗ ಇದ್ದರೆ ತಿಂಪಜ್ಜನೂ ತಿಂಪಜ್ಜಿಯೂ ಹೋವುತ್ತವು. ಮಗಳ ಮನೆ ಜೆಂಬ್ರ ಹೇಳಿದ ಮತ್ತೆ ಹೋಯೆಕ್ಕಾವ್ತು. ಎಂತಕೆ ಹೇಳಿರೆ ಪೂಜೆ ಗೀಜೆ , ಹೋಮ ಇದ್ದರೆ ಬೇಕಪ್ಪ ಪೂಜಾ ಸಾಮಗ್ರಿ ಎಲ್ಲ ಮಗಳು ಅಪ್ಪನ ಕೈಲೇ ಊರಿಂದ ತರ್ಸಿಕೊಂಬದು. ಹಾಂಗೆ ಈ ಸರ್ತಿ ಬೆಂಗ್ಳೂರಿಲಿ ಒಂದು ಶಿವ ಪೂಜೆ, ಗೆಣಹೋಮ ಎಲ್ಲ ಇದ್ದು, ಬರೆಕ್ಕು ಹೇಳಿ ಮಗಳ ಮನೆಂದ ಹೇಳಿಕೆ ಬಂತು. ಹಾಂಗೆ ಅಜ್ಜನೂ ಅಜ್ಜಿಯೂ ಎರಡು ದಿನ ಮೊದಲೇ ಬೆಂಗ್ಳೂರು ತಲ್ಪಿದವು.

ತಿಂಪಜ್ಜಂಗೆ ಬೆಂಗ್ಳೂರಿಲಿ ಏನು ತೊಂದರೆ ಇಲ್ಲೆ. ಆದರೆ ಕಷ್ಟ ಅಪ್ಪದು ಈ ಎಲೆ ತಿಂಬ ಅಬ್ಯಾಸಂದ. ತಿಂಪಜ್ಜನ ಮಗಳ ಮನೆ ಹತ್ತರೆ ಲಾಯಿಕದ ಎಲೆ ಸಿಕ್ಕುತ್ತಿಲ್ಲೆ. ಎಲೆ ರಜಾ ಹಣ್ಣಾಗಿರೆಕ್ಕು, ಆವಗಳೇ ಅದಕ್ಕೆ ರುಚಿ ಬಪ್ಪದು ಹೇಳಿ ತಿಂಪಜ್ಜನ ನಂಬಿಕೆ. ಮರದ ಕುರ್ಶಿ ಮೇಲೆ ಕಾಲ ಮೇಲೆ ಕಾಲು ಹಾಕಿ ಕೂದು, ಎಲೆಯ ಎರಡು ಸರ್ತಿ ಆಚೊಡೆ ಈಚೊಡೆ ಉದ್ದಿ, ತೊಟ್ಟಿನ ಚೂಂಟಿ ಇಡ್ಕಿಕ್ಕಿ, ಕೊಡಿಯ ಚೂಂಟಿ ತೆಗದು ಕೆನ್ನೆಗೆ ಅಂಟಿಸಿ, ಹಗೂರಕ್ಕೆ ಸುಣ್ಣ ಉದ್ದಿ, ಎರಡು ತುಂಡು ಅಡಕ್ಕೆ ಹೋಳನ್ನು, ಒಂದು ತುಂಡು ಹೊಗೆಸೊಪ್ಪನ್ನು ಮಡುಗಿ, ಹಸೆಯ ಸುರುಳಿ ಸುತ್ತಿ ಮಾಡಿಸಿದ ಹಾಂಗೆ ಸುರುಟಿ, ಎರಡು ಬೆರಳಿಲಿ ಹಿಡುದು ಬಾಯಿಯ ಒಳಾಂಗೆ ಹಾಕಿ, ಅಗಿವಲೆ ಸುರು ಮಾಡಿರೆ, ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ ತಿಂಪಜ್ಜ. ತೊಟ್ಟು ಇಡ್ಕಿದ್ದಕ್ಕೆ ಮಗಳು “ಎಲ್ಲ ಕಸವು ಮಾಡಿ ಹಾಕಿದವು” ಹೇಳಿ ಪರಂಚಿದರುದೇ, ಎಲೆ ತಿಂಬ ಪರಮಾನಂದಲ್ಲಿ ಅದೆಲ್ಲ ತಿಂಪಜ್ಜನ ಕೆಮಿಗೆ ಬೀಳ್ತಿಲ್ಲೆ. ಆದರೆ ತಾಪತ್ರಯ ಹೇಳಿರೆ ತಿಂಪಜ್ಜಂಗೆ ಬೇಕಾದ ಹಾಂಗಿಪ್ಪ ಎಲೆ ಮಗಳ ಮನೆ ಹತ್ತರೆ ಸಿಕ್ಕುತ್ತಿಲ್ಲೆ. ಕೆಲವು ಸರ್ತಿ ಎಲೆಯೇ ಸಿಕ್ಕುತ್ತಿಲ್ಲೆ. ಆವಾಗೆಲ್ಲ ತಿಂಪಜ್ಜನ ಅವಸ್ತೆ ಹೇಳಿ ತೀರ.

