“ಏವದಕ್ಕೂ ಕಾಲ ಕೂಡಿ ಬರೆಕು” (ಹವ್ಯಕ ನುಡಿಗಟ್ಟು–12)

August 12, 2014 ರ 6:22 amಗೆ ನಮ್ಮ ಬರದ್ದು, ಇದುವರೆಗೆ 3 ಒಪ್ಪಂಗೊ.

ಸಣ್ಣಸಂಕೊಲೆ(shortlink):

ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ ಶುದ್ದಿಯ ಪ್ರಿಂಟು ಮಾಡ್ಳೆ ಇಲ್ಲಿ ಒತ್ತಿ  

“ಏವದಕ್ಕೂ ಕಾಲ ಕೂಡಿ ಬರೆಕು” (ಹವ್ಯಕ ನುಡಿಗಟ್ಟು—12)

ಕೆಲಾವು ವರ್ಷ ಹಿಂದೆ,  ನಮ್ಮೂರಿಲ್ಲಿ ಮದುವೆ ಅಪ್ಪಲೆ  ತಯಾರಾದ ಕೂಸುಗೊ ಬೇಕಾದಷ್ಟು ಸಂಖ್ಯೆಲಿ ಮನೆಒಳ ಇಕ್ಕಿದ!  “ಎಲ್ಲಿ ನೋಡೀರೂ ಮಗಳಿಂಗೆ ಮನೆ  ಬತ್ತಿಲ್ಲೆ ಭಾವಯ್ಯ. ಕೆಲವು ಕುಳವಾರು ಬಂದು ನೋಡಿ,ಗಡದ್ದು ಕೇಸರಿಭಾತು, ಕಾಪಿ-ಪಲಾರ ಮಾಡಿಕ್ಕಿ, ಜಾತಕ ತೆಕ್ಕೊಂಡೋಗಿ,ಒಂದಹತ್ತು ದಿನ ಮಡಗಿಕ್ಕಿ, ಜಾತಕಲ್ಲಿ ಆವುತ್ತಿಲ್ಲೆ ಹೇಳುತ್ತವಿದ!” ಇದು ಕೂಸಿನ ಅಪ್ಪನ ಬೇಜಾರದ ಮಾತು. ಅಷ್ಟಪ್ಪಗ  ಆ   ಭಾವನುದೆ  “ಕಾಲ ಕೂಡಿ ಬಪ್ಪಗ ಅಕ್ಕು ಭಾವ”. ಹೇಳುಗು . ಆದರೆ  ಇಂದ್ರಾಣ  ದಿನಂಗಳಲ್ಲಿ  ಸರೀ ವೆತಿರಿಕ್ತ. ಮಾಣಿಯಂಗೊಕ್ಕೆ ಕೂಸು ಸಿಕ್ಕುತ್ತಿಲ್ಲೆ!!.ಈ ಸಮಸ್ಯೆ ಕಡ್ಪಕೆ  ಅನುಭವಿಸುವದು ತರವಾಡು ಮನೆ,ತೋಟ, ಹಟ್ಟಿಲಿ ಬೇಕಾಷ್ಟು ದನಗೊ,ಇಷ್ಟೆಲ್ಲ ಇದ್ದವು!!! ಇದೆಲ್ಲದರಿಂದ ಮದಲಾಗಿ ಮಾಣಿಗೆ  ಅಬ್ಬೆ-ಅಪ್ಪ ಇದ್ದವೋ? ಕೇಳುಗು. ಮಾಣಿಗೆ ಮದುವೆ ಅಪ್ಪಲಪ್ಪಗ  ಈ  ಅಬ್ಬೆ-ಅಪ್ಪ ದೇಶಾಟನೆ ಹೋಯೆಕ್ಕೊ! ಉಮ್ಮಪ್ಪ!!

ತೋಟದ  ತಿಮ್ಮಣ್ಣ ಭಾವ  ಐದಾರು ವರ್ಷಾತು ಮಾಣಿಗೆ ಕೂಸು ಹುಡುಕ್ಕುತ್ತದು! “ಎಲ್ಲಿ ನೋಡೀರೂ ನಮ್ಮ ಮನಗೆ ಬತ್ತ ಕೂಸುಗೊ ಇಲ್ಲೆ ಮಿನಿಯ!” ಎಲ್ಲದಕ್ಕೂ ಕಾಲ ಕೂಡಿ ಬರೆಕಿದ!  ಈ ಕಾಲ ಕೂಡಿ ಬರೆಕು ಹೇಳ್ತ ಮಾತು  ಬರೇ ಮದುವೆ ಕಾಲಕ್ಕೆ   ಮಾಂತ್ರವೋ? ಅಪ್ಪಲೇಅಲ್ಲ. ಸಂತಾನಕ್ಕೆ, ಜಾಗೆ ಕ್ರಯಚ್ಚೀಟಿಂಗೆ, ಹೊಸ ಮನೆ ಕಟ್ಟ್ಳೆ, ಉದ್ಯೋಗ ಸಿಕ್ಕಲೆ, ಹೀಂಗೆ ಜೀವನದ ಎಲ್ಲ ಮಜಲಿಲ್ಲಿ,ಎಲ್ಲಾ ವಿಶೇಷ ಕಾರ್ಯಂಗೊಕ್ಕೂ ’ಕಾಲ ಕೂಡಿಬರೆಕು’ ,  ದೇವರಅನುಗ್ರಹವೂ ಗುರು ಹಿರಿಯರ ಆಶೀರ್ವಾದವೂ ಸೇರೆಕ್ಕು. ಎಂತ ಹೇಳ್ತಿ?

