“ಒಂದು ಬತ್ತ ಹಾಕೀರೆ ಒಂಭತ್ತು ಹೊದಳಕ್ಕು”-{ಹವ್ಯಕ ನುಡಿಗಟ್ಟು-30}

“ಒಂದು ಬತ್ತ ಹಾಕೀರೆ ಒಂಭತ್ತು ಹೊದಳಕ್ಕು”-{ಹವ್ಯಕ ನುಡಿಗಟ್ಟು-30}

ಮದಲಾಣ ಕಾಲಲ್ಲಿ ಅತ್ಯೋರು ಹೇಳಿರೆ; ಮನಸ್ಸಿಂಗೆ ಮೂಡುದು ಜೋರಿನ ಹೆಮ್ಮಕ್ಕೊ ಹೇದು!.ಸೊಸೆಯ ಅಡಿಗಡಿಗೆ ತನಿಕೆ ಮಾಡುದು, ಹೇಂಗೆ ಮಾಡೀರೂ ತಪ್ಪು ಹುಡುಕ್ಕುದು, ಕೆಲಸ ಆಗಿಕ್ಕಿ  ಸುಮ್ಮನೆ ಕೂಬ್ಬಲೆಡಿಗೊ?.ಊಹೂಂ,ಕೂದರೂ ಆಗ ನಿಂದರು ಆಗ!. ಎಂತಾರೂ ಹೆಚ್ಚಿಗೆ ಖರ್ಚು ಮಾಡಿತ್ತೊ “ನಿನ್ನಪ್ಪನ ಮನೆಂದ ಬತ್ತೊ ಬದುಕ್ಕು!?”. ಕೇಳುಗು. ತೂಷ್ಣಿ ಮಾಡಿತ್ತೊ “ಎಂತಾ ಪೀನಾರಿಯಪ್ಪ ಇದು!ಇಲ್ಲಿ ನಿನ್ನಪ್ಪನ ಮನೆಲಿ ಮಾಡ್ತ ಹಾಂಗೆ ಪಿಟ್ಟಾಸು ಮಾಡ್ತ ಕ್ರಮ ಇಲ್ಲೆ. ಹಾಂಗೆ ಹೇದೊಂಡು ದಾರಾಳ ದರ್ಬಾರು ಮಾಡ್ಳೂ ಎಡಿಯ ಮಿನಿಯ!.” ಹೇಂಗೆ  ಹೇಳ್ಳೂ ರೆಡಿ.ಅಪ್ಪನ ಮನೆಶುದ್ದಿ ತೆಗದು ಬೈದು, ಕಿಟ್ಟಿದ್ದಕ್ಕೆ ಮುಟ್ಟಿದ್ದಕ್ಕೆಲ್ಲಾ ಏನಾರೊಂದು ಕೊಂಕು ಕೇಳಿ..ಕೇಳೀ ಬೊಡಿವಗ ಸೊಸೆಕ್ಕಳ ಮನಸ್ಸು ಏವತ್ತೂ ಒಂದೇ ಹಾಂಗಿರುತ್ತೊ!?.ರಜ, ರಜ ತಿರುಗಿ ಹೇಳ್ಳೆ ಸುರುಮಾಡುಗಿದ.ಅಷ್ಟಪ್ಪಗ ಪಿಸುರೆಳಗಿದ ಅತ್ತೆಯ ಮೋರೆ ಕೋಪಲ್ಲಿ ಕಾದ ಹಂಚಿನ ಹಾಂಗಾಗಿ ಒಂದು ಬತ್ತ ಹಾಕೀರೆ ಒಂಭತ್ತು ಹೊದಳಾವುತ್ತ ನಮುನೆಲಿಕ್ಕಿದ!. ಹೊದಳು ಹೊರಿಯೆಕ್ಕಾರೆ ಹೊರಿತ್ತ ಓಡು  ವಿಪರೀತ ಕಾಯೆಕ್ಕು. ಹಾಂಗೆ ಕಾದ ಹಂಚಿಂದ ಒಂಬತ್ತು ಪಟ್ಟು ಹೆಚ್ಚು ಕಾದರೆ ಹೇಂಗಿಕ್ಕು!. [ಮಾಮೂಲಿಯಾಗಿ ಒಂದು ಬತ್ತಕ್ಕೆ ಒಂದೇ ಹೊದಳಪ್ಪದಲ್ಲೊ. ಒಂಭತ್ತಾವುತ್ತರೆ ಅವರ ಮೋರೆಲೇ ಹೊದಳು ಹೊರಿವಲಕ್ಕನ್ನೆ!. ಶುಕ್ರುಂಡೆ ಮಾಡ್ಳೆ ಬತ್ತ ಕಮ್ಮಿ ಸಾಕು.   ಗೇಸೂ ಒಳಿಗು. ಹೇದು ನಮ್ಮ ಬಾಲಣ್ಣ ಕೇಳೀರೂ ಕೇಳುಗೆ! ಅಲ್ಲೊ!].