ಈ ಸರ್ತಿದೆ ಹಾಂಗೇ ಆತು. ಸುರುವಾಣ ದಿನಕ್ಕೆ ಊರಿಂದ ತೆಕ್ಕೊಂಡು ಹೋದ ಎಲೆ ಇದ್ದತ್ತು. ಎರಡ್ಣೇ ದಿನಕ್ಕೆ ಎಲೆ ಖಾಲಿ. ತಿಂಪಜ್ಜ ಮೂರ್ನೇ ಮೈನು, ನಾಕ್ನೇ ಕ್ರೋಸಿಲಿ ಐದು ಸರ್ತಿ, ಇಡೀ ತಿರುಗಿದರೂ ಎಲೆ ಸಿಕ್ಕಿದ್ದಿಲ್ಲೆ. ಆರೂ ಎಲೆ ಮಾರುವೋರು ಇಲ್ಲೆ. ಮದ್ಯಾನ್ಹ ಅಪ್ಪಗ ತಿಂಪಜ್ಜಂಗೆ, ಎಲೆ ತಿನ್ನದ್ದೆ ಬಾಯಿ ಚಪ್ಪೆ ಚಪ್ಪೆ ಆಗಿ ಏಳುಲೂ ಎಡಿಯ ಕೂಪಲೂ ಎಡಿಯ ಹೇಳಿ ಕಂಡತ್ತು. ಎಂಟು ಸರ್ತಿಯದರೂ ಛೆ ಛೆ ಹೇಳಿಕ್ಕು. ಹೊತ್ತೋಪಗ ಒಂಭತ್ತು ಗಂಟೆಗೆ ಅಳಿಯ ಮನೆಗೆ ಬಪ್ಪಗ ಎಲೆ ತಪ್ಪಲು ಸಾಕು ಹೇಳಿ ಗ್ರೇಷಿಕೊಂಡವು. ಒಟ್ಟಾರೆ ಮೇಲೆ ಹೋತ್ತೊಪಗಾಣ ಹೊತ್ತಿಂಗಪ್ಪಗ ಎಲೆ ಇಲ್ಲದ್ದೆ ಮರ್ಲು ಹಿಡುದಾಂಗೆ ಅಪ್ಪಲೆ ಸುರು ಆತು.

ಅಜ್ಜನ ಅವಸ್ತೆ ನೋಡಿ ಇಬ್ರೂ ಪುಳ್ಳಿಯಕ್ಕೊಗೆ ” ಪಾಪ” ಕಾಂಬಲೆ ಸುರು ಆತು. ಇಬ್ರುದೇ ಅಜ್ಜನ ಹತ್ರಂಗೆ ಬಂದವು.

“ಅಜ್ಜ, ನಿಂಗೊಗೆ ಎಲೆ ಸಿಕ್ಕಿದ್ದಿಲ್ಲೆಯ?”

“ಇಲ್ಲೆ ಮಕ್ಕಳೇ”

“ನಿಂಗೊಗೆ ಬೀಡ ಅಕ್ಕಾ?”

“ಬೀಡವಾ?”

“ಅಪ್ಪು. ಅಲ್ಲಿ ಕೃಷ್ಣ ದರ್ಶಿನಿ ಹತ್ತರೆ ಒಂದು ಬೀಡದ ಅಂಗಡಿ ಇದ್ದು. ಬೇಕಾರೆ ತಂದು ಕೊಡ್ತೆಯಾ.”

ಎಂತದೂ ಇಲ್ಲದ್ದೆ ಕೂಪ ಬದಲು ಅದಾರು ಅಕ್ಕು ಹೇಳಿ ಕಂಡತ್ತು ತಿಂಪಜ್ಜಂಗೆ.

” ಅಕ್ಕು ತನ್ನಿ” ಹೇಳಿದವು.