,ಒಪ್ಪಣ್ಣ, oppanna, havyaka, ಹವ್ಯಕ

ಸೂ: ©: ಈ ಶುದ್ದಿಯ ಎಲ್ಲಾ ಹಕ್ಕುದೇ -ಇವರ ಕೈಲಿ ಇದ್ದು. ಶುದ್ದಿಯ ಯೇವದೇ ಭಾಗವ ಇಲ್ಲಿಂದ ತೆಗೆತ್ತರೆ, ಅದರಿಂದ ಮದಲು ಅವರ ಅನುಮತಿ ತೆಕ್ಕೊಳೇಕು.

ಈ ಶುದ್ದಿಗೆ ಇದುವರೆಗೆ 3 ಒಪ್ಪಂಗೊ

 1. K.Narasimha Bhat Yethadka

  ಅಪ್ಪಪ್ಪು.ಒಪ್ಪ ಕೊಡ್ಲೂ ಕಾಲ ಕೂಡಿ ಬರೆಕು.ಮತ್ತೆ ಅವರವರ ಹಣೆ ಬರಹ.

  [Reply]

  VA:F [1.9.22_1171]
  Rating: 0 (from 0 votes)
 2. ವಿಜಯತ್ತೆ

  ಅಪ್ಪು ನರಸಿಂಹಣ್ಣ, ಪ್ರತಿ ಬರಹಕ್ಕೂ ನಿಂಗಳ ಒಪ್ಪ ಬರೆಷಿಯೊಂಬಲೂ ಕಾಲ ಕೂಡಿ ಬರೆಕಲ್ಲೋ? ಧನ್ಯವಾದ

  [Reply]

  VN:F [1.9.22_1171]
  Rating: 0 (from 0 votes)
 3. Laxmisha s

  ಓಹೋ ಏವದಕ್ಕೂ ತಾಳ್ಮೆಲಿ ಕೂದೊಂಬಲೆ ಈ ಮಾತು! ಸರಿ ವಿಜಯತ್ತೆ

  [Reply]

  VA:F [1.9.22_1171]
  Rating: 0 (from 0 votes)

ಶುದ್ದಿಗೆ ಒಂದು ಒಪ್ಪ ಕೊಡಿ

(ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ [Ctrl+G] Toggle between Kannada - English)


ಬೈಲಿಂಗೆ ಲಾಗ ಹಾಕಲೆ

ಗುಟ್ಟುಶಬ್ದ(password) ಮರದತ್ತೋ?

ಬೈಲಿನ ಬಗ್ಗೆ:
ಚೋಲು - ಡಬ್ಬಲ್ ಚೋಲು
ವಿಶೇಷ ವಿಷಯ
ಶ್ರಧ್ಧಾಂಜಲಿ- ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ ಸುಪುತ್ರ)
ಶ್ರಧ್ಧಾಂಜಲಿ-ಶ್ರೀ ಬಿ.ಜಿ.ವಸಂತ (ಕೊಡಗಿನ ಗೌರಮ್ಮನವರ... ... ಓದಿ, ಒಪ್ಪಕೊಡಿ >>
ಬೆಶಿ ಬೆಶಿ ಒಪ್ಪಂಗೊ..
ಬೈಲಿನ ನೆರೆಕರೆ
ಗುರಿಕ್ಕಾರ°ಒಪ್ಪಣ್ಣಬಟ್ಟಮಾವ°ಬೊಳುಂಬು ಮಾವ°ಪುತ್ತೂರಿನ ಪುಟ್ಟಕ್ಕಪುಣಚ ಡಾಕ್ಟ್ರುಮಂಗ್ಳೂರ ಮಾಣಿಶಾಂತತ್ತೆಪೆಂಗಣ್ಣ°ಕಜೆವಸಂತ°ಡಾಗುಟ್ರಕ್ಕ°ಶ್ರೀಅಕ್ಕ°ಬಂಡಾಡಿ ಅಜ್ಜಿಪಟಿಕಲ್ಲಪ್ಪಚ್ಚಿದೇವಸ್ಯ ಮಾಣಿಅಜ್ಜಕಾನ ಭಾವಸಂಪಾದಕ°ವಸಂತರಾಜ್ ಹಳೆಮನೆಡಾಮಹೇಶಣ್ಣಉಡುಪುಮೂಲೆ ಅಪ್ಪಚ್ಚಿಅನುಶ್ರೀ ಬಂಡಾಡಿಚುಬ್ಬಣ್ಣಕಳಾಯಿ ಗೀತತ್ತೆವೇಣೂರಣ್ಣಅನು ಉಡುಪುಮೂಲೆಪ್ರಕಾಶಪ್ಪಚ್ಚಿದೊಡ್ಮನೆ ಭಾವಜಯಗೌರಿ ಅಕ್ಕ°
ಬೈಲಿನ ಮೋರೆಪುಟ
ಸದ್ಯದ ಪಟಂಗೊ
ಪಂಕಜ ರಾಮ ಭಟ್
"ಆನು ಕಂಡುಂಡ ಕಾಶೀಯಾತ್ರೆ"

ಬೆಣಚ್ಚಿಪ್ಪಲ್ಲಿ ಹುಡ್ಕಲೆ