ಹಾಂ.., ಈಗೀಗ ಮೇಲೆ ಹೇಳಿದ ’ಮಟ್ಟು’ ತಿರುಗಿ ಬಿದ್ದಿದಾಡ. ಸೊಸೆಕ್ಕಳ ಮುಷ್ಟಿಲಿ  ಅತ್ತೇರಕ್ಕಾಡ.ಹೀಂಗೆ ಬದಲಾಗದ್ರೆ ಮಾಣಿಗೆ ಕೂಸಾರು ಕೊಡ್ತವಂ ಬೆಕನ್ನೆ!?. “ಈ ನುಡಿಗಟ್ಟಿಂಗೆ ಅತ್ತೆ-ಸೊಸೆಕ್ಕಳೇ ಆಯೆಕ್ಕೊ ವಿಜಯತ್ತೆ?”; ಹೇದು ಚೆನ್ನೈ ಭಾವ ಕೇಳುಗು. ಬೇಡ.., ಆಗೆಡ.  ಮಾವ-ಅಳಿಯನೂ ಅಕ್ಕು. ಕೋಪ ಮಿತಿಮೀರಿ ಆರಿಂಗೆ ಬಂತೊ ಅವರ ಮೋರೆಲಿ ಹೊದಳು ಹೊರಿವೊಂ!ಅಂಬಗ ಅವರ ಕೋಪ ಹದಕ್ಕೆ ಬತ್ತೊ ನೋಡುವೊಂ. ಎಂತ ಹೇಳ್ತಿ?.

 

ವಿಜಯತ್ತೆ

   

You may also like...

3 Responses

  1. ಹ್ಹಾ ಅದಪ್ಪು!! ಸಮ ಆತೀಗ ನಿಂಗಳ ಲೆಕ್ಕಾಚಾರ. ನುಡಿಗಟ್ಟು, ವಿವರಣೆ ಒಪ್ಪ ಆಯಿದು

  2. Keshava Prakash says:

    ಈಗ ಮೊದಲಿನ ಗಾದೆ ಮಾತುಗಳ ಎಲ್ಲ ಉಲ್ಟಾ ಮಾಡೆಕ್ಕಾದ ಪರಿಶ್ಥಿಥಿ ಬಂಥ್ಥನ್ನೇ?

  3. ತೆಕ್ಕುಂಜ ಕುಮಾರ ಮಾವ° says:

    ಮದಲಿಂಗೆ ಕೆಲವು ಜೆನ ಮಾಸ್ಟ್ರಕ್ಕಗೋ ಹೀಂಗೆ ಹೇಳುಗು ಕೆಲವು ಪೋಕರಿ ಮಕ್ಕೊ

Leave a Reply

 ಕನ್ನಡ - ಇಂಗ್ಳೀಶ್ ಬದಲುಸೆಕ್ಕಾರೆ ಈ ಸುಚ್ಚು ಒತ್ತಿ | Ctrl+G to toggle between Kannada - English

Your email address will not be published. Required fields are marked *