ಮಕ್ಕ ಹೋಗಿ ಅರ್ಧ ಗಂಟೆ ಕಳುದು ತಿಂಪಜ್ಜಂಗೆ ಒಂದು ಬೀಡ ತಂದು ಕೊಟ್ಟವು. ತಿಂಪಜ್ಜಂಗೆ ಬಾರಿ ಕುಶಿ ಆತು. ಬಿಡ ತೆಗದು ಬಾಯಿಗೆ ಹಾಕಿ ಅಗಿವಲೆ ಸುರು ಮಾಡಿದವು. ಬೀಡ ರಜಾ ಸೀವು ಸೀವು ಇತ್ತು. ಬೀಡ ಅಲ್ಲದಾ, ಹಾಂಗೇ ಇಪ್ಪದಾಯ್ಕು ಗ್ರೇಶಿದವು ತಿಂಪಜ್ಜ.

ತಿಂಪಜ್ಜ ಎಲೆ ತಿಂಬದು ಹೇಳಿರೆ ಅಗುದು ಅಗುದು ತುಪ್ಪುವಾಗ ರಸ ಮಾಂತ್ರ ತುಪ್ಪುದು. ಬಾಯಿಲಿ ಇಪ್ಪ ಪುಂಟೆ ತುಪ್ಪುಲಿಲ್ಲೆ. ಪುಂಟೆ ಪೂರ್ತಿ ಅಲ್ಲೇ ಕರಗೆಕ್ಕು.

ಎಷ್ಟು ಹೊತ್ತು ಅಗುದರೂ ಈ ಬೀಡದ ಪುಂಟೆ ಕರಗುತ್ತಾ ಇಲ್ಲೆ. ಬೀಡದ, ಎಲೆಯ ರುಚಿ ಪೂರ್ತಿ ಮುಗುದರೂ ಬಾಯಿಲಿ ಇನ್ನೂ ಮುದ್ದೆ ಮುದ್ದೆ ಆಗಿ ಹಾಂಗೇ ಇದ್ದು. ತಿಂಪಜ್ಜಂಗೆ ಅರ್ತ ಆಗ ಎಂತಾತು ಹೇಳಿ. ಅಗಿತ್ತನೇ ಇದ್ದವು.

ಅರ್ತಪ್ಪದು ಹೇಂಗೆ? ಮಹಾ ಬೆಳವಿನ ಮಕ್ಕ ಅವು. ಬೀಡ ತೆಕ್ಕೊಂಡು ಅದರೊಳ, ಅದೆಂತದೋ ಚೂಯಿಂಗ್ ಗಮ್ಮು ಹೇಳ್ತ ಒಂದು ಚೋಕ್ಲೇಟು ಇದ್ದಡ, ಎಷ್ಟು ಅಗುದರೂ ಅದು ಮುಗಿವದು ಹೇಳಿ ಇಲ್ಲೆ, ಬಾಯಿಲಿ ಮುದ್ದೆ ಮುದ್ದೆ ಹಾಂಗೆ ಇರ್ತು, ಮೆಲ್ಲಂಗೆ ಆ ಎರಡು ಚೋಕ್ಲೇಟಿನ ಒಳ ಸೇರ್ಸಿ ಬಿಟ್ಟಿದವು. ತಿಂಪಜ್ಜಂಗೆ ಗೊಂತೇ ಇಲ್ಲೆ.

ಹಾಂಗೆ ತಿಂಪಜ್ಜ ಆಗಿತ್ತಾ ಇದ್ದವು. ಇನ್ನುದೇ ಅಗಿತ್ತನೇ ಇದ್ದವು.

ಅಜ್ಜ ಎಲೆ ಅಗಿವದರ ನಿಂಗೊಗೆ ನೋಡೆಕ್ಕು ಹೇಳಿ ಇದ್ದಾ? ಈ ಸಂಕೋಲೆಲಿ ಹೋಗಿ ನೋಡಿ.

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 4 ಒಪ್ಪಂಗೊ

 1. ಇಂದಿರತ್ತೆ
  ಇಂದಿರತ್ತೆ

  ಎಲೆ ಸಿಕ್ಕದ್ದೇ ಒದ್ದಾಡಿದ್ದು ಮಾಂತ್ರವೋ , ತಂದ ಎಲೆ ತಿಂದು ತುಪ್ಪುಲೆ ಜಾಗೆ ಇತ್ತಾ? ಸುಮತಿ ಮನೆಯ ಕಂಪೌಡಿನ ಆಚೆ ಹೊಡೆಂಗೆ ತುಪ್ಪಿದ್ದಲ್ಲನ್ನೇ!! ಸುಮತಿ ಮತ್ತೆ ಆಚೆಮನೆಯವರ ಹತ್ತರೆ ಬೈಗಳು ತಿನ್ನೆಕ್ಕಕ್ಕು !!

  [Reply]

  VA:F [1.9.22_1171]
  Rating: 0 (from 0 votes)
 2. ಶೈಲಜಾ ಕೇಕಣಾಜೆ

  ಹ… ರೈಸಿದ್ದು ಶ್ಯಾಮಣ್ಣ…. ಆದರೆ ಇನ್ನು ಸಿಕ್ಕಿದಲ್ಲೆಲ್ಲ ತುಪ್ಪಿದರೆ ಮೋದಿಯಜ್ಜನ ಸ್ವಚ್ಛ ಭಾರತ ಅಭಿಯಾನಕ್ಕೆ ಧಕ್ಕೆಯಾಗದೋ? :)

  [Reply]

  VA:F [1.9.22_1171]
  Rating: 0 (from 0 votes)
 3. ಭಾಗ್ಯಲಕ್ಷ್ಮಿ

  ”ಎಲ್ಲಿಯಾದರೂ ತುಪ್ಪುವಾಗ ಬಾಯಿಗೂ, ಆ ಸತ್ತ ಹೆಗ್ಗಣಕ್ಕೂ ಸಂಪರ್ಕ ತಾಗಿದರೆ, ಹೆಗ್ಗಣ ತಿಂದು ಜಾತಿ ಕೆಟ್ಟತ್ತು ಹೇಳಿ ಅಪ್ಪಲಾಗನ್ನೇ” – ನಮ್ಮ ಬೈಲಿನ ಮಟ್ಟಿಂಗೆ ”ಅಂಗೈ ಹುಣ್ಣಿ೦ಗೆ ಕನ್ನಟಿ ಬೇಕೋ ?” ಹೇಳುವ ಹಾ೦ಗಿದ್ದು

  ಬತ್ತಿ ಮಡುಗುವಗಳೂ 50-50 ಭಟ್ಟ೦ಗೂ, ಬ್ಯಾರಿಗೂ ಒಳ್ಳೆ ಅಂಡರ್ ಸ್ಟಾ೦ಡಿಂಗ್ ಇದ್ದೂ ಹೇಳಿ ಆತು . :-)

  [Reply]

  VA:F [1.9.22_1171]
  Rating: 0 (from 0 votes)
 4. ಮುಳಿಯ ಭಾವ
  ರಘು ಮುಳಿಯ

  ಹೊ.ಹೊ..ಎಡಿಯಪ್ಪ ಈ ತಿ೦ಪಜ್ಜನ ಕತೆಲಿ..
  ಬೆ೦ಗ್ಳೂರಿಲಿ ಎಲೆ ಸುಣ್ಣ ಸಿಕ್ಕಿಕ್ಕುಗು ಆದರೆ ಅಡಕ್ಕೆ ಹೊಗೆಸೊಪ್ಪಿ೦ಗೆ ತತ್ವಾರ..

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಪವನಜಮಾವವೇಣಿಯಕ್ಕ°ಚೆನ್ನೈ ಬಾವ°ಕೊಳಚ್ಚಿಪ್ಪು ಬಾವವಿನಯ ಶಂಕರ, ಚೆಕ್ಕೆಮನೆವಾಣಿ ಚಿಕ್ಕಮ್ಮತೆಕ್ಕುಂಜ ಕುಮಾರ ಮಾವ°ಪುಣಚ ಡಾಕ್ಟ್ರುಅನಿತಾ ನರೇಶ್, ಮಂಚಿಗಣೇಶ ಮಾವ°ಕಜೆವಸಂತ°ವಿಜಯತ್ತೆಸರ್ಪಮಲೆ ಮಾವ°ಬಟ್ಟಮಾವ°ಪೆಂಗಣ್ಣ°ಅಕ್ಷರದಣ್ಣದೊಡ್ಡಮಾವ°ಶ್ರೀಅಕ್ಕ°ಪ್ರಕಾಶಪ್ಪಚ್ಚಿಜಯಗೌರಿ ಅಕ್ಕ°ಬಂಡಾಡಿ ಅಜ್ಜಿಪುತ್ತೂರಿನ ಪುಟ್ಟಕ್ಕಉಡುಪುಮೂಲೆ ಅಪ್ಪಚ್ಚಿvreddhiಡಾಮಹೇಶಣ್ಣಮಾಷ್ಟ್ರುಮಾವ